Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಅಕ್ಟೋಬರ್ 13, ಏಕಾದಶಿ ದಿನದಂದು ದ್ವಾದಶ ರಾಶಿಗಳ ರಾಶಿಫಲ: ಈ ದಿನ ಯಾರಿಗೆ ಶುಭ, ಯಾರಿಗೆ ಮಿಶ್ರಫಲ
ಅಕ್ಟೋಬರ್ 13 ದ್ವಾದಶ ರಾಶಿಗಳಿಗೆ ಹೇಗಿರಲಿದೆ?
ಅಕ್ಟೋಬರ್ 13: ಭಾನುವಾರ
ತಿಥಿ ದಶಮಿ, 09:26ರ ನಂತರ ಏಕಾದಶಿ
ರವಿಯೋಗ: 06:10ರಿಂದ ಅಕ್ಟೋಬರ್ 14 02:51ರವರೆಗೆ ಇದೆ
ರಾಹುಕಾಲ: ಬೆಳಗ್ಗೆ ಸಂಜೆ 04:33ರಿಂದ 06:02ರವರೆಗೆ ಇದೆ
ಮೇಷ ರಾಶಿ
ವೃತ್ತಿ ಬದುಕಿನ ದೃಷ್ಟಿಯಿಂದ ಉತ್ತಮವಾಗಿರಲಿದೆ. ನೀವು ವ್ಯಾಪಾರಸ್ಥರಾಗಿದ್ದರೆ ಲಾಭ ಗಳಿಸಲು ಉತ್ತಮ ಅವಕಾಶ ಸಿಗಲಿದೆ, ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ.
ಆರೋಗ್ಯ ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ : ನೇರಳೆ
ಅದೃಷ್ಟದ ಸಂಖ್ಯೆ: 25
ಶುಭ ಸಮಯ: ಸಂಜೆ 5 ರಿಂದ ರಾತ್ರಿ 8 ರವರೆಗೆ

ವೃಷಭ ರಾಶಿ
ಈ ದಿನ ನಿಮಗೆ ಉತ್ತಮವಾಗಿರಲಿದೆ. ಆರ್ಥಿಕವಾಗಿ ಉತ್ತಮವಾಗಿರಲಿದೆ. ಆದರೆ ವ್ಯವಹಾರಕ್ಕೆ ಸಂಬಂಧಿಸಿದ ನಿರ್ಧಾರ ಆಲೋಚಿಸಿ ತೆಗೆದುಕೊಳ್ಳಬೇಕು. ಮನೆಯ ವಾತಾವರಣ ಖುಷಿಯಿಂದ ಇರಲಿದೆ, ಅತಿಥಿಗಳು ಮನೆಗೆ ಬರಬಹುದು. ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಬೇಡ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 12
ಶುಭ ಸಮಯ: ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ
ಮಿಥುನ ರಾಶಿ
ಈ ದಿನ ನಿಮಗೆ ಉತ್ತಮವಾಗಿರಲಿದೆ. ನಿಮ್ಮ ವೈವಾಹಿಕ ಜೀವನದಲ್ಲಿ ಉತ್ತಮ ಹೊಂದಾಣಿಕೆ ಇರಲಿದೆ. ಈ ದಿನ ನೀವು ನಿಮ್ಮ ಕೆಲಸವನ್ನು ಒತ್ತಡದಿಂದ ಮಾಡುವ ಬದಲಿಗೆ ಕೆಲಸದಲ್ಲಿ ತಪ್ಪಾಗದಂತೆ ಜಾಗ್ರತೆವಹಿಸಿ. ನಿಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕು.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 7
ಶುಭ ಸಮಯ: ಸಂಜೆ 4:20 ರಿಂದ ರಾತ್ರಿ 8:20 ರವರೆಗೆ
ಕರ್ಕ ರಾಶಿ
ಈ ದಿನ ನೀವು ಸ್ವಲ್ಪ ಜಾಗ್ರತೆವಹಿಸಬೇಕು, ಈ ದಿನ ಯಾವುದೇ ಆರ್ಥಿಕ ವ್ಯವಹಾರ ಮಾಡಲು ಹೋಗಬೇಡಿ. ಆರೋಗ್ಯ ಸುಧಾರಿಸಬಹುದು. ನಿಮ್ಮ ಕೆಲಸದ ಕಡೆಗೆ ಗಮನಹರಿಸಿ. ಇನ್ನು ಸಂಬಂಧದಲ್ಲಿ ಕೆಲ ವಿಷಯಕ್ಕೆ ಭಿನ್ನಾಭಿಪ್ರಾಯ ಮೂಡಬಹುದು, ಸಮಸ್ಯೆ ದೊಡ್ಡದಾಗಲು ಬಿಡಬೇಡಿ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 31
ಶುಭ ಸಮಯ: ಬೆಳಿಗ್ಗೆ 6 ರಿಂದ 9:30 ರವರೆಗೆ
ಸಿಂಹ ರಾಶಿ
ಈ ದಿನ ನಿಮಗೆ ಶುಭವಾಗಿದೆ, ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ, ನಿಮ್ಮ ಎಲ್ಲಾ ಕೆಲಸಗಳು ಯೋಜನೆಯ ಪ್ರಕಾರ ಪೂರ್ಣಗೊಳ್ಳುತ್ತವೆ. ಮನೆಯ ವಾತಾವರಣ ಚೆನ್ನಾಗಿರಲಿದೆ. ನಿಮ್ಮ ಸಂಗಾತಿಯೊಂದಿಗೆ ಬಾಂಧವ್ಯ ಚೆನ್ನಾಗಿರಲಿದೆ. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ಸಂಖ್ಯೆ: 29
ಶುಭ ಸಮಯ: ಮಧ್ಯಾಹ್ನ 1 ರಿಂದ ಸಂಜೆ 7 ರವರೆಗೆ
ಕನ್ಯಾ ರಾಶಿ
ಈ ದಿನ ನಿಮಗೆ ಉತ್ತಮವಾಗಿದೆ, ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳು ಯಶಸ್ವಿಯಾಗುವ ಸಾಧ್ಯತೆಯಿದೆ. ಆರೋಗ್ಯ ಉತ್ತಮವಾಗಿರಲಿದೆ, ನಿಮ್ಮ ಕೆಲಸದಲ್ಲಿ ಇಂದು ಫಲ ಸಿಗದಿದ್ದರೂ ಉತ್ತಮ ಫಲಖಂಡಿತ ಪಡೆಯುತ್ತೀರಿ,ಆದ್ದರಿಂದ ನಿರಾಸೆಬೇಡ. ಮನೆಯಲ್ಲಿ ಏನಾದರು ಭಿನ್ನಾಭಿಪ್ರಾಯವಿದ್ದರೆ ಬಗೆಹರಿಸಲು ಪ್ರಯತ್ನಿಸಿ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 7
ಶುಭ ಸಮಯ: ಮಧ್ಯಾಹ್ನ 2:30 ರಿಂದ ಸಂಜೆ 5 ರವರೆಗೆ
ತುಲಾ ರಾಶಿ
ಈ ದಿನ ಲಾಭವಾಗಲಿದೆ, ಈ ದಿನ ಖುಷಿಯಿಂದ ಕಳೆಯುತ್ತೀರಿ. ಮನೆಯವರಿಗೆ ವಾತಾವರಣ ಉತ್ತಮವಾಗಿರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ,ನಿಮ್ಮ ಹಾಗೂ ಸಂಗಾತಿಯ ಸಂಬಂಧ ತುಂಬಾ ಚೆನ್ನಾಗಿರಲಿದೆ, ನೀವು ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಲು ಹೋಗಬೇಡಿ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 10
ಶುಭ ಸಮಯ: ಸಂಜೆ 6 ರಿಂದ ರಾತ್ರಿ 8:30 ರವರೆಗೆ
ವೃಶ್ಚಿಕ ರಾಶಿ
ಈ ದಿನ ಉತ್ತಮವಾಗಿರಲಿದೆ, ಉದ್ಯೋಗಿಗಳಿಗೆ ಈ ದಿನ ಉತ್ತಮವಾಗಿರಲಿದೆ. ಆರೋಗ್ಯ ಸಮಸ್ಯೆಯಿದ್ದರೆ ಸುಧಾರಣೆ ಕಂಡು ಬರಲಿದೆ. ಸಂಬಂಧಗಳಲ್ಲಿನ ನಕಾರಾತ್ಮಕತೆ ದೂರವಾಗುತ್ತದೆ , ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಮರಸ್ಯ ಇರಲಿದೆ, ಕುಟುಂಬದಲ್ಲಿ ಖುಷಿಯ ವಾತಾವರಣ ಇರಲಿದೆ. ಆರೋಗ್ಯ ತುಂಬಾ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ:ಕಿತ್ತಳೆ
ಅದೃಷ್ಟದ ಸಂಖ್ಯೆ: 4
ಶುಭ ಸಮಯ:ಬೆಳಗ್ಗೆ 5:15 ರಿಂದ 8 ರವರೆಗೆ
ಧನು ರಾಶಿ
ಈ ದಿನ ನಿಮಗೆ ತುಂಬಾ ಚೆನ್ನಾಗಿರಲಿದೆ,ಕೆಲವು ಒಳ್ಳೆಯ ಸುದ್ದಿಗಳನ್ನು ಸ್ವೀಕರಿಸಿದ ನಂತರ ನಿಮ್ಮ ಮನಸ್ಸು ತುಂಬಾ ಸಂತೋಷವಾಗುತ್ತದೆ. ಬಹುಕಾಲದಿಂದ ಬಾಕಿ ಉಳಿದಿರುವ ಯಾವುದೇ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಕುಟುಂಬದಲ್ಲಿ ಕೆಲ ಸಮಸ್ಯೆಯಿದ್ದರೆ ಅದನ್ನು ಸಮಧಾನದಿಂದ ಬಗೆಹರಿಸಲು ಪ್ರಯತ್ನಿಸಿ. ಆರೋಗ್ಯಕ್ಕಾಗಿ ಆರೋಗ್ಯಕರ ಜೀವನಶೈಲಿ ಕಡೆಗೆ ಗಮನಹರಿಸಿ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 20
ಶುಭ ಸಮಯ: ಮಧ್ಯಾಹ್ನ 1 ರಿಂದ ಸಂಜೆ 4 ರವರೆಗೆ
ಮಕರ ರಾಶಿ
ಈ ದಿನ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುತ್ತೀರಿ. ನಿಮ್ಮ ಕೆಲಸದಿಂದ ಗುರುತಿಸಿಕೊಳ್ಳುತ್ತೀರಿ, ಆರ್ಥಿಕವಾಗಿ ಉತ್ತಮವಾಗಿರಲಿದೆ. ಮನೆಯ ವಾತಾರಣ ಚೆನ್ನಾಗಿರಲಿದೆ, ಕುಟುಂಬ ಜೀವನದಲ್ಲಿ ಸಾಮರಸ್ಯ ಇರಲಿದೆ. ಈ ದಿನ ಆರೋಗ್ಯ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಬೆಳ್ಳಿ
ಅದೃಷ್ಟದ ಸಂಖ್ಯೆ: 2
ಶುಭ ಸಮಯ: ಬೆಳಗ್ಗೆ 7 ರಿಂದ 9:55 ರವರೆಗೆ
ಕುಂಭ ರಾಶಿ
ಈ ದಿನ ನಿಮಗೆ ಉತ್ತಮವಾಗಿರಲಿದೆ, ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲಾಗುವುದು. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಈ ದಿನ ಲಾಭ ಗಳಿಸಬಹುದು. ನಿಮ್ಮ ಕಠಿಣ ಪರಿಶ್ರಮ ಯಶಸ್ವಿಯಾಗುತ್ತದೆ , ಮನೆಯಲ್ಲಿ ಕೆಲ ಭಿನ್ನಾಭಿಪ್ರಾಯವಿರಬಹುದು, ನೀವು ಕೋಪ ನಿಯಂತ್ರಿಸಿದರೆ ಒಳ್ಳೆಯದು. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕೇಸರಿ
ಅದೃಷ್ಟದ ಸಂಖ್ಯೆ: 18
ಶುಭ ಸಮಯ: ಸಂಜೆ 4 ರಿಂದ 7:30 ರವರೆಗೆ
ಮೀನ ರಾಶಿ
ನಿಮಗೆ ವಹಿಸಿದ ಕೆಲಸವನ್ನು ಜಾಗ್ರತೆಯಿಂದ ಮಾಡಿ. ಈ ದಿನ ನಿಮ್ಮ ಕೆಲಸದಲ್ಲಿ ಶ್ರಮ ಹಾಕಬೇಕು, ವ್ಯಾಪಾರಿಗಳಿಗೆ ಈ ದಿನ ಅನುಕೂಲಕರವಾಗಿದೆ. ನಿಮ್ಮ ಸಂಗಾತಿ ಜೊತೆಗೆ
ವಿವಾದಾತ್ಮಕ ವಿಷಯಗಳ ಬಗ್ಗೆ ಮಾತನಾಡಲು ಹೋಗದಿರುವುದೇ ಒಳ್ಳೆಯದು. ಈ ದಿನ ಆರೋಗ್ಯ ಉತ್ತಮವಿರಲಿದೆ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 9
ಶುಭ ಮುಹೂರ್ತ: ಮಧ್ಯಾಹ್ನ 12:30 ರಿಂದ 3 ರವರೆಗೆ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










