Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಸಂಖ್ಯಾಶಾಸ್ತ್ರ ಪ್ರಕಾರ ಅಕ್ಟೋಬರ್ ಮಾಸ ನಿಮ್ಮ ಜನ್ಮ ಸಂಖ್ಯೆಗೆ ಹೇಗಿರಲಿದೆ?
ಸಂಖ್ಯಾಶಾಸ್ತ್ರದಲ್ಲಿ ನಿಮ್ಮ ಹುಟ್ಟಿದ ದಿನಾಂಕ ಪ್ರಕಾರ ಭವಿಷ್ಯ ನೀಡಲಾಗಿದ್ದು, ನೀವು ಹುಟ್ಟಿದ ದಿನಾಂಕ ಪ್ರಕಾರ ಅಕ್ಟೋಬರ್ ಮಾಸ ಹೇಗಿರಲಿದೆ ಎಂದು ನೋಡೋಣ:
ಸಂಖ್ಯೆ 1(ಹುಟ್ಟಿದ ದಿನಾಂಕ 1, 10, 19, 28)
ನಿಮ್ಮ ಜನ್ಮ ಸಂಖ್ಯೆ ಪ್ರಕಾರ ಅಕ್ಟೋಬರ್ ಮಾಸ ನಿಮಗೆ ಅನುಕೂಲಕರವಾಗಿರಲಿದೆ. ಪೂರ್ವಜರ ಆಸ್ತಿಯಿಂದ ಲಾಭ ಗಳಿಸಬಹುದು. ವೃತ್ತಿ ಹಾಗೂ ವೈಯಕ್ತಿಕ ಬದುಕು ಚೆನ್ನಾಗಿರಲಿದೆ. ಆದರೆ ಕೋಪ ನಿಯಂತ್ರಿಸಿದರೆ ಒಳ್ಳೆಯದು. ಆರೋಗ್ಯ ಉತ್ತಮವಾಗಿರಲಿದೆ.

ಸಂಖ್ಯೆ 2(ಹುಟ್ಟಿದ ದಿನಾಂಕ 2, 11, 20, 29)
ನೀವು ಈ ಮಾಸದಲ್ಲಿ ನೀವು ವೃತ್ತಿ ಬದುಕಿನ ಕಡೆಗೆ ಗಮನಹರಿಸಿ. ನೀವು ಅವಸರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ, ನಿಮಗೆ ವಹಿಸಿದ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಿ. ವೈವಾಹಿಕ ಜೀವನ ಚೆನ್ನಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ಚೆನ್ನಾಗಿರಲಿದೆ.
ಸಂಖ್ಯೆ 3 (ಹುಟ್ಟಿದ ದಿನಾಂಕ 3, 12, 21, 30)
ಈ ಜನ್ಮ ಸಂಖ್ಯೆಯವರಿಗೆ ಅಕ್ಟೋಬರ್ ಮಾಸ ಅನುಕೂಲಕರವಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿರುವವರು ಉತ್ತಮ ಪ್ರಯೋಜನ ಪಡೆಯುವಿರಿ. ಆರ್ಥಿಕವಾಗಿ ಈ ಅವಧಿ ಅನುಕೂಲಕರವಾಗಿದೆ, ಶುಭ ಕಾರ್ಯದಲ್ಲಿ ಭಾಗಿಯಾಗುವಿರಿ. ಇನ್ನು ಈ ಮಾಸ ನಿಮ್ಮ ಖುಷಿಗಾಗಿ ಶಾಪಿಂಗ್ ಅಂತ ಹಣ ಖರ್ಚು ಮಾಡುತ್ತೀರಿ, ಆದರೆ ಬಜೆಟ್ ಪ್ಲ್ಯಾನ್ ಮಾಡಿದರೆ ತುಂಬಾ ಒಲ್ಳೆಯದು. ಒಟ್ಟಿನಲ್ಲಿ ಈ ಅವಧಿ ನಿಮಗೆ ಉತ್ತಮವಾಗಿದೆ.
ಸಂಖ್ಯೆ 4 (ಹುಟ್ಟಿದ ದಿನಾಂಕ 4, 13, 22, 31)
ಅಕ್ಟೋಬರ್ ಮಾಸದಲ್ಲಿ ಕೆಲ ಅಡೆತಡೆಗಳು ಎದುರಿಸಬಹುದು, ಪುರುಷರು ಮಹಿಳೆಯರ ಜೊತೆ ಯಾವುದೇ ವಿವಾದ ಉಂಟಾಗದಂತೆ ಜಾಗ್ರತೆವಹಿಸಿ. ಕೆಲವು ವಿಷಯಗಳ ಕಡೆ ಜಾಗ್ರತೆವಹಿಸಿ. ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿರಲಿದೆ, ವ್ಯಾಪಾರಿಗಳು ಹೆಚ್ಚಿನ ಲಾಭಕ್ಕಾಗಿ ಅಡ್ಡಮಾರ್ಗ ಹಿಡಿಯಬೇಡಿ ಎಂದು ಸಲಹೆ ನೀಡಲಾಗುವುದು. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಸಂಖ್ಯೆ 5 (ಹುಟ್ಟಿದ ದಿನಾಂಕ 5, 14, 23)
ಈ ಮಾಸ ನಿಮಗೆ ಸರಾಸರಿಯಾಗಿರಲಿದೆ. ನೀವು ಪ್ರತಿಯೊಂದು ಕೆಲಸವನ್ನು ಮಾಡುವುದಾದರೆ ಚೆನ್ನಾಗಿ ಆಲೋಚಿಸಿ ಮಾಡಬೇಕಾಗುತ್ತದೆ. ಯಾವುದೇ ಬದಲಾವಣೆ ಬಯಸುದರೂ ಆತುರದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಮಾತುಗಳಿಂದ ಬೇರೆಯವರಿಗೆ ನೋವಾಗದಂತೆ ಜಾಗ್ರತೆವಹಿಸಿ, ನಿಮ್ಮ ಮಾತೇ ನಿಮಗೆ ಶತ್ರುವಾಗಬಹುದು.
ಸಂಖ್ಯೆ 6 (ಹುಟ್ಟಿದ ದಿನಾಂಕ 6, 15, 24)
ಈ ತಿಂಗಳು ನಿಮಗೆ ಉತ್ತಮವಾಗಿದೆ, ಕುಟುಂಬದ ಜೊತೆಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುವುದು. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ತುಂಬಾ ಚೆನ್ನಾಗಿರಲಿದೆ. ವೃತ್ತಿ ಬದುಕು ಚೆನ್ನಾಗಿರಲಿದೆ, ಈ ಸಮಯದಲ್ಲಿ ದೊಡ್ಡ ಆರೋಗ್ಯ ಸಮಸ್ಯೆ ಇರಲ್ಲ, ಒಟ್ಟಿನಲ್ಲಿ ಈ ಅವಧಿ ನಿಮಗೆ ಅನುಕೂಲಕರವಾಗಿದೆ.
ಸಂಖ್ಯೆ 7 (ಹುಟ್ಟಿದ ದಿನಾಂಕ 7, 16, 25)
ನೀವು ಯಾರನ್ನೂ ಕಣ್ಮುಚ್ಚಿ ನಂಬಬೇಡಿ, ಯಾರು ನಿಮ್ಮ ಹಿತೈಷಿ, ಯಾರು ನಟಿಸುತ್ತಾರೆ ಎಂಬುವುದನ್ನು ತಿಳಿದುಕೊಳ್ಳುತ್ತೀರಿ. ಯಾವುದೇ ನಿರ್ಧಾರವಾಗಿರಲಿ ಮೂರನೇಯ ವ್ಯಕ್ತಿಯ ಮಾತು ಕೇಳಿ ತೆಗೆದುಕೊಳ್ಳಬೇಡಿ. ನಿಮ್ಮ ಕೆಲಸ ಕಾರ್ಯದಲ್ಲಿ ಹೆಚ್ಚಿನ ಶ್ರದ್ಧೆ ಇರಬೇಕು, ಹಣವನ್ನು ಕೂಡ ಅಷ್ಟೇ ಬಜೆಟ್ ಪ್ಲ್ಯಾನ್ ಮಾಡಿ ಖರ್ಚು ಮಾಡಿದರೆ ಒಳ್ಳೆಯದು.
ಸಂಖ್ಯೆ 8 (ಹುಟ್ಟಿದ ದಿನಾಂಕ 8, 17, 26)
ನೀವು ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿನ ನಡುವೆ ಸಮತೋಲನ ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು. ವ್ಯಾಪಾರಿಗಳಿಗೆ ಈ ಮಾಸ ಧನ ಲಾಭವಿರಲಿದೆ. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿರಲಿದೆ. ಹಿರಿಯರ ಸಲಹೆ ನಿರ್ಲಕ್ಷ್ಯ ಮಾಡಬೇಡಿ. ಕುಟುಂಬ ಜೀವನ, ವೈವಾಹಿಕ ಜೀವನ ಚೆನ್ನಾಗಿರಲಿದೆ.
ಸಂಖ್ಯೆ 9 (ಹುಟ್ಟಿದ ದಿನಾಂಕ 9, 18, 27)
ಈ ಅವಧಿಯಲ್ಲಿ ಕೋಪದ ಸ್ವಭಾವ ಹೆಚ್ಚಿರಬಹುದು. ಪ್ರತಿಕೂಲ ಸಂದರ್ಭದಲ್ಲಿ ಒಡಹುಟ್ಟಿದವರ ಬೆಂಬಲ ಸಿಗಲಿದೆ. ವೈವಾಹಿಕ ಜೀವನದ ಕಡೆಗೆ ಗಮನಹರಿಸಿ. ವೃತ್ತಿ ಬದುಕಿನ ಕಡೆಗೆ ಗಮನಹರಿಸಬೇಕು, ಆರ್ಥಿಕವಾಗಿ ಈ ಅವಧಿ ಅನುಕೂಲಕರವಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
