October 2025 Horoscope: ಈ ತಿಂಗಳು ಯಾರಿಗೆ ಅದೃಷ್ಟದ ದಿನಗಳಿವೆ?

ಅಕ್ಟೋಬರ್ 2025ರ ನಿಮ್ಮ ಮಾಸಿಕ ರಾಶಿಫಲ (October 2025 Horoscope)

ಮೇಷ ರಾಶಿ

ಅಕ್ಟೋಬರ್‌ನಲ್ಲಿ ಹಲವಾರು ಗ್ರಹಗಳ ಸಂಚಾರದಿಂದಾಗಿ ಮೇಷ ರಾಶಿಯವರಲ್ಲಿ ಹಲವು ಲಾಭಗಳಿಗೆ ಕಾರಣವಾಗಲಿದೆ. ನಿಮ್ಮ ಖ್ಯಾತಿ ಹೆಚ್ಚಾಗುವ ಎಲ್ಲಾ ಲಕ್ಷಣಗಳಿವೆ. ಮೇಷ ರಾಶಿಯವರಲ್ಲಿ ಈ ತಿಂಗಳು ವೃತ್ತಿ ಹಾಗೂ ಕೆಲಸಗಳಲ್ಲಿ ಶುಭವಿದೆ. ಸ್ಥಗಿತಗೊಂಡ ಕೆಲಸ ಕಾರ್ಯಗಳು ಪುನರ್ ಆರಂಭಿಸುವ ಸಾಧ್ಯತೆ ಇದೆ. ಕುಟುಂಬ ಜೀವನದಲ್ಲಿ ಸುಖ ನೋಡುವಿರಿ. ಅದ್ರಲ್ಲೂ ಹಣಕಾಸಿನ ವಿಚಾರವಾಗಿ ಕುಟುಂಬದಲ್ಲಿದ್ದ ಒತ್ತಡಗಳು ನಿವಾರಣೆಯಾಗಲಿದೆ. ತಿಂಗಳ ಕೊನೆಯಲ್ಲಿ ಹಲವರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡಬಹುದು. ಆದ್ರೆ ಮಾನಸಿಕವಾಗಿ ಎಲ್ಲರು ಸದೃಢರಾಗಿರುತ್ತೀರಿ.

ವೃಷಭ ರಾಶಿ

ಅಕ್ಟೋಬರ್ ತಿಂಗಳು ವೃಷಭ ರಾಶಿಯವರಿಗೆ ಸ್ಥಿರತೆ ಮತ್ತು ಹೊಸ ಅವಕಾಶಗಳನ್ನು ತರುತ್ತದೆ. ಪ್ರೀತಿ ಸಂಬಂಧಗಳು ಬಹಳ ಮಧುರವಾಗಿರಲಿದೆ. ಶುಭ ಸಮಾರಂಭಗಳು, ದೇವಾಲಯ ಭೇಟಿ, ಪ್ರವಾಸದಂತಹ ಕಾರ್ಯಗಳಲ್ಲಿ ನೀವು ತೊಡಗಬಹುದು. ಸಾಮಾಜಿಕ ಜೀವನದಲ್ಲಿ ಹೆಸರು ಮಾಡುವಿರಿ. ಸಂಬಂಧಿಕರಿಗೆ ಹಣ ನೀಡಿದ್ದರೆ ಮರಳಿ ಪಡೆಯುವ ಸಾಧ್ಯತೆ ಹೆಚ್ಚಾಗಿರಲಿದೆ. ತಿಂಗಳ ಕೊನೆಯಲ್ಲಿ ನಿಮಗೆ ಹಣಕಾಸಿ ನೆಮ್ಮದಿ ಇರಲಿದೆ. ವ್ಯಾಪಾರ ವ್ಯವಹಾರಗಳು ಈ ತಿಂಗಳಲ್ಲಿ ಉನ್ನತ ಮಟ್ಟದ ಲಾಭ ಸಿಗಲಿದೆ. ಪ್ರಯಾಣಗಳಲ್ಲಿ ಸುಖವಿದೆ.

October 2025 Monthly Horoscope

ಮಿಥುನ ರಾಶಿ

ಈ ತಿಂಗಳು ಮಿಥುನ ರಾಶಿಯವರಿಗೆ ಬದಲಾವಣೆ ಲಾಭ ತರುವ ತಿಂಗಳು. ನಿಮ್ಮ ಕೆಲಸ ಅಥವಾ ವ್ಯವಹಾರದಲ್ಲಿ ಹಠಾತ್ ಅವಕಾಶಗಳು ಉದ್ಭವಿಸಬಹುದು, ಆದರೆ ಅವುಗಳನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ. ಹಳೆಯ ಹೂಡಿಕೆಗಳು ಲಾಭವನ್ನು ನೀಡಬಹುದು, ಆದರೆ ಹೊಸ ಹೂಡಿಕೆಗಳೊಂದಿಗೆ ಜಾಗರೂಕರಾಗಿರಿ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸಬಹುದು. ಪರಿಸ್ಥಿತಿಗಳ ನಿಭಾಯಿಸಲು ಸಾಲ ಮಾಡಬೇಕಾಗಿ ಬರಬಹುದು. ತಿಂಗಳ ಆರಂಭದಲ್ಲಿ ಹಣಕಾಸು ಸ್ಥಿತಿ ಉತ್ತಮವಾಗಿರಲಿದೆ.

ಕರ್ಕ ರಾಶಿ

ಅಕ್ಟೋಬರ್ ತಿಂಗಳು ಕರ್ಕ ರಾಶಿಯವರಿಗೆ ಆಧ್ಯಾತ್ಮಿಕ ಬೆಳವಣಿಗೆ ಮತ್ತು ಆಂತರಿಕ ಪರಿವರ್ತನೆಯ ಸಮಯವನ್ನು ತರುತ್ತದೆ. ಮನಸ್ಸು ಸಕಾರಾತ್ಮಕ ಶಕ್ತಿಯಿಂದ ತುಂಬಿರುತ್ತದೆ. ಹಣಕಾಸು ಸ್ಥಿರವಾಗಿರುತ್ತವೆ, ಆದರೆ ವೆಚ್ಚಗಳು ಹೆಚ್ಚಾಗಬಹುದು. ಕೌಟುಂಬಿಕ ಸಂತೋಷ ಹೆಚ್ಚಾಗುತ್ತದೆ. ಆಧ್ಯಾತ್ಮಿಕ ಸಮಯಗಳು ಹೆಚ್ಛಾಗಲಿವೆ. ಕುಟುಂಬ ಜೀವನದಲ್ಲಿ ಸುಖ ಇರಲಿದೆ. ಯಾರ ಬಳಿಯಾದರು ಸಾಲ ಪಡೆದಿದ್ದರೆ ತಿಂಗಳ ಅಂತ್ಯದ ಸಮಯದಲ್ಲಿ ನಿಮಗೆ ಮರುಪಾವತಿಗೆ ಒತ್ತಡ ಬರಬಹುದು.

ಸಿಂಹ ರಾಶಿ

ಈ ತಿಂಗಳು ನಿಮ್ಮ ನಾಯಕತ್ವ ಮತ್ತು ಸಾಮಾಜಿಕ ಘನತೆ ಹೆಚ್ಚಾಗಲಿದೆ. ನಿಮ್ಮ ವೃತ್ತಿಯಲ್ಲಿ ದೊಡ್ಡ ಅವಕಾಶ ಹುಡುಕಿ ಬರಬಹುದು. ಮನೆಗಾಗಿ ನೀವು ದುವಾರಿ ವಸ್ತು ಖರೀದಿಸಬಹುದು. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ನೆರವು ಸಿಗಲಿದೆ. ಬಡ್ತಿ ಗೌರವ ಕೂಡ ಒಲಿಯಲಿದೆ. ದೊಡ್ಡ ಹಣಕಾಸು ಸ್ಥಿತಿಯಲ್ಲಿ ಲಾಭದಾಯಕ ವಿಚಾರಗಳಿವೆ. ಸಾಲ ಕಡಿಮೆಯಾಗಲಿದೆ. ವಾಹನ ಖರೀದಿಯ ಸಂಭವವಿದೆ. ಮಧುಮೇಹದಂತಹ ದೀರ್ಘಕಾಲದ ಸಮಸ್ಯೆಗಳಿದ್ದರೆ ಈ ಸಮಯದಲ್ಲಿ ಎಚ್ಚರಿಕೆ ಇಡಬೇಕಿದೆ. ದಾಂಪತ್ಯದಲ್ಲಿದ್ದ ವೈಮನಸ್ಸು ದೂರಾಗಲಿದೆ.

ಕನ್ಯಾ ರಾಶಿ

ಅಕ್ಟೋಬರ್‌ನಲ್ಲಿ ಕನ್ಯಾರಾಶಿ ವ್ಯಕ್ತಿಗಳ ಸಂಘಟನೆ ಮತ್ತು ಯೋಜನೆಯಲ್ಲಿ ಸುಧಾರಣೆಗಳು ಕಂಡುಬರುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ, ವಿಶೇಷವಾಗಿ ಬರವಣಿಗೆ, ವಿಶ್ಲೇಷಣೆ ಅಥವಾ ಸೇವಾ ವಲಯದಲ್ಲಿ ಸುಧಾರಣೆಗಳು ಕಂಡುಬರುತ್ತವೆ. ಹಣಕಾಸಿನ ವಿಚಾರದಲ್ಲಿ ಲಾಭ ನೋಡುವಂತಹ ಸಮಯ ಇದು. ದಾಂಪತ್ಯದಲ್ಲಿ ಸಣ್ಣ ಪುಟ್ಟ ಮನಸ್ತಾಪಗಳು ಬರಬಹುದು, ಹಾಗೆ ಮಕ್ಕಳ ವಿದ್ಯಾಭ್ಯಾಸ ಹಾಗೆ ವ್ಯವಹಾರ ಸಂಬಂಧ ಈ ತಿಂಗಳು ಚಿಂತೆಗಳು ಕಾಡಬಹುದು. ಆಪ್ತರಿಂದ ನಿಮಗೆ ಬಹಳ ಸಹಕಾರ ಸಿಗಲಿದೆ.

ತುಲಾ ರಾಶಿ

ಅಕ್ಟೋಬರ್ ತುಲಾ ರಾಶಿ ಮಂದಿಗೆ ಸಮತೋಲನದ ದಿನಗಳನ್ನು ತರಲಿದೆ. ನೀವು ಅನೇಕ ವಿಷಯಗಳಲ್ಲಿ ಮಧ್ಯವರ್ತಿಯ ಪಾತ್ರವನ್ನು ವಹಿಸಬಹುದು. ಆಸ್ತಿ ಸಂಬಂಧಿತ ವಿಚಾರದಲ್ಲಿ ನಿಮಗೆ ಉತ್ತಮ ಸುದ್ದಿ ಇದೆ. ಬಹಳ ಕಾಲದಿಂದ ಆಲೋಚಿಸಿದ್ದ ವಿಚಾರಗಳಲ್ಲಿ ನಿಮಗೆ ಶುಭವಿದೆ, ಅದ್ರಲ್ಲೂ ಮನೆ ಖರೀದಿ, ವಾಹನ ಖರೀದಿ, ಪ್ರವಾಸದಂತಹ ವಿಚಾರಗಳಲ್ಲಿ ಲಾಭವಿದೆ. ಹೊಸ ವ್ಯಾಪಾರ ಖರೀದಿಗೆ ಈ ತಿಂಗಳು ಶುಭಕಾರಿ. ನಿಮ್ಮ ದೈನಂದಿನ ಕೆಲಸಗಳಲ್ಲಿ ಹೊಸ ಆದಾಯ ಮೂಲಗಳ ಹುಡುಕುವಿರಿ. ಅನೇಕರಲ್ಲಿ ದೊಡ್ಡ ವ್ಯವಹಾರ ಒಪ್ಪಂದಗಳ ಮಾಡಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಅಕ್ಟೋಬರ್ ತಿಂಗಳು ಮಿಶ್ರ ಫಲ ತರಲಿದೆ. ನಿಮ್ಮ ಗುರಿಗಳ ಮೇಲೆ ಗಮನ ಹರಿಸುವುದು ನಿಮ್ಮ ನೆಮ್ಮದಿಗೆ ಕಾರಣವಾಗಲಿದೆ. ಕೆಲಸದಲ್ಲಿ ಸವಾಲುಗಳು ಉದ್ಭವಿಸುತ್ತವೆ, ಆದರೆ ಧೈರ್ಯ ಮತ್ತು ದೃಢಸಂಕಲ್ಪವು ಅವುಗಳನ್ನು ನಿವಾರಿಸಲು ನಿಮಗೆ ಸಹಾಯ ಮಾಡುತ್ತದೆ. ಹಣಕಾಸಿನ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ, ಯಾರೊಂದಿಗಾದರು ಹಣಕಾಸಿನ ವ್ಯವಹಾರ ಮಾಡುವ ಮುನ್ನ ಆಲೋಚಿಸಿ. ಹಾಗೆ ಮೋಸ ಹೋಗುವ ಸಾಧ್ಯತೆ ಇದೆ. ಹೊಸ ಆದಾಯ ಹುಡುಕುವ ನಿಮ್ಮ ಪ್ರಯತ್ನ ಫಲ ನೀಡಲಿದೆ.

ಧನು ರಾಶಿ

ಅಕ್ಟೋಬರ್ ತಿಂಗಳಲ್ಲಿ ಧನು ರಾಶಿಯವರಿಗೆ ದಿಢೀರ್ ಧನಲಾಭದ ನಿರೀಕ್ಷೆ ಇದೆ. ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ, ಆರ್ಥಿಕ ಲಾಭಕ್ಕಾಗಿ ಮಾರ್ಗಗಳನ್ನು ಸೃಷ್ಟಿಸುತ್ತವೆ. ಹೂಡಿಕೆಗಳು ಲಾಭದಾಯಕವಾಗಿರುತ್ತವೆ. ಸಂಬಂಧಗಳಲ್ಲಿ ನಿಮ್ಮ ಆಸೆಗಳು ಈಡೇರುವ ಸಾಧ್ಯತೆಯಿದೆ. ಶ್ರಮದಾಯಕ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ಆಪ್ತರಿಂದ ಹಣಕಾಸು ಬರುವ ನಿರೀಕ್ಷೆ ಇಡಿ. ಗೃಹಿಣಿಯರಲ್ಲಿ ಮನೆಗಾಗಿ ಖರ್ಚು ಮಾಡಬೇಕಾಗಿ ಬರಬಹುದು. ಆರ್ಥಿಕ ಸ್ವಾವಲಂಬಿಗಳಾಗಲು ಈ ತಿಂಗಳ ನಿಮಗೆ ಕುಟುಂಬಸ್ಥರ ಬೆಂಬಲ ಸಿಗಲಿದೆ. ವ್ಯವಹಾರಗಳಿಗೆ ಹಣಕಾಸು ಹೊಂದಿಸಲು ಮುಂದಾಗುತ್ತೀರಿ.

ಮಕರ ರಾಶಿ

ಮಕರ ರಾಶಿಯವರಿಗೆ ಈ ತಿಂಗಳು ಉತ್ತಮ ಲಾಭಗಳ ತರಲಿದೆ. ನೀವು ದೀರ್ಘಾವಧಿಯ ಗುರಿಗಳ ಕಡೆಗೆ ಪ್ರಮುಖ ಹೆಜ್ಜೆಗಳನ್ನು ಇಡುತ್ತೀರಿ. ಆರ್ಥಿಕ ಲಾಭಗಳು ಸ್ಥಿರವಾಗಿರುತ್ತವೆ ಮತ್ತು ಸಾಮಾಜಿಕ ಗೌರವ ಹೆಚ್ಚಾಗುತ್ತದೆ. ನಿಮ್ಮ ಹಣಕಾಸು ಸಂಬಂಧವಾಗಿ ಇದ್ದ ಅವಲಂಬನೆ ಕಡಿಮೆಯಾಗಲಿದೆ. ಬ್ಯಾಂಕ್‌ನಿಂದ ಸಾಲ ಪಡೆಯಲು ನೀವು ಇಚ್ಛಿಸಿದ್ದರೆ ಈ ಸಮಯದಲ್ಲಿ ಈಡೇರಲಿದೆ. ಈ ತಿಂಗಳಲ್ಲಿ ನಿಮ್ಮ ವ್ಯಾಪಾರದಲ್ಲಿ ಲಾಭವಿದೆ. ಪ್ರಯಾಣಗಳ ಮಾಡುವುದು ತೃಪ್ತಿದಾಯಕ ಫಲಿತಾಂಶಗಳ ತರಲಿದೆ. ವಿವಾಹ ಸಂಬಂಧಿತ ಕಷ್ಟಗಳು ನಿವಾರಣೆಯಾಗಲಿದೆ.

ಕುಂಭ ರಾಶಿ

ಅಕ್ಟೋಬರ್ ತಿಂಗಳು ಕುಂಭ ರಾಶಿಯವರಿಗೆ ಅತ್ಯಧಿಕ ಲಾಭಗಳ ನೋಡಬಹುದು. ಹಣಗಳಿಸಲು ಹೊಸ ಮಾರ್ಗವನ್ನು ಕಂಡುಕೊಳ್ಳಬಹುದು. ನಿರುದ್ಯೋಗಳಾಗಿದ್ದರೆ ಈ ತಿಂಗಳು ಆಪ್ತರ ಸಹಕಾರದೊಂದಿಗೆ ಅವಕಾಶಗಳ ಪಡೆಯುತ್ತೀರಿ. ಅನೇಕರಲ್ಲಿ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಅನೇಕರಿಗೆ ಈ ತಿಂಗಳು ಶುಭ ಸಂದೇಶಗಳು ಬರಲಿವೆ. ಸಾಲಕ್ಕಾಗಿ ನೀವು ಓಡಾಟ ನಡೆಸುತ್ತಿದ್ದರೆ ಈ ತಿಂಗಳು ಬಗೆಹರಿಯಲಿದೆ. ಹೊಸ ವ್ಯವಹಾರ ಆರಂಭಿಸಲು ಈ ತಿಂಗಳು ಬಹಳ ಶುಭವಿದೆ.

ಮೀನ ರಾಶಿ

ಅಕ್ಟೋಬರ್ ತಿಂಗಳು ಮೀನ ರಾಶಿಯವರಿಗೆ ಅನುಕೂಲಕರ ದಿನಗಳ ತರಲಿದೆ. ಈ ತಿಂಗಳು ನಿಮ್ಮ ಆಲೋಚನೆ ಮತ್ತು ಒಳನೋಟವು ತೀಕ್ಷ್ಣವಾಗಿರುತ್ತದೆ, ಇದು ಸೃಜನಶೀಲ ಪ್ರಯತ್ನಗಳಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ. ಕೆಲಸದಲ್ಲಿ ಹೊಸ ನಿರ್ದೇಶನಗಳು ಮತ್ತು ಅವಕಾಶಗಳು ಹೊರಹೊಮ್ಮಬಹುದು, ವಿಶೇಷವಾಗಿ ನಿಮ್ಮ ಕೆಲಸಗಳಲ್ಲಿ ಶುಭವಾಗುತ್ತಿದೆ. ಸರ್ಕಾರಿ ಉದ್ಯೋಗ ಪಡೆಯಲು ಮುಂದಾಗಿರುವ ಮಂದಿಗೆ ಶುಭವಿದೆ. ಅಗತ್ಯ ಕೆಲಸವೊಂದಕ್ಕೆ ನಿಮ್ಮಲ್ಲಿ ಹಣಕಾಸು ಹರಿದು ಬರಲಿದೆ. ಆರೋಗ್ಯ ಸುಧಾರಣೆ ಆಗಲಿದೆ. ನಿಮ್ಮ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳುವುದು ಬಹಳ ಉತ್ತಮ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

English summary

October 2025 Monthly Horoscope: October 2025 Monthly Horoscope In Kannada

October 2025 Monthly Horoscope in Kannada : Check October monthly horoscope for all 12 zodiac signs in Kannada.
Story first published: Sunday, September 28, 2025, 11:52 [IST]
X
Desktop Bottom Promotion