ಅಕ್ಟೋಬರ್ ಮಾಸ ಭವಿಷ್ಯ: ಈ 8 ರಾಶಿಗಳಿಗೆ ಅದೃಷ್ಟಕರವಾಗಿರಲಿದೆ

ಅಕ್ಟೋಬರ್ ಮಾಸದ ಭವಿಷ್ಯ ಪ್ರಕಾರ ಈ ರಾಶಿಗಳಿಗೆ ಹೊಸ ಮಾಸ ಅನುಕೂಲಕರವಾಗಿರಲಿದೆ ನೋಡಿ:

ವೃಷಭ ರಾಶಿ

ಈ ಮಾಸ ಗ್ರಹಗಳ ಸ್ಥಾನದಿಂದಾಗಿ ನಿಮಗೆ ಅನುಕೂಲಕರವಾಗಿದೆ. ಕೆಲಸದಲ್ಲಿ ಈ ಅವಧಿ ಉತ್ತಮವಾಗಿರಲಿದೆ. ನೀವು ಕೆಲಸ ಹುಡುಕುತ್ತಿದ್ದರೆ ಈ ಅವಧಿಯಲ್ಲಿ ಕೆಲಸ ಸಿಗಲಿದೆ. ಈ ಅವಧಿ ಆರ್ಥಿಕವಾಗಿ ಉತ್ತಮವಾಗಿದೆ. ವ್ಯಾಪಾರಿಗಳು ಹೊಸ ಹೂಡಿಕೆಗೆ ಪ್ರಯತ್ನಿಸುತ್ತಿದ್ದರೆ ಈ ಅವಧಿ ನಿಮಗೆ ಅನುಕೂಲಕರವಾಗಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ಈ ಅವಧಿಯಲ್ಲಿ ಆರೋಗ್ಯ ಕೂಡ ಉತ್ತಮವಾಗಿರಲಿದೆ.

October Month Horoscope

ರಾಶಿಯ ಅಂಶ: ಭೂಮಿ
ರಾಶಿಯ ಅಧಿಪತಿ: ಶುಕ್ರ
ಈ ಮಾಸ ಅದೃಷ್ಟದ ಸಂಖ್ಯೆಗಳು: 4, 18, 29, 32, 49, 57
ಶುಭ ದಿನಗಳು: ಭಾನುವಾರ, ಗುರುವಾರ, ಬುಧವಾರ, ಶುಕ್ರವಾರ
ಅದೃಷ್ಟಕರ ಬಣ್ಣಗಳು: ಹಸಿರು, ಕೆಂಗಂದು, ಆಕಾಶ ನೀಲಿ, ಗುಲಾಬಿ, ಬಿಳಿ

ಮಿಥುನ ರಾಶಿ

ಅಕ್ಟೋಬರ್ ಮಾಸ ನಿಮಗೆ ತುಂಬಾನೇ ಚೆನ್ನಾಗಿರಲಿದೆ. ಯಾವುದೋ ಕಾರಣಕ್ಕೆ ಪೂರ್ಣಗೊಳಿಸಲು ಸಾಧ್ಯವಾಗದ ಕೆಲಸ ಕಾರ್ಯಗಳು ಮತ್ತೆ ಚುರುಕುಗೊಳ್ಳಲಿದೆ. ಆರ್ಥಿಕವಾಗಿ ಈ ಅವಧಿ ಅನುಕೂಲಕರವಾಗಿದೆ, ನೀವು ಬಯಸಿದಂತೆಯೇ ಲಾಭ ದೊರೆಯಲಿದೆ. ಇನ್ನು ನೀವು ಮನೆ, ಗಾಡಿ ಅಂತ ಖರೀದಿಸುವ ಆಲೋಚನೆಯಲ್ಲಿದ್ದರೆ ಈ ಅವಧಿ ಅನುಕೂಲಕರವಾಗಿದೆ.
ಆರೋಗ್ಯ ಉತ್ತಮವಾಗಿರಲಿದೆ.

ರಾಶಿಯ ಅಂಶ: ನೀರು
ರಾಶಯ ಅಧಿಪತಿ: ಚಂದ್ರ
ಅದೃಷ್ಟದ ಸಂಖ್ಯೆಗಳು: 5, 17, 24, 30, 45, 54
ಶುಭ ದಿನಗಳು: ಬುಧವಾರ, ಗುರುವಾರ, ಭಾನುವಾರ, ಶುಕ್ರವಾರ
ಶುಭ ಬಣ್ಣಗಳು: ಆಕಾಶ ನೀಲಿ, ಕೆಂಪು, ಹಳದಿ, ಕೆನೆ

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಅಕ್ಟೋಬರ್ ಮಾಸ ಉತ್ತಮವಾಗಿರಲಿದೆ. ವೃತ್ತಿ ಬದುಕಿನಲ್ಲಿನ ಸಮಸ್ಯೆ ಬಗೆಹರಿಯಲಿದೆ, ವ್ಯಾಪಾರಿಗಳಿಗೆ ತಮ್ಮ ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು. ನೀವು ಬೇರೆ ಕಡೆ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ಕೆಲಸ ಸಿಗಲಿದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಯೂ ಬಗೆಹರಿಯುವುದರಿಂದ ನಿರಾಳವಾಗುವಿರಿ. ವೈವಾಹಿಕ ಬದುಕು ಚೆನ್ನಾಗಿರಲಿದೆ, ಆದರೆ ನೀವು ಆರೋಗ್ಯದ ಕಡೆಗೆ ಗಮನಹರಿಸಬೇಕು.

ರಾಶಿಯ ಅಂಶ: ಬೆಂಕಿ
ರಾಶಿಯ ಅಧಿಪತಿ: ಸೂರ್ಯ
ಅದೃಷ್ಟದ ಸಂಖ್ಯೆಗಳು: 7, 10, 19, 21, 33, 40, 55
ಶುಭ ದಿನಗಳು: ಗುರುವಾರ, ಶುಕ್ರವಾರ, ಸೋಮವಾರ, ಬುಧವಾರ
ಶುಭ ಬಣ್ಣಗಳು: ಕೆಂಪು, ಕಡು ಹಸಿರು, ನೀಲಿ, ಕೇಸರಿ

ಸಿಂಹ ರಾಶಿ

ಅಕ್ಟೋಬರ್ ಮಾಸ ಸಿಂಹ ರಾಶಿಯವರಿಗೆ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ನಿಮ್ಮ ವೃತ್ತಿ ಜೀವನ ಚೆನ್ನಾಗಿರಲಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ನಿಮ್ಮ ಕೆಲಸವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ ಒಳ್ಳೆಯ ಅವಕಾಶ ದೊರೆಯಲಿದೆ. ವೈವಾಹಿಕ ಬದುಕು ಚೆನ್ನಾಗಿರಲಿದೆ. ಈ ಅವಧಿ ಆರ್ಥಿಕವಾಗಿಯೂ ನಿಮಗೆ ಉತ್ತಮವಾಗಿರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಆದರೆ ಆರೋಗ್ಯದ ಕಡೆಗೆ ಗಮನಹರಿಸಿ.

ರಾಶಿಯ ಅಂಶ: ಬೆಂಕಿ
ರಾಶಿಯ ಅಧಿಪತಿ: ಸೂರ್ಯ
ಅದೃಷ್ಟದ ಸಂಖ್ಯೆಗಳು: 7, 10, 19, 21, 33, 40, 55
ಶುಭ ದಿನಗಳು: ಗುರುವಾರ, ಶುಕ್ರವಾರ, ಸೋಮವಾರ, ಬುಧವಾರ
ಶುಭ ಬಣ್ಣಗಳು: ಕೆಂಪು, ಕಡು ಹಸಿರು, ನೀಲಿ, ಕೇಸರಿ


ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಅಕ್ಟೋಬರ್ ಮಾಸ ಅನುಕೂಲಕರವಾಗಿರಲಿದೆ. ಈ ಅವಧಿಯಲ್ಲಿ ಯಾವುದೇ ದೊಡ್ಡ ಸಮಸ್ಯೆ ಇರಲ್ಲ, ಆರ್ಥಿಕವಾಗಿ ಈ ಅವಧಿ ಅನುಕೂಲಕರವಾಗಿರಲಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ವೃತ್ತಿ ಬದುಕಿನಲ್ಲಿ ನಿಮ್ಮ ಕಠಿಣ ಶ್ರಮಕ್ಕೆ ಉತ್ತಮ ಫಲಿತಾಂಶ ಸಿಗಲಿದೆ. ಈ ಅವಧಿ ಕುಟುಂಬ ಜೀವನ ಚೆನ್ನಾಗಿರಲಿದೆ. ಅರೋಗ್ಯ ಉತ್ತಮವಾಗಿರುತ್ತದೆ.

ರಾಶಿಯ ಅಂಶ: ಭೂಮಿ
ರಾಶಿಯ ಅಧಿಪತಿ: ಬುಧ
ಅದೃಷ್ಟದ ಸಂಖ್ಯೆಗಳು: 1, 15, 22, 35, 40, 57
ಶುಭ ದಿನಗಳು: ಮಂಗಳವಾರ, ಗುರುವಾರ, ಸೋಮವಾರ, ಬುಧವಾರ
ಶುಭ ಬಣ್ಣಗಳು: ಹಳದಿ, ಕೆಂಪು, ಕೆಂಗಂದು, ಬಿಳಿ

ತುಲಾ ರಾಶಿ

ತುಲಾ ರಾಶಿಯವರಿಗೆ ಈ ಅವಧಿ ತುಂಬಾ ಅನುಕೂಲಕರವಾಗಿರಲಿದೆ. ವೃತ್ತಿ ಬದುಕಿನಲ್ಲಿ ನಿಮ್ಮೆಲ್ಲಾ ಕೆಲಸ ಕಾರ್ಯಗಳು ಯೋಜನೆಯಂತೆಯೇ ಪೂರ್ಣಗೊಳ್ಳುವುದರಿಂದ ಖುಷಿಯಾಗಿರುತ್ತೀರಿ. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಲಾಭ ಗಳಿಸುತ್ತೀರಿ. ಈ ಅವಧಿಯಲ್ಲಿ ಆರ್ಥಿಕವಾಗಿ ಉತ್ತಮವಾಗಿರಲಿದೆ. ಅವಾಹಿತರಿಗೆ ಮದುವೆ ಪ್ರಸ್ತಾಪ ಬರಲಿದೆ. ನೀವು ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ.

ರಾಶಿಯ ಅಂಶ: ಗಾಳಿ
ರಾಶಿಯ ಅಧಿಪತಿ: ಶುಕ್ರ
ಅದೃಷ್ಟದ ಸಂಖ್ಯೆಗಳು: 6, 14, 29, 33, 40, 56
ಶುಭ ದಿನಗಳು: ಭಾನುವಾರ, ಮಂಗಳವಾರ, ಗುರುವಾರ, ಸೋಮವಾರ
ಶುಭ ಬಣ್ಣಗಳು: ಬಿಳಿ, ಕಂದು, ಹಳದಿ, ಕೆನೆ

ಮಕರ ರಾಶಿ

ಅಕ್ಟೋಬರ್‌ ಮಾಸ ಮಕರ ರಾಶಿಯವರಿಗೆ ಅನುಕೂಲಕರವಾಗಿರಲಿದೆ. ಈ ಅವಧಿ ನಿಮ್ಮ ಕೌಟುಂಬಿಕ ಜೀವನ ಚೆನ್ನಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಹಣದ ವಿಷಯದಲ್ಲಿ ಈ ಅವಧಿ ಅನುಕೂಲಕರವಾಗಿರಲಿದೆ. ಹಾಗಾಗಿ ಈ ಸಮಯದಲ್ಲಿ ಹೂಡಿಕೆ ಬಗ್ಗೆ ಗಮನಹರಿಸಬಹುದು. ವ್ಯಾಪಾರ ಯೋಜನವಿದ್ದರೆ ಅದರಂತೆ ಮುಂದುವರೆಸಲು ಈ ಅವಧಿ ಅನುಕೂಲಕರವಾಗಿರಲಿದೆ.

ರಾಶಿಯ ಅಂಶ: ಭೂಮಿ
ರಾಶಿಯ ಅಧಿಪತಿ: ಶನಿ
ಅದೃಷ್ಟದ ಸಂಖ್ಯೆಗಳು: 6, 18, 24, 36, 44, 54
ಶುಭ ದಿನಗಳು: ಸೋಮವಾರ, ಗುರುವಾರ, ಮಂಗಳವಾರ, ಶನಿವಾರ
ಶುಭ ಬಣ್ಣಗಳು: ಕೆನೆ, ನೇರಳೆ, ಕೆಂಪು, ಕೇಸರಿ

ಮೀನ ರಾಶಿ

ಮೀನ ರಾಶಿಯವರಿಗೆ ಈ ಅವಧಿ ಅನುಕೂಲಕರವಾಗಿರಲಿದೆ. ನೀವು ವಿದೇಶದಲ್ಲಿ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದರೆ ಈ ಅವಧಿ ನಿಮಗೆ ಅನುಕೂಲಕರವಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ವ್ಯಾಪಾರಿಗಳು ಆರ್ಥಿಕ ಪ್ರಗತಿ ಕಾಣುವಿರಿ. ಆರೋಗ್ಯ ವಿಚಾರದಲ್ಲಿಯೂ ಈ ಅವಧಿ ಅನುಕೂಲಕರವಾಗಿದೆ.

ರಾಶಿಯ ಅಂಶ: ನೀರು
ರಾಶಿಯಅಧಿಪತಿ: ನೆಪ್ಚೂನ್, ಗುರು
ಅದೃಷ್ಟದ ಸಂಖ್ಯೆಗಳು: 2,10, 20, 36, 45, 51
ಶುಭ ದಿನಗಳು: ಮಂಗಳವಾರ, ಸೋಮವಾರ, ಬುಧವಾರ, ಭಾನುವಾರ
ಶುಭ ಬಣ್ಣಗಳು: ಕೆಂಪು, ಹಳದಿ, ನೀಲಿ, ಗುಲಾಬಿ, ಹಸಿರು

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

October Month Horoscope: Lucky To These 8 Zodiac Signs

October Month Horoscope: As per prediction lucky to these zodiac signs, read on.
Story first published: Friday, September 27, 2024, 12:36 [IST]
X
Desktop Bottom Promotion