ಶನಿ-ಸೂರ್ಯನ ಸಂಚಾರದಿಂದ ಪಂಚಕ ಯೋಗ: 3 ರಾಶಿಯವರಲ್ಲಿ ಸಂಕಷ್ಟ!

ಜ್ಯೋತಿಷ್ಯದಲ್ಲಿ ಶನಿಯು ಒಬ್ಬರ ಕರ್ಮಗಳಿಗೆ ಅನುಗುಣವಾಗಿ ಲಾಭ ನಷ್ಟದ ಲೆಕ್ಕಾಚಾರ ಹಾಕುತ್ತಾನೆ ಎಂದು ಹೇಳಲಾಗಿದೆ. ಶನಿ ನ್ಯಾಯದೇವತೆ ಎಂದು ಪರಿಗಣಿಸಲಾಗುತ್ತದೆ. ಹಾಗೆ ಶನಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಆಗಿರುವುದರಿಂದ ಪ್ರತಿಯೊಂದು ರಾಶಿಯಲ್ಲು ಒಂದೂವರೆ ವರ್ಷ ಚಲಿಸಲಿದ್ದಾನೆ. ಹೀಗಾಗಿ ಶನಿ ಸಂಚರಿಸುವ ರಾಶಿಯ ಲಾಭ ತರಲಿದೆ ಎನ್ನಲಾಗುತ್ತದೆ. ಹಾಗೆ ಉಳಿದ 12 ರಾಶಿಗಳ ಮೇಲೆಯೂ ಇದು ಪರಿಣಾಮ ಬೀರಲಿದೆ.

ಸದ್ಯ ಈಗ ಶನಿ ಹಾಗೂ ಸೂರ್ಯನು 72 ಡಿಗ್ರಿ ಕೋನದಲ್ಲಿ ಚಲಿಸಲಿದ್ದಾನೆ. ಇದು ಹಲವರಿಗೆ ಲಾಭದಾಯಕವಾಗಲಿದೆ. ಶನಿ 2027ರ ವರೆಗೆ ಮೀನ ರಾಶಿಯಲ್ಲಿ ಚಲಿಸಲಿದ್ದಾನೆ. ಹಾಗೆ ಸೂರ್ಯನು ವೃಷಭ ರಾಶಿಯಲ್ಲಿ ಚಲಿಸುತ್ತಾನೆ. ಆದ್ರೆ ಎರಡೂ ಗ್ರಹಗಳ ನಡುವೆ 72 ಡಿಗ್ರಿ ಕೋನ ಉಂಟಾಗಲಿದೆ. ಇದು ಪಂಚಕ ರಾಜಯೋಗಕ್ಕೆ ಕಾರಣವಾಗಲಿದೆ.

Panchaka Yoga Alert Saturn-Sun Transit May Bring Challenges For 3 Zodiac Signs

ಜೂನ್ 3ರಂದು ಈ ಪಂಚಕ ರಾಜ ಯೋಗ ಉಂಟಾಗುತ್ತಿರುವುದರಿಂದ ಹಲವು ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಮೊದಲಿಗೆ ಈ ಪಂಚಕ ಯೋಗ ಅಂದರೆ ಏನು ಅನ್ನೋದನ್ನು ತಿಳಿದುಕೊಳ್ಳೋಣ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎರಡು ಗ್ರಹಗಳು ಪರಸ್ಪರ 72 ಡಿಗ್ರಿ ಕೋನದಲ್ಲಿ ಚಲಿಸುವಾಗ ಪಂಚಕ ಯೋಗ ರೂಪುಗೊಳ್ಳುತ್ತದೆ. ಇದು ಧನಾತ್ಮಕ ಪರಿಣಾಮಗಳಿಗೆ ಕಾರಣವಾಗುತ್ತದೆ.

ನಂಬಿಕೆಗಳ ಪ್ರಕಾರ ಸೂರ್ಯ ಮತ್ತು ಶನಿಯು ತಂದೆ- ಮಗನಾಗಿದ್ದರೂ ಶತ್ರುಗಳೆಂದು ಪರಿಗಣಿಸಲಾಗಿದೆ. ಹೀಗಾಗಿ ಶನಿ ಮತ್ತು ಸೂರ್ಯನ ಈ ಸಂಚಾರವು ಕೆಲವು ರಾಶಿಗಳಿಗೆ ಅಶುಭ ಕಾರಕವಾಗಲಿದೆ. ಹಾಗಾದ್ರೆ ಯಾವೆಲ್ಲಾ ರಾಶಿಯವರಿಗೆ ಕಂಟಕವಾಗುತ್ತಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.

ಮಿಥುನ ರಾಶಿ

ಈ ಸಮಯದಲ್ಲಿ ಮಿಥುನ ರಾಶಿ ಜನರು ಜಾಗೃತೆ ವಹಿಸಬೇಕಿದೆ. ನಿಮ್ಮ ಕೆಲಸ ಹಾಗೂ ಕುಟುಂಬದ ವಿಚಾರವಾಗಿ ನಿಮಗೆ ದೊಡ್ಡ ಸಮಸ್ಯೆಗಳು ಎದುರಾಗಬಹುದು. ನೀವು ಖಾಸಗಿ ಅಥವಾ ಸರ್ಕಾರಿ ಉದ್ಯೋಗಿಗಳಾಗಿದ್ದರೆ ಈ ಸಮಯದಲ್ಲಿ ಬಹಳಷ್ಟು ಅಡ್ಡಿ ಆತಂಕಗಳು, ಒತ್ತಡಗಳ ಎದುರಿಸುತ್ತೀರಿ. ನಿಮ್ಮ ಕೋಪವನ್ನು ನಿಯಂತ್ರಿಸುವುದು ಬಹಳ ಉತ್ತಮ. ನಿಮ್ಮ ತಂದೆ ತಾಯಿಯ ಆರೋಗ್ಯದ ವಿಚಾರವಾಗಿಯೂ ನೀವು ಜಾಗೃತೆ ವಹಿಸಬೇಕು. ನಿಮ್ಮ ಹಣಕಾಸು ವ್ಯವಹಾರಗಳಲ್ಲಿ ಒಂದಿಷ್ಟು ಸಮಸ್ಯೆಗಳ ನೋಡಬಹುದು.

ತುಲಾ ರಾಶಿ

ತುಲಾ ರಾಶಿ ಜನರು ಈ ಸಮಯದಲ್ಲಿ ವ್ಯಾಪಾರ ವ್ಯವಹಾರದಲ್ಲಿ ತೊಡಗಿದ್ದರೆ ಬಹಳಷ್ಟು ಎಚ್ಚರಿಕೆಯಿಂದ ಈ ಕೆಲಸಗಳಲ್ಲಿ ನಿರ್ಧಾರಗಳ ತೆಗೆದುಕೊಳ್ಳಬೇಕಾಗುತ್ತದೆ. ಆರ್ಥಿಕ ನಷ್ಟದಂತಹ ಸಮಸ್ಯೆಗಳು ನಿಮಗೆ ಎದುರಾಗಬಹುದು. ಕಠಿಣ ಪರಿಸ್ಥಿತಿಯಲ್ಲಿ ನೀವು ಬಯಸಿದಂತೆ ಸಹಕಾರ ಸಿಗುವುದಿಲ್ಲ. ವಿಶೇಷವಾಗಿ ಹಣಕಾಸು ವಿಚಾರವಾಗಿ ನೀವು ಬಯಸಿದಂತಹ ವ್ಯಕ್ತಿಯು ನಿಮಗೆ ಸಹಕಾರ ನೀಡದಿರಬಹುದು. ಕೆಲಸದಲ್ಲಿನ ಒತ್ತಡವು ನಿಮಗೆ ಅಶಾಂತಿ ತರಬಹುದು.

ಕುಂಭ ರಾಶಿ

ಪಂಚಕ ಯೋಗದ ಪರಿಣಾಮದಿಂದಾಗಿ ಕುಂಭ ರಾಶಿಯ ಮಂದಿಗೆ ದೈನಂದಿನ ಕೆಲಸ ಕಾರ್ಯಗಳು ತಡವಾಗುವುದು, ಅಡೆತಡೆಗಳು ಎದುರಾಗುವುದು ನೋಡಬಹುದು. ನಿಮ್ಮ ನಿರ್ಧಾರಗಳಿಂದಾಗಿಯೇ ತಪ್ಪುಗಳು ನಡೆಯುವುದು, ಅದರಿಂದ ನಷ್ಟ, ಅನಾರೋಗ್ಯದಂತಹ ಸಮಸ್ಯೆ ಕಾಡುವುದು ನೋಡಬಹುದು. ಹಣದ ವಿಚಾರವಾಗಿ ಕುಟುಂಬದಲ್ಲಿ ಅಶಾಂತಿ, ಒತ್ತಡ ಹೆಚ್ಚಾಗಬಹುದು. ಪ್ರಯಾಣಗಳು, ವ್ಯವಹಾರಗಳು ನೀವು ಅಂದುಕೊಂಡಂತೆ ಕೊನೆಯಾಗದೆ ಇರಬಹುದು. ಆರೋಗ್ಯ ವಿಚಾರವಾಗಿ ನಿಮ್ಮ ನಿರ್ಲಕ್ಷ್ಯವು ನೋವು ಹಾಗೂ ಖರ್ಚಿಗೆ ಕಾರಣವಾಗಬಹುದು.

(ಹಕ್ಕುತ್ಯಾಗ: ಮೇಲೆ ಒದಗಿಸಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Panchaka Yoga Alert: Saturn-Sun Transit May Bring Challenges For 3 Zodiac Signs

This Panchaka Raja Yoga is forming on June 3rd and will affect many zodiac signs. First, let's understand what this Panchaka Yoga means.
Story first published: Saturday, May 31, 2025, 18:30 [IST]
X
Desktop Bottom Promotion