Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಅಕ್ಟೋಬರ್ ವೃತ್ತಿ ಭವಿಷ್ಯ: ಈ ಮಾಸ ದ್ವಾದಶ ರಾಶಿಗಳ ವೃತ್ತಿ ಬದುಕು ಹೇಗಿರಲಿದೆ?
ಅಕ್ಟೋಬರ್ ಮಾಸದ ವೃತ್ತಿ ಭವಿಷ್ಯ ಪ್ರಕಾರ ನಿಮ್ಮ ರಾಶಿಗೆ ಹೇಗಿರಲಿದೆ, ನೋಡೋಣ ಬನ್ನಿ:
ಮೇಷ ರಾಶಿ
ಈ ಮಾಸ ನಿಮಗೆ ಕಾರ್ಯನಿರತವಾಗಿರಲಿದೆ. ಅಲ್ಲದೆ ನೀವು ಬಯಸಿದ ಫಲಿತಾಂಶ ಪಡೆಯಲು ನೀವು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಕೆಲಸದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಸ್ವಲ್ಪ ನಿಧಾನವಾದರು ಶ್ರಮಕ್ಕೆ ತಕ್ಕ ಫಲ ಸಿಗಲಿದೆ.

ವೃಷಭ ರಾಶಿ
ಈ ಮಾಸ ಆರಂಭದಲ್ಲಿ ಸವಾಲುಗಳನ್ನು ಎದುರಿಸಬಹುದು, ನೀವು ಹೆಚ್ಚಿನ ಪ್ರಯತ್ನ ಹಾಕಬೇಕಾಗುತ್ತದೆ. ಆದರೆ ನೀವು ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲ ಪಡೆಯುವಿರಿ.
ಮಿಥುನ ರಾಶಿ
ಮಿಥುನ ರಾಶಿಯವರು ಈ ಮಾಸದಲ್ಲಿ ಕೆಲ ಸವಾಲುಗಳನ್ನು ಎದುರಿಸಬಹುದು. ಈ ಮಾಸ ಕೆಲಸದ ಒತ್ತಡ ಅಧಿಕವಿರಬಹುದು, ಕೆಲಸದಲ್ಲಿ ಅತೃಪ್ತಿ ಇರಬಹುದು. ಆದರೆ ಆತುರದ ನಿರ್ಧಾರ ಒಳ್ಳೆಯದಲ್ಲ ಎಂದು ಸಲಹೆ ನೀಡಲಾಗುವುದು. ಕೆಲಸ ಬದಲಾಯಿಸುವ ವಿಚಾರದಲ್ಲಿಯೂ ಆತುರ ಪಡಬೇಡಿ, ಒಂದು ಸಿಕ್ಕಿದ ಬಳಿಕವಷ್ಟೇ ಇರುವ ಕೆಲಸ ಬಿಡಿ.
ಕರ್ಕ ರಾಶಿ
ಈ ಮಾಸ ಕೆಲ ಏರಳಿತವನ್ನು ಎದುರಿಸಬಹುದು. ಸಹೋದ್ಯೋಗಿಗಳಿಂದ ಹೆಚ್ಚಿನದನ್ನು ನಿರೀಕ್ಷಿಸಬೇಡಿ. ನಿಮ್ಮ ಕೆಲಸದಲ್ಲಿ ಸವಾಲುಗಳು ಎದುರಾಗಬಹುದು, ಆದರೆ ಮೇಲಾಧಿಕಾರಿಗಳ ಬೆಂಬಲ ಸಿಗಲಿದೆ, ಹೀಗಾಗಿ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗುವುದು.
ಸಿಂಹ ರಾಶಿ
ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಲಿದೆ. ನಿಮ್ಮ ಕೆಲಸ ಕಾರ್ಯಗಳು ಯೋಜನೆಯಂತೆಯೇ ಪೂರ್ಣಗೊಳ್ಳಲಿದೆ. ಇನ್ನು ಕೆಲಸ ಬದಲಾವಣೆಗೆ ಪ್ರಯತ್ನಿಸುತ್ತಿರುವವರೆಗೆ ಉತ್ತಮ ಫಲಿತಾಂಶ ದೊರೆಯಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿರಲಿದೆ. ಕೆಲಸದಲ್ಲಿ ಒತ್ತಡಗಳು ಇರಲಿದೆ ಆದರೆ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಒಟ್ಟಿನಲ್ಲಿ ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ನಿಮಗೆ ಉತ್ತಮವಾಗಿರಲಿದೆ.
ತುಲಾ ರಾಶಿ
ವೃತ್ತಿ ಬದುಕಿನಲ್ಲಿ ತುಂಬಾ ಕಾರ್ಯನಿರತವಾಗಿರಲಿದೆ. ಕೆಲಸದಲ್ಲಿ ಒತ್ತಡ ಅಧಿಕವಿರಲಿದೆ. ಅದರೆ ನೀವು ನಿಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಿರಿ. ಹೀಗಾಗಿ ಈ ಮಾಸ ವೃತ್ತಿ ಬದುಕಿನಲ್ಲಿ ದೊಡ್ಡ ಸಮಸ್ಯೆ ಇರಲ್ಲ.
ವೃಶ್ಚಿಕ ರಾಶಿ
ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ಅನುಕೂಲಕರವಲ್ಲ, ವೃತ್ತಿ ಬದುಕಿನಲ್ಲಿ ಏರಳಿತಗಳಿರಬಹುದು. ನೀವು ಕೆಲಸದಲ್ಲಿ ನಿರ್ಲಕ್ಷ್ಯ ಮಾಡದಂತೆ ಸಲಹೆ ನೀಡಲಾಗುವುದು. ಇನ್ನು ವಿದೇಶದಲ್ಲಿ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದರೆ ಈ ಅವಧಿಯಲ್ಲಿ ಅವಕಾಶ ದೊರೆಯಲಿದೆ.
ಧನು ರಾಶಿ
ವೃತ್ತಿ ಬದುಕಿನ ದೃಷ್ಟಿಯಿಂದ ಈ ಸಮಯ ಉತ್ತಮವಲ್ಲ. ನೀವು ಕೆಲಸದಲ್ಲಿ ನಿರ್ಲಕ್ಷ್ಯ ಮಾಡಬಾರದು, ಆರಂಭದಲ್ಲಿ ಸವಾಲು ಅಂತ ಅನಿಸಬಹುದು ಆದರೆ ನಂತರ ಎಲ್ಲವೂ ಸರಿಯಾಗಲಿದೆ. ಇನ್ನು ಬಡ್ತಿ ನಿರೀಕ್ಷೆಯಲ್ಲಿದ್ದರೆ ಒಳ್ಳೆಯ ಸುದ್ದಿ ಪಡೆಯುವಿರಿ, ಕೆಲಸ ಬದಲಾವಣೆಗೆ ಪ್ರಯತ್ನ ಮಾಡುವವರಿಗೂ ಈ ಅವಧಿ ಅನುಕೂಲಕರವಾಗಿದೆ.
ಮಕರ ರಾಶಿ
ಈ ವಾರ ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ. ಕೆಲಸದಲ್ಲಿ ನೀವು ಧನಾತ್ಮಕ ಬದಲಾವಣೆ ಕಂಡು ಬರಲಿದೆ. ಇನ್ನು ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದರೆ ಈ ಅವಧಿಯಲ್ಲಿ ಉತ್ತಮ ಅವಕಾಶ ದೊರೆಯಲಿದೆ. ಕೆಲಸ ಕಾರ್ಯಗಳಲ್ಲಿ ಒಳ್ಳೆಯ ಫಲಿತಾಂಶ ದೊರೆಯಲಿದೆ.
ಕುಂಭ ರಾಶಿ
ಈ ಅವಧಿ ನಿಮಗೆ ಅನುಕೂಲಕರವಾಗಿದೆ. ಕೆಲಸದ ಒತ್ತಡದ ಬಗ್ಗೆ ನಿರಾಸೆಬೇಡ, ನಿಮ್ಮ ಕೆಲಸಕ್ಕೆ ಉತ್ತಮ ಫಲಿತಾಂಶ ದೊರೆಯಲಿದೆ. ಈ ಮಾಸ ವೃತ್ತಿ ಬದುಕಿನ ದೃಷ್ಟಿಯಿಂದ ಉತ್ತಮವಾಗಿದೆ.
ಮೀನ ರಾಶಿ
ವೃತ್ತಿ ಬದುಕಿನ ದೃಷ್ಟಿಯಿಂದ ಈ ಮಾಸ ನಿಮಗೆ ಸಾಮಾನ್ಯವಾಗಿರಲಿದೆ. ನೀವು ಕೆಲಸದ ಕಡೆಗೆ ಹೆಚ್ಚು ಗಮನಹರಿಸಬೇಕು. ವೃತ್ತಿ ಜಾಗದಲ್ಲಿ ದೊಡ್ಡ ಸಮಸ್ಯೆವಿರಲ್ಲ, ಈ ಮಾಸ ನಿಮಗೆ ಸಾಧಾರಣವಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications