Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
Daily Horoscope: ಕಷ್ಟಗಳಿಗೆ ಶರಣಾಗಬೇಡಿ, ಎದುರಿಸಿದರೆ ಸುಖವಿದೆ!
ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 15 (Daily Horoscope) ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಲ್ಲಿ ಇಂದು ಓಡಾಟದ ದಿನವಾಗಬಹುದು. ಹಾಗೆ ಆಪ್ತರಿಂದ ನಿಮಗೆ ನೋವಿನ ಮಾತುಗಳ ಕೇಳಬೇಕಾಗಬಹುದು. ನಿಮ್ಮ ಹಣಕಾಸಿನ ಸ್ಥಿತಿಗೆ ಮತ್ತಷ್ಟು ಕಷ್ಟಗಳ ತರುವಂತಹ ದಿನವಾಗಬಹುದು. ಜೂಜುಗಳಿಂದ ದೂರವೆ ಇರಿ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಈ ದಿನ ಉತ್ತಮವಾಗಿದೆ. ನಿಮ್ಮ ಹಲವು ಕೆಲಸಗಳಲ್ಲಿ ಶುಭವಿದೆ. ದೈನಂದಿನ ಕೆಲಸದಲ್ಲಿ ಇಷ್ಟು ದಿನ ಅನುಭವಿಸಿದ್ದ ಅಡ್ಡಿಯೊಂದು ನಿವಾರಣೆಯಾಗಲಿದೆ. ವಾಹನ ಸಂಬಂಧಿತ ವಿಚಾರದಲ್ಲಿ ಈ ದಿನ ಶುಭ. ಪ್ರಯಾಣಗಳ ಮಾಡುವಿರಿ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಈ ದಿನ ಮಿಶ್ರಫಲವಿದೆ. ನಿಮ್ಮ ಹಲವು ಪ್ರಯತ್ನಗಳಲ್ಲಿ ನೀವು ಬಯಸಿದ ಫಲಿತಾಂಶ ಪಡೆಯದೆ ಇರಬಹುದು. ಗೃಹಿಣಿಯರು ಅನಾರೋಗ್ಯಕ್ಕೆ ತುತ್ತಾಗಬಹುದು. ಕಣ್ಣಿಗೆ ಸಂಬಂಧಿಸಿದ ಯಾವುದಾದರು ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇದೆ. ಆಪ್ತರ ಭೇಟಿ ಸಂಭವ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಅನುಕೂಲಕ್ಕಿಂತ ಅನಾನುಕೂಲ ಹೆಚ್ಚಿದೆ. ನಿಮ್ಮ ದೊಡ್ಡ ಪ್ರಯತ್ನಕ್ಕೆ ಬಯಸಿದ ಪ್ರತಿಫಲ ಪಡೆಯಲು ಮತ್ತಷ್ಟು ಶ್ರಮ ಹಾಕಬೇಕಾಗಬಹುದು. ಅನಗತ್ಯ ಖರ್ಚುಗಳ ತಡೆಯುವುದು ಉತ್ತಮ. ದಾಂಪತ್ಯದಲ್ಲಿ ಮುನಿಸುಗಳಿವೆ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಈ ದಿನ ಮಿಶ್ರ ಫಲದ ದಿನ, ಆರ್ಥಿಕ ಹಾಗೂ ಔದ್ಯೋಗಿಕ ಒತ್ತಡ ಹೆಚ್ಛಾಗಲಿದೆ. ನಿಮಗೆ ಬರಬೇಕಿದ್ದ ಹಣ ಮತ್ತೆ ಸಿಲುಕಬಹುದು, ಆದ್ರೆ ಪ್ರಯತ್ನ ಬಿಡಬೇಡಿ. ಅನೇಕರಲ್ಲಿ ವೃತ್ತಿ ಬದಲಾವಣೆಗೆ ಅವಕಾಶಗಳು ಬರಬಹುದು. ವಾಹನ ಸಂಬಂಧವಾಗಿ ಎಚ್ಚರಿಕೆ ಅಗತ್ಯ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇಂದು ಉತ್ತಮ ಫಲದಾಯಕ ದಿನ. ದಿನದ ಆರಂಭದಲ್ಲಿ ನಿಮಗೆ ಒತ್ತಡವಿರಲಿದೆ. ವ್ಯಾಪಾರಿಗಳು ಪ್ರಯಾಣ ಮಾಡಬೇಕಾದ ವಿಚಾರದಿಂದ ದೂರ ಉಳಿಯುವುದು ಉತ್ತಮ. ಮನೆಯಲ್ಲಿ ಹಣಕಾಸಿನ ವಿಚಾರದಲ್ಲಿ ಮಾತುಕತೆಗಳಿವೆ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಈ ದಿನ ಉತ್ತಮವಾಗಿರಲಿದೆ. ನೀವು ಬಯಸಿದಂತೆಯೇ ಕೆಲಸಗಳು ಕೈಗೂಡಲಿವೆ. ಪ್ರೀತಿಯ ವಿಚಾರದಲ್ಲಿ ಶುಭವಿದೆ. ಹೊಸದಾಗಿ ಯಾವುದಾದರು ವ್ಯವಹಾರ ಆರಂಭಿಸುವ ಆಲೋಚನೆಯಲ್ಲಿ ಅಡ್ಡಿ ಇದೆ. ಈ ಅಡ್ಡಿ ಭವಿಷ್ಯದಲ್ಲಿ ಉತ್ತಮ ಎನಿಸಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಸಾಮಾನ್ಯ ದಿನವಾಗಿರಲಿದೆ. ಯಾವುದಾದರು ದೊಡ್ಡ ಒಪ್ಪಂದಗಳ ಮಾಡಿಕೊಳ್ಳುವ ಮುನ್ನ ಆಲೋಚಿಸಿ, ಸಾಲ ನೀಡುವ ಮುನ್ನ ಎಚ್ಚರಿಕೆಯಿಂದ ಇರಿ. ನೀವು ಹೊರಟ ಪ್ರಯಾಣಗಳು ಶುಭವಾಗದೆ ಇರಬಹುದು.
ಧನು ರಾಶಿ
ಧನು ರಾಶಿಯ ಜನರಿಗೆ ಇಂದು ಉತ್ತಮ ದಿನವಾಗುತ್ತಿದೆ, ನೀವು ಹಣಕಾಸಿನ ಬೆಂಬಲ ಬಯಸಿದ್ದರೆ ಈ ದಿನ ಪಡೆಯಬಹುದು. ಗೃಹಿಣಿಯರಲ್ಲಿದ್ದ ಅನಾರೋಗ್ಯ ಸಮಸ್ಯೆಯೊಂದಕ್ಕೆ ಪರಿಹಾರ ಸಾಧ್ಯ. ಮನೆಯ ನೆಮ್ಮದಿ ಹಾಗೆ ಉಳಿಯುವ ಕೆಲಸ ಮಾಡಿ. ವಾಹನ ಸವಾರರು ಎಚ್ಚರಿಕೆ ವಹಿಸಿ.
ಮಕರ ರಾಶಿ
ಮಕರ ರಾಶಿಯ ಜನರು ಇಂದು ಪ್ರಯಾಣ ಮಾಡುವಿರಿ. ಮನೆಗೆ ಅತಿಥಿಗಳ ಆಗಮನವು ನಿಮ್ಮಲ್ಲಿ ಗೊಂದಲ ಉಂಟು ಮಾಡಬಹುದು. ಮನೆ ನವೀಕರಣ ವಿಚಾರದಲ್ಲಿ ತರಾತುರಿಯ ನಿರ್ಧಾರ ಮಾಡಬೇಡಿ. ಸ್ನೇಹಿತರಲ್ಲಿ ಮನಸ್ತಾಪ ಸಂಭವ.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಈ ಸಮಯ ಬಹಳ ಅನುಕೂಲವಿದೆ. ವ್ಯಾಪಾರಿಗಳು ಲಾಭ ನೋಡುವ ದಿನ. ಕಲಾವಿದರಿಗೆ ಉತ್ತಮ ದಿನ. ಸಾಲ ಮರುಪಾವತಿಯ ಒತ್ತಡ ಬರಬಹುದು. ಯಾರೊಂದಿಗೂ ಜಗಳಗಳ ಮಾಡದೆ ಇರುವುದು ಉತ್ತಮ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಇಂದು ಶುಭವಿದೆ. ನಿಮ್ಮ ಹಲವು ಕೆಲಸಗಳಲ್ಲಿ ಅಡ್ಡಿಯಾದರು ದಿನದ ಅಂತ್ಯದಲ್ಲಿ ಶುಭವಿದೆ. ಅನೇಕರಿಗೆ ಈ ದಿನ ಅನಾರೋಗ್ಯ ಕಾಡಬಹುದು. ಗೃಹಿಣಿಯರಿಗೆ ಸವಾಲಿನ ದಿನ.



Click it and Unblock the Notifications
