Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೂರ್ಯಗ್ರಹಣದಂದೇ ಪಂಚಗ್ರಹಿ ಯೋಗ: 3 ರಾಶಿಯವರಿಗೆ ಜಾಕ್‌ಪಾಟ್, ಅದೃಷ್ಟಕರ ದಿನಗಳ ಆಗಮನ
ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳ ಚಲನೆಯು ಬಹಳ ಪ್ರಮುಖ ವಿದ್ಯಮಾನ ಎಂಬುದಾಗಿ ಪರಿಗಣಿಸಲಾಗಿದೆ. ಹಾಗೆ ಗ್ರಹಗಳ ಸ್ಥಾನಪಲ್ಲಟದಿಂದ ಶುಭ ಹಾಗೂ ಅಶುಭ ಯೋಗಕ್ಕೆ ಕಾರಣವಾಗುವುದು ನೋಡಬಹುದು. ಅದ್ರಲ್ಲೂ ಗ್ರಹಣವನ್ನು ಬಹಳ ಪ್ರಮುಖ ವಿದ್ಯಮಾನ ಎಂಬುದಾಗಿ ಪರಿಗಣಿಸಲಾಗಿದೆ. ಅದ್ರಲ್ಲೂ ಗ್ರಹಣ ಸಮಯದಲ್ಲಿ ಉಂಟಾಗುವ ಯೋಗಗಳನ್ನು ಸಹ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಉಂಟು ಮಾಡುವ ಪ್ರಕ್ರಿಯೆ ಎಂದು ಸಾಬೀತುಪಡಿಸಲಿದೆ.
ಇನ್ನು ಈಗ ಸಂಭವಿಸುತ್ತಿರುವ ಸೂರ್ಯ ಗ್ರಹಣವು ಹಲವು ರೀತಿಯಲ್ಲಿ ಪರಿಣಾಮಕಾರಿಯಾಗಿ ಬದಲಾಗುತ್ತಿದೆ. ಅದ್ರಲ್ಲೂ ಕುಂಭ ರಾಶಿಯಲ್ಲಿ ಸೂರ್ಯಗ್ರಹಣ ಉಂಟಾಗುತ್ತಿದೆ, ಶನಿ ಈ ಕುಂಭ ರಾಶಿಯನ್ನು ಆಳುತ್ತಾನೆ, ಈ ನಡುವೆ ರಾಹು ಕೂಡ ಕುಂಭ ರಾಶಿಯಲ್ಲಿದ್ದಾನೆ. ಅಲ್ಲದೆ ಹಲವು ಗ್ರಹಗಳ ಸಂಯೋಗವು ಉಂಟಾಗುತ್ತಿದೆ. 5 ಗ್ರಹಗಳು ಶನಿಯ ರಾಶಿಯಾದ ಕುಂಭದಲ್ಲಿ ಸಂಯೋಗವಾಗುವುದು ಪಂಚಗ್ರಹಿ ಯೋಗಕ್ಕೆ ಕಾರಣವಾಗುತ್ತಿದೆ.

ಪ್ರಸ್ತುತ ಬುಧ, ಶುಕ್ರ, ರಾಹು ಮತ್ತು ಸೂರ್ಯ ಸೇರಿ 5 ಗ್ರಹಗಳು ಕುಂಭ ರಾಶಿಯಲ್ಲಿ ಪ್ರಯಾಣಿಸುತ್ತಿವೆ. ಹಾಗೆ ಚಂದ್ರ ಕೂಡ ಕುಂಭ ರಾಶಿಗೆ ಚಲಿಸುವುದರಿಂದ ಈ ಪಂಚಗ್ರಹಿ ಯೋಗವು ರೂಪುಗೊಳ್ಳಲಿದೆ. ವರ್ಷದ ಮೊದಲ ಸೂರ್ಯಗ್ರಹಣದ ದಿನದಂದು ಈ ರಾಜಯೋಗವು ರೂಪುಗೊಳ್ಳುತ್ತದೆ. ಈ ಅಪರೂಪದ ಯೋಗದಿಂದ ಹಲವು ರಾಶಿಗಳಲ್ಲಿ ಬದಲಾವಣೆಗಳ ನೋಡಬಹುದು. ಹಾಗಾದ್ರೆ ಈ ಯೋಗದಿಂದ ಯಾರಿಗೆಲ್ಲಾ ಲಾಭದಾಯಕ? ಯಾರಿಗೆ ಶುಭಕರ ಎಂಬುದನ್ನು ತಿಳಿದುಕೊಳ್ಳೋಣ.
ಮೇಷ ರಾಶಿ
ಪಂಚಗ್ರಹಿ ಯೋಗವು ಮೇಷ ರಾಶಿಯ 11 ನೇ ಮನೆಯಲ್ಲಿ ರೂಪುಗೊಳ್ಳಲಿದೆ. ಇದರಿಂದಾಗಿ ಈ ರಾಶಿ ಜನರ ಜೀವನದಲ್ಲಿ ಬದಲಾವಣೆಗಳ ನೋಡಬಹುದು. ಹಠಾತ್ ಆರ್ಥಿಕ ಲಾಭಗಳು ಉಂಟಾಗುತ್ತವೆ. ಆದಾಯದಲ್ಲಿ ಹೆಚ್ಚಳವಾಗುತ್ತದೆ. ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ಜೀವನದಲ್ಲಿ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಲಕ್ಷ್ಮಿ ದೇವಿಯ ಆಶೀರ್ವಾದದಿಂದ ಸಂಪತ್ತನ್ನು ಸಂಗ್ರಹಿಸುವ ಸಾಧ್ಯತೆಗಳಿವೆ. ಆತ್ಮವಿಶ್ವಾಸವು ಸಾಮಾನ್ಯಕ್ಕಿಂತ ಹೆಚ್ಚಾಗುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಕುಟುಂಬದಲ್ಲಿ ಸಂತೋಷ ಹೆಚ್ಚಾಗುತ್ತದೆ. ದೀರ್ಘಕಾಲದ ಅನಾರೋಗ್ಯ ಸಮಸ್ಯೆಯೊಂದು ಬಗೆಹರಿಯಲಿದೆ.
ಧನು ರಾಶಿ
ಧನು ರಾಶಿಯ 3 ನೇ ಮನೆಯಲ್ಲಿ ಪಂಚಗ್ರಹಿ ಯೋಗವು ರೂಪುಗೊಳ್ಳಲಿದೆ. ಇದರಿಂದಾಗಿ ಧನು ರಾಶಿಯ ಜನರಲ್ಲಿ ಹಣಕಾಸಿನ ಲಾಭವಿದೆ. ಆಧ್ಯಾತ್ಮಿಕ ವಿಚಾರದಲ್ಲಿ ನಿಮಗೆ ಶುಭವಿದೆ. ವೃತ್ತಿ, ಉದ್ಯೋಗ ಸಂಬಂಧಿ ವಿಚಾರವಾಗಿ ನೀವು ಪಡುವ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ನಿಮ್ಮ ಕಾರ್ಯಕ್ಷಮತೆ ಹೆಚ್ಚಾಗಲಿದೆ. ಬಹುಸಮಯದಿಂದ ಸ್ವಂತ ಉದ್ಯೋಗದ ಕನಸನ್ನು ಈಡೇರಿಸಿಕೊಳ್ಳಲು ಒಂದು ಹೆಜ್ಜೆ ಮುಂದೆ ಇಡುವಿರಿ. ಉದ್ಯಮಿಗಳು ಲಾಭ ತರುವ ಹೊಸ ಒಪ್ಪಂದಗಳನ್ನು ಪಡೆಯುತ್ತಾರೆ. ಅನೇಕ ಹೊಸ ಆದಾಯದ ಮೂಲಗಳು ಹೊರಹೊಮ್ಮುವ ಸಾಧ್ಯತೆಯಿದೆ. ವಿಶೇಷವಾಗಿ ಈ ಸಮಯದಲ್ಲಿ, ಬಹಳಷ್ಟು ಹಣವನ್ನು ಗಳಿಸುವ ಅವಕಾಶಗಳಿವೆ.

ಕುಂಭ ರಾಶಿ
ಕುಂಭ ರಾಶಿಯ ಮೊದಲ ಮನೆಯಲ್ಲಿ ಈ ಸಂಯೋಗ ಉಂಟಾಗುತ್ತಿವುದರಿಂದ ಎಲ್ಲಾ ರಾಶಿಗಳ ಮೇಲೆಯೂ ಇದು ಪರಿಣಾಮ ಬೀರಲಿದೆ. ಪಂಚಗ್ರಹ ಯೋಗವು ನಿಮ್ಮ ಅದೃಷ್ಟ ಬದಲಾಯಿಸಲಿದೆ. ನೀವು ಬಹು ಸಮಯದಿಂದ ಮಾಡಬೇಕಿದ್ದ ಕೆಲವೊಂದು ನೆರವೇರಲಿದೆ. ವೃತ್ತಿಜೀವನದಲ್ಲಿ ಹೊಸ ಉದ್ಯೋಗಾವಕಾಶಗಳು ಬರುತ್ತವೆ. ಉದ್ಯಮಿಗಳು ತಮ್ಮ ವ್ಯವಹಾರವನ್ನು ವಿಸ್ತರಿಸಲು ಅವಕಾಶಗಳು ಸಿಗುತ್ತವೆ. ಉದ್ಯಮಿಗಳು ಉತ್ತಮ ಲಾಭವನ್ನು ತರುವ ಹೊಸ ಒಪ್ಪಂದಗಳನ್ನು ಪಡೆಯುವ ಸಾಧ್ಯತೆಯಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. )



Click it and Unblock the Notifications