Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಕ್ಟೋಬರ್ ಮಾಸ ಭವಿಷ್ಯ: ಈ ವಾರ ಯಾವ ನಾಲ್ಕು ರಾಶಿಗಳಿಗೆ ಮಿಶ್ರಫಲ?
ಅಕ್ಟೋಬರ್ ಮಾಸದ ರಾಶಿಫಲ ಪ್ರಕಾರ ಈ ಅವಧಿಯಲ್ಲಿ ಜಾಗ್ರತೆವಹಿಸಿ:
ಮೇಷ ರಾಶಿ
ಅಕ್ಟೋಬರ್ ಮಾಸ ನಿಮಗೆ ಅಷ್ಟೊಂದು ಅನುಕೂಲಕರವಲ್ಲ,ಈ ಅವಧಿಯಲ್ಲಿ ಜಾಗ್ರತೆವಹಿಸಿ. ಕೆಲಸ ಕಾರ್ಯಗಳು ತುಂಬಾ ನಿಧಾನವಾಗಲಿದೆ, ಆದರೆ ತಂಬಾ ಚಿಂತೆ ಮಾಡಬೇಡಿ. ಅದರೆ ನೀವು ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಕೆಲಸದ ಜಾಗದಲ್ಲಿ ಕೂಡ ಕೋಪದಿಂದ ವರ್ತಿಸಬೇಡಿ.

ಆರ್ಥಿಕ ಜೀವನ: ಈ ಮಾಸ ನಿಮಗೆ ಆರ್ಥಿಕವಾಗಿ ಉತ್ತಮವಾಗಿರಲಿದೆ, ಈ ಅವಧಿಯಲ್ಲಿ ಉಳಿತಾಯ ಮಾಡಲು ಸಾಧ್ಯವಾಗುವುದು. ಇನ್ನು ಖರ್ಚು ಕೂಡ ಬಜೆಟ್ ಪ್ರಕಾರ ಪೂರ್ಣಗಳಿಸಿದರೆ ನಿಮಗೆ ಉತ್ತಮವಾಗಿರಲಿದೆ. ಇನ್ನು ಈ ಸಮಯದಲ್ಲಿ ಯಾವುದೇ ಸಾಲ ಮಾಡಬೇಡಿ.
ಕುಟುಂಬ ಜೀವನ: ಈ ಅವಧಿ ನಿಮ್ಮ ಕುಟುಂಬ ಜೀವನ ಚೆನ್ನಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.
ಆರೋಗ್ಯ: ನೀವು ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು. ಈ ಸಮಯದಲ್ಲಿ ಜಾಗ್ರತೆವಹಿಸದಿದ್ದರೆ ನೀವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಹಾಗಾಗಿ ಆರೋಗ್ಯ ಸಂಬಂಧಿತ ಸಮಸ್ಯೆಯಿದ್ದರೆ ನೀವು ನಿರ್ಲಕ್ಷ್ಯ ಮಾಡಬೇಡಿ.
ರಾಶಿಯ ಅಂಶ: ಬೆಂಕಿ
ರಾಶಿಯ ಅಧಿಪತಿ: ಮಂಗಳ
ಅದೃಷ್ಟದ ಸಂಖ್ಯೆಗಳು: 11, 25, 39, 45, 50
ಶುಭ ದಿನಗಳು: ಗುರುವಾರ, ಭಾನುವಾರ, ಮಂಗಳವಾರ, ಬುಧವಾರ
ಶುಭ ಬಣ್ಣಗಳು: ನೀಲಿ, ಕಡು ಕೆಂಪು, ಕಂದು, ಬಿಳಿ
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಕೂಡ ಅಕ್ಟೋಬರ್ ಮಾಸದಲ್ಲಿ ಜಾಗ್ರತೆವಹಿಸಬೇಕು. ಕೆಲಸದಲ್ಲಿ ಹಲವು ಸವಾಲುಗಲು ಎದುರಾಗಬಹುದು. ಕೆಲಸದಲ್ಲಿ ನೀವು ಯೋಜನೆ ಮಾಡಿದಂತೆ ಕೆಲಸ ನಡೆಯದಿದ್ದಾಗ ನಿಮಗೆ ಅಸಮಧಾನವಾಗಬಹುದು, ವೃತ್ತಿ ಬದುಕು ವೈಯಕ್ತಿಕ ಬದುಕಿನ ಮೇಲೆ ಕೂಡ ಪರಿಣಾಮ ಬೀರಬಹುದು.
ವೃತ್ತಿ ಜೀವನದಲ್ಲಿ ನೀವು ತಾಳ್ಮೆಯಿಂದ ಕಾಯಬೇಕು, ಸಮಯ ಬಂದಾಗ ಎಲ್ಲವೂ ಸರಿಯಾಗಲಿದೆ, ವೃತ್ತಿ ಬದುಕಿನಲ್ಲಿ ನೀವು ಆತುರದ ನಿರ್ದಾರಗಳನ್ನು ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಲಾಗುವುದು.
ಆರ್ಥಿಕ ಜೀವನ: ಆರ್ಥಿಕವಾಗಿ ಈ ಅವಧಿ ನಿಮಗೆ ಅಷ್ಟೊಂದು ಅನುಕೂಲಕರವಲ್ಲ, ಆರ್ಥಿಕ ಸವಾಲುಗಳನ್ನು ಎದುರಿಸಬಹುದು. ನೀವು ಖರ್ಚು ವೆಚ್ಚಗಳ ನಡುವೆ ಸಮತೋಲನ ಕಾಪಾಡಿಕೊಂಡು ಹೋಗಲು ಪ್ರಯತ್ನಿಸಬೇಕು. ನೀವು ಉಳಿತಾಯದ ಕಡೆಗೆ ಗಮನಹರಿಸಬೇಕು.
ವೈಯಕ್ತಿಕ ಬದುಕು: ವೃತ್ತಿ ಬದುಕು ವೈಯಕ್ತಿಕ ಬದುಕಿನಲ್ಲಿ ಪರಿಣಾಮ ಬೀರದಂತೆ ಜಾಗ್ರತೆವಹಿಸಿ. ಕೆಲಸದ ಟೆನ್ಷನ್ ಮನೆಗೆ ತರಬೇಡಿ, ಮನೆಯಲ್ಲಿ ವಾತಾವರಣ ಖುಷಿಯಿಂದ ಇರುವಂತೆ ಮಾಡಲು ಪ್ರಯತ್ನಿಸಬೇಕು, ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯವಿದ್ದರೆ ಅದನ್ನು ಕೂಡ ಬಗೆಹರಿಸಲು ಪ್ರಯತ್ನಿಸಬೇಕು.
ಆರೋಗ್ಯ: ಆರೋಗ್ಯದ ಬಗ್ಗೆ ನೀವು ಹೆಚ್ಚು ಗಮನಹರಿಸಬೇಕು, ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ಚಿಂತೆ ಕಾಡಬಹುದು.
ರಾಶಿಯ ಅಂಶ: ನೀರು
ರಾಶಿಯ ಅಧಿಪತಿ: ಮಂಗಳ ಮತ್ತು ಪ್ಲುಟೊ
ಅದೃಷ್ಟದ ಸಂಖ್ಯೆಗಳು: 5, 19, 20, 31, 40, 56
ಶುಭ ದಿನಗಳು: ಗುರುವಾರ, ಸೋಮವಾರ, ಶನಿವಾರ, ಬುಧವಾರ
ಶುಭ ಬಣ್ಣಗಳು: ಮರೂನ್, ಕೆಂಪು, ಗುಲಾಬಿ, ಆಕಾಶ ನೀಲಿ
ಧನು ರಾಶಿ
ಅಕ್ಟೋಬರ್ ಮಾಸದಲ್ಲಿ ಸವಾಲುಗಳು ಎದುರಾಗಬಹುದು, ಇದರಿಂದ ನಿಮ್ಮ ಆತ್ಮವಿಶ್ವಾಸ ಕುಗ್ಗಬಹುದು. ಈ ಅವಧಿಯಲ್ಲಿ ನೀವು ತುಂಬಾ ಸಮತೋಲಿತ ರೀತಿಯಲ್ಲಿ ವರ್ತಿಸಬೇಕು.
ವೃತ್ತಿ ಬದುಕು: ಕೆಲಸದಲ್ಲಿ ತುಂಬಾ ಒತ್ತಡವಿರಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುತ್ತಿಲ್ಲ ಎಂಬ ಬೇಸರವಿರಬಹುದು. ಯಾವುದೇ ಕೆಲಸವನ್ನು ಗಡಿಬಿಡಿಯಿಂದ ಮಾಡಬೇಡಿ. ಕೆಲಸದಲ್ಲಿ ನಿಮಗೆ ವಹಿಸಿದ ಕೆಲಸವನ್ನು ನಿರ್ಲಕ್ಷ್ಯ ಮಾಡಬೇಡಿ.
ಆರ್ಥಿಕ ಜೀವನ: ಅರ್ಥಿಕವಾಗಿ ಈ ಅವಧಿ ಅನುಕೂಲಕರವಲ್ಲ, ಹಣದ ಚಿಂತೆ ಕಾಡಬಹುದು, ಅಲ್ಲದೆ ಹೂಡಿಕೆಗೆ ಈ ಅವಧಿ ಅನುಕೂಲಕರವಲ್ಲ. ಹಣಕ್ಕೆ ಸಂಬಂಧಿಸಿದ ನಿರ್ಧಾರವಾಗಲಿ, ಹೂಡಿಕೆಯಾಗಲಿ ಈ ಅವಧಿಯಲ್ಲಿ ಮಾಡದಿದ್ದರೆ ಒಳ್ಳೆಯದು.
ಕುಟುಂಬ ಜೀವನ: ಮಕ್ಕಳ ಕುರಿತ ಚಿಂತೆ ಬಗೆಹರಿಯಲಿದೆ. ಕುಟುಂಬದಲ್ಲಿ ಸಮಸ್ಯೆಗಳಿದ್ದರೆ ಅದನ್ನು ಬಗೆಹರಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗುತ್ತದೆ.
ಆರೋಗ್ಯ: ಆರೋಗ್ಯ ಸಂಬಂಧಿತ ಸಮಸ್ಯೆಯಿದ್ದರೆ ನೀವು ನಿರ್ಲಕ್ಷ್ಯ ಮಾಡಬಾರದು, ಸಮಯಕ್ಕೆ ಸರಿಯಾಗಿ ಔಷಧ ತೆಗೆದುಕೊಳ್ಳಬೇಕು.
ರಾಶಿಯ ಅಂಶ: ಬೆಂಕಿ
ರಾಶಿಯ ಅಧಿಪತಿ: ಗುರು
ಅದೃಷ್ಟದ ಸಂಖ್ಯೆಗಳು: 1, 7, 14, 21, 38, 49
ಶುಭ ದಿನಗಳು: ಭಾನುವಾರ, ಶನಿವಾರ, ಸೋಮವಾರ, ಬುಧವಾರ
ಶುಭ ಬಣ್ಣಗಳು: ಕಡು ಕೆಂಪು, ಹಸಿರು, ಗುಲಾಬಿ, ನೇರಳೆ
ಕುಂಭ ರಾಶಿ
ಅಕ್ಟೋಬರ್ ಮಾಸದವರಿಗೆ ಆರ್ಥಿಕವಾಗಿ ಉತ್ತಮವಲ್ಲ. ಈ ಅವಧಿಯಲ್ಲಿ ಹಣದ ಕೊರತೆಯಿಂದ ನಿಮ್ಮ ಆತ್ಮವಿಶ್ವಾಸ ಕಡಿಮೆಯಾಗಬಹುದು. ಆದರೆ ಹಣಕ್ಕಾಗಿ ಅಡ್ಡ ಮಾರ್ಗ ಹಿಡಿಯಬೇಡಿ. ಹಣದ ಖರ್ಚು ಹೆಚ್ಚು ಬರಲಿದೆ, ಆದರೆ ಮಿತಿಯಲ್ಲಿ ಖರ್ಚು ಮಾಡಲು ಪ್ರಯತ್ನಿಸಿದರೆ ಒಳ್ಳೆಯದು.
ವ್ಯಾಪಾರಿಗಳಿಗೆ ಈ ಅವಧಿ ಅನುಕೂಲಕರವಲ್ಲ, ಈ ಅವಧಿಯಲ್ಲಿ ನೀವು ಅನುಭವಿಸಿದ ಫಲ ಸಿಗುವುದು ಕಷ್ಟವಾಗುವುದು. ಆದರೆ ನಿರಾಸೆಯಾಗಬೇಡಿ. ನಿಮ್ಮ ಕಠಿಣ ಶ್ರಮವನ್ನು ಮುಂದುವರೆಸಿ.
ಕುಟುಂಬ ಜೀವನ ಚೆನ್ನಾಗಿರಲಿದೆ, ಪ್ರತಿಕೂಲಕ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಸಹೋದರ ಅಥವಾ ಸಹೋದರಿಯರ ವಿವಾಹದಲ್ಲಿ ಅಡೆತಡೆಯಿದ್ದರೆ ಅದು ಬಗೆಹರಿಯಲಿದೆ.
ಆರೋಗ್ಯ: ಕೆಲಸದ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಜಾಗ್ರತೆವಹಿಸಿ, ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡಿ.
ರಾಶಿಯ ಅಂಶ: ಗಾಳಿ
ರಾಶಿಯ ಅಧಿಪತಿ: ಶನಿ
ಅದೃಷ್ಟದ ಸಂಖ್ಯೆಗಳು: 4, 11, 26, 35, 44, 54
ಶುಭ ದಿನಗಳು: ಬುಧವಾರ, ಭಾನುವಾರ, ಗುರುವಾರ, ಮಂಗಳವಾರ
ಶುಭ ಬಣ್ಣಗಳು: ಹಳದಿ, ಗುಲಾಬಿ, ನೇರಳೆ, ಬಿಳಿ, ಕಿತ್ತಳೆ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications