Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
14 October Horoscope: ಹಣಕಾಸು ವಿಚಾರದಲ್ಲಿ ದಡ್ಡತನ ತೋರಬೇಡಿ!
ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 14 (14 October Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಮಿಶ್ರಫಲದ ದಿನ. ನಿಮ್ಮ ಹಲವು ಕೆಲಸಗಳು ನೀವು ಅಂದುಕೊಂಡಂತೆ ನಡೆಯಲಿವೆ, ಆದ್ರೆ ಅದರ ಫಲಿತಾಂಶವು ನಿಮಗೆ ನೆಮ್ಮದಿ ತರುವುದಿಲ್ಲ. ಪ್ರಯಾಣ ಮಾಡುವ ದಿನ. ಆರ್ಥಿಕ ವಿಚಾರದಲ್ಲಿ ಶುಭವಿಲ್ಲ.
ವೃಷಭ ರಾಶಿ
ವೃಷಭ ರಾಶಿಯ ಜನರು ಇಂದು ದೊಡ್ಡ ಮಟ್ಟದ ಸವಾಲುಗಳ ಎದುರಿಸಬಹುದು. ಆಪ್ತರೊಬ್ಬರಿಂದ ಹಣಕಾಸಿಗೆ ಒತ್ತಡ ಬರಬಹುದು, ಕೆಲಸದ ಸ್ಥಳದಲ್ಲೂ ಒತ್ತಡವಿದೆ. ಗೃಹಿಣಿಯರು ಸಾಲ ಮಾಡಬೇಕಾಗಿ ಬರಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಜನರು ಈ ದಿನ ದೊಡ್ಡ ಮಟ್ಟದ ಕಷ್ಟಗಳ ನೋಡಬಹುದು. ನೀವು ಸಾಲ ಮಾಡಿದ್ದರೆ ಮರಳಿ ನೀಡಬೇಕಾದ ಅನಿವಾರ್ಯತೆ ಎದುರಾಗಬಹುದು. ನಿಮ್ಮ ದೈನಂದಿನ ಸವಾಲುಗಳಿಂದ ಪಾರಾಗಲು ಬೇರೆ ದಾರಿ ಹುಡುಕಬೇಕಾಗಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಗೃಹಿಣಿಯರಿಗೆ ಈ ದಿನ ಲಾಭದಾಯಕ ನಿಮ್ಮ ಕೆಲವು ಹಣದ ಸಮಸ್ಯೆಗಳು ನಿವಾರಣೆಯಾಗಬಹುದು. ಅವಿವಾಹಿತರು ಇಂದು ಪ್ರಯಾಣ ಮಾಡಬಹುದು. ಯಾರೊಂದಿಗೂ ಸಾಲ ಕೇಳಬೇಡಿ. ಹಣ ಖರ್ಚು ಮಾಡುವ ಮುನ್ನ ಆಲೋಚಿಸಿ.
ಸಿಂಹ ರಾಶಿ
ಸಿಂಹ ರಾಶಿಯ ಜನರಲ್ಲಿ ಇಂದು ಅದ್ಭುತ ಲಾಭವಿದೆ. ಕೆಲಸದ ಸ್ಥಳದಲ್ಲಿನ ವಿಚಾರವೊಂದರಲ್ಲಿ ನಿಮಗೆ ಉತ್ತಮ ಫಲಿತಾಂಶವಿದೆ. ಪ್ರೀತಿಯ ವಿಚಾರದಲ್ಲಿ ನೀವೆಂದು ಊಹಿಸದಂತಹ ಸಂತಸದ ದಿನ. ಸ್ವಂತ ಉದ್ಯೋಗಿಗಳಿಗೆ ಇಂದು ಸವಾಲುಗಳು ಎದುರಾಗಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರಲ್ಲಿ ಇಂದು ಮಿಶ್ರಫಲವಿದೆ. ನಿಮ್ಮ ಹಲವು ಕೆಸಲಗಳು ಅರ್ಧಕ್ಕೆ ನಿಲ್ಲಬಹುದು, ಯಾರಿಗಾದರು ಹಣ ಪಾವತಿ ಬಾಕಿ ಉಳಿದರೆ ಮರೆಯದಿರಿ. ನಿಮ್ಮ ವ್ಯವಹಾರಗಳನ್ನು ಆದಷ್ಟು ಗೌಪ್ಯವಾಗಿಡಿ. ವ್ಯಾಪಾರಿ ವಲಯದಲ್ಲಿ ಇಂದು ಹಣದ ಹರಿವು ನೋಡಬಹುದು.
ತುಲಾ ರಾಶಿ
ತುಲಾ ರಾಶಿಯ ಜನರಲ್ಲಿ ಇಂದು ದೊಡ್ಡ ಕೆಲಸಗಳನ್ನು ಸಲೀಸಾಗಿ ಮಾಡುವ ದಿನ. ನಿಮ್ಮ ಕೆಲಸ ಸಂಬಂಧವಾಗಿ ಹಲವರನ್ನು ಭೇಟಿಯಾಗಬೇಕಾಗಬಹುದು. ಮನೆಗಾಗಿ ವಸ್ತುವೊಂದನ್ನು ಖರೀದಿಸಬಹುದು. ಆಪ್ತರೊಬ್ಬರಿಂದ ಹಣಕಾಸಿನ ಸಹಾಯ ಪಡೆಯಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಇಂದು ಉತ್ತಮ ಅನುಕೂಲದ ದಿನ. ನಿಮ್ಮ ಆದಾಯ ಹೆಚ್ಚಿಸಿಕೊಳ್ಳುವ ದಿನ ಎನ್ನಬಹುದು. ಆಪ್ತರಿಗೆ ಹಣ ನೀಡಬೇಕಾಗಬಹುದು. ಯಾವುದಾದರು ಕೆಲಸದಲ್ಲಿ ನಿಮಗೆ ಹಣ ಬರುವುದು ಬಾಕಿ ಉಳಿದಿದ್ದರೆ ಈ ದಿನ ಪಡೆಯಬಹುದು.
ಧನು ರಾಶಿ
ಧನು ರಾಶಿಯ ಜನರಿಗೆ ಸಮಸ್ಯೆಗಳಿರಬಹುದು. ಹಣಕಾಸು ವಿಚಾರದಲ್ಲಿ ನೋವಿದೆ. ಸಹೋದರರೊಂದಿಗೆ ಅಥವಾ ಸ್ನೇಹಿತರೊಂದಿಗೆ ಮನಸ್ತಾಪಗಳು ಮೂಡಬಹುದು. ಮನೆ ವಿಚಾರದಲ್ಲಿ ಹೊಸ ರೀತಿಯ ಚಿಂತೆ ಕಾಡಬಹುದು.
ಮಕರ ರಾಶಿ
ಮಕರ ರಾಶಿಯ ಜನರಿಗೆ ಇಂದು ಸುಲಭ ಕೆಲಸಗಳ ದಿನ. ನಿಮ್ಮ ಪ್ರಯಾಣದಲ್ಲಿ ಸುಖವಿರಲಿದೆ. ಮನೆಯ ಆಧಾರವಾಗಿ ನೀವು ಹೊಸ ಆದಾಯ ಹುಡುಕಬೇಕಾಗಬಹುದು. ನಿಮ್ಮ ವ್ಯಾಪಾರದಲ್ಲಿನ ಬದಲಾವಣೆಯು ದೊಡ್ಡ ಸಮಸ್ಯೆ ತರಬಹುದು. ವಾಹನ ಸಂಬಂಧಿ ಸಮಸ್ಯೆಗಳು ಎದುರಾಗಬಹುದು.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಅನುಕೂಲಕರ ದಿನ. ನಿಮ್ಮೆಲ್ಲಾ ಕೆಲಸಗಳು ಯಶಸ್ವಿಯಾಗಲಿದೆ. ಪ್ರಯಾಣ ಮಾಡಬೇಕಾಗಬಹುದು. ಪ್ರೀತಿ ವಿಚಾರದಲ್ಲಿ ಧನಾತ್ಮಕ ವಿಚಾರಗಳು ಇರಬಹುದು. ಹೋಟೆಲ್ ಉದ್ಯಮಿಗಳಿಗೆ ಶುಭಕರ ದಿನ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಈ ದಿನ ಶುಭವಾಗಲಿದೆ. ಆಪ್ತರಿಂದ ದೊಡ್ಡ ಮಟ್ಟದ ಧನ ಲಾಭ ಬರಬಹುದು. ಬಹುತೇಕರಲ್ಲಿ ಈ ದಿನ ದೊಡ್ಡ ಮಟ್ಟದ ಸವಾಲುಗಳಿವೆ. ವಾಹನ ಕುರಿತಾದ ವಿಚಾರದಲ್ಲಿ ಸಮಸ್ಯೆಗಳು ಬರಬಹುದು.



Click it and Unblock the Notifications