Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
Daily Horoscope: ವ್ಯಾಪಾರಿ ವಲಯದಲ್ಲಿ ಲಾಭಗಳಿಸುವ ಸಂಭವ!
ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 17 (17 October Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಶುಭವಿದೆ. ನಿಮ್ಮ ಅನೇಕ ಕೆಲಸಗಳನ್ನು ಮುಂದೂಡುವುದು ಕೂಡ ನಿಮಗೆ ಶುಭ ತರಬಹುದು. ತರಾತುರಿಯಲ್ಲಿ ಯವುದೇ ಕೆಲಸ ಮುಗಿಸಲು ಮುಂದಾಗಬೇಡಿ. ಆಪ್ತರಿಂದ ನಿಮಗೆ ಬೆಂಬಲವಿದೆ.
ವೃಷಭ ರಾಶಿ
ವೃಷಭ ರಾಶಿಯ ಜನರಲ್ಲಿ ಇಂದು ಸವಾಲಿನ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಅಡ್ಡಿಯಾಗಬಹುದು. ಆಪ್ತರಿಗೆ ನೀಡಿದ್ದ ಹಣ ಕೈಗೆ ಸಿಗದೆ ಇರಬಹುದು. ಸಂಬಂಧಿಕರ ಮೂಲಕ ಹೊಸ ಚಿಂತೆಯೊಂದು ಕಾಡಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಜನರಲ್ಲಿ ಇಂದು ಸುಲಭದ ಕೆಲಸಗಳಲ್ಲಿ ತೊಡಗುವ ದಿನ. ಆರ್ಥಿಕವಾಗಿ ನೀವು ಸದೃಢರಾಗಬಹುದು. ಖರ್ಚುಗಳ ಮೇಲೆ ಹಿಡಿತ ಇಟ್ಟುಕೊಳ್ಳಿ. ಸ್ವಂತ ಉದ್ಯೋಗ ಮಾಡುವ ಮಂದಿಗೆ ಉತ್ತಮ ದಿನ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಸವಾಲಿನ ದಿನ. ನಿಮ್ಮ ಕೆಲಸಕ್ಕೆ ಹಣಕಾಸು ಅಡ್ಡಿಯಾಗಲಿದೆ. ಸಾಲ ಮಾಡುವ ನಿಮ್ಮ ಉದ್ದೇಶ ಕೈಗೂಡದೆ ಇರಬಹುದು. ಶ್ರಮದಾಯಕ ಕೆಲಸಗಳಿಂದಲೂ ತೃಪ್ತಿ ಆಗುವಷ್ಟು ಆದಾಯ ಬಾರದೆ ಇರಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಗೃಹಿಣಿಯರಿಗೆ ಇಂದು ಸವಾಲುಗಳಿಂದ ತುಂಬಿದ ದಿನ, ನಿಮ್ಮ ಹಲವು ಕೆಲಸಗಳನ್ನು ಇಂದು ಪೂರ್ಣ ಮಾಡಲಾಗದೆ ಇರಬಹುದು. ಹಣಕಾಸಿನ ವಿಚಾರದಲ್ಲಿ ನೆಮ್ಮದಿ ಇರಲಿದೆ. ದಿನದ ಅಂತ್ಯದಲ್ಲಿ ನಿಮ್ಮ ನಿರ್ಧಾರವು ಸರಿ ದಿಕ್ಕಿನಲ್ಲಿ ಸಾಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇಂದು ಸವಾಲುಗಳಿಂದ ತುಂಬಿದ ದಿನ. ನಿಮ್ಮ ಬಹಳ ದಿನದ ಆಸೆಯೊಂದು ಕೈ ತಪ್ಪಬಹದು. ಸ್ವಂತ ವ್ಯಾಪಾರಿಗಳಲ್ಲಿ ತೊಡಗಿರುವ ಮಂದಿಗೆ ಸವಾಲಿನ ದಿನ. ಮನೆಯಲ್ಲಿ ಅಶಾಂತಿ ಉಂಟುಮಾಡಲು ಇಂದು ಒಂದು ವಸ್ತು ಕಾರಣವಾಗಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಪ್ರಯಾಣ ಮಾಡಬೇಕಾದ ದಿನ. ಸಾಧ್ಯವಾದಷ್ಟು ರಾತ್ರಿ ಪ್ರಯಾಣಗಳ ಮುಂದೂಡುವುದು ಉತ್ತಮ. ಗೃಹಿಣಿಯರು ವಾಹನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಮಕ್ಕಳ ಕುರಿತಾದ ಹೊಸ ಚಿಂತೆಯೊಂದು ಇಂದು ನಿಮ್ಮನ್ನು ಆವರಿಸಲಿದೆ.
ವೃಶ್ಚಿಕ ರಾಶಿ
ನಿಮಗಿಂದು ಮಿಶ್ರ ಫಲ ತರುವ ದಿನ. ಬಹಳ ದಿನದಿಂದ ಇದ್ದ ಖರ್ಚು ಕಡಿಮೆಯಾಗಲಿದೆ. ಆಸ್ಪತ್ರೆಯ ವಿಚಾರವಾಗಿ ನೀವು ಹಿಂದೆ ಖರ್ಚು ಮಾಡಿದ್ದರೆ ಇಂದು ಫಲಿತಾಂಶ ಪಡೆಯಬಹುದು. ಯಾರೊಂದಿಗಾದರು ಹಣಕಾಸು ವಿಚಾರದಲ್ಲಿ ಮನಸ್ತಾಪವಿದ್ದರೆ ಸರಿ ಮಾಡಿಕೊಳ್ಳಿ.
ಧನು ರಾಶಿ
ಧನು ರಾಶಿಯವರಿಗೆ ಅನುಕೂಲಕರ ದಿನ. ನಿಮ್ಮ ಹಣಕಾಸು ಸಮಸ್ಯೆ ಇಂದು ಪರಿಹಾರವಾಗಬಹುದು, ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ. ವಿವಾಹ ಸಂಬಂಧಿತ ಒತ್ತಡವಿದೆ. ಮನೆಯ ಹಿರಿಯ ಸದಸ್ಯರ ಆರೋಗ್ಯದಲ್ಲಿ ಏರುಪೇರು ಸಂಭವಿಸಲಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಪ್ರಯಾಣ ಮಾಡುವ ದಿನ. ನಿಮ್ಮದಲ್ಲದ ಕೆಲಸಗಳಿಗೂ ನೀವು ಪ್ರಯಾಣ ಮಾಡಬಹುದು. ಮಕ್ಕಳಲ್ಲಿ ವಿದ್ಯಾಭ್ಯಾಸ ಕುರಿತಾಗಿ ಚಿಂತೆ ಕಾಡಬಹುದು. ಆರ್ಥಿಕ ವಿಚಾರದಲ್ಲಿ ಮತ್ತೊಬ್ಬರ ಮಾತಿನಿಂದ ನಷ್ಟ ಉಂಟಾಗಬಹುದು.
ಕುಂಭ ರಾಶಿ
ಕುಂಭ ರಾಶಿಯವರಲ್ಲಿ ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಒಟ್ಟಿಗೆ ಮಾಡಬೇಕಾದ ಅನಿವಾರ್ಯತೆ ಬರಬಹುದು. ಯಾರಿಗಾದರು ಹಣ ನೀಡುವುದು ತಡ ಮಾಡಿದ್ದರೆ ಅವರಿಂದ ಒತ್ತಡ ಎದುರಿಸಬಹುದು. ಗೃಹಿಣಿಯರು ದೇವಾಲಯ ಭೇಟಿ ಮಾಡುವ ಸಾಧ್ಯತೆ ಇದೆ.
ಮೀನ ರಾಶಿ
ಮೀನ ರಾಶಿಯವರಿಗೆ ಮಿಶ್ರ ಫಲವಿದೆ. ಬಹಳ ದಿನದಿಂದ ಅರ್ಧಕ್ಕೆ ಬಿಟ್ಟ ಕೆಲಸಗಳನ್ನು ಪೂರ್ಣ ಮಾಡುವುದು ಉತ್ತಮ. ನಿಮ್ಮ ಅನಾರೋಗ್ಯ ಸಮಸ್ಯೆ ಕುರಿತಾಗಿ ನಿರ್ಲಕ್ಷ್ಯ ಮಾಡಬೇಡಿ.



Click it and Unblock the Notifications










