Daily Horoscope: ಗೃಹಿಣಿಯರಲ್ಲಿ ಹಣಕೊರತೆ, ಸಾಲದ ಒತ್ತಡವಿದೆ!

ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 16 (16 October Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಜನರಿಗೆ ಇಂದು ಬಹಳ ಅನುಕೂಲಕರ ದಿನ. ನಿಮ್ಮ ಹಲವು ವಿಚಾರದಲ್ಲಿ ಅನ್ಯರಿಂದ ಸಲಹೆ ಪಡೆಯುತ್ತೀರಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಬ್ಯಾಂಕಿಂಗ್ ವಿಚಾರಗಳು ನಿಧಾನವಾಗಲಿದೆ. ಬಹಳ ದಿನದಿಂದ ಮರೆತಿರುವ ಕೆಲಸ ಪೂರ್ಣ ಮಾಡುವುದು ಉತ್ತಮ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಇಂದು ಉತ್ತಮ ದಿನ. ನಿಮ್ಮ ಹಲವು ವಿಚಾರದಲ್ಲಿ ಶುಭವಾಗುತ್ತಿದೆ. ಹಲವು ದಿನದಿಂದ ಆರ್ಥಿಕ ಸಮಸ್ಯೆಯನ್ನು ಎದುರಿಸಿದ್ದರೆ ಇಂದು ಪರಿಹಾರ ಪಡೆಯಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾಗಬಹುದು.

October-16-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯ ಜನರಲ್ಲಿ ಇಂದು ಮಿಶ್ರಫಲ. ನಿಮ್ಮ ಹಲವು ಕೆಲಸ ಕಾರ್ಯಗಳಿಗೆ ಅಡ್ಡಿಗಳಿವೆ. ಆದ್ರೆ ಆರ್ಥಿಕ ಕೆಲಸಗಳನ್ನು ದೊಡ್ಡ ಮಟ್ಟದಲ್ಲಿ ಮಾಡಬೇಕಾಗಬಹುದು. ನಿಮ್ಮ ಹಲವು ವಿಚಾರಗಳಿಗೆ ಕುಟುಂಬಸ್ಥರ ಬೆಂಬಲ ಸಿಗಲಿದೆ.

ಕರ್ಕ ರಾಶಿ

ಕರ್ಕ ರಾಶಿಯ ಜನರಲ್ಲಿ ಇಂದು ಬಹಳ ಅನುಕೂಲಕರ ದಿನ. ನೀವು ಬಯಸಿದಂತೆ ಪ್ರಯಾಣದಲ್ಲಿ ಶುಭವಿದೆ. ದಾಂಪತ್ಯದಲ್ಲಿದ್ದ ಮನಸ್ತಾಪವೊಂದು ನಿವಾರಣೆಯಾಗಲಿದೆ. ಹೂವು, ಹಣ್ಣು, ವ್ಯಾಪಾರಿಗಳಿಗೆ ಇಂದು ಉತ್ತಮ ದಿನ. ಉದ್ಯೋಗದ ಸ್ಥಳದಲ್ಲಿ ಎಚ್ಚರಿಕೆಯಿಂದ ಇರಬೇಕಿದೆ.

ಸಿಂಹ ರಾಶಿ

ಸಿಂಹ ರಾಶಿಯ ಜನರಲ್ಲಿ ಸವಾಲಿನ ದಿನ. ನೀವು ಅಂದುಕೊಂಡಂತೆ ಕೆಲಸಗಳು ನಡೆಯದೆ ಇರಬಹುದು. ಸ್ವಂತ ಉದ್ಯೋಗ ಮಾಡುವವರಿಗೆ ಇಂದು ಶುಭವಾಗಲಿದೆ. ಪ್ರಯಾಣ ಮಾಡಬೇಕಾಗಬೇಕಾಗಬಹುದು. ನಿಮ್ಮ ಕುಂದುಕೊರತೆಯನ್ನು ನಿವಾರಿಸಲು ಇಂದು ಸೂಕ್ತ ದಿನ.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಿಗೆ ಅನುಕೂಲಕರ ದಿನ. ಇಂದು ನಿಮ್ಮ ಹಲವು ದಿನದ ಶ್ರಮಕ್ಕೆ ಪ್ರತಿಫಲ ಸಿಗಲಿದೆ. ನಿಮ್ಮ ಹೊಸ ವಿಚಾರಗಳಲ್ಲಿ ಶುಭವಿದೆ. ವ್ಯಾಪಾರಿಗಳಿಗೆ ಸಾಮಾನ್ಯ ದಿನ ಆಗಿರಲಿದೆ. ರಾತ್ರಿ ಸಮಯದಲ್ಲಿ ಪ್ರಯಾಣ ತಪ್ಪಿಸಿ.

ತುಲಾ ರಾಶಿ

ತುಲಾ ರಾಶಿಯ ಜನರಲ್ಲಿ ಇಂದು ಅನುಕೂಲಕರ ದಿನವಿದೆ. ನಿಮ್ಮ ಹಣಕಾಸು ವಿಚಾರವಾಗಿ ಧನಾತ್ಮಕ ಬದಲಾವಣೆ ನೋಡಬಹುದು. ಆಪ್ತರಿಂದ ಹಣ ಪಡೆಯಬಹುದು. ಕೆಲಸದಲ್ಲಿ ತೃಪ್ತಿ ಇರಲಿದೆ. ಗೃಹಿಣಿಯರ ಕೆಲಸದಲ್ಲಿದ್ದ ಅಡ್ಡಿ ನಿವಾರಣೆಯಾಗಲಿದೆ.

ವೃಶ್ಚಿಕ ರಾಶಿ

ನೀವಿಂದು ಪ್ರಯಾಣ ಮಾಡುವಂತಹ ದಿನ. ಬಹಳ ಸಮಯದಿಂದ ಪೂರ್ಣಗೊಳಿಸದೆ ಇದ್ದ ಕೆಲಸವೊಂದನ್ನು ಪೂರ್ಣ ಮಾಡುವಿರಿ. ಅಪರಿಚಿತರೊಂದಿಗಿನ ವ್ಯವಹಾರಗಳನ್ನು ಕಡಿಮೆ ಮಾಡಿ. ವ್ಯಾಪಾರ ಸಂಬಂಧ ಉತ್ತಮ ದಿನ.

ಧನು ರಾಶಿ

ಧನು ರಾಶಿಯ ಜನರಿಗೆ ಉತ್ತಮ ದಿನ. ನಿಮ್ಮ ಹಲವು ಕೆಲಸ ಕಾರ್ಯಗಳಲ್ಲಿ ಶುಭದಾಯಕ ದಿನ. ನಿಮ್ಮ ಮನೆಯಲ್ಲಿ ಶಾಂತಿ ಇರಲಿದೆ. ಹಣಕಾಸು ವಿಚಾರದಲ್ಲಿ ನೆಮ್ಮದಿ ಇರಲಿದೆ. ಪ್ರಯಾಣಗಳಲ್ಲಿ ಮಿಶ್ರಫಲವಿದೆ.

ಮಕರ ರಾಶಿ

ಮಕರ ರಾಶಿಯ ಜನರಲ್ಲಿ ಇಂದು ದೊಡ್ಡ ಸವಾಲುಗಳಿವೆ. ವ್ಯಾಪಾರಿ ವರ್ಗವು ಅನಗತ್ಯ ಖರ್ಚುಗಳಿಗೆ ಒಳಗಾಗಬಹುದು, ನಿಮ್ಮ ದೈನಂದಿನ ಕೆಲಸಗಳಲ್ಲಿ ಅಡ್ಡಿಗಳಿವೆ. ಹಣಕಾಸು ಪಡೆಯುವ ನಿಮ್ಮ ಪ್ರಯತ್ನದಲ್ಲಿ ಯಶಸ್ಸು ಸಿಗದೆ ಇರಬಹುದು.

ಕುಂಭ ರಾಶಿ

ಕುಂಭ ರಾಶಿಯ ಜನರಲ್ಲಿ ಇಂದು ಅನಗತ್ಯ ಖರ್ಚುಗಳಿವೆ. ವೈಯಕ್ತಿಕ ವಿಚಾರಕ್ಕೆ ಬೇಕಾಗುವ ವಸ್ತುಗಳ ಖರೀದಿಸಬಹುದು. ಪ್ರಯಾಣ ಮಾಡಬಹುದು. ಗೃಹಿಣಿಯರಲ್ಲಿ ಸಣ್ಣಪುಟ್ಟ ಅನಾರೋಗ್ಯ ಕಾಡಬಹುದು. ಯಾರಿಂದಾದರು ಸಾಲ ಪಡೆದಿದ್ದರೆ ಮರುಪಾವತಿ ಮಾಡಬೇಕಾಗಬಹುದು.

ಮೀನ ರಾಶಿ

ಮೀನ ರಾಶಿಯವರಲ್ಲಿ ಇಂದು ಸಮಸ್ಯೆಯ ದಿನ. ವಾಹನ ಸಂಬಂಧವಾಗಿ ಅಡ್ಡಿಗಳಿವೆ. ಮನೆಯಲ್ಲಿ ಮನಸ್ತಾಪಗಳು ಎದುರಾಗಬಹುದು. ಪ್ರಯಾಣ ಮಾಡುವವರು ಎಚ್ಚರಿಕೆಯಿಂದ ಇರಬೇಕಿದೆ.

English summary

October-16-2025-daily-horoscope-prediction-for-12-zodiac-signs-in-kannada

Here is Horoscope Today, 16 October Horoscope: Daily Horoscope Prediction For 12 Zodiac signs In Kannada
Story first published: Thursday, October 16, 2025, 5:00 [IST]
X
Desktop Bottom Promotion