ಅಕ್ಟೋಬರ್ ಮಾಸ ಭವಿಷ್ಯ: ಈ ಮಾಸ 12 ರಾಶಿಗಳಲ್ಲಿ ಯಾರಿಗಲ್ಲಾ ಶುಭ, ಯಾರಿಗೆ ಮಿಶ್ರಫಲ

ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ ಮಾಸ ನಿಮಗೆ ಹೇಗಿರಲಿದೆ, ನೋಡೋಣ ಬನ್ನಿ:

ಮೇಷ ರಾಶಿ

ವೃತ್ತಿ ಬದುಕು: ಕೆಲಸದ ದೃಷ್ಟಿಯಿಂದ ಈ ಅವಧಿ ನಿಮಗೆ ಅನುಕೂಲಕರವಾಗಿರಲಿದೆ. ನಿಮಗೆ ಕೆಲಸದಲ್ಲಿ ಉತ್ತಮ ಅವಕಾಶ ದೊರೆಯಲಿದೆ, ವ್ಯಾಪಾರಿಗಲಿಗೆ ಈ ಅವಧಿ ಉತ್ತಮವಾಗಿರಲಿದೆ.
ಆರ್ಥಿಕ ಜೀವನ: ಅರ್ಥಿಕವಾಗಿ ಈ ಅವಧಿ ನಿಮಗೆ ಅನುಕೂಲಕರವಾಗಿರಲಿದೆ, ಈ ಸಮಯದಲ್ಲಿ ನೀವು ಉಳಿತಾಯದ ಕಡೆಗೆ ಹೆಚ್ಚಿನ ಗಮನಹರಿಸಿದರೆ ಒಳ್ಳೆಯದು.
ಕುಟುಂಬ ಜೀವನ: ಕುಟುಂಬ ಬದುಕು ಚೆನ್ನಾಗಿರಲಿದೆ, ಆದರೆ ಕೆಲವೊಂದು ಸಂದರ್ಭದಲ್ಲಿ ನಿಮ್ಮ ಪ್ರೀತಿ ಪಾತ್ರರರ ಮನಸ್ಸು ನೋಯಿಸದಂತೆ ಜಾಗ್ರತೆವಹಿಸಬೇಕು.
ಈ ಮಾಸ ನಿಮಗೆ ಶುಭ ಕಾರ್ಯಗಳಿಗೆ ಗುರುವಾರ, ಭಾನುವಾರ, ಮಂಗಳವಾರ, ಬುಧವಾರ ಒಳ್ಳೆಯದಿದೆ.

October Month Horoscope

ವೃಷಭ ರಾಶಿ

ವೃತ್ತಿ ಬದುಕು: ಆರಂಭದ ದಿನಗಳು ತುಂಬಾ ನಿಧಾನವಾಗಿರುತ್ತದೆ, ನೀವು ನಿಮ್ಮ ಕೆಲಸದ ಕಡೆಗೆ ಗಮನಹರಿಸಬೇಕು, ಸಿಕ್ಕಿದ ಅವಕಾಶ ಬಿಡಬೇಡಿ.
ಆರ್ಥಿಕ ಜೀವನ: ಆರ್ಥಿಕವಾಗಿ ಈ ಅವಧಿ ಉತ್ತಮವಾಗಿರಲಿದೆ, ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುವುದು
ಕುಟುಂಬ ಜೀವನ: ಕೆಲಸದ ಒತ್ತಡ ಮನೆಗೆ ತರಬೇಡಿ, ನಿಮ್ಮ ಹಾಗೂ ಸಂಗಾತಿ ನಡುವೆ ಕೆಲ ಭಿನ್ನಾಭಿಪ್ರಾಯವಿರಬಹುದು
ಆರೋಗ್ಯ: ಆರೋಗ್ಯದ ಕಡೆಗೆ ಗಮನಹರಿಸಬೇಕು.
ಈ ಮಾಸ ಶುಭ ಆರಂಭಕ್ಕೆ ಗುರುವಾರ, ಭಾನುವಾರ, ಮಂಗಳವಾರ, ಬುಧವಾರದ ದಿನಗಳು ನಿಮಗೆ ಶುಭವಾಗಿರುತ್ತದೆ.

ಮಿಥುನ ರಾಶಿ

ವೃತ್ತಿ ಬದುಕು: ಈ ಅವಧಿ ನಿಮಗೆ ಅನುಕೂಲಕರವಾಗಿರಲಿದೆ. ತುಂಬಾ ಸಮಯದಿಂದ ಬಾಕಿಯುಳಿದ ಕೆಲಸವವನ್ನು ಪೂರ್ಣಗೊಳಿಸಲು ಸಾಧ್ಯವಾಗುವುದು.
ಆರ್ಥಿಕ ಜೀವನ: ಈ ಮಾಸ ನಿಮಗೆ ಒಳ್ಳೆಯದಿದೆ. ಈ ಅವಧಿಯಲ್ಲಿ ಹಣವನ್ನು ಉಳಿತಾಯ ಮಾಡುವುದು
ಆರೋಗ್ಯ: ಈ ಸಮಯ ನಿಮಗೆ ಉತ್ತಮವಾಗಿದೆ, ಆರೋಗ್ಯ ಸಮಸ್ಯೆಯಿದ್ದರೆ ಸುಧಾರಣೆ ಕಂಡು ಬರಲಿದೆ
ಕುಟುಂಬ ಜೀವನ: ಕುಟುಂಬ ಬದುಕಿನ ದೃಷ್ಟಿಯಿಂದಲೂ ಈ ಅವಧಿ ನಿಮಗೆ ಅನುಕೂಲಕರವಾಗಿರಲಿದೆ.
ಈ ಮಾಸ ನಿಮಗೆ ಬುಧವಾರ, ಗುರುವಾರ, ಭಾನುವಾರ, ಶುಕ್ರವಾರ ಅದೃಷ್ಟದ ದಿನವಾಗಿದೆ.

ಕರ್ಕ ರಾಶಿ

ವೃತ್ತಿ ಬದುಕು: ಈ ಅವಧಿ ನಿಮಗೆ ಉತ್ತಮವಾಗಿರಲಿದೆ, ಅದರಲ್ಲಿಯೂ ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಇನ್ನು ಬೇರೆ ಕಡೆ ಕೆಲಸ ಪ್ರಯತ್ನ ಮಾಡುತ್ತಿದ್ದರೆ ಈ ಅವಧಿ ನಿಮಗೆ ಅನುಕೂಲಕರವಾಗಿದೆ.
ಆರ್ಥಿಕ ಜೀವನ: ಆರ್ಥಿಕವಾಗಿ ಈ ಸಮಯ ಅನುಕೂಲಕರವಾಗಿರಲಿದೆ
ಕುಟುಂಬ ಜೀವನ: ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ.
ಆರೋಗ್ಯದಲ್ಲಿ ಮಿಶ್ರಫಲ, ಜಾಗ್ರತಿವಹಿಸಿ.
ಈ ಮಾಸ ನಿಮಗೆ ಗುರುವಾರ, ಶುಕ್ರವಾರ, ಸೋಮವಾರ, ಬುಧವಾರ ಹೆಚ್ಚು ಅನುಕೂಲಕರವಾಗಿರಲಿದೆ.
ಶುಭ ಬಣ್ಣಗಳು: ಕೆಂಪು, ಕಡು ಹಸಿರು, ನೀಲಿ, ಕೇಸರಿ

ಸಿಂಹ ರಾಶಿ

ವೃತ್ತಿ ಬದುಕು: ಈ ಮಾಸ ನಿಮ್ಮ ವೃತ್ತಿ ಬದುಕು ತುಂಬಾ ಚೆನ್ನಾಗಿರಲಿದೆ, ನೀವು ಊಹಿಸಿದಂತೆಯೇ ಉತ್ತಮ ಫಲಿತಾಂಶ ದೊರೆಯಲಿದೆ.
ಆರ್ಥಿಕ ಜೀವನ: ಈ ಸಮಯದಲ್ಲಿ ಆರ್ಥಿಕ ಸಮಸ್ಯೆ ಬಗೆಹರಿಯಲಿದೆ
ಆರೋಗ್ಯ: ಆರೋಗ್ಯದಲ್ಲಿ ಮಿಶ್ರಫಲ, ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆ ಅಂತ ನಿರ್ಲಕ್ಷ್ಯ ಮಾಡಬೇಡಿ.
ಕುಟುಂಬ ಜೀವನ: ಈ ಅವಧಿ ಉತ್ತಮವಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಉತ್ತಮ ಬಾಂಧವ್ಯ ಚೆನ್ನಾಗಿರಲಿದೆ.
ಈ ಮಾಸ ಗುರುವಾರ, ಶುಕ್ರವಾರ, ಸೋಮವಾರ, ಬುಧವಾರ ನಿಮಗೆ ಶುಭವಾಗಿದೆ.

ಕನ್ಯಾ ರಾಶಿ

ವೃತ್ತಿ ಬದುಕು: ಈ ಮಾಸ ನೀವು ಊಹಿಸಿದಂತೆಯೇ ಉತ್ತಮ ಫಲಿತಾಂಶ ದೊರೆಯಲಿದೆ. ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ಕೆಲಸ ಸಿಗಲಿದೆ.
ಆರ್ಥಿಕ ಜೀವನ: ಆರ್ಥಿಕವಾಗಿ ಈ ಸಮಯ ಉತ್ತಮವಾಗಿರಲಿದೆ, ನೀವು ಹಣದ ನಿರ್ಧಾರ ಆಲೋಚಿಸಿ ತೆಗೆದುಕೊಳ್ಳಬೇಕು.
ಕುಟುಂಬ ಜೀವನ: ಈ ಅವಧಿ ನಿಮಗೆ ಅನುಕೂಲಕರವಾಗಿರಲಿದೆ, ವೈವಾಹಿಕ ಬದುಕಿನಲ್ಲಿ ಖುಷಿ ಇರಲಿದೆ, ಅವಾಹಿತರಿಗೆ ಮದುವೆ ಪ್ರಸ್ತಾಪ ಬರಲಿದೆ.
ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ.
ಈ ಮಾಸ ಮಂಗಳವಾರ, ಗುರುವಾರ, ಸೋಮವಾರ, ಬುಧವಾರ ನಿಮಗೆ ಅದೃಷ್ಟದ ದಿನವಾಗಿದೆ.

ತುಲಾ ರಾಶಿ

ವೃತ್ತಿ ಜೀವನ: ವೃತ್ತಿ ಬದುಕಿನಲ್ಲಿ ಪ್ರಗತಿ ಕಂಡು ಬರಲಿದೆ. ಆದರೆ ನೀವು ಹೆಚ್ಚಿನ ಶ್ರಮ ಪಡಬೇಕು, ನಿರ್ಲಕ್ಷ್ಯ ಮಾಡಬೇಡಿ.
ವ್ಯಾಪಾರ: ವ್ಯಾಪಾರಿಗಳಿಗೆ ಈ ಅವಧಿ ಅನುಕೂಲಕರವಾಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ.
ಕುಟುಂಬ ಜೀವನ: ಅವಾಹಿತರಿಗೆ ಮದುವೆ ಪ್ರಸ್ತಾಪ ಬರಬಹುದು. ವಿವಾಹಿತ ಬದುಕಿನಲ್ಲಿ ಏನೇ ಭಿನ್ನಾಭಿಪ್ರಾಯವಿದ್ದರೆ ಅದು ಬಗೆಹರಿಯಲಿದೆ, ನಿಮ್ಮ ಬಾಂಧವ್ಯ ಉತ್ತಮವಾಗಿರಲಿದೆ.
ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಿ.
ಅಕ್ಟೋಬರ್ ಮಾಸದಲ್ಲಿ ಭಾನುವಾರ, ಮಂಗಳವಾರ, ಗುರುವಾರ, ಸೋಮವಾರ ನಿಮಗೆ ಅನುಕೂಲಕರವಾಗಿರಲಿದೆ.

ವೃಶ್ಚಿಕ ರಾಶಿ

ವೃತ್ತಿ ಬದುಕು: ವೃತ್ತಿ ಬದುಕಿನಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ವೃತ್ತಿ ಬದುಕಿನ ಕಡೆಗೆ ಗಮನಹರಿಸುವುದು ಒಳ್ಳೆಯದು.
ಆರ್ಥಿಕ ಜೀವನ: ಆರ್ಥಿಕವಾಗಿ ನೋಡುವುದಾದರೆ ಈ ಅವಧಿಯಲ್ಲಿ ಖರ್ಚು ಹೆಚ್ಚಿರಲಿದೆ. ಮಿತಿ ಮೀರಿ ಖರ್ಚು ಮಾಡಲು ಹೋಗಬೇಡಿ.
ಈ ಅವಧಿಯಲ್ಲಿ ಆರೋಗ್ಯ ಚಿಂತೆಯೂ ಕಾಡಬಹುದು
ಅಲ್ಲದೆ ಈ ಸಮಯದಲ್ಲಿ ಕುಟುಂಬ ಜೀವನದ ಕಡೆಗೆ ಗಮನಹರಿಸುವುದು ಕಷ್ಟವಾಗುವುದು. ನೀವು ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು.
ಈ ಮಾಸ ನಿಮಗೆ ಗುರುವಾರ, ಸೋಮವಾರ, ಶನಿವಾರ, ಬುಧವಾರ ಈ ಅವಧಿ ಅನುಕೂಲಕರವಾಗಿರಲಿದೆ.

ಧನು ರಾಶಿ

ವೃತ್ತಿ ಬದುಕು: ವೃತ್ತಿ ಬದುಕಿನಲ್ಲಿ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ, ಆದರೆ ನಿಮ್ಮ ಕಠಿಣ ಶ್ರಮಕ್ಕೆ ಉತ್ತಮ ಫಲ ಸಿಗಲಿದೆ.
ಆರ್ಥಿಕ ಜೀವನ: ಈ ಅವಧಿಯಲ್ಲಿ ಹಣದ ಚಿಂತೆ ಕಾಡಬಹುದು, ಆದರೆ ಹೆಚ್ಚು ಚಿಂತೆ ಮಾಡಬೇಕಾಗಿಲ್ಲ, ಸಮಯ ಬಂದಾಗ ಬಗೆಹರಿಯಲಿದೆ. ಈ ಅವಧಿಯಲ್ಲಿ ಹೂಡಿಕೆ, ಹಣದ ವಹಿವಾಟು ಅಂತ ಮಾಡಲೇಬೇಡಿ.
ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಈ ಮಾಸ ನಿಮಗೆ ಭಾನುವಾರ, ಶನಿವಾರ, ಸೋಮವಾರ, ಬುಧವಾರ

ಮಕರ ರಾಶಿ

ವೃತ್ತಿ ಜೀವನ: ವೃತ್ತಿ ಬದುಕಿನ ದೃಷ್ಟಿಯಿಂದ ನೋಡುವುದಾದರೆ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ.
ಆರ್ಥಿಕ ಜೀವನ: ಆರ್ಥಿಕವಾಗಿ ಈ ಅವಧಿ ನಿಮಗೆ ಮಿಶ್ರಫಲ, ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಆಲೋಚಿಸಿ ತೆಗೆದುಕೊಳ್ಳಬೇಕು.
ಕುಟುಂಬ ಜೀವನ: ಈ ಅವಧಿಯಲ್ಲಿ ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ.
ಈ ಅವಧಿಯಲ್ಲಿ ಆರೋಗ್ಯ ಉತ್ತಮವಾಗಿರಲಿದೆ.
ಈ ಮಾಸ ನಿಮಗೆ ಸೋಮವಾರ, ಗುರುವಾರ, ಮಂಗಳವಾರ, ಶನಿವಾರ ನಿಮಗೆ ಶುಭವಾಗಿದೆ.

ಕುಂಭ ರಾಶಿ

ವೃತ್ತಿ ಜೀವನ: ಈ ಅವಧಿಯಲ್ಲಿ ಕೆಲಸದ ಹೊರೆ ಹೆಚ್ಚಿರಲಿದೆ, ಕೆಲಸಕ್ಕೆ ಸಂಬಂಧಿಸಿದಂತೆ ಮಾಡುವ ಪ್ರಯಾಣ ಆಯಾಸ ಉಂಟು ಮಾಡಬಹುದು.
ಆರ್ಥಿಕ ಜೀವನ: ಆರ್ತಿಕ ದೃಷ್ಟಿಯಿಂದ ಈ ಮಾಸ ಮಿಶ್ರಫಲ, ಏರಳಿತವಿರಬಹುದು, ಹಾಗಾಗಿ ಖರ್ಚಿನ ಕಡೆಗೆ ಗಮನಹರಿಸಿ.
ಕುಟುಂಬ ಜೀವನ: ಕುಟುಂಬ ಜೀವನ ಚೆನ್ನಾಗಿರಲಿದೆ, ವಿವಾಹ ಪ್ರಾಯದವರಿದ್ದರೆ ಮದುವೆ ಸಂಬಂಧ ಬರಲಿದೆ.
ಈ ಮಾಸ ನಿಮಗೆ ಬುಧವಾರ, ಭಾನುವಾರ, ಗುರುವಾರ, ಮಂಗಳವಾರ ಶುಭವಾಗಿದೆ.

ಮೀನ ರಾಶಿ

ವೃತ್ತಿ ಬದುಕು: ವೃತ್ತಿ ಜೀವನ ಚೆನ್ನಾಗಿರಲಿದೆ, ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿದೆ, ವ್ಯಾಪಾರಿಗಳು ವಿಸ್ತರಣೆ ಬಗ್ಗೆ ಆಲೋಚಿಸಬಹುದು.
ಆರ್ಥಿಕ ಬದುಕು: ಹಣದ ಚಿಂತೆ ಬಗೆಹರಿಯಲಿದೆ, ಹಣದ ಪ್ರಯತ್ನಗಳಿಗೆ ಫಲ ಸಿಗಲಿದೆ
ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಗಟ್ಟಿಯಾಗಲಿದೆ. ಈ ಸಮಯದಲ್ಲಿ ಆರೋಗ್ಯ ಕೂಡ ಚೆನ್ನಾಗಿರಲಿದೆ.
ಈ ವಾರ ನಿಮಗೆ ಮಂಗಳವಾರ, ಸೋಮವಾರ, ಬುಧವಾರ, ಭಾನುವಾರ ಶುಭ ದಿನಗಳಾಗಿವೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

Story first published: Monday, September 30, 2024, 17:41 [IST]
X
Desktop Bottom Promotion