ಸಂಖ್ಯಾಶಾಸ್ತ್ರ: ಈ ದಿನಾಂಕದಲ್ಲಿ ಜನಿಸಿದವರು ಮುಂದಾಗೋ ಘಟನೆ ಊಹಿಸಬಲ್ಲರು..!!

ಸಂಖ್ಯಾಶಾಸ್ತ್ರವು ಸಂಖ್ಯೆಗಳ ಸಹಾಯದಿಂದ ನಿಮ್ಮ ಜೀವನದ ಆಗು ಹೋಗುಗಳ ನಿರ್ಧರಿಸುವ ಅಂಶವಾಗಿರಲಿದೆ. ಸಂಖ್ಯೆಗಳ ಅನುಗುಣವಾಗಿ ನಿಮ್ಮ ವ್ಯಕ್ತಿತ್ವ, ಜೀವನದ ಅನುಭವ, ಭವಿಷ್ಯವನ್ನು ಕೂಡ ನಿರ್ಧರಿಸಬಹುದಾಗಿದೆ. ಈ ಸಂಖ್ಯಾಶಾಸ್ತ್ರವು 1 ರಿಂದ 9 ರವರೆಗಿನ ಸಂಖ್ಯೆಗಳನ್ನು ಒಳಗೊಂಡಿದೆ. ಈ ಪ್ರತಿಯೊಂದು ಸಂಖ್ಯೆಗಳು ವಿಭಿನ್ನ ಶಕ್ತಿಯನ್ನು ಹೊಂದಿವೆ. ಅದಕ್ಕಾಗಿಯೇ ಒಬ್ಬರ ಜನ್ಮ ದಿನಾಂಕವು ಒಬ್ಬರ ಜೀವನ ಮತ್ತು ಕೌಶಲ್ಯಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ.

ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬರಲ್ಲು ಒಂದೊಂದು ರೀತಿಯ ಶಕ್ತಿ ಇರುತ್ತದೆ ಎಂಬುದನ್ನು ಸಂಖ್ಯಾಶಾಸ್ತ್ರವು ವಿವರಿಸಲಿದೆ. ನಿಮ್ಮ ಜನ್ಮ ದಿನಾಂಕವು ಕೂಡ ನಿಮ್ಮ ವಿಶಿಷ್ಟ ಶಕ್ತಿಗೆ ಕಾರಣವಾಗುತ್ತದೆ. ನೀವು ಯಾವ ದಿನ ಹುಟ್ಟಿದ್ದೀರಾ? ಯಾವ ರಾಶಿ, ಜನ್ಮ ನಕ್ಷತ್ರ ಎಲ್ಲವೂ ನಿಮ್ಮ ಜೀವನದ ಆಗು ಹೋಗುಗಳಿಗೆ ಕಾರಣವಾಗುವಂತೆ ನಮ್ಮ ಜನ್ಮ ದಿನಾಂಕದಿಂದ ನಿಮಗೆ ವಿಶಿಷ್ಟ ಶಕ್ತಿಯೂ ಬಂದಿರುತ್ತೆ.

People Born On This Day Will Had Predictive Abilities

ಕೆಲವು ದಿನಾಂಕದಂದು ಜನಿಸಿದವರು ವಿಶಿಷ್ಟ ಶಕ್ತಿಯಾಗಿ ಮುಂದೆ ಆಗಬಹುದಾದಂತಹ ಘಟನೆಗಳನ್ನು ಮೊದಲೇ ಊಹಿಸುವಂತಹ ಶಕ್ತಿ ಹೊಂದಿರುತ್ತಾರೆ. ಹಾಗಾದ್ರೆ ಯಾವ ದಿನಾಂಕದಂದು ಜನಿಸಿದವರು ಮುಂದಾಗುವ ಘಟನೆಗಳ ಊಹಿಸುವ ಶಕ್ತಿ ಹೊಂದಿರುತ್ತಾರೆ ಎಂಬುದು ನಿಮಗೆ ಗೊತ್ತಾ?

ಹೌದು ನಿಮ್ಮ ನಡುವೆ ಇರುವ ಕೆಲವರು ಮುಂದಾಗಬಹುದಾದ ದೊಡ್ಡ ಅನಾಹುತಗಳು, ಘಟನೆಗಳನ್ನು ಮೊದಲೇ ಊಹಿಸುತ್ತಾರೆ, ಕೆಲವರಿಗೆ ಇದರ ಮುನ್ಸೂಚನೆಗಳು, ಸೂಕ್ಷ್ಮತೆಗಳು ಸಿಗುತ್ತವೆ. ಹಾಗಾದ್ರೆ ಯಾವ ದಿನಾಂಕದಲ್ಲಿ ಜನಿಸಿದವರು ಮುಂದಾಗುವ ಘಟನೆಗಳನ್ನು ಊಹಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಿ.

ಮಾರ್ಚ್ 11

ಮಾರ್ಚ್ 11 ರಂದು ಜನಿಸಿದ ಮಂದಿ ಅದ್ಭುತ ಶಕ್ತಿಯನ್ನು ಹೊಂದಿರುತ್ತಾರೆ. ಈ ದಿನಾಂಕದಲ್ಲಿ ಜನಿಸಿದವರು ಹೆಚ್ಚು ನಿಖರವಾಗಿ ಮುಂದಾಗುವ ಘಟನೆಗಳ ಹೇಳುವಂತಹ ಶಕ್ತಿ ಹೊಂದಿರುತ್ತಾರೆ. ತಮ್ಮ ಜೀವನದಲ್ಲಿ ಆಗುವ ಘಟನೆಗಳು ಮಾತ್ರ ಬೇರೊಬ್ಬರ ಜೀವನದಲ್ಲೂ ಉಂಟಾಗುವ ಘಟನೆಗಳ ಮುನ್ಸೂಚನೆ ಕೂಡ ಅವರಿಗೆ ಇರುತ್ತದೆ.

ನವೆಂಬರ್ 22

ನವೆಂಬರ್ 22 ರಂದು ಜನಿಸಿದವರು ಕೂಡ ಭವಿಷ್ಯದಲ್ಲಿ ನಡೆಯುವ ಕೆಲವೊಂದು ವಿಚಾರಗಳನ್ನು ಹೇಳುವಂತರ ಶಕ್ತಿ ಹೊಂದಿರುವವರು. ಆದರೆ ಈ ವಿಚಾರಗಳು ಅವರ ಮನದಲ್ಲಿಯೇ ಉಳಿಯುತ್ತವೆ. ಅವರು ಒಂದು ಘಟನೆಯ ಕುರಿತು ವಿಶ್ಲೇಷಣೆ ಮಾಡಿದಾಗ ಮುಂದಾಗಬಹುದಾದ ಘಟನೆಗಳ ಕುರಿತು ಸೂಚನೆ ಸಿಗುತ್ತವೆ.

ಜುಲೈ 7

ಜುಲೈ 07 ರಂದು ಜನಿಸಿದವರು ವಿಶೇಷ ಗುಣಗಳಿಂದ ಹಿಡಿದು ವಿಶೇಷ ಶಕ್ತಿ ಹೊಂದಿರುವವರಂತೆ. ಅವರು ಬಲವಾದ ಅಂತಃಪ್ರಜ್ಞೆ ಮತ್ತು ಭಾವನಾತ್ಮಕ ಬುದ್ಧಿವಂತಿಕೆಯನ್ನು ಹೊಂದಿದ್ದಾರೆ. ಒಬ್ಬರ ಮುಖವನ್ನು ನೋಡಿ ಅವರ ಮನದಲ್ಲಿ ಏನಿದೆ ಎಂಬುದನ್ನು ಕೂಡ ಹೇಳುವಂತಹ ಶಕ್ತಿ ಹೊಂದಿರುವವರು.
ಈ ದಿನಾಂಕದಂದು ಜನಿಸಿದ ಜನರು ಸೂಕ್ಷ್ಮ ಸುಳಿವುಗಳನ್ನು ಬಹುಬೇಗ ಗ್ರಹಿಸುವವರು.

ಡಿಸೆಂಬರ್ 25

ಡಿಸೆಂಬರ್ 25 ರಂದು ಜನಿಸಿದವರನ್ನು ವಿಶೇಷ ಗುಣದವರು ಎಂದು ಪರಿಗಣಿಸಲಾಗುತ್ತದೆ. ಈ ದಿನಾಂಕದಂದು ಜನಿಸಿದ ಜನರು ಅದ್ಭುತ ಅಂತಃಪ್ರಜ್ಞೆಯನ್ನು ಹೊಂದಿರುತ್ತಾರೆ. ಅವರ ಭವಿಷ್ಯವಾಣಿಗಳು ಹೆಚ್ಚಾಗಿ ಹಾಗೆಯೇ ನಡೆಯುತ್ತವೆ. ಇವರಲ್ಲಿ ಅಚ್ಚರಿ ಎನ್ನುವಂತಹ ನೆನಪಿನ ಶಕ್ತಿ ಇರಲಿದೆ. ಕೆಲವೊಂದು ವಿಚಾರದಲ್ಲಿ ಅವರು ಹೇಳಿರುವ ವಿಚಾರಗಳು ನಿಧಾನವಾಗಿ ನಿಜವಾಗುತ್ತಾ ಸಾಗುತ್ತವೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

People Born On This Day Will Had Predictive Abilities

Some people predict major disasters and events in advance, while others have premonitions and intuitions about them.
Story first published: Tuesday, December 24, 2024, 20:36 [IST]
X
Desktop Bottom Promotion