Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುರುವಾರ ಜನಿಸಿದವರ ವ್ಯಕ್ತಿತ್ವ ಹೀಗಿದೆ..! ವೈವಾಹಿಕ ಜೀವನ ಹೇಗಿರಲಿದೆ?
ವಾರದ ಪ್ರತೀ ದಿನಕ್ಕೂ ತನ್ನದೇ ಆಗಿರುವಂತಹ ಮಹತ್ವ ಹಾಗೂ ಪ್ರಾಮುಖ್ಯತೆಯು ಇದೆ. ಅದೇ ರೀತಿಯಾಗಿ ಗುರುವಾರಕ್ಕೆ ಕೂಡ. ಈ ದಿನವನ್ನು ಜ್ಯೋತಿಷ್ಯದಲ್ಲಿ ಅತ್ಯಂತ ಪ್ರಭಾವಿ ಆಗಿರುವಂತಹ ಗುರು ಗ್ರಹವು ಅಧಿಪತಿಯಾಗಿದೆ. ಗುರು ಗ್ರಹದ ಪ್ರಭಾವದಿಂದಾಗಿ ಅಭಿವೃದ್ಧಿ, ಸಮೃದ್ಧಿ, ಆಶಾವಾದ, ವಿಸ್ತರಣೆ, ಸಂತೋಷ, ಸರಿಯಾದ ದೃಷ್ಟಿಕೋನ, ಮತ್ತು ಹಾಸ್ಯದ ಪ್ರತಿನಿಧಿಯಾಗಿದೆ. ಗುರುವಾರ ಜನಿಸಿರುವ ಜನರು ಹೆಚ್ಚು ಉದಾರಿಯಾಗಿರುವರು.
ಇನ್ನು ಗುರುವಾರವನ್ನು ರಾಯರ ವಾರವೆಂದೂ ಸಹ ನಂಬಲಾಗಿದೆ. ಆ ದಿನ ರಾಯರಿಗಾಗಿ ವಿಶೇಷ ಪೂಜೆ, ವ್ರತ ಮಾಡುವವರು ಸಹ ಇದ್ದಾರೆ. ಕೆಲವರು ಪ್ರತಿ ಗುರುವಾರ ವಿಶೇಷ ವ್ರತಾಚರಣೆ ಮಾಡುತ್ತಾರೆ. ಅದನ್ನು ಪ್ರತಿ ಗುರುವಾರ ಪಾಲಿಸುತ್ತಾರೆ. ಹೀಗಾಗಿ ಜೋತಿಷ್ಯದಲ್ಲಿ ಗುರುವಾರಕ್ಕೆ ವಿಶೇಷವಾದ ಸ್ಥಾನವಿದೆ.

ಇನ್ನು ಗುರುವಾರ ಜನಿಸಿದವರ ಕುರಿತು ಜ್ಯೋತಿಷ್ಯಶಾಸ್ತ್ರದಲ್ಲಿ ಏನು ಹೇಳಲಾಗಿದೆ. ಗುರುವಾರ ಜನಿಸಿರುವ ಜನರ ವ್ಯಕ್ತಿತ್ವ ಎಂತದ್ದು ಎಂಬುದನ್ನು ನಾವಿಂದು ತಿಳಿಯೋಣ.
ಗುರುವಾರದಂದು ಜನಿಸಿರುವಂತಹ ಜನರು ಯಾವಾಗಲೂ ತಮ್ಮ ಜೀವನದಲ್ಲಿ ಉನ್ನತಿ ಹಾಗೂ ಸಂಪತ್ತನ್ನು ಪಡೆಯಲು ಬಯಸುವರು. ಇವರು ಪ್ರತಿಯೊಂದರಲ್ಲೂ ದೊಡ್ಡ ಹಾಗೂ ವಿಶಾಲವಾಗಿರುವರು. ಕೆಲವೊಂದು ಸಂದರ್ಭದಲ್ಲಿ ಇವರು ತುಂಬಾ ಭಿನ್ನ ಮನಸ್ಥಿತಿಯಲ್ಲಿ ಇರುವರು. ಆದರೆ ಇವರು ಜೀವನದ ಬಗ್ಗೆ ತುಂಬಾ ಆಶಾವಾದ ಹೊಂದಿರುವರು. ಜೀವನದ ಏಳುಬೀಳುಗಳನ್ನು ಇವರು ಸಂಕಲ್ಪದಿಂದ ನೋಡುವರು. ಇವರು ಸಲಹೆ ನೀಡುವಲ್ಲಿ ಉತ್ತಮ ವ್ಯಕ್ತಿಗಳಾಗಿರುವರು. ಇವರ ಸಲಹೆ ಹಾಗೂ ತೀರ್ಪನ್ನು ಕೇಳಲು ಇವರ ಸುತ್ತಲು ಯಾವಾಗಲೂ ಜನ ಸೇರಿರುವರು.
ಗುರುವಾರದಂದು ಜನಿಸಿರುವ ಜನರ ವೃತ್ತಿ ಜೀವನ
ಗುರುವಾರ ಜನಿಸಿರುವ ವ್ಯಕ್ತಿಗಳು ಹುಟ್ಟಿನಿಂದಲೇ ನಾಯಕತ್ವ ಗುಣ ಹೊಂದಿರುತ್ತಾರೆ. ಇವರು ತುಂಬಾ ಆಕರ್ಷಣೀಯ ವ್ಯಕ್ತಿಗಳು ಮತ್ತು ಜನರನ್ನು ತುಂಬಾ ಸುಲಭವಾಗಿ ಸೆಳೆಯಬಲ್ಲರು ಮತ್ತು ಇವರಿಗೆ ಅದ್ಭುತವಾದ ಜನ ಬೆಂಬಲ ಕೂಡ ಇರುವುದು. ಇವರಿಗೆ ರಾಜಕೀಯ ಜೀವನವು ತುಂಬಾ ಹೊಂದಿಕೊಳ್ಳುವುದು. ಉನ್ನತ ಮಟ್ಟದ ಕಾರ್ಯನಿರ್ವಾಹಕ ಜವಾಬ್ದಾರಿಯು ಇವರಿಗೆ ಸರಿಯಾಗಿ ಹೊಂದಿಕೊಳ್ಳುವುದು. ನೀವು ವೃತ್ತಿ ಅಥವಾ ಸ್ವಯಂ ಉದ್ಯೋಗ ಮಾಡಿದರೂ ನಿಮ್ಮಲ್ಲಿರುವಂತಹ ಮಹತ್ವಾಕಾಂಕ್ಷೆಯು ನಿಮ್ಮನ್ನು ಉನ್ನತಿ ಗೇರಿಸುವುದು.
ಗುರುವಾರ ಜನಿಸಿದ ವ್ಯಕ್ತಿಗಳ ವೈವಾಹಿಕ ಜೀವನ
ನೀವು ಜೀವನ ಸಂಗಾತಿಯ ಭಾವನೆಗಳಿಗೆ ನೋವುಂಟು ಮಾಡುವಂತಹ ಮಾತುಗಳನ್ನು ಆಡಬಾರದು ಎಂದು ಗಮನಹರಿಸಿ. ನೀವು ವಿಶಾಲ ಹೃದಯಿಗಳು ಮತ್ತು ನಿಮ್ಮ ಶ್ರೇಷ್ಠವಾಗಿರುವುದನ್ನು ನೀಡಲು ಬಯಸುವಿರಿ. ಅದಾಗ್ಯೂ, ನಿಮ್ಮಲ್ಲಿ ಇರುವಂತಹ ಪರಿಶೋಧನಾ ಗುಣದಿಂದಾಗಿ ನೀವು ಕೌಟುಂಬಿಕ ಜವಾಬ್ದಾರಿಗಳನ್ನು ಮರೆತು ಹೊರಗಡೆ ಸುತ್ತಾಡಲು ಹೋಗುವಿರಿ. ನೀವು ಮತಾಂಧ ಅಥವಾ ಅತಿರಂಜಿತವಾಗಲು ಹೋಗಬೇಡಿ. ಆರ್ಥಿಕ ಸ್ಥಿರತೆ ಮತ್ತು ವೈಯಕ್ತಿಕ ಜೀವನವನ್ನು ಯಶಸ್ವಿ ಯಾಗಿಸಿಕೊಳ್ಳಲು ನೀವು ದೀರ್ಘಕಾಲದ ದೃಷ್ಟಿಕೋನವನ್ನು ಇಟ್ಟುಕೊಳ್ಳಿ.
ಗುರುವಾರ ಜನಿಸಿದರಲ್ಲಿ ಹಣ ಮತ್ತು ವ್ಯವಹಾರ
ಗುರುವಾರ ಜನಿಸಿದವರು ಆಲಸಿಗಳಲ್ಲ. ಅವರು ಯಾವಾಗಲು ಕ್ರಿಯಾಶೀಲ ವ್ಯಕ್ತಿಗಳಾಗಿರುತ್ತಾರೆ. ಹೀಗಾಗಿ ಅವರಿಗೆ ಆರ್ಥಿಕವಾಗಿ ಯಾವ ಸಮಸ್ಯೆಗಳು ಕಾಡಿದರು ಕೆಲವೇ ದಿನದಲ್ಲಿ ಅದಕ್ಕೆ ಪರಿಹಾರವನ್ನೂ ಅವರು ಕಂಡುಕೊಳ್ಳುತ್ತಾರೆ. ಹೀಗಾಗಿ ಅವರಲ್ಲಿ ಯಾವ ಸಮಸ್ಯೆಗಳು ಹೆಚ್ಚು ದಿನಗಳ ಕಾಲ ತೊಂದರೆ ನೀಡುವುದಿಲ್ಲ. ಇನ್ನು ವ್ಯವಹಾರಕ್ಕೆ ಸಂಬಂಧಿಸಿದಂತೆ ಎಲ್ಲಾ ವ್ಯವಹಾರದಲ್ಲು ಅವರದ್ದು ಮೇಲಯಗೈ ಇರಲಿದೆ. ಯಾವಾಗಲು ವ್ಯವಹಾರಿಕವಾಗಿ ಅವರಿಗೆ ಎಲ್ಲಾ ಕೆಲಸಗಳು ಕೈಹಿಡಿಯಲಿವೆ. ಎಲ್ಲಾ ಸಮಯದಲ್ಲೂ ಹೊಸತನ ತರಬಲ್ಲಂತಹ ಉದ್ಯೋಗವನ್ನು ನೀವು ಯಾವಾಗಲೂ ಇಷ್ಟಪಡುವಿರಿ. ನಿಮಗೆ ವಿವಿಧ ರೀತಿಯ ಜವಾಬ್ದಾರಿಗಳನ್ನು ನೀಡಿದ ವೇಳೆ ಬೇರೆಯವರಿಗಿಂತ ಅದ್ಭುತ ಸಾಧನೆ ಮಾಡುವಿರಿ. ನೀವು ದೈನಂದಿನ ದಿನಚರಿ ಮತ್ತು ಏಕಾತನತೆ ಉಂಟುಮಾಡುವ ಕೆಲಸಕ್ಕೆ ಹೊಂದಿಕೊಳ್ಳಲಾರಿರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications