13 October Horoscope: ಯಾರಿಗಿಂದು ಲಾಭದಾಯಕ ದಿನ? ಯಾರಿಗೆ ನಷ್ಟದ ಹಾದಿ!

ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 13 (13 October Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ನಿಮ್ಮ ಹಲವು ಕನಸುಗಳನ್ನು ಈಡೇರಿಸಿಕೊಳ್ಳಲು ಇಂದು ಶುಭ ದಿನ. ಪ್ರಯಾಣ ಮಾಡಬೇಕಾಗಬಹುದು. ಯಾರೊಂದಿಗಾದರು ಹೆಚ್ಚು ವ್ಯವಹಾರ ಮಾಡುವಾಗ ಎಚ್ಚರಿಕೆ ವಹಿಸಿ.

ವೃಷಭ ರಾಶಿ

ವೃಷಭ ರಾಶಿಯ ಜನರಿಗೆ ಇಂದು ಉತ್ತಮ ಪ್ರಗತಿಯ ದಿನ. ನಿಮ್ಮ ಹಣಕಾಸು ವಿಚಾರದಲ್ಲಿ ಲಾಭವಿದೆ. ಹಾಗೆ ನಿಮ್ಮಿಂದ ಹಲವರು ಸಹಾಯ ಪಡೆಯಬಹುದು. ಖರ್ಚುಗಳ ಮೇಲೆ ನಿಗಾ ಇಡಿ.

October-12-2025-daily-horoscope

ಮಿಥುನ ರಾಶಿ

ಮಿಥುನ ರಾಶಿಯ ಜನರಿಗೆ ಇಂದು ಕಷ್ಟದ ದಿನ. ನಿಮಗೆ ನಷ್ಟದ ದಿನ. ಪ್ರಯಾಣಗಳಲ್ಲಿ ನೀವು ಬಯಸಿದ ಫಲಿತಾಂಶ ಬರುವುದಿಲ್ಲ. ಸತತ ಪ್ರಯತ್ನದ ಕೆಲಸವೊಂದು ವಿಫಲವಾಗಬಹುದು. ಆರೋಗ್ಯದಲ್ಲಿ ಏರುಪೇರು ಸಂಭವ.

ಕರ್ಕ ರಾಶಿ

ಕರ್ಕ ರಾಶಿಯ ಜನರಿಗೆ ಇಂದು ದೊಡ್ಡ ಸವಾಲುಗಳು ಎದುರಾಗುವ ದಿನ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಅಡ್ಡಿಗಳಿವೆ. ನಿಮಗೆ ಬರಬೇಕಿದ್ದ ಹಣಕ್ಕೆ ಅಡ್ಡಿಯಾಗಬಹುದು. ಯಾರಿಂದಾದರು ಕೆಲಸದ ಸಹಾಯ ಬಯಸಿದ್ದರೆ ಋಣಾತ್ಮಕ ವಿಚಾರಗಳು ಬರಲಿವೆ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಮಿಶ್ರಫಲದ ದಿನ. ನಿಮ್ಮ ಇಡೀ ದಿನ ಒತ್ತಡದಲ್ಲಿ ಕಳೆಯಬಹುದು. ಹಣ‍ಕಾಸಿನ ಚಿಂತೆ ಕಾಡಬಹುದು. ದೇಹ ವಿಶ್ರಾಂತಿ ಬಯಸಬಹುದು. ನಿಮ್ಮ ಕೆಲಸದ ಪ್ರಯತ್ನಗಳು ನೀವು ಬಯಸಿದಂತೆ ನಡೆಯದೆ ಇರಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರು ಇಂದು ಪ್ರಯಾಣ ಮಾಡಬಹುದು. ಓಡಾಟದಲ್ಲಿ ಕಳೆದರೂ ನಿಮ್ಮಲ್ಲಿ ಚೈತನ್ಯ ಇರಲಿದೆ. ವಾಹನ ಸಂಬಂಧಿ ವಿಚಾರವೊಂದರಲ್ಲಿ ಶುಭವಿದೆ. ನಿಮ್ಮ ವಾಹನದ ಖರ್ಚುಗಳ ನಿಭಾಯಿಸಿ, ಮನೆಗಾಗಿ ವಸ್ತುಗಳ ಖರೀದಿಸಬಹುದು.

ತುಲಾ ರಾಶಿ

ತುಲಾ ರಾಶಿಯ ಜನರಿಗೆ ಈ ದಿನವು ಬಹಳ ಉತ್ತಮವಾಗಿರಲಿದೆ. ನಿಮ್ಮ ಬಯಕೆಯಂತೆ ಪ್ರಯಾಣಕ್ಕೆ ಸಿದ್ದತೆ ಮಾಡಿಕೊಳ್ಳಬಹುದು. ಯಾರಿಗೂ ಸಾಲ ನೀಡಲು ಮುಂದಾಗಬೇಡಿ. ಆಪ್ತರೊಬ್ಬರೊಂದಿಗೆ ಪ್ರಯಾಣ ಮಾಡಬೇಕಾಗಬಹುದು. ದೇವಾಲಯ ಭೇಟಿಯ ಸಾಧ್ಯತೆಯೂ ಇದೆ.

ವೃಶ್ಚಿಕ ರಾಶಿ

ನಿಮ್ಮ ಮನೆಯಲ್ಲಿ ಶುಭ ಕಾರ್ಯ ಸಂಬಂಧವಾಗಿ ಮಾತುಕತೆ ನಡೆಯಬಹುದು. ಹಣಕಾಸಿಗೆ ಸಂಬಂಧಿಸಿದ ವಿಚಾರವೊಂದರಿಂದ ಮನಸ್ತಾಪಗಳು ಬರಬಹುದು. ಗೃಹಿಣಿಯರಲ್ಲಿ ಉದರ ಸಂಬಂಧಿ ಸಮಸ್ಯೆಗಳು ಕಾಡಬಹುದು.

ಧನು ರಾಶಿ

ಧನು ರಾಶಿಯ ಜನರಿಗೆ ಇಂದು ಬಹಳ ಅನುಕೂಲಕರ ದಿನ. ನಿಮ್ಮ ಪ್ರಯಾಣಗಳಲ್ಲಿ ಧನಾತ್ಮಕ ವಿಚಾರಗಳ ನೋಡಬಹುದು. ವ್ಯಾಪಾರಿಗಳಿಗೆ ನಷ್ಟದ ಭಯ ಇರಲಿದೆ. ಆದ್ರೆ ನಿಮ್ಮ ಆದಾಯದಷ್ಟೇ ಖರ್ಚು ಇರುವ ಕಾರಣದಿಂದ ನೆಮ್ಮದಿ ಹಾಳಾಗುವ ಕೆಲವು ಘಟನೆಗಳು ನಡೆಯಬಹುದು.

ಮಕರ ರಾಶಿ

ಮಕರ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಹಲವು ಕೆಲಸಗಳು ನಿಗದಿತ ಸಮಯಕ್ಕೆ ಮುಗಿಯಬಹುದು. ನಿಮ್ಮ ಪ್ರಯಾಣಗಳಲ್ಲಿ ಅಚ್ಚರಿ ಫಲಿತಾಂಶಗಳು ಎದುರಾಗಬಹುದು. ಯಾರಿದಂದಾರು ಸಾಲ ಪಡೆದಿದ್ದರೆ ಮರಳಿ ನೀಡುವುದು ಉತ್ತಮ.

ಕುಂಭ ರಾಶಿ

ಕುಂಭ ರಾಶಿಯ ಜನರಿಗೆ ಈ ದಿನ ದೊಡ್ಡ ಲಾಭವಿದೆ. ನೀವು ವ್ಯಾಪಾರಿ ವರ್ಗಕ್ಕೆ ಸೇರಿದ್ದರೆ ಈ ದಿನ ಲಾಭ ನೋಡಬಹುದು. ಹಣಕಾಸಿನ ಕುರಿತಾದ ಚಿಂತೆ ಕಾಡಬಹುದು.

ಮೀನ ರಾಶಿ

ಮೀನ ರಾಶಿಯವರಿಗೆ ಈ ದಿನ ಲಾಭದಾಯಕ ನಿಮ್ಮ ಹಲವು ಕೆಲಸಗಳಲ್ಲಿ ಉತ್ತಮ ದಿನವಾಗುತ್ತದೆ. ವಾಹನ ಸಂಬಂಧಿತ ಸಮಸ್ಯೆಗಳಿದ್ದರೆ ಪರಿಹಾರ ನೋಡಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ದಿನ. ದೇವಾಲಯ ಭೇಟಿ ಸಾಧ್ಯತೆ ಇದೆ. ದಾಂಪತ್ಯದಲ್ಲಿ ಸಣ್ಣ ಪುಟ್ಟ ಮನಸ್ತಾಪಗಳಿವೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

October-13-2025-daily-horoscope-prediction-for-12-zodiac-signs-in-kannada

Here is Horoscope Today, 13 October Horoscope: Daily Horoscope Prediction For 12 Zodiac signs In Kannada
Story first published: Monday, October 13, 2025, 5:00 [IST]
X
Desktop Bottom Promotion