ಈ ವಾರದ ಆರ್ಥಿಕ ಭವಿಷ್ಯ: ಅಕ್ಟೋಬರ್ 26ರವರೆಗೆ 12 ರಾಶಿಗಳಲ್ಲಿ ಹಣಕಾಸು ಹೇಗಿರಲಿದೆ?

ಈ ವಾರ 12 ರಾಶಿಗಳ ಆರ್ಥಿಕ ಭವಿಷ್ಯ ಹೇಗಿರಲಿದೆ, ನೋಡೋಣ ಬನ್ನಿ:

ಮೇಷ ರಾಶಿ
ಈ ವಾರ ಉದ್ಯೋಗಿಗಳು ಜಾಗ್ರತೆವಹಿಸಬೇಕು. ಚಿಕ್ಕ ತಪ್ಪು ನಿಮ್ಮ ಕೆಲಸಕ್ಕೆ ತೊಂದರೆ ಉಂಟು ಮಾಡಬಹುದು, ನಿಮ್ಮ ಮೇಲಾಧಿಕಾರಿ ನಿಮಗೆ ವಹಿಸಿದ ಕೆಲಸವನ್ನು ಸರಿಯಾಗಿ ಮಾಡಲು ಪ್ರಯತ್ನಿಸಿ. ವ್ಯಾಪಾರಿಗಳಿಗೆ ಸವಾಲು ಉಂಟಾಗಬಹುದು. ಆರ್ಥಿಕ ದೃಷ್ಟಿಯಿಂದ ಈ ಅವಧಿ ಅನುಕೂಲಕರವಲ್ಲ.

financial horoscope

ವೃಷಭ ರಾಶಿ
ವೃಷಭ ರಾಶಿಯವರಿಗೆ ಉದ್ಯೋಗ ಮತ್ತು ಆರ್ಥಿಕ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿರಲಿದೆ. ವ್ಯಾಪಾರಿಗಳು ಉತ್ತಮ ಲಾಭ ಪಡೆಯಲು ಸಾಧ್ಯವಾಗುವುದು. ಹಣಕಾಸಿನ ದೃಷ್ಟಿಯಿಂದ ಈ ವಾರ ಉತ್ತಮವಾಗಿರಲಿದೆ.

ಮಿಥುನ ರಾಶಿ
ಈ ವಾರ ಉದ್ಯೋಗ ಹಾಗೂ ಆರ್ಥಿಕ ದೃಷ್ಟಿಯಿಂದ ಅನುಕೂಲಕರವಲ್ಲ. ಕೆಲಸದಲ್ಲಿ ಹಲವು ಸವಾಲುಗಳು ಎದುರಾಗಬಹುದು. ಆರ್ಥಿಕ ತೊಂದರೆಗಳಿರಬಹುದು, ಖರ್ಚು ಹೆಚ್ಚಿರಲಿದೆ.

ಕರ್ಕ ರಾಶಿ
ಕರ್ಕ ರಾಶಿಯವರಿಗೆ ಈ ವಾರ ಉತ್ತಮವಾಗಿರಲಿದೆ, ನೀವು ನಿಮ್ಮ ಆರ್ಥಿಕ ಸ್ಥಿತಿ ಬಲಪಡಿಸಲು ಪ್ರಯತ್ನಿಸುತ್ತಿದ್ದರೆ ಈ ಅವಧಿ ಅನುಕೂಲಕರವಾಗಿದೆ.

ಸಿಂಹ ರಾಶಿ
ಉದ್ಯೋಗ ಹಾಆಗೂ ಆರ್ಥಿಕ ಜೀವನದ ದೃಷ್ಟಿಯಿಂದ ನಿಮಗೆ ಅನುಕೂಲಕರವಾಗಿದೆ. ಆದರೆ ಹೆಚ್ಚು ಖರ್ಚು ಮಾಡಿದರೆ ಮುಂದೆ ಸಮಸ್ಯೆಗೆ ಸಿಲುಕುವಿರಿ. ಖರ್ಚಿಗೆ ಕಡಿವಾಣ ಹಾಕಿದರೆ ಒಳ್ಳೆಯದು. ಹಣಕ್ಕೆ ಸಂಬಂಧಿಸಿದ ಪ್ರಯತ್ನಕ್ಕೆ ಫಲ ಸಿಗಲಿದೆ, ಹೀಗಾಗಿ ದೊಡ್ಡ ಚಿಂತೆ ದೂರಾಗಲಿದೆ.

ಕನ್ಯಾ ರಾಶಿ
ಆರ್ಥಿಕವಾಗಿ ನಿಮಗೆ ಉತ್ತಮವಾಗಿದೆ, ಆದರೆ ಹಣದ ವಿಷಯದಲ್ಲಿ ಯಾರನ್ನೂ ನಂಬಬೇಡಿ ಎಂದು ಸಲಹೆ ನೀಡಲಾಗುವುದು, ನೀವು ಮೋಸ ಹೋಗಬಹುದು. ಈ ಅವಧಿಯಲ್ಲಿ ಯಾರಿಗೂ ಸಾಲ ನೀಡಬೇಡಿ.

ತುಲಾ ರಾಶಿ
ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ವಾರ ನಿಮಗೆ ಉತ್ತಮವಾಗಿರಲಿದೆ. ಹಣ ಉಳಿತಶಯ ಮಾಡಲು ಸಾಧ್ಯವಾಗುವುದು, ನೀವು ಹೂಡಿಕೆ ಬಗ್ಗೆ ಆಲೋಚಿಸಿದ್ದರೆ ಹೂಡಿಕೆಗೆ ಈ ಸಮಯ ಸೂಕ್ತವಾಗಿದೆ.

ವೃಶ್ಚಿಕ ರಾಶಿ
ಹಣಕಾಸಿನ ಬಗ್ಗೆ ನೋಡುವುದಾದರೆ ಈ ವಾರ ನಿಮಗೆ ಅನುಕೂಲಕರವಲ್ಲ, ಹೆಚ್ಚು ಖರ್ಚು ಬರಬಹುದು. ವ್ಯಾಪಾರಿಗಳಿಗೆ ನಿರೀಕ್ಷೆ ಮಾಡಿದಂತೆ ಲಾಭ ಗಳಿಸುವುದು ಕಷ್ಟವಾಗಬಹುದು, ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಆತುರದಿಂದ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಲಾಗುವುದು.

ಧನು ರಾಶಿ
ಆರ್ಥಿಕ ದೃಷ್ಟಿಯಿಂದ ಈ ವಾರ ನಿಮಗೆ ತುಂಬಾ ಉತ್ತಮವಾಗಿರಲಿದೆ, ಹೆಚ್ಚು ಖರ್ಚುಗಳಿರಲ್ಲ, ಹಣದ ಕೊರತೆಯಾಗಲ್ಲ, ಹೀಗಾಗಿ ಬಯಸಿದ ವಸ್ತು ಖರೀದಿ ಮಾಡುವ ಬಗ್ಗೆ ಆಲೋಚಿಸಬಹುದು. ವ್ಯಾಪಾರಿಗಳಿಗೆ ಈ ಸಮಯ ಉತ್ತಮವಾಗಿರಲಿದೆ. ಆರ್ಥಿಕವಾಗಿ ಯಾವುದೇ ಸಮಸ್ಯೆವಿಲ್ಲದೆ ಈ ವಾರ ನಡೆಯಲಿದೆ.

ಮಕರ ರಾಶಿ
ಈ ವಾರ ಹಣದ ವಿಷಯದಲ್ಲಿ ಸವಾಲಿನಿಂದ ಕೂಡಿರಲಿದೆ, ಕೇಳಿದ ಕಡೆ ಹಣ ಸಿಗದೆ ನಿರಾಸೆ ಉಂಟಾಗಬಹುದು. ಇನ್ನು ಹಣ ಕಳೆದು ಹೋಗುವ ಸಾಧ್ಯತೆ ಅಥವಾ ಹಣದ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಹಾಗಾಗಿ ಯಾರನ್ನೂ ಕಣ್ಮುಚ್ಚಿ ನಂಬಬೇಡಿ. ಇನ್ನು ಈ ಸಮಯದಲ್ಲಿ ಯಾವುದೇ ಸಾಲದ ವ್ಯವಹಾರ ಮಾಡದಿದ್ದರೆ ಒಳ್ಳೆಯದು.

ಕುಂಭ ರಾಶಿ
ಹಣಕಾಸಿನ ವಿಷಯದಲ್ಲಿ ಈ ಅವಧಿ ನಿಮಗೆ ಅನುಕೂಲಕರವಲ್ಲ, ವ್ಯಾಪಾರಿಗಳಿಗೆ ಲಾಭ ಗಳಿಸಲು ಕಷ್ಟವಾಗಬಹುದು, ಈ ಸಮಯದಲ್ಲಿಯಾವುದೇ ದೊಡ್ಡ ಹೂಡಿಕೆ ಮಾಡದಂತೆ ಸಲಹೆ ನೀಡಲಾಗುವುದು. ಹಣವನ್ನು ನೋಡಿಕೊಂಡು ಖರ್ಚು ಮಾಡಿದರೆ ಯಾವುದೇ ದೊಡ್ಡ ಸಮಸ್ಯೆಯಾಗಲ್ಲ, ಅನಗ್ಯತ ಕಾರಣಕ್ಕೆ ಖರ್ಚು ಬರಬಹುದು ಜಾಗ್ರತೆವಹಿಸಿ.

ಮೀನ ರಾಶಿ
ಈ ಅವಧಿಯಲ್ಲಿ ಉಳಿತಾಯ, ಹೂಡಿಕೆ ಇವೆಲ್ಲಾ ಕಷ್ಟವಾಗುವುದು, ಆದರೆ ದಿನನಿತ್ಯದ ಖರ್ಚಿಗೆ ತೊಂದರೆಯಾಗುವುದಿಲ್ಲ, ಮಿತಿ ಮೀರಿ ಖರ್ಚು ಮಾಡಲು ಹೋಗದಿರಿ, ಖರ್ಚಿಗೆ ಸ್ವಲ್ಪ ಕಡಿವಾಣ ಹಾಕಿದರೆ ಯಾವುದೇ ಸಮಸ್ಯೆಯಿರಲ್ಲ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

October 20 To 26 Weekly Financial Horoscope: Effects On 12 Zodiac Signs In Kannada

Here are this week financial horoscope for each zodiac signs, read on...
Story first published: Sunday, October 20, 2024, 20:11 [IST]
X
Desktop Bottom Promotion