ಅಕ್ಟೋಬರ್‌ನಲ್ಲಿ ಗಾಡಿ ಅಥವಾ ಆಸ್ತಿ ಖರೀದಿಸಬೇಕೆಂದಿದ್ದರೆ ಈ ದಿನಗಳು ಶುಭವಾಗಿವೆ

ಅಕ್ಟೋಬರ್ ಮಾಸದಲ್ಲಿ ನವರಾತ್ರಿ, ಧನ್‌ತೆರೇಸ್‌, ಲಕ್ಷ್ಮಿ ಪೂಜೆ, ದೀಪಾವಳಿ ಎಲ್ಲಾ ಬಂದಿದೆ. ಶುಭ ದಿನಗಳಲ್ಲಿ ವಸ್ತು ಖರೀದಿ ಒಳ್ಳೆಯದು ಎಂದು ಹೇಳಲಾಗುವುದು. ಅಕ್ಟೋಬರ್‌ನಲ್ಲಿ ಆಯುಧ ಪೂಜೆಗೆ ನಮ್ಮ ಬಳಿ ಗಾಡಿ ಇರಬೇಕೆಂದು ಬಯಸುವುದು ಸಹಜ. ಅದರಂತೆ ಒಳ್ಳೆಯ ದಿನ ನೋಡಿ ಆಸ್ತಿ ಖರೀದಿ ಮಾಡಕೆಂದು ಯೋಚಿಸುತ್ತಿರುವವರಿಗೆ ಈ ಮಾಸದಲ್ಲಿ ಯಾವೆಲ್ಲಾ ದಿನಗಳು ಗಾಡಿ ಅಥವಾ ಆಸ್ತಿ ಖರೀದಿಗೆ ಒಳ್ಳೆಯದು ಎಂದು ನೀಡಲಾಗಿದೆ.

October 2024

ಗಾಡಿಯಾಗಲಿ, ಆಸ್ತಿಯಾಗಲಿ ಶುಭ ಸಮಯದಲ್ಲಿ ಖರೀದಿಸಬೇಕೆಂಬುವುದು ನಂಬಿಕೆ
ಶುಭ ಸಮಯದಲ್ಲಿ ಗಾಡಿ ಖರೀದಿ ಮಾಡಿದರೆ ಒಳ್ಳೆಯದು, ಆಸ್ತಿಯನ್ನು ಕೂಡ ಒಳ್ಳೆಯ ಸಮಯ ನೋಡಿ ಖರೀದಿ ಮಾಡಿದರೆ ಒಳ್ಳೆಯದು ಎಂಬುವುದು ಧಾರ್ಮಿಕ. ಇವೆಲ್ಲಾ ಆಸ್ತಿ, ನಮ್ಮ ಆಸ್ತಿ ದಿನದಿಂದ ದಿನಕ್ಕೆ ವೃದ್ಧಿಸಬೇಕೆಂದು ಬಯಸುತ್ತೇವೆ, ಹಾಗಾಗಿ ಶುಭ ಸಮಯ ನೋಡಲಾಗುವುದು.

ಈ ಮಾಸದಲ್ಲಿ ಗಾಡಿ ಖರೀದಿಗೆ ಈ ದಿನಾಂಕಗಳು ತುಂಬಾನೇ ಶುಭವಾಗಿದೆ ನೋಡಿ:

ಅಕ್ಟೋಬರ್ 7 ಸೋಮವಾರ
ನಕ್ಷತ್ರ: ಅನುರಾಧ
ಸಮಯ: ಬೆಳಗ್ಗೆ 9:48ರಿಂದ ಅಕ್ಟೋಬರ್ 8 ಬೆಳಗ್ಗೆ 2:25ರವರೆಗೆ

ಅಕ್ಟೋಬರ್ 16(ಬುಧವಾರ)
ನಕ್ಷತ್ರ:ರೇವತಿ
ಸಮಯ: ರಾತ್ರಿ 8:42ರಿಂದ ಅಕ್ಟೋಬರ್ 17 ಬೆಳಗ್ಗೆ 06:35ರ ಒಳಗೆ ಖರೀದಿ ಮಾಡಿ.

ಅಕ್ಟೋಬರ್ 17 (ಗುರುವಾರ)
ನಕ್ಷತ್ರ: ರೇವತಿ
ಸಮಯ: ಬೆಳಗ್ಗೆ 06:38ರಿಂದ ಸಂಜೆ 04:222ರವರೆಗೆ

ಅಕ್ಟೋಬರ್ 21 (ಸೋಮವಾರ)
ನಕ್ಷತ್ರ: ಮೃಗಶಿರ
ಸಮಯ: ಬೆಳಗ್ಗೆ 06:32ರಿಂದ ಅಕ್ಟೋಬರ್ 22 ಬೆಳಗ್ಗೆ 05:51ರವರೆಗೆ ಇದೆ

ಅಕ್ಟೋಬರ್ 24 (ಗುರುವಾರ)
ನಕ್ಷತ್ರ: ಪುಷ್ಯಾ
ಸಮಯ: ಬೆಳಗ್ಗೆ 06:42ರಿಂದ ರಾತ್ರಿ 1:51ರವರೆಗೆ

ಅಕ್ಟೋಬರ್ 30 (ಬುಧವಾರ)
ನಕ್ಷತ್ರ:ಹಸ್ತಾ
ಸಮಯ: ಬೆಳಗ್ಗೆ 6:45ರಿಂದ ಮಧ್ಯಾಹ್ನ 01:51ರವರೆಗೆ

ಈ ಮಾಸದಲ್ಲಿ ಆಸ್ತಿ ಖರೀದಿಗೆ ಶುಭ ಸಮಯ:
ಪಂಚಾಂಗ ಪ್ರಕಾರ ಆಸ್ತಿ ಖರೀದಿಗೆ ಅಕ್ಟೋಬರ್ 17 ಶುಭ ದಿನವಾಗಿದೆ
ಬೆಳಗ್ಗೆ 6:10ರಿಖದ ಸಂಜೆ 04:20ರ ಒಳಗಿನ ಸಮಯ ನಿಮಗೆ ಉತ್ತಮವಾಗಿದೆ
ನಕ್ಷತ್ರ ರೇವತಿ
ತಿಥಿ ಪೂರ್ಣಿಮಾ

ಅಕ್ಟೋಬರ್ 25, ಶುಕ್ರವಾರ
ಈ ದಿನ ಬೆಳಗ್ಗೆ 07:40ರಿಂದ ಅಕ್ಟೋಬರ್ 26 ಬೆಳಗ್ಗೆ 06:12ರವರೆಗಿನ ಸಮಯ ಒಳ್ಳೆಯದಿದೆ.
ನಕ್ಷತ್ರ: ಅಶ್ಲೇಷ
ತಿಥಿ: ನವಮಿ

ಆಯುಧ ಪೂಜೆ:
ಪ್ರತಿವರ್ಷ ನವರಾತ್ರಿಯ 9ನೇ ದಿನ ಆಯುಧ ಊಜೆ ಆಚರಿಸಲಾಗುವುದು. ಈ ದಿನ ಮನೆಯಲ್ಲಿರುವ ಗಾಡಿಗಳಿಗೆ, ಅಸ್ತ್ರಗಳಿಗೆ, ತೋಟ ಕೆಲಸಕ್ಕೆ ಬಳಸುವ ಸಾಧನಗಳಿಗೆ ಪೂಜೆ ಸಲ್ಲಿಸಲಾಗುವುದು. ಗಾಡಿಯನ್ನಂತೂ ತುಂಬಾನೇ ಚೆನ್ನಾಗಿ ಅಲಂಕರಿಸಿ ಅದರಲ್ಲಿ ತಿರುಗಾಡುತ್ತಾ ಸಂಭ್ರಮಿಸುವ ಖುಷಿಯೇ ಬೇರೆ. ಹಾಗಾಗಿಯೇ ಆಯುಧ ಪೂಜೆಗೆ ಒಂದು ಗಾಡಿಯಾದರು ನನ್ನ ಬಳಿ ಇರಬೇಕೆಂಬುವುದು ತುಂಬಾ ಜನರ ಕನಸು. ಈ ಮಾಸ ಆಯುಧ ಪೂಜೆ ಒಳಗಡೆ ನಿಮಗೆ ಅಕ್ಟೋಬರ್ 7 ಮಾತ್ರ ಗಾಡಿ ಖರೀದಿಗೆ ಶುಭ ದಿನವಿದೆ, ನಂತರ ನೀವು ಕಾಯಬೇಕಾಗುತ್ತದೆ. ನಂತರ ಸಿಗುವುದು ಅಕ್ಟೋಬರ್ 16ರ ನಂತರದ ದಿನಾಂಕ.

ಆಯುಧ ಪೂಜೆಗೆ ಆಗದಿದ್ದರೆ ದೀಪಾವಳಿಗೆ ಗಾಡಿಯನ್ನು ಪೂಜಿಸಬಹುದು
ಹೌದು ದೀಪಾವಳಿಗೂ ಹಲವು ಕಡೆ ಗಾಡಿ ಪೂಜೆ ಮಾಡಲಾಗುವುದು, ಹಾಗಾಗಿ ನಂತರ ಗಾಡಿ ಖರೀದಿ ಮಾಡಿದ್ದರೆ ದೀಪಾವಳಿಯಂದು ಮಾಡಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

October 2024: Auspicious Dates To Buy Property And Vehicle In Tis Month

October 2024: Here are list of auspicious dates and property to purchase on this month, read on.
X
Desktop Bottom Promotion