Latest Updates
-
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ -
ಭಾಲಚಂದ್ರ ಸಂಕಷ್ಟ ಚತುರ್ಥಿ 2026: ಈ 6 ರಾಶಿಗಳಿಗೆ ಗಜಕೇಸರಿ ಯೋಗ! ಹಣದ ಮಳೆ ಸುರಿಸಲಿದ್ದಾರೆ ಗಣಪ -
ಶುಕ್ರ-ಶನಿಯ ಮೀನ ಸಂಚಾರದಿಂದ ಮಾಲವ್ಯ ಯೋಗ: ಈ 5 ರಾಶಿಯವರ ಜೀವನದಲ್ಲಿ ಬಹುದೊಡ್ಡ ಬದಲಾವಣೆ!
ಅಕ್ಟೋಬರ್ 17 ದಿನ ಭವಿಷ್ಯ: ಯಾವ ರಾಶಿಯವರಿಗೆ ಈ ದಿನ ಲಾಭ ತರಲಿದೆ ನೋಡಿ..!
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅಕ್ಟೋಬರ್ 17ರ ದಿನ ನಿಮಗೆ ಹೇಗಿರಲಿದೆ?
ಮೇಷ ರಾಶಿ
ನಿಮ್ಮ ಯಾವುದೇ ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸುವುದರಿಂದ ಆರ್ಥಿಕ ಲಾಭವನ್ನು ಪಡೆಯಬಹುದು. ಅಣ್ಣ ತಂಗಿಯರ ಮದುವೆಯ ಮಾತು ಬಂದರೆ ಶುಭ ಸುದ್ದಿ ಕೇಳಿಬರಬಹುದು. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಆರೋಗ್ಯ ಸುಧಾರಣೆಯಾಗಲಿದೆ. ಅಂದುಕೊಂಡ ಕಾರ್ಯ ಯಶಸ್ವಿಯಾಗುವ ಸಂಭವವಿದೆ.

ವೃಷಭ ರಾಶಿ
ಕೆಲಸದ ಜೊತೆಗೆ ನಿಮ್ಮ ಕುಟುಂಬದ ಬಗ್ಗೆಯೂ ಗಮನ ಹರಿಸಬೇಕು. ಶಿಕ್ಷಣದಲ್ಲಿ ಅಡೆತಡೆಗಳು ಉಂಟಾಗಬಹುದು. ಆರ್ಥಿಕ ಪರಿಸ್ಥಿತಿ ಹದಗೆಡುವ ಲಕ್ಷಣಗಳಿವೆ. ಆರೋಗ್ಯ ದುರ್ಬಲವಾಗಿರಲಿದೆ. ಮನೆಯಲ್ಲಿ ಸಂತಸ ಇರಲಿದೆ. ದಿನದ ಕೊನೆಯಲ್ಲಿ ಮನಸ್ಸು ಶಾಂತವಾಗಿರಲಿದೆ. ಹೊಸ ವಸ್ತು ಮನೆಗೆ ಬರುವ ಸಾಧ್ಯತೆ ಇದೆ.
ಮಿಥುನ ರಾಶಿ
ಉದ್ಯೋಗ ಅಥವಾ ವ್ಯವಹಾರವಾಗಿರಲಿ ಇಂದು ಶುಭವಾಗಲಿದೆ. ವೃತ್ತಿಪರ ಜೀವನದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಇದೆಲ್ಲವೂ ನಿಮ್ಮ ಶ್ರಮದ ಫಲ. ದೂರ ಪ್ರಯಾಣ ಕೈಗೊಳ್ಳುವ ಸಾಧ್ಯತೆ ಇದೆ. ಅನಾರೋಗ್ಯ ಸಂಬಂಧ ನೀವು ನಿರ್ಲಕ್ಷ್ಯ ಮಾಡಬೇಡಿ. ಕೌಟುಂಬಿಕ ಜೀವನ ಚೆನ್ನಾಗಿರಲಿದೆ.
ಕರ್ಕ ರಾಶಿ
ಕೆಲಸಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಯಾಣವು ಯಶಸ್ವಿಯಾಗಲಿದೆ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಅನಗತ್ಯ ಖರ್ಚಿಗೆ ನೀವು ಒಳಗಾಗುತ್ತೀರಿ, ಈ ಖರ್ಚಿನಿಂದ ಈ ತಿಂಗಳು ಸಮಸ್ಯೆ ಎದುರಾಗಬಹುದು. ಸಂಬಂಧಿಕರ ಕಡೆಯಿಂದ ಹಲವು ಪ್ರಶ್ನೆಗಳು ಮೂಡಬಹುದು. ವಿದ್ಯಾರ್ಥಿಗಳು ಈ ದಿನ ನಿಮ್ಮ ಅಧ್ಯಯನದ ಕಡೆಗೆ ಹೆಚ್ಚಿನ ಗಮನಹರಿಸಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ದಿನ ಧನಲಾಭದ ನಿರೀಕ್ಷೆ ಇದೆ. ಅತ್ಯುತ್ತಮ ಆರ್ಥಿಕ ಲಾಭವಾಗುವ ದಿನವಿದು. ಹಳೆಯ ಸಾಲ ಮರುಪಾವತಿಯಾಗಲಿದೆ. ನೀವು ಅಂದುಕೊಂಡಿರುವ ಕೆಲಸಗಳು ಸುಲಭವಾಗಿ ನೆರವೇರಲಿವೆ. ವಿದ್ಯಾರ್ಥಿಗಳ ತಮ್ಮ ಕಠಿಣ ಪರಿಶ್ರಮಕ್ಕೆ ಸೂಕ್ತ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮ.
ಕನ್ಯಾ ರಾಶಿ
ವಾಹನ ಹೊಂದಿರುವ ಮಂದಿಗೆ ಈ ದಿನ ಶುಭವಾಗಲಿದೆ. ಹಲವು ಮೂಲದಿಂದ ಹಣ ಹರಿದುಬರಬಹುದು. ದೇವಾಲಯ ಭೇಟಿ ನೀಡುವ ಸಾಧ್ಯತೆ ಇದೆ. ಕಷ್ಟದ ದಿನ ದೂರಾಗುವ ಸಂಭವ. ತಮ್ಮ ವಿರೋಧಿಗಳೊಂದಿಗೆ ಜಾಗರೂಕರಾಗಿರಬೇಕು. ನೀವು ಮೂಳೆ ಸಂಬಂಧಿ ಸಮಸ್ಯೆ ಹೊಂದಿದ್ದರೆ ಎಚ್ಚರಿಕೆ ವಹಿಸಿ.
ತುಲಾ ರಾಶಿ
ಕೆಲಸದ ಸ್ಥಳದಲ್ಲಿ ಪರಿಸ್ಥಿತಿ ನಿಮಗೆ ಅನುಕೂಲಕರವಾಗಿರುತ್ತದೆ. ಮನೆಯಲ್ಲಿ ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ. ಸ್ನೇಹಿತರೊಂದಿಗೆ ಉತ್ತಮ ಮಾತುಕತೆ ನಡೆಸಿ. ನೀವು ನಿಮ್ಮ ವೈವಾಹಿಕ ಜೀವನದಲ್ಲಿ ಒಂದಿಷ್ಟು ಗೊಂದಲ ಏರ್ಪಡಬಹುದು. ದಿನದ ಅಂತ್ಯದಲ್ಲಿ ಎಲ್ಲವೂ ಸುಧಾರಣೆಯಾಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ದಿನ ಶುಭವಾಗಿದೆ. ಕೆಲವು ಶುಭ ಕಾರ್ಯಗಳಿಗೆ ಇಂದು ನಿರ್ಧಾರ ಮಾಡಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವ್ಯಾಪಾರಿಗಳು ವ್ಯವಹಾರದಲ್ಲಿ ಲಾಭ ಗಳಿಸುತ್ತೀರಿ. ಉದ್ಯೋಗದ ವಿಷಯದಲ್ಲಿ ಈ ದಿನ ಚೆನ್ನಾಗಿರಲಿದೆ.
ಧನು ರಾಶಿ
ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಅನಗತ್ಯ ಚರ್ಚೆ, ಮಾತುಕತೆ, ಹರಟೆಯಲ್ಲಿ ಆದಷ್ಟು ಭಾಗಿಯಾಗಬೇಡಿ. ಉದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗಬಹುದು. ವ್ಯಾಪಾರಿಗಳಿಗೆ ಅನುಕೂಲಕರವಲ್ಲ. ಹಲವು ಕಾಲದ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ವಾಹನ ಚಾಲಕರು ಎಚ್ಚರಿಕಯಿಂದ ಇರಿ.
ಮಕರ ರಾಶಿ
ಕೆಲಸದ ಸ್ಥಳದಲ್ಲಿ ನೀವು ಪ್ರತಿಕೂಲ ಸಂದರ್ಭಗಳನ್ನು ಎದುರಿಸಬೇಕಾಗಬಹುದು. ಕಬ್ಬಿಣ ಕೆಲಸ ಮಾಡುವವರಿಗೆ ಇಂದು ಲಾಭದಾಯಕ ದಿನವಾಗಿರಲಿದೆ. ಆಸ್ತಿ ಸಮಸ್ಯೆಗಳಿದ್ದರೆ ಇಂದು ಬಗೆಹರಿಯಬಹುದು. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ, ಪ್ರೇಮಿಗಳಿದ್ದರೆ ನಿಮ್ಮ ವಿಚಾರ ಮನೆಯಲ್ಲಿ ಮಾತನಾಡಲು ಒಳ್ಳೆಯ ದಿನ. ಹಣಕಾಸಿನ ವ್ಯವಹಾರವನ್ನು ಮಾಡುವವರು ಎಚ್ಚರಿಕೆಯಿಂದ ಇರಿ.
ಕುಂಭ ರಾಶಿ
ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂತಸದ ದಿನವಾಗಿ ಕಳೆಯುವಿರಿ. ಮನಸ್ಸಿಗೆ ಸಂಬಂಧಿಸಿದ ಸಮಸ್ಯೆ ದೂರಾಗಲಿದೆ. ಬಹಳ ಕಾಲದಿಂದ ಮಾತುಕತೆ ಇಲ್ಲದೆ ಉಳಿದಿದ್ದ ವಿಚಾರಗಳು ಬಗೆಹರಿಯಲಿದೆ. ಅನಗತ್ಯ ವಿಷಯಗಳಲ್ಲಿ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವುದನ್ನು ತಪ್ಪಿಸಿ.
ಮೀನ ರಾಶಿ
ಹೊಸ ಕೆಲಸವನ್ನು ಪ್ರಾರಂಭಿಸಲು ದಿನವು ಸೂಕ್ತವಾಗಿದೆ. ಹಣದ ಖರ್ಚು ಅಧಿಕವಿರಬಹುದು, ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಮಾಡಿದರೆ ನಿಮಗೆ ದುಬಾರಿಯಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಈ ದಿನವನ್ನು ಕಳೆಯಿರಿ. ಸಾಲ ನೀಡುವುದು ದುಬಾರಿಯಾಗಬಹುದು. ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಇರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











