Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಕ್ಟೋಬರ್ 22 ದಿನ ಭವಿಷ್ಯ: ಈ ದಿನ 12 ರಾಶಿಗಳ ರಾಶಿಫಲ ನೋಡುವುದಾದರೆ ಯಾರಿಗೆಲ್ಲಾ ಶುಭವಾಗಿದೆ
ಶುಭ ಮಂಗಳವಾರ, ಈ ದಿನ 12 ರಾಶಿಗಳ ರಾಶಿಫಲ ಹೇಗಿದೆ ನೋಡೋಣ...
ಮೇಷ ರಾಶಿ
ಈ ದಿನ ಶುಭವಲ್ಲ, ಏನಾದರು ಆಸ್ತಿ ಖರೀದಿ ಅಥವಾ ಮಾರಾಟ ಮಾಡಬೇಕೆಂದಿದ್ದರೆ ಈ ದಿನ ಉತ್ತವಲ್ಲ. ಮನೆಯ ವಾತಾವರಣ ಕೂಡ ಚೆನ್ನಾಗಿರಲ್ಲ, ಚಿಕ್ಕ ವಿಷಯಕ್ಕೆ ಸಂಗಾತಿ ಜೊತೆ ಮನಸ್ತಾಪ ಬರಬಹುದು. ಕೆಲಸದಲ್ಲಿಯೂ ಒತ್ತಡ ಹೆಚ್ಚಿರಲಿದೆ, ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 21
ಶುಭ ಸಮಯ: ಸಂಜೆ 5 ರಿಂದ ರಾತ್ರಿ 8 ರವರೆಗೆ

ವೃಷಭ ರಾಶಿ
ಈ ದಿನ ಅನುಕೂಲಕವಾಗಿದೆ, ನೀವು ಹಣದ ಬಗ್ಗೆ ಅತಿಯಾಗಿ ಆಲೋಚಿಸುತ್ತಿದ್ದರೆ ಆ ಆಲೋಚನೆ ಬಿಡಿ, ನಿಮ್ಮ ಸಮಸ್ಯೆ ಬಗೆಹರಿಯಲಿದೆ. ಇನ್ನು ಕೆಲಸಕ್ಕೆ ಸಂಬಂಧಿಸಿದಂತೆ ಮಾಡುವ ಪ್ರಯಾಣ ಅನುಕೂಲಕರವಾಗಿದೆ. ಕೆಲಸದಲ್ಲಿ ಧನಾತ್ಮಕ ಬದಲಾವಣೆ ಕಾಣಬಹುದು. ಆದರೆ ಕುಟುಂಬ ಜೀವನದ ಕಡೆಗೆ ಗಮನಹರಿಸಬೇಕು. ನಿಮ್ಮ ಸಂಸಾರದಲ್ಲಿ ಮೂರನೇಯ ವ್ಯಕ್ತಿ ಹಸ್ತಕ್ಷೇಪ ಮಾಡಲು ಬಿಡಬೇಡಿ. ಆರೋಗ್ಯದ ಬಗ್ಗೆ ಹೇಳುವುದಾದರೆ ಅತಿಯಾದ ಮಾನಸಿಕ ಒತ್ತಡ ಒಳ್ಳೆಯದಲ್ಲ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 7
ಶುಭ ಸಮಯ: ಮಧ್ಯಾಹ್ನ 2:30 ರಿಂದ 4 ರವರೆಗೆ
ಮಿಥುನ ರಾಶಿ
ಈ ದಿನ ನಮಗೆ ಉತ್ತಮವಾಗಿದೆ, ಕೆಲಸ ಕಾರ್ಯಗಳು ಚೆನ್ನಾಗಿ ನಡೆಯಲಿದೆ. ನಿಮ್ಮ ಕುಟುಂಬ ಜೀವನದಲ್ಲಿ ಹೊಂದಾಣಿಕೆ ಉತ್ತವಿರಲಿದೆ. ವ್ಯಾಪಾರಿಗಳು ಸದ್ಯಕ್ಕೆ ಹೊಸ ಹೂಡಿಕೆ ಮಾಡದೆ ವ್ಯವಹಾರದ ಕಡೆ ಇನ್ನಷ್ಟು ಗಮನ ನೀಡುವುದು ಒಳ್ಳೆಯದು. ಕುಟುಂಬ ಜೀವನದ ದೃಷ್ಟಿಯಿಂದಲೂ ಈ ದಿನ ಉತ್ತವಾಗಿದೆ, ಸಂಗಾತಿಯೊಂದಿಗೆ ಸಾಮರಸ್ಯ ಚೆನ್ನಾಗಿರಲಿದೆ. ಆರೋಗ್ಯ ಸಮಸ್ಯೆಗಳಿದ್ದರೆ ನಿರ್ಲಕ್ಷ್ಯ ಮಾಡಬೇಡಿ, ಅನಾರೋಗ್ಯ ಕೆಲಸ ಕಾರ್ಯದ ಮೇಲೆ ಪರಿಣಾಮ ಬೀರುವುದು.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ:5
ಶುಭ ಸಮಯ: ಬೆಳಗ್ಗೆ 4:15 ರಿಂದ 7:15 ರವರೆಗೆ
ಕರ್ಕ ರಾಶಿ
ಈ ದಿನ ನೀವು ಖುಷಿಯಾಗಿರುತ್ತೀರಿ, ಏಕೆಂದರೆ ಹಣಕ್ಕೆ ಸಂಬಂಧಿಸಿದ ಪ್ರಮುಖ ಸಮಸ್ಯೆ ಬಗೆಹರಿಯಲಿದೆ. ಆರ್ಥಿಕವಾಗಿಯೂ ಈ ದಿನ ಚೆನ್ನಾಗಿರಲಿದೆ. ಉದ್ಯೋಗಿಗಳ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ. ನೀವು ಕುಟುಂಬದವರ ಜೊತೆ ಅವರಿಗೆ ನೋವಾಗದಂತೆ ನಡೆದುಕೊಳ್ಳಿ, ಸಂಗಾತಿಯ ಭಾವನೆಗೂ ಗಮನ ನೀಡಿ, ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ದುಬಾರಿಯಾಗಬಹುದು.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 10
ಶುಭ ಸಮಯ: ಮಧ್ಯಾಹ್ನ 12:10 ರಿಂದ 3:30 ರವರೆಗೆ
ಸಿಂಹ ರಾಶಿ
ಕೆಲಸದಲ್ಲಿ ಈ ದಿನ ಉತ್ತಮವಾಗಿದೆ, ವ್ಯಾಪಾರಿಗಳಿಗೂ ಧನ ಲಾಭವಾಗಲಿದೆ, ಆದರೆ ಕುಟುಂಬ ಜೀವನದ ಕಡೆಗೆ ಗಮನಹರಿಸಬೇಕು. ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು,ಅದನ್ನು ತಪ್ಪಿಸಿ. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 10
ಶುಭ ಸಮಯ: ಸಂಜೆ 5:30 ರಿಂದ ರಾತ್ರಿ 8 ರವರೆಗೆ
ಕನ್ಯಾ ರಾಶಿ
ಈ ದಿನ ನೀವು ತಾಳ್ಮೆಯಿಂದಿರಬೇಕು, ಕೆಲಸದಲ್ಲಿ ಬಯಸಿದ ಫಲ ಸಿಗದೇ ಇರಬಹುದು, ವ್ಯಾಪಾರಿಗಳುಕೂಡ ಆರ್ಥಿಕ ನಷ್ಟ ಉಂಟಾಗದಂತೆ ಜಾಗ್ರತೆವಹಿಸಿ. ವೃತ್ತಿಗೆ ಸಂಬಂಧಿಸಿದ ನಿರ್ಧಾರ ಆತುರದಿಂದ ತೆಗೆದುಕೊಳ್ಳಬೇಡಿ. ಆದರೆ ಕುಟುಂಬ ಜೀವನ ಚೆನ್ನಾಗಿರಲಿದೆ, ಭಿನ್ನಾಭಿಪ್ರಾಯಗಳಿದ್ದರೆ ಅದು ದೂರಾಗಲಿದೆ. ಆರೋಗ್ಯ ಸಮಸ್ಯೆಗಳಿರಬಹುದು.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟ ಸಂಖ್ಯೆ: 30
ಶುಭ ಸಮಯ: ಸಂಜೆ 7 ರಿಂದ 9 ರವರೆಗೆ
ತುಲಾ ರಾಶಿ
ಈ ದಿನ ನಿಮಗೆ ಶುಭವಾಗಿದೆ, ಆರ್ಥಿಕವಾಗಿ ಕೂಡ ಉತ್ತಮವಾಗಿದೆ. ವ್ಯಾಪಾರಿಗಳು ಉತ್ತಮ ಲಾಭ ಕಾಣಬಹುದು. ಮನೆಯಲ್ಲಿಯೂ ವಾತಾವರಣ ಚೆನ್ನಾಗಿರಲಿದೆ, ಮನೆಗೆ ಅತಿಥಿಗಳು ಬರಬಹುದು, ಅವಾಹಿತರಿದ್ದರೆ ವಿವಾಹ ಪ್ರಸ್ತಾಪ ಬರಬಹುದು, ಆರೋಗ್ಯ ಚೆನ್ನಾಗಿರಲಿದೆ. ಕೆಲಸವು ಕೂಡ ನೀವಂದುಕೊಂಡಂತೆ ನಡೆಯಲಿದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 5
ಶುಭ ಸಮಯ: ಮಧ್ಯಾಹ್ನ 12 ರಿಂದ 2:20 ರವರೆಗೆ
ವೃಶ್ಚಿಕ ರಾಶಿ
ಈ ದಿನ ಉತ್ತಮವಾಗಿದೆ, ಕೆಲಸವು ಮತ್ತಷ್ಟು ಚುರುಕುಗೊಳ್ಳುವುದು, ಮನೆಯಲ್ಲಿ ವಾತಾವರಣ ತುಂಬಾ ಚೆನ್ನಾಗಿರಲಿದೆ. ವ್ಯಾಪಾರಿಗಳು ನಿರೀಕ್ಷೆ ಮಾಡಿದಂತೆಯೇ ಲಾಭ ಪಡೆಯುತ್ತೀರಿ. ವೈವಾಹಿಕ ಬದುಕು ಚೆನ್ನಾಗಿರಲಿದೆ, ಕುಟುಂಬದಲ್ಲಿಯೂ ಸಂತೋಷದ ವಾತಾವರಣ ಇರಲಿದೆ, ಆರೋಗ್ಯದ ದೃಷ್ಟಿಯಿಂದಲೂ ದೊಡ್ಡ ಸಮಸ್ಯೆಯಿಲ್ಲ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 21
ಶುಭ ಸಮಯ: ಬೆಳಿಗ್ಗೆ 10:10 ರಿಂದ ಮಧ್ಯಾಹ್ನ 2 ರವರೆಗೆ
ಧನು ರಾಶಿ
ಕೆಲಸದಲ್ಲಿನ ಅಡೆತಡೆ ದೂರಾಗಲಿದೆ, ಕೆಲಸದಲ್ಲಿ ನಿಮ್ಮ ಶ್ರಮಕ್ಕೆ ಫಲ ಸಿಗಲಿದೆ, ವ್ಯಾಪಾರಿಗಳಿಗೂ ಧನಾತ್ಮಕವಾಗಿದೆ. ವೈವಾಹಿಕ ಜೀವನದ ಕಡೆಗೆ ಗಮನಹರಿಸಬೇಕು, ನಿಮ್ಮ ನಡುವೆ ಏನಾದರು ಭಿನ್ನಾಭಿಪ್ರಾಯವಿದ್ದರೆ ಅದನ್ನು ಬಗೆಹರಿಸಲು ಪ್ರಯತ್ನಿಸಿ. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 32
ಶುಭ ಸಮಯ: ಮಧ್ಯಾಹ್ನ 12:20 ರಿಂದ 2:55 ರವರೆಗೆ
ಮಕರ ರಾಶಿ
ಆರ್ಥಿಕವಾಗಿ ಈ ದಿನ ಉತ್ತಮವಾಗಿದೆ, ಆಸ್ತಿ ಖರೀದಿ ಮಾಡುತ್ತಿದ್ದರೆ ಈ ದಿನ ಶುಭವಾಗಿದೆ. ವ್ಯಾಪಾರಿಗಳಿಗೆ ಈ ಸಮಯ ಉತ್ತಮವಾಗಿದೆ. ಆರೋಗ್ಯ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಮನೆಯ ವಾತಾವರಣ ಚೆನ್ನಾಗಿರಲಿದೆ, ವ್ಯಾಪಾರಿಗಳಿಗೆ ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 11
ಶುಭ ಸಮಯ: ಬೆಳಗ್ಗೆ 7 ರಿಂದ 11 ರವರೆಗೆ
ಕುಂಭ ರಾಶಿ
ಮನೆಯಲ್ಲಿ ಕೆಲ ಸಮಸ್ಯೆ ಉಂಟಾಗಬಹುದು, ಹಣ-ಾಸ್ತಿ ಸಂಬಂಧಿಸಿದ ವಾದ-ವಿವಾದ ಉಂಟಾಗಬಹುದು. ಆರ್ಥಿಕವಾಗಿ ಈ ದಿನ ನಿಮಗೆ ಅನುಕೂಲಕರವಾಗಿದೆ. ಕೆಲಸ ಕಾರ್ಯಗಳು ಕೂಡ ಉತ್ತಮವಾಗಿ ನಡೆಯಲಿದೆ. ವೈವಾಹಿಕ ಬದುಕಿನಲ್ಲಿ ಅಪನಂಬಿಕೆ ಸಮಸ್ಯೆ ಹೆಚ್ಚಿಸುವುದು. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿರಬಹುದು.
ಅದೃಷ್ಟದ ಬಣ್ಣ: ಗಾಢ ಕೆಂಪು
ಅದೃಷ್ಟದ ಸಂಖ್ಯೆ: 2
ಶುಭ ಸಮಯ: ಬೆಳಗ್ಗೆ 5:15 ರಿಂದ 9:50 ರವರೆಗೆ
ಮೀನ ರಾಶಿ
ಈ ದಿನ ಆರ್ಥಿಕವಾಗಿ ಯಾವುದೇ ಸಮಸ್ಯೆವಿಲ್ಲ, ವ್ಯಾಪಾರಿಗಳಿಗೂ ಉತ್ತಮ ಲಾಭವಾಗಲಿದೆ. ಕೆಲಸದಲ್ಲಿಯೂ ಈ ದಿನ ಧನಾತ್ಮಕವಾಗಿದೆ. ವೈವಾಹಿಕ ಬದುಕು ಚೆನ್ನಾಗಿರಲಿದೆ, ಮನೆಯ ವಾತಾವರಣ ಚೆನ್ನಾಗಿರಲಿದೆ. ಈ ದಿನ ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 9
ಶುಭ ಸಮಯ: ಸಂಜೆ 5:30 ರಿಂದ ರಾತ್ರಿ 9 ರವರೆಗೆ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications