Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ದಿನ ಭವಿಷ್ಯ: ಅಕ್ಟೋಬರ್ 20, ಈ ದಿನ ನಿಮ್ಮ ರಾಶಿಫಲ ಹೇಗಿದೆ?
ಜ್ಯೋತಿಷ್ಯ ಪ್ರಕಾರ ಈ ದಿನದ 12 ರಾಶಿಫಲ ಹೇಗಿದೆ ನೋಡೋಣ ಬನ್ನಿ:
ಮೇಷ ರಾಶಿ
ಈ ದಿನ ನೀವು ಕೆಲಸದ ಕಡೆಗೆ ಗಮನಹರಿಸಬೇಕು, ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಉಳಿತಾಯದ ಕಡೆಗೆ ಗಮನಹರಿಸಿ, ಪ್ರೀತಿಯಲ್ಲಿದ್ದರೆ ಮದುವೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು. ಆರೋಗ್ಯ ಸಮಸ್ಯೆಯಿದ್ದರೆ ಸುಧಾರಣೆ ಕಂಡು ಬರಲಿದೆ.
ಅದೃಷ್ಟದ ಬಣ್ಣ ಮೆರೂನ್
ಅದೃಷ್ಟದ ಸಂಖ್ಯೆ: 16
ಶುಭ ಸಮಯ: ಬೆಳಗ್ಗೆ 6:25 ರಿಂದ 11:30 ರವರೆಗೆ

ವೃಷಭ ರಾಶಿ
ಈ ದಿನ ಮನೆಯ ವಾತಾವರಣ ಚೆನ್ನಾಗಿರಲ್ಲ, ನೀವು ತಾಳ್ಮೆಯಿಂದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ,ಆರೋಗ್ಯ ದುರ್ಬಲವಾಗಿರಲಿದೆ. ಆರ್ಥಿಕವಾಗಿ ಈ ದಿನ ಉತ್ತಮವಲ್ಲ, ವ್ಯಾಪಾರಿಗಳಿಗೆ ಸವಾಲುಗಳು ಬರಬಹುದು. ಈ ದಿನ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಕುಟುಂಬದಲ್ಲಿ
ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದಾಗಿ ಸಮಸ್ಯೆಗಳು ಉಂಟಾಗಬಹುದು, ಇಂಥವರನ್ನು ದೂರವಿಡಿ. ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಿ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 9
ಶುಭ ಸಮಯ: ಸಂಜೆ 5 ರಿಂದ ರಾತ್ರಿ 8:30 ರವರೆಗೆ
ಮಿಥುನ ರಾಶಿ
ಈ ದಿನ ನೀವು ಯಾವುದೇ ನಿರ್ಧಾರವಾಗಲಿ ಅವಸರದಿಂದ ತೆಗೆದುಕೊಳ್ಳಬೇಡಿ, ಈ ಸಮಯದಲ್ಲಿ ಕೆಲಸದಲ್ಲಿ ಒತ್ತಡ ಹೆಚ್ಚಿರಲಿದೆ. ಆರ್ಥಿಕವಾಗಿ ಕೂಡ ಉತ್ತಮವಲ್ಲ, ಖರ್ಚು ಹೆಚ್ಚು ಬರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಸಂಬಂಧದಲ್ಲಿ ಸುಧಾರಣೆ ಕಂಡು ಬರಲಿದೆ. ಆರೋಗ್ಯದ ಕಡೆಗೆ ಗಮನಹರಿಸಿ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 18
ಶುಭ ಸಮಯ: ಬೆಳಿಗ್ಗೆ 6:15 ರಿಂದ 10 ರವರೆಗೆ
ಕರ್ಕ ರಾಶಿ
ವ್ಯಾಪಾರಸ್ಥರಾಗಿದ್ದರೆ ವ್ಯಾಪಾರ ವೃದ್ಧಿಗೆ ಹೊಸ ಮಾರ್ಕೆಟಿಂಗ್ ತಂತ್ರ ಬಳಸುವುದು ಒಳ್ಳೆಯದು, ಈ ದಿನ ಆರ್ಥಿಕವಾಗಿ ನಿಮಗೆ ತುಂಬಾ ಚೆನ್ನಾಗಿರಲಿದೆ. ಆದರೆ ಖರ್ಚು ಮಿತಿಯಲ್ಲಿ ಮಾಡಿದರೆ ಒಳ್ಳೆಯದು. ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯಕ್ಕಾಗಿ ವ್ಯಾಯಾಮದ ಕಡೆಗೆ ಗಮನಹರಿಸಿ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 25
ಶುಭ ಸಮಯ: ಬೆಳಗ್ಗೆ 4:30 ರಿಂದ 9:20 ರವರೆಗೆ
ಸಿಂಹ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿದೆ, ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೆ ಅದು ಬೆಗಹರಿಯಲಿದೆ. ನೀವು ಯಾವುದೇ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ತೊಡೆದುಹಾಕಬಹುದು ಸಹೋದ್ಯೋಗಿಗಳ ಕೆಲಸದಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಬೇಡಿ. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿರಲಿದೆ. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 2
ಶುಭ ಸಮಯ: ಮಧ್ಯಾಹ್ನ 1:55 ರಿಂದ 3 ರವರೆಗೆ
ಕನ್ಯಾ ರಾಶಿ
ಈ ದಿನ ಸವಾಲಿನಿಂದ ಕೂಡಿರಲಿದೆ, ಕೆಲಸದ ಕಡೆಗೆ ಗಮನಹರಿಸಬೇಕು. ನೀವು ಯಾವುದೇ ಪ್ರಮುಖ ಜವಾಬ್ದಾರಿಯನ್ನು ಪಡೆದಿದ್ದರೆ ಅದರತ್ತ ಗಮನಹರಿಸಿ . ಕೆಲಸಕ್ಕೆ ಸಂಬಂಧಿಸಿದ ದೂರ ಪ್ರಯಾಣವನ್ನು ತಪ್ಪಿಸಿ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ಈ ವಾರ ಸವಾಲಿನಿಂದ ಕೂಡಿರಲಿದೆ. ಕೆಲಸದ ಕಡೆಗೆ ಗಮನಹರಿಸಬೇಕು. ಕುಟುಂಬ ಜೀವನ ಚೆನ್ನಾಗಿರಲಿದೆ, ಆರೋಗ್ಯ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 7
ಶುಭ ಸಮಯ: ಮಧ್ಯಾಹ್ನ 3:30 ರಿಂದ ಸಂಜೆ 7 ರವರೆಗೆ
ತುಲಾ ರಾಶಿ
ಉದ್ಯೋಗಿಗಳಿಗೆ ಈ ದಿನ ಉತ್ತಮವಾಗಿರಲಿದೆ. ಖರ್ಚು ಹೆಚ್ಚಿರಲಿದೆ, ಉದ್ಯಮಿಗಳು ಯಾವುದೇ ದೊಡ್ಡ ಹೂಡಿಕೆ ಮಾಡುವುದನ್ನು ತಪ್ಪಿಸಬೇಕು. ನೀವು ಕೆಲಸದ ಕಡೆಗೆ ಗಮನಹರಿಸಬೇಕು, ಅತಿಯಾದ ಕೋಪ ಸಮಸ್ಯೆ ಹೆಚ್ಚಿಸುತ್ತದೆ, ಹಾಗಾಗಿ ಈ ದಿನ ಕೋಪ ನಿಯಂತ್ರಿಸಿ. ಆರೋಗ್ಯದ ಬಗ್ಗೆ ಹೇಳುವುದಾದರೆ ಆಹಾರಕ್ರಮದ ಕಡೆಗೆ ಗಮನಹರಿಸಿ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 33
ಶುಭ ಸಮಯ: ಬೆಳಿಗ್ಗೆ 5:20 ರಿಂದ 10 ರವರೆಗೆ
ವೃಶ್ಚಿಕ ರಾಶಿ
ಈ ದಿನ ನಿಮಗೆ ವೃತ್ತಿ ಬದುಕಿನ ದೃಷ್ಟಿಯಿಂದ, ವೈಯಕ್ತಿಕ ಬದುಕಿನ ದೃಷ್ಟಿಯಿಂದ ಅನುಕೂಲಕರವಾಗಿದೆ. ಕೆಲಸಕ್ಕೆ ಸಂಬಂಧಿಸಿದ ದೊಡ್ಡ ಸಮಸ್ಯೆ ಬಗೆಹರಿಯಲಿದೆ. ಖರ್ಚು ನಿಯಂತರಿಸಬೇಕು, ವ್ಯಾಪಾರಿಗಳು ದೊಡ್ಡ ಹೂಡಿಕೆ ಮಾಡದಂತೆ ಜಾಗ್ರತೆವಹಿಸಿ. ಅವಾಹಿತರಿಗೆ ಮದುವೆ ಪ್ರಸ್ತಾಪ ಬರಬಹುದು.
ಅದೃಷ್ಟದ ಬಣ್ಣ: ಗೋಲ್ಡನ್
ಅದೃಷ್ಟದ ಸಂಖ್ಯೆ: 9
ಶುಭ ಸಮಯ: ಸಂಜೆ 5:30 ರಿಂದ ರಾತ್ರಿ 9:05 ರವರೆಗೆ
ಧನು ರಾಶಿ
ಈ ದಿನ ತುಂಬಾ ಜಾಗ್ರತೆವಹಿಸಬೇಕು, ನಿಮಗೆ ಬೇಕಾದವರೇ ಮೋಸ ಮಾಡಬಹುದು. ಈ ದಿನ ಯಾವುದೇ ಹಣದ ವ್ಯವಹಾರ ಮಾಡಬೇಡಿ. ಸಾಲ ಪಡೆಯುವುದು ಮಾಡಬೇಡಿ. ಕುಟುಂಬ ಜೀವನ ಚೆನ್ನಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವೆಮುಕ್ತ ಮಾತುಕತೆ ಪರಿಸ್ಥಿತಿ ತಿಳಿಯಾಗಿಸುತ್ತದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ನೆಗಡಿ, ಕೆಮ್ಮು, ಮೈಕೈ ನೋವು ಇತ್ಯಾದಿ ಸಮಸ್ಯೆಗಳಿರಬಹುದು.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 12
ಶುಭ ಸಮಯ: ಮಧ್ಯಾಹ್ನ 2:45 ರಿಂದ ಸಂಜೆ 7 ರವರೆಗೆ
ಮಕರ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿದೆ, ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಆರ್ಥಿಕವಾಗಿ ಈ ದಿನ ಉತ್ತಮವಾಗಿರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಉತ್ತಮವಾಗಿರಲಿದೆ. ಆರೋಗ್ಯ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 4
ಶುಭ ಮುಹೂರ್ತ: ಮಧ್ಯಾಹ್ನ 1:30 ರಿಂದ 4 ರವರೆಗೆ
ಕುಂಭ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ, ನಿಮ್ಮ ನಡುವೆ ಏನೇ ಸಮಸ್ಯೆಯಿದ್ದರೆ ಬಗೆಹರಿಯಲಿದೆ. ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿರಲಿದೆ. ಮನೆಯಲ್ಲಿ ಧನಾತ್ಮಕ ವಾತಾವರಣ ಇರುತ್ತದೆ. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 14
ಶುಭ ಸಮಯ: ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ
ಮೀನ ರಾಶಿ
ಈ ದಿನ ನಿಮಗೆ ಅನುಕೂಲಕರವಲ್ಲ, ವೃತ್ತಿ ಸಂಬಂಧಿತ ಸಮಸ್ಯೆ ಚಿಂತೆಗೆ ಕಾರಣವಾಗಿರಬಹುದು. ಕೆಲಸದ ಸ್ಥಳದಲ್ಲಿ ನೀವು ವಿವಾದಗಳನ್ನು ತಪ್ಪಿಸಬೇಕು. ವ್ಯಾಪಾರದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಇಂದು ನೀವು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವುದಾದರೆ ಹಿರಿಯರ ಸಲಹೆ ಪಡೆಯಿರಿ. ವೈವಾಹಿಕ ಜೀವನ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 27
ಶುಭ ಸಮಯ: ಸಂಜೆ 6 ರಿಂದ ರಾತ್ರಿ 8 ರವರೆಗೆ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications