Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಇನ್ನು ಬರಲಿರುವ ಚರ್ತುಗ್ರಹಿ ಯೋಗ ಈ ರಾಶಿಗಳ ಯೋಗವನ್ನೇ ಬದಲಾಯಿಸಲಿದೆ
ಈ ಮಾಸ ತುಂಬಾನೇ ವಿಶೇಷವಾಗಿದೆ. ಏಕೆಂದರೆ 4 ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಗವಾಗಲಿದೆ. ಈಗ ತ್ರಿಗ್ರಹಗಳ ಸಂಯೋಗವಾಗಿದೆ,ಮೇ 31ಕ್ಕೆ 4 ಗ್ರಹಗಳೂ ಒಂದೇ ರಾಶಿಯಲ್ಲಿ ಇರಲಿದೆ.
ಮೇ 1ಕ್ಕೆ ದೇವಗುರು ವೃಷಭ ರಾಶಿಗೆ ಸಂಚರಿಸಿದೆ, ಮೇ 14ಕ್ಕೆ ಗ್ರಹಗಳ ಅಧಿಪತಿ ಸೂರ್ಯ ವೃಷಭ ರಾಶಿಯನ್ನು ಪ್ರವೇಶಿಸಿದೆ. ಮೇ 19ಕ್ಕೆ ಶುಕ್ರ ಮತ್ತು ಮೇ 31ಕ್ಕೆ ಶುಕ್ರ ಸಂಚಾರವಾಗಲಿದೆ. ಆವಾಗ ಚರ್ತುಗ್ರಹಿ ಯೋಗ ಉಂಟಾಗಲಿದೆ.
ನಾಲ್ಕೂ ಗ್ರಹಗಳು ಒಂದೇ ರಾಶಿಯಲ್ಲಿ ಬಂದಾಗ ಈ ರಾಶಿಯವರಿಗೆ ತುಂಬಾನೇ ಅನುಕೂಲಕರವಾಗಿರಲಿದೆ:

ವೃಷಭ ರಾಶಿ
ವೃಷಭ ರಾಶಿಯ ಲಗ್ನ ಮನೆ ಅಂದರೆ ಒಂದನೇ ಮನೆಯಲ್ಲಿ ಚರ್ತುಗ್ರಹಿ ಯೋಗ ಉಂಟಾಗುವುದು. ಈ ವಾರ ತುಂಬಾ ಉತ್ತಮವಾಗಿರಲಿದೆ, ವೃಷಭ ರಾಶಿಯವರಿಗೆ ಈ ಅವಧಿಯಲ್ಲಿ ಅದೃಷ್ಟದ ಬೆಂಬಲ ಇರುವುದರಿಂದ ನಿಮ್ಮ ಕೆಲಸ ಕಾರ್ಯದಲ್ಲಿ ಯಶಸ್ಸು ಪಡೆಯುತ್ತೀರಿ. ವ್ಯಾಪಾರಿಗಳು ಈ ಅವಧಿಯಲ್ಲಿ ತಮ್ಮ ಉದ್ಯೋಗದಲ್ಲಿ ತುಂಬಾನೇ ಪ್ರಗತಿಯನ್ನು ಕಾಣಬಹುದು. ಈ ಅವಧಿಯಲ್ಲಿ ಅಪೂರ್ಣವಾಗಿದ್ದ ನಿಮ್ಮ ಕೆಲಸ ಪೂರ್ಣವಾಗಲಿದೆ. ಇನ್ನು ಕೋರ್ಟ್‌ನಲ್ಲಿ ಏನಾದರೂ ಕೇಸ್ ಇದ್ದರೆ ಅದರ ತೀರ್ಪು ನಿಮ್ಮ ಪರವಾಗಿ ಬರಲಿದೆ. ಇನ್ನು ಕೆಲಸಕ್ಕಾಗಿ ಹುಡುಕುತ್ತಿದ್ದರೆ ಈ ಅವಧಿ ತುಂಬಾ ಉತ್ತಮವಾಗಿರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ಆರ್ಥಿಕವಾಗಿ ಈ ಸಮಯ ನಿಮಗೆ ತುಂಬಾ ಅನುಕೂಲಕರವಾಗಿರಲಿದೆ.
ಕರ್ಕ ರಾಶಿ
ಚರ್ತುಗ್ರಹಿ ಯೋಗ ಕರ್ಕ ರಾಶಿಯವರ 11ನೇ ಮನೆಯಲ್ಲಿ ಉಂಟಾಗಲಿದೆ. ಇದರಿಂದಾಗಿ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ. ಈ ಅವಧಿ ಆರ್ಥಿಕವಾಗಿ ತುಂಬಾ ಒಳ್ಳೆಯದಿದೆ, ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಂಡು ಬರಲಿದೆ. ನೀವು ಹೊಸ ಉದ್ಯಮ ಅಥವಾ ವ್ಯವಹಾರ ಪ್ರಾರಂಭಿಸಲು ಈ ಅವಧಿ ತುಂಬಾ ಚೆನ್ನಾಗಿರಲಿದೆ. ಈ ಸಮಯ ಉದ್ಯೋಗಿಗಳು, ವ್ಯವಹಾರದಲ್ಲಿ ಉತ್ತಮ ಪರಿಹಾರ ಕಂಡು ಬರಲಿದೆ. ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ.ಆರೋಗ್ಯ ಉತ್ತಮವಾಗಿರಲಿದೆ.
ಮಕರ ರಾಶಿ
ಮಕರ ರಾಶಿಯವರ 5ನೇ ಮನೆಯಲ್ಲಿ ಚತುರ್ಗ್ರಹಿ ಯೋಗ ಉಂಟಾಗುತ್ತಿದೆ. ಈ ಅವದಿಯಲ್ಲಿ ಮಕರ ರಾಶಿಯವರು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಯತ್ನ ಪಡುತ್ತಿದ್ದರೆ ಈ ಅವಧಿ ತುಂಬಾ ಚೆನ್ನಾಗಿರಲಿದೆ. ಈ ಅವಧಿ ಆರ್ಥಿಕವಾಗಿ ತುಂಬಾ ಒಳ್ಳೆಯದಿದೆ. ಅದೃಷ್ಟದ ಬೆಂಬಲ ನಿಮ್ಮ ಜೊತೆ ಇರುವುದರಿಂದ ನಿಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿಯನ್ನು ಪಡೆಯುತ್ತೀರಿ. ಕೌಟುಂಬಿಕ ಜೀವನವು ಸಂತೋಷದಿಂದ ಕೂಡಿರುತ್ತದೆ, ಆರೋಗ್ಯ ಚೆನ್ನಾಗಿರಲಿದೆ.
ಚರ್ತುಗ್ರಹಿ ಯೋಗದ ಪ್ರಯೋಜನಗಳು
ಚರ್ತುಗ್ರಹಿ ಯೋಗದಿಂದಾಗಿ ಗುರು ಮತ್ತು ಶುಕ್ರ ಹೆಚ್ಚಿನ ಪ್ರಯೋಜನ ನೀಡುತ್ತದೆ, ಇದರಿಂದಾಗಿ ಈ ಅಧಿ ತುಂಬಾನೇ ಚೆನ್ನಾಗಿರಲಿದೆ.
ಚರ್ತುಗ್ರಹಿ ಯೋಗ ಹಣಕ್ಕೆ ಸಂಬಂಧಿಸಿದ ಯೋಗವಾಗಿದೆ, ಈ ಅವಧಿ ಆರ್ಥಿಕವಾಗಿ ತುಂಬಾ ಒಳ್ಳೆಯದಿದೆ. ವೃತ್ತಿ ಬದುಕಿನಲ್ಲಿ ತುಂಬಾನೇ ಯಶಸ್ಸು ಸಿಗಲಿದೆ, ಹಾಗಾಗಿ ಈ ಅವಧಿ ತುಂಬಾ ಒಳ್ಳೆಯದಿದೆ.
ವೈಯಕ್ತಿಕ ಬದುಕಿಗೂ ತುಂಬಾನೇ ಒಳ್ಳೆಯದು
ಚರ್ತುಗ್ರಹಿ ಯೋಗದಿಂದಾಗಿ ಕುಟುಂಬ ಜೀವನ ಚೆನ್ನಾಗಿರಲಿದೆ, ವೈವಾಹಿಕ ಬದುಕು ತುಂಬಾ ಚೆನ್ನಾಗಿರಲಿದೆ, ವೈವಾಹಿಕ ಬದುಕಿನಲ್ಲಿ ಏನಾದ್ರೂ ಭಿನ್ನಾಭಿಪ್ರಾಯವಿದ್ದರೆ ಎಲ್ಲವೂ ಸರಿಯಾಗಲಿದೆ.
ಧಾರ್ಮಿಕ ಕಾರ್ಯಗಳಿಗೂ ಈ ಯೋಗ ತುಂಬಾ ಒಳ್ಳೆಯದಿದೆ, ಮಾಡುವ ಪೂಜೆ -ಕಾರ್ಯಗಳಿಗೆ ಹೆಚ್ಚಿನ ಫಲ ಸಿಗಲಿದೆ.
ಈ ಯೋಗ ತುಂಬಾ ಒಳ್ಳೆಯದಿದೆ ಹಾಗಾಗಿ ಈ ಅವಧಿಯಲ್ಲಿ ಹೆಚ್ಚಿನ ಪ್ರಯೋಜನ ಇರಲಿದೆ, ಈ ಚರ್ತುಗ್ರಹಿ ಯೋಗ ಬುಧ ತನ್ನ ರಾಶಿ ಬದಲಾವಣೆ ಮಾಡುವವರಿಗೆ ಇರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications