Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ದಿನ ಭವಿಷ್ಯ: ಅಕ್ಟೋಬರ್ 1, ಮಾಸದ ಮೊದಲ ದಿನ ದ್ವಾದಶ ರಾಶಿಗಳ ಭವಿಷ್ಯ
ವೈದಿಕ ಜ್ಯೋತಿಷ್ಯದ ಪ್ರಕಾರ ಅಕ್ಟೋಬರ್ 1, ನಿಮ್ಮ ರಾಶಿಗೆ ಹೇಗಿರಲಿದೆ?
ಮೇಷ ರಾಶಿ
ಈ ದಿನ ನಿಮ್ಮ ಕೆಲಸವನ್ನು ಯೋಜನೆಯ ಪ್‌ರಕಾರ ಪೂರ್ಣಗೊಳಿಸಲು ಪ್ರಯತ್ನಿಸಿದರೆ ಒಳ್ಳೆಯದು. ಈ ದಿನ ಆರ್ಥಿಕ ಸಮಸ್ಯೆ ಬಗೆಹರಿಯಲಿದೆ, ಹೊಸ ಕೆಲಸದ ನಿರ್ಧಾರವನ್ನು ಆತುರದಿಂದ ತೆಗೆದುಕೊಳ್ಳಬೇಡಿ. ವ್ಯಾಪಾರಿಗಳಿಗೆ ಈ ದಿನ ಅನುಕೂಲಕರವಾಗಿರಲಿದೆ, ವೈವಾಹಿಕ ಹಾಗೂ ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯ ಸಮಸ್ಯೆಯಿದ್ದರೆ ಹೆಚ್ಚು ಜಾಗ್ರತೆವಹಿಸಿ.

ವೃಷಭ ರಾಶಿ
ವೃತ್ತಿ ಬದುಕಿನ ದೃಷ್ಟಿಯಿಂದ ನೋಡುವುದಾದರೆ ಈ ದಿನ ನಿಮಗೆ ಉತ್ತಮವಾಗಿರಲಿದೆ. ಆರ್ಥಿಕವಾಗಿ ಈ ದಿನ ಉತ್ತಮವಾಗಿರಲಿದೆ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಈ ದಿನ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಸಲಹೆ ನೀಡಲಾಗುವುದು. ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆವಿರಬಹುದು.
ಮಿಥುನ ರಾಶಿ
ಈ ದಿನ ಕೆಲ ಸಂದರ್ಭದಲ್ಲಿ ಸಮತೋಲಿತ ರೀತಿಯಲ್ಲಿ ವರ್ತಿಸಬೇಕು. ಮನಸ್ಸಿನಲ್ಲಿ ಅನೇಕ ರೀತಿಯ ಆಲೋಚನೆಗಳು ಬರಬಹುದು, ನಕರಾತ್ಮಕ ಭಾವನೆಗಳನ್ನು ನಿಯಂತ್ರಿಸಬೇಕು. ಹಣದ ಬಗ್ಗೆ ಹೆಚ್ಚು ಚಿಂತಿಸಬೇಡಿ. ಸೂಕ್ತ ಸಮಯ ಬಂದಾಗ ನಿಮ್ಮ ಸಮಸ್ಯೆ ಖಂಡಿತಾ ಪರಿಹಾರವಾಗುತ್ತದೆ. ವ್ಯಾಪಾರಿಗಳು ಈ ದಿನ ಜಾಗ್ರತೆವಹಿಸಿ. ಆರೋಗ್ಯದ ಬಗ್ಗೆ ಹೇಳುವುದಾದರೆ ಆಯಾಸ ಹೆಚ್ಚಿರಬಹುದು.
ಕರ್ಕ ರಾಶಿ
ಈ ದಿನ ಕೆಲಸದ ಜಾಗದಲ್ಲಿ ಸ್ವಲ್ಪ ಕಿರಿಕಿರಿಯನ್ನು ಅನುಭವಿಸಬಹುದ. ಈ ದಿನ ಸಾಲದ ವಹಿವಾಟು ಮಾಡಲು ಹೋಗಬೇಡಿ, ಅದರಲ್ಲಿಯೂ ವ್ಯಾಪಾರಿಗಳು ಈ ಬಗ್ಗೆ ಹೆಚ್ಚು ಗಮನಹರಿಸಬೇಕು. ನಿಮ್ಮ ಹಾಗೂ ಸಂಗಾತಿ ನಡುವೆ ಕೆಲ ಭಿನ್ನಾಭಿಪ್ರಾಯಗಳಿರಬಹುದು, ಇನ್ನು ಆರೋಗ್ಯದ ಬಗ್ಗೆ ನೋಡುವುದಾದರೆ ಗಂಟಲಿಗೆ ಸಂಬಂಧಿಸಿದ ಸಮಸ್ಯೆವಿರಬಹುದು.
ಸಿಂಹ ರಾಶಿ
ಕುಟುಂಬ ಜೀವನದ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ. ಕೆಲಸದಲ್ಲಿ ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲ ಸಿಗಲಿದೆ. ನೀವು ಕೆಲಸದ ಜಾಗದಲ್ಲಿ ಮೇಲಾದಿಕಾರಿಯ ಜೊತೆಗೆ ವಾದ ಮಾಡಲು ಹೋಗಬೇಡಿ. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ.
ಕನ್ಯಾ ರಾಶಿ
ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೀವು ಶ್ರಮಿಸುತ್ತಿದ್ದರೆ ಈ ದಿನ ಅದಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿ ಪಡೆಯುತ್ತೀರಿ. ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ, ಉದ್ಯಮಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಆರೋಗ್ಯ ಸಮಸ್ಯೆವಿದ್ದರೆ ನಿರ್ಲಕ್ಷ್ಯ ಬೇಡ.
ತುಲಾ ರಾಶಿ
ಈ ದಿನ ನಮಗೆ ಅನುಕೂಲಕರವಾಗಿರಲಿದೆ. ಕೆಲಸದಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ಆರ್ಥಿಕವಾಗಿ ಈ ದಿನ ನಿಮಗೆ ಉತ್ತಮವಾಗಿದೆ. ವ್ಯಾಪಾರಿಗಳಿಗೆ ಈ ಅವಧಿ ಧನ ಲಾಭವಾಗಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಗಟ್ಟಿಯಾಗುತ್ತದೆ. ಹೆಚ್ಚು ಆಯಾಸವಾಗಿದ್ದರೆ ವಿಶ್ರಾಂತಿ ಕಡೆಗೆ ಗಮನಹರಿಸಿ.
ವೃಶ್ಚಿಕ ರಾಶಿ
ಕೆಲಸದ ಜಾಗದಲ್ಲಿ ಕೆಲ ಪ್ರತಿಕೂಲಕ ಪರಿಸ್ಥಿತಿ ಎದುರಿಸಬಹುದು. ವ್ಯಾಪಾರಿಗಳು ಈ ದಿನ ಯಾವುದೇ ಆತುರದ ನಿರ್ಧಾರದಿಂದ ದೂರವಿರಬೇಕು. ಮನೆಯ ವಾತಾವರಣವು ಚೆನ್ನಾಗಿರಲಿದೆ. ಸಂಗಾತಿಯೊಂದಿಗಿನ ಬಾಂಧವ್ಯ ಚೆನ್ನಾಗಿರಲಿದೆ. ಆರೋಗ್ಯಕ್ಕಾಗಿ ವ್ಯಾಯಾಮದ ಕಡೆಗೆ ಗಮನಹರಿಸಿ.
ಧನು ರಾಶಿ
ವ್ಯಾಪಾರಿಗಳು ಈ ದಿನ ಪ್ರಯಾಣ ಮಾಡಬಹುದು, ಹಣದ ವಿಷಯದಲ್ಲಿ ಜಾಗ್ರತೆವಹಿಸಿ. ಕೋಪ ಮತ್ತು ಆತುರದಿಂದ ಏನನ್ನೂ ಮಾಡಬೇಡಿ, ನೀವು ಕಚೇರಿಯಲ್ಲಿ ಕೆಲವು ಪ್ರಮುಖ ಜವಾಬ್ದಾರಿಯನ್ನು ಪಡೆಯಬಹುದು. ಸಂಬಂಧಗಳಲ್ಲಿ ಸರಿಯಾದ ಸಾಮರಸ್ಯವನ್ನು ಕಾಪಾಡಿಕೊಳ್ಳಲು, ನಿಮ್ಮ ನಡವಳಿಕೆಯ ಕಡೆಗೆ ಗಮನಹರಿಸಬೇಕು. ಆರೋಗ್ಯದ ಕಡೆಗೆ ಗಮನಹರಿಸಿ.
ಮಕರ ರಾಶಿ
ವ್ಯಾಪಾರ ಮಾಡುವವರಿಗೆ ಈ ದಿನ ತುಂಬಾ ಲಾಭದಾಯಕವಾಗಿರುತ್ತದೆ. ಉದ್ಯೋಗಿಗಳ ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ದುಬಾರಿಯಾಗಬಹುದು.
ಕುಂಭ ರಾಶಿ
ಈ ದಿನ ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ, ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ನಿಮ್ಮ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಿ. ಸಂಬಂಧದಲ್ಲಿ ಮೂರನೇಯ ವ್ಯಕ್ತಿ ಹಸ್ತಕ್ಷೇಪ ಮಾಡಲು ಬಿಡಿಬೇಡಿ.
ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿರಬಹುದು.
ಮೀನ ರಾಶಿ
ಹೆಚ್ಚು ಚಿಂತೆ ಮಾಡುವುದನ್ನು ಬಿಇಡ, ಕೆಲಸದಲ್ಲಿನ ಸಮಸ್ಯೆ ಬಗೆಹರಿಯಲಿದೆ, ಪ್ರತಿಕೂಲ ಸಂದರ್ಭಗಳಲ್ಲಿ ನಿಮ್ಮ ಪ್ರೀತಿಪಾತ್ರರ ಬೆಂಬಲವನ್ನು ನೀವು ಪಡೆಯುತ್ತೀರಿ.
ಈ ದಿನ ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಅತ್ಯಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಕೋಪ, ಒತತ್ತಡದಿಂದ ದೂರವಿರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










