Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
10 October Horoscope: ಅನಗತ್ಯ ವಿಚಾರದಲ್ಲಿ ಕಲಹ, ಆಪ್ತರಿಂದ ಕಹಿ ಸುದ್ದಿ!
ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 10 (10 October Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರು ಇಂದು ಸಮಸ್ಯೆಗಳ ಎದುರಿಸಬಹುದು. ನಿಮ್ಮ ಕೆಲಸವೊಂದರ ಕಾರಣಕ್ಕೆ ನೀವು ಪ್ರಯಾಣ ಮಾಡಬಹುದು. ಹಾಗೆ ಆಪ್ತರಿಂದ ಕಹಿ ಸುದ್ದಿಯೊಂದನ್ನು ಪಡೆಯಬಹುದು. ಸವಾಲುಗಳನ್ನು ಎದುರಿಸುವ ದಿನ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಇಂದು ಅನುಕೂಲಕರ ದಿನ. ನಿಮ್ಮ ಹಣಕಾಸು ವಿಚಾರವಾಗಿ ಧನಾತ್ಮಕ ಬದಲಾವಣೆ ನೋಡಬಹುದು. ಖರ್ಚುಗಳ ಮೇಲೆ ಹಿಡಿತ ಸಾಧಿಸಬೇಕಿದೆ. ಆಪ್ತರ ಜೊತೆಗಿದ್ದಾಗ ತಾಳ್ಮೆಯಿಂದ ವರ್ತಿಸುವುದು ಮುಖ್ಯ. ಕೆಲಸದಲ್ಲಿ ಶಾಂತಿ ಕಾಪಾಡಿಕೊಳ್ಳಿ.

ಮಿಥುನ ರಾಶಿ
ಮಿಥುನ ರಾಶಿಯ ಜನರಲ್ಲಿ ಇಂದು ದೊಡ್ಡ ಸವಾಲುಗಳು ಎದುರಾಗಲಿದೆ. ದೈನಂದಿನ ಕೆಲಸ ಕಾರ್ಯಗಳಲ್ಲಿ ಅಡ್ಡಿಗಳಿವೆ. ನಿಮ್ಮ ಹಲವು ಕೆಲಸಗಳಲ್ಲಿ ಯಶಸ್ಸು ಸಿಗದೆ ಇರಬಹುದು. ಬಹಳ ದಿನದ ಅನಾರೋಗ್ಯ ಸಮಸ್ಯೆ ದೊಡ್ಡದಾಗಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಗೃಹಿಣಿರಿಗೆ ಇಂದು ಸಮಸ್ಯೆಗಳ ದಿನ. ನಿಮ್ಮ ಕೆಲಸ, ಹಣಕಾಸು ವಿಚಾರವಾಗಿ ದೊಡ್ಡ ಸಮಸ್ಯೆಗಳ ಎದುರಿಸಬೇಕಾಗುತ್ತದೆ. ಹಣ ಸಂಬಂಧಿ ವಿಚಾರವಾಗಿಯೂ ಒತ್ತಡ ಇರಲಿದೆ. ದಿನವಿಡಿ ಶ್ರಮದಾಯಕ ಕೆಲಸ ಮಾಡುವಿರಿ, ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವರ ಮೇಲೆ ವಿಶೇಷ ಗಮನ ಹರಿಸುವುದು ಮುಖ್ಯ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಮಿಶ್ರ ಫಲದ ದಿನ. ನಿಮ್ಮ ಎಲ್ಲಾ ಕೆಲಸಗಳಲ್ಲಿ ಸವಾಲುಗಳ ನೋಡುವಿರಿ. ಆದ್ರೆ ನಿಮ್ಮ ಹಣಕಾಸು ವಿಚಾರದಲ್ಲಿ ಎಚ್ಚರಿಕೆ ತಪ್ಪುವುದು ನಷ್ಟಕ್ಕೆ ಕಾರಣವಾಗಬಹುದು. ಹಿಂದಿನಿಂದ ನಿಮ್ಮಲ್ಲಿ ಕಾಡಿದ್ದ ಸಮಸ್ಯೆಯೊಂದಕ್ಕೆ ತಾತ್ಕಾಲಿಕ ಪರಿಹಾರ ಪಡೆಯಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ನಿಮ್ಮ ಕೆಲಸ ಕಾರ್ಯಗಳಲ್ಲಿ ಶುಭವಿದೆ. ಸ್ನೇಹಿತರಿಂದ ಹಣಕಾಸಿನ ನೆರವು ಪಡೆಯಬಹುದು. ದಾಂಪತ್ಯದಲ್ಲಿ ಸುಖವಿದೆ. ಬ್ಯಾಂಕಿಂಗ್ ವಿಚಾರದಲ್ಲಿ ಯಶಸ್ಸು ಪಡೆಯಬಹುದು.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಈ ದಿನ ಅಚ್ಚರಿಯ ಫಲಿತಾಂಶಗಳ ತರುವ ದಿನ. ಪ್ರಯಾಣ ಮಾಡಬೇಕಾಗುತ್ತದೆ. ಗೃಹಿಣಿಯರು ತೊಡಗುವ ಕೆಲಸಗಳಲ್ಲಿ ಲಾಭವಿದೆ. ನೀವು ಅಂಗಡಿ ನಡೆಸುತ್ತಿದ್ದರೆ ದೊಡ್ಡ ಮಟ್ಟದ ನಷ್ಟ ಎದುರಾಗಬಹುದು. ಕೃಷಿ ಸಂಬಂಧಿತ ವಿಚಾರಗಳಲ್ಲಿ ಶುಭವಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಲ್ಲಿ ಇಂದು ಸವಾಲುಗಳಿವೆ. ನಿಮ್ಮ ಅನೇಕ ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಬಹುದು. ಹಣಕಾಸು ವಿಚಾರವಾಗಿ ಮನಸ್ತಾಪಗಳು ಮೂಡಬಹುದು. ಪ್ರಯಾಣಗಳಲ್ಲಿ ನೀವು ಬಯಸಿದ ಫಲಿತಾಂಶ ಬರದೆ ಇರಬಹುದು.
ಧನು ರಾಶಿ
ಧನು ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ನಿಮ್ಮ ಬಯಕೆಯಂತೆ ವಸ್ತುವೊಂದನ್ನು ಖರೀದಿಸಬಹುದು. ದೊಡ್ಡ ವ್ಯವಹಾರಗಳಲ್ಲಿ ಭಾಗಿಯಾಗುವ ಮುನ್ನ ಎಚ್ಚರವಿಡಿ. ನಿಮಗೆ ಬರಬೇಕಿದ್ದ ಹಣಕ್ಕೆ ಮತ್ತೊಂದು ವಿಚಾರ ಅಡ್ಡಿಯಾಗಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಇಂದು ಮಿಶ್ರಫಲವಿದೆ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆ ಈಡೇರದೆ ಇರಬಹುದು. ಪ್ರಯಾಣಗಳ ಮಾಡುವಾಗ ಎಚ್ಚರಿಕೆ ಅಗತ್ಯ. ಮಕ್ಕಳಲ್ಲಿ ಉದ್ಯೋಗ ಸಂಬಂಧಿ ಸಮಸ್ಯೆಗಳು ಬರಬಹುದು. ದಿನದ ಅಂತ್ಯದಲ್ಲಿ ಹೊಸ ರೀತಿಯ ಒತ್ತಡ ಎದುರಾಗಬಹುದು.
ಕುಂಭ ರಾಶಿ
ನಿಮಗಿಂದು ಉತ್ತಮ ಅನುಕೂಲಕರ ದಿನ. ಕುಟುಂಬಸ್ಥರಲ್ಲಿ ಕಾಡುತ್ತಿದ್ದ ಹಣಕಾಸು ಸಮಸ್ಯೆಯೊಂದು ನಿವಾರಣೆಯಾಗಲಿದೆ. ಪ್ರಯಾಣಗಳ ಮಾಡುವಿರಿ. ವೈಯಕ್ತಿಕ ಕಾರಣಕ್ಕಾಗಿ ನೀವು ಖರ್ಚು ಮಾಡಬೇಕಾಗಿ ಬರಬಹುದು.
ಮೀನ ರಾಶಿ
ಮೀನ ರಾಶಿಯ ಮಂದಿಗೆ ಇಂದು ಮಿಶ್ರಫಲದ ದಿನ, ನಿಮ್ಮಿಂದಾಗಿ ಕೆಲವರು ಬೇಸರಕ್ಕೆ ಒಳಗಾಗಬಹುದು. ನಿಮ್ಮ ಉದ್ಯೋಗ ಸಂಬಂಧಿ ಒತ್ತಡ ಹೆಚ್ಚಾಗಬಹುದು. ಮನೆಯ ವಿಚಾರಕ್ಕೆ ಖರ್ಚುಗಳ ಬರಬಹುದು. ಸರ್ಕಾರಿ ದಾಖಲೆ ವಿಚಾರದಲ್ಲಿ ಓಡಾಟಗಳಿಗೆ ನೀವು ಒಳಗಾಗಬಹುದು.



Click it and Unblock the Notifications