Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಅಕ್ಟೋಬರ್ ಆರ್ಥಿಕ ಭವಿಷ್ಯ: 8 ರಾಶಿಗಳಿಗೆ ಶುಭ, 4 ರಾಶಿಯವರಿಗೆ ಖರ್ಚು ಅಧಿಕವಿರಲಿದೆ
ಅಕ್ಟೋಬರ್ ಮಾಸದ ಭವಿಷ್ಯ ಪ್ರಕಾರ ಹಣಕಾಸಿನ ವಿಚಾರದಲ್ಲಿ ಬಹುತೇಕ ರಾಶಿಗಳಿಗೆ ಶುಭವಾಗಿದೆ, ಕೆಲ ರಾಶಿಯವರು ಖರ್ಚಿಗೆ ಕಡಿವಾಣ ಹಾಕಿದರೆ ಒಳ್ಳೆಯದು, ಅಕ್ಟೋಬರ್ ಮಾಸದ ಆರ್ಥಿಕ ಜೀವನ ದ್ವಾದಶ ರಾಶಿಗಳಿಗೆ ಹೇಗಿರಲಿದೆ ನೋಡೋಣ:

ಮೇಷ ರಾಶಿ
ಆರ್ಥಿಕ ದೃಷ್ಟಿಯಿಂದ ಈ ಅವಧಿಯಲ್ಲಿ ಏರಳಿತಗಳಿರಲಿದೆ, ಈ ಅವಧಿಯಲ್ಲಿ ಖರ್ಚು ಹೆಚ್ಚು ಬರಬಹುದು, ಕೆಲವೊಂದು ಅನಗ್ಯತ ಖರ್ಚು ಬರಬಹುದು, ನೀವು ಖರ್ಚಿಗೆ ಕಡಿವಾಣ ಹಾಕದಿದ್ದರೆ ಕಷ್ಟವಾಗುವುದು.
ವೃಷಭ ರಾಶಿ
ಆರ್ಥಿಕವಾಗಿ ಈ ಅವಧಿ ನಿಮಗೆ ಅನುಕೂಲಕರವಾಗಿದೆ. ಆರ್ಥಿಕ ಜೀವದನದಲ್ಲಿ ಪ್ರಗತಿ ಕಾಣುವಿರಿ, ನೀವು ಎಲ್ಲಿಯಾದರು ಹಣಕ್ಕೆ ಪ್ರಯತ್ನಿಸಿದ್ದರೆ ಆ ಹಣ ಸಿಗಲಿದೆ. ಉಳಿತಾಯದ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿರಲಿದೆ.
ಮಿಥುನ ರಾಶಿ
ಆರ್ಥಿಕವಾಗಿ ಈ ಅವಧಿ ಉತ್ತಮವಾಗಿರಲಿದೆ, ಈ ಸಮಯದಲ್ಲಿ ನಿಮ್ಮ ಗಳಿಕೆ ಚೆನ್ನಾಗಿರುವುದರಿಂದ ಖರ್ಚು ಕೂಡ ಹೆಚ್ಚು ಮಾಡುತ್ತಾರೆ, ಇಷ್ಟದ ವಸ್ತುಗಳ ಖರೀದಿಗೆ ಖರ್ಚು ಮಾಡುತ್ತೀರಿ, ಆದರೆ ಬಜೆಟ್ ಮೀರಿ ಖರ್ಚು ಮಾಡದಂತೆ ಸಲಹೆ ನೀಡಲಾಗುವುದು.
ಕರ್ಕ ರಾಶಿ
ಈ ಮಾಸ ನಿಮಗೆ ಖರ್ಚು ಅಧಿಕವಿರಲಿದೆ, ಆದರೆ ಚಿಂತಿಸಬೇಕಾಗಿಲ್ಲ, ಆದಾಯ ಕೂಡ ಕೂಡ ಹೆಚ್ಚಾಗಲಿದೆ, ಖರ್ಚು- ವೆಚ್ಚಗಳ ನಡುವೆ ಸಮತೋಲನ ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು, ಇಲ್ಲದಿದ್ದರೆ ಸಮಸ್ಯೆಯಾಗುವುದು.
ಸಿಂಹ ರಾಶಿ
ಆರ್ಥಿಕವಾಗಿ ಈ ಅವಧಿ ನಿಮಗೆ ಅನುಕೂಲಕರವಾಗಿದೆ, ನಿಮ್ಮ ಆದಾಯ ಚೆನ್ನಾಗಿರಲಿದೆ. ಆರ್ಥಿಕವಾಗಿ ಉಳಿತಾಯ ಮಾಡಲು ಈ ಅವಧಿ ಉತ್ತಮವಾಗಿರಲಿದೆ. ನೀವು ದುಡ್ಡಿದೆ ಎಂದು ಅನಗ್ಯತ ಖರ್ಚುಗಳಿಂದ ದೂರವಿದ್ದರೆ ಒಳ್ಳೆಯದು. ನೀವು ಬಜೆಟ್ ಪ್ಲ್ಯಾನ್ ಮಾಡಿ ಖರ್ಚು ಮಾಡಿ.
ಕನ್ಯಾ ರಾಶಿ
ಅಕ್ಟೋಬರ್ ಮಾಸ ಆರ್ಥಿಕವಾಗಿ ನಿಮಗೆ ಉತ್ತಮವಾಗಿದೆ. ಖರ್ಚು ಇರಲಿದೆ, ಆದರೆ ಆದಾಯ ಸ್ಥಿರವಿರಲಿದೆ, ಹಾಗಾಗಿ ಚಿಂತಿಸಬೇಕಾಗಿಲ್ಲ. ಈ ಅವಧಿಯಲ್ಲಿ ಶಾಪಿಂಗ್ ಅಂತ ಹೆಚ್ಚು ಹಣ ಖರ್ಚಾಗಬಹುದು, ಆದರೆ ಆಖರ್ಚು ನಿಮಗೆ ಖುಷಿ ನೀಡುವುದರಿಂದ ಖರ್ಚಿನ ಬಗ್ಗೆ ಚಿಂತೆ ಮಾಡಲ್ಲ.
ತುಲಾ ರಾಶಿ
ತುಲಾ ರಾಶಿಯವರು ಅಕ್ಟೋಬರ್ ಹಣದ ವಿಚಾರದಲ್ಲಿ ಜಾಗ್ರತೆವಹಿಸಬೇಕು. ಈ ಮಾಸ ಹಣದ ಕಾರಣಕ್ಕೆ ಅಡಚಣೆ ಎದುರಿಸಬಹುದು, ಇದ್ದಕ್ಕಿದ್ದಂತೆ ದೊಡ್ಡ ಖರ್ಚು ಕೂಡ ಬರಬಹುದು. ನೀವು ಹಣವನ್ನು ಅನಾವಶ್ಯಕ ಖರ್ಚು ಮಾಡಬೇಡಿ, ತಿಂಗಳ ಕೊನೆಯಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರುವುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ಅವಧಿ ಆರ್ಥಿಕವಾಗಿ ತುಂಬಾ ಚೆನ್ನಾಗಿರಲಿದೆ. ನಿಮ್ಮ ಆರ್ಥಿಕ ಪ್ರಯತ್ನಗಳಿಗೆ ಉತ್ತಮ ಫಲ ಸಿಗಲಿದೆ. ವ್ಯಾಪಾರಿಗಳು ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು. ತಿಂಗಲ ಕೊನೆಯಲ್ಲಿ ನಿಮಗೆ ಖರ್ಚು ಹೆಚ್ಚಾಗಲಿದೆ.
ಧನು ರಾಶಿ
ಆರ್ಥಿಕವಾಗಿ ಈ ಅವಧಿ ನಿಮಗೆ ಸಾಮಾನ್ಯವಾಗಿರಲಿದೆ. ನೀವು ತುಂಬಾ ಸಮಯದಿಂದ ಯಾವುದೋ ವಸ್ತು ಖರೀದಿಸಲು ಯೋಚಿಸುತ್ತಿದ್ದರೆ ಈ ಅವಧಿಯಲ್ಲಿ ಖರೀದಿ ಮಾಡುವಿರಿ. ಹಣದ ಖರ್ಚು ಇರಲಿದೆ, ಆದರೆ ಆ ಖರ್ಚಿನಿಂದ ನಿಮಗೆ ಯಾವುದೇ ಸಮಸ್ಯೆಯಾಗಲ್ಲ.
ಮಕರ ರಾಶಿ
ಆರ್ಥಿಕವಾಗಿ ಅಕ್ಟೋಬರ್ ಮಾಸ ನಿಮಗೆ ಅನುಕೂಲಕರವಾಗಿದೆ, ಅದಾಯ ಉತ್ತಮವಾಗಿರಲಿದೆ. ನಿಮ್ಮ ಆರ್ಥಿಕ ಪ್ರಯತ್ನಗಳಿಗೆ ಉತ್ತಮ ಫಲ ಸಿಗಲಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಆರ್ಥಿಕವಾಗಿ ಪ್ರಯೋಜನವನ್ನು ಪಡೆಯುತ್ತೀರಿ.
ಕುಂಭ ರಾಶಿ
ಆರ್ಥಿಕವಾಗಿ ಈ ಅವಧಿಯಲ್ಲಿ ಏರಳಿತಗಳಿರಲಿದೆ. ನೀವು ವಾಹನ ಖರಿದಿಸುವ ಬಗ್ಗೆ ಆಲೋಚಿಸುತ್ತಿದ್ದರೆ ಈ ಅವಧಿಯಲ್ಲಿ ಖರೀದಿ ಮಾಡುತ್ತೀರಿ. ಇನ್ನು ಹಣವನ್ನು ಬಜೆಟ್ ಮೀರಿ ಖರ್ಚು ಮಾಡಬೇಡಿ, ಸ್ವಲ್ಪ ಉಳಿತಾಯದತ್ತ ಗಮನಹರಿಸಿದರೆ ಒಳ್ಳೆಯದು.
ಮೀನ ರಾಶ
ಈ ತಿಂಗಳು ಖರ್ಚು ಹೆಚ್ಚಿರಲಿದೆ, ಖರ್ಚು ವೆಚ್ಚಗಳನ್ನು ತೂಗಿಸಿಕೊಂಡು ಹೋಗುವುದನ್ನು ನೋಡಬೇಕು, ಇಲ್ಲದಿದ್ದರೆ ಅತಿಯಾದ ಖರ್ಚು ಆರ್ಥಿಕ ಸಮಸ್ಯೆಯನ್ನುಂಟು ಮಾಡಬಹುದು. ಖರೀದಿ ಕೂಡ ಅಷ್ಟೇ ಅಷ್ಟು ಅಗ್ಯತವಾಗಿರುವುದನ್ನು ಮಾತ್ರ ಖರೀದಿಸಿ, ಇಲ್ಲದಿದ್ದರೆ ಸಾಲ ಮಾಡಬೇಕಾಗುವುದು, ಸಾಲ ಪಡೆದಿದ್ದರೆ ಸಾಲ ಮರು ಪಾವತಿಗೆ ಒತ್ತಾಯ ಬರಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











