Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
09 October Horoscope: ಖರ್ಚು ಹೆಚ್ಚಾಗುತ್ತೆ, ವ್ಯವಹಾರದ ಒತ್ತಡ ಬರಬಹುದು!
ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 09 (09 October Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಈ ದಿನ ಉತ್ತಮವಾಗಿರಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ಶುಭಕರ ದಿನವಾಗುತ್ತಿದೆ. ನಿಮ್ಮ ಹಣಕಾಸು ಪರಿಸ್ಥಿತಿಯಲ್ಲಿ ಸಂತೋಷಕರ ಸುದ್ದಿ ಇದೆ. ಮನೆಗೆ ಅತಿಥಿ ಬರಬಹುದು. ವ್ಯಾಪಾರದ ಪರಿಸ್ಥಿತಿ ಉತ್ತಮವಾಗಿರುತ್ತದೆ.
ವೃಷಭ ರಾಶಿ
ಕುಟುಂಬದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಆತ್ಮವಿಶ್ವಾಸದ ಕೊರತೆ ಇರುತ್ತದೆ. ಮನಸ್ಸು ಗೊಂದಲದಲ್ಲಿ ಉಳಿಯುತ್ತದೆ. ಅನಗತ್ಯ ಕೋಪವನ್ನು ತಪ್ಪಿಸಿ. ಸಂಭಾಷಣೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ನಿಮ್ಮ ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಇಂದು ಬಹಳ ಅನುಕೂಲಕರ ದಿನ. ಹಲವು ಸಮಸ್ಯೆಗಳಿಗೆ ನೀವು ಪರಿಹಾರ ಪಡೆಯಬಹುದು. ಆಪ್ತರಿಂದ ಹಣಕಾಸಿನ ನೆರವು ಕೋರಿದ್ದರೆ ಪಡೆಯುವ ಸಾಧ್ಯತೆ ಇದೆ. ಇಂದು ವ್ಯಾಪಾರಸ್ಥರಿಗೆ ಲಾಭದಾಯಕ ದಿನವಾಗಿದೆ. ಆರ್ಥಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವಿರಿ.
ಕರ್ಕ ರಾಶಿ
ಕರ್ಕ ರಾಶಿಯ ಮಂದಿಗೆ ಮಿಶ್ರಫಲದ ದಿನ. ಕೆಲಸದ ಸ್ಥಳದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನೀವು ಸ್ನೇಹಿತರಿಂದ ಬೆಂಬಲವನ್ನು ಪಡೆಯಬಹುದು. ಆರ್ಥಿಕ ಲಾಭಕ್ಕೂ ಅವಕಾಶವಿರುತ್ತದೆ. ಹಿರಿಯರಲ್ಲಿ ಅನಾರೋಗ್ಯ ಕಾಡಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಅನುಕೂಲಕರ ದಿನ. ಹಣಕಾಸು ಒತ್ತಡ ಇದ್ದರೂ ಅದಕ್ಕೆ ಪರಿಹಾರ ಪಡೆಯುವ ದಿನವಿದು. ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಒಡನಾಟವನ್ನು ನೀವು ಪಡೆಯುತ್ತೀರಿ. ದೊಡ್ಡ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ಒತ್ತಡಗಳು ನಿವಾರಣೆಗಾಲಿವೆ.
ಕನ್ಯಾ ರಾಶಿ
ನಿಮ್ಮ ಕೆಲಸದಲ್ಲಿ ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಪ್ರಗತಿಯ ಅವಕಾಶಗಳೂ ಇರಬಹುದು. ಉದ್ಯೋಗ ಹುಡುಕುತ್ತಿರುವವರಿಗೆ ಇದು ಉತ್ತಮ ಸಮಯ. ವ್ಯಪಾರಿಗಳು ದಿನದ ಅಂತ್ಯದಲ್ಲಿ ಲಾಭ ಮಾಡುವ ದಿನವಾಗಿರಲಿದೆ.
ತುಲಾ ರಾಶಿ
ಇಂದು ತುಲಾ ರಾಶಿಯವರು ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಉದ್ಯೋಗ ಸಂದರ್ಶನಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಕಚೇರಿಯಲ್ಲಿನ ಉನ್ನತ ಅಧಿಕಾರಿಗಳು ನಿಮ್ಮ ಕೆಲಸವನ್ನು ಪ್ರಶಂಸಿಸಬಹುದು. ಪ್ರಯಾಣಗಳ ಮಾಡಬೇಕಾಗುತ್ತದೆ. ಆಪ್ತರಿಂದ ಹಣ ಪಡೆಯಬಹುದು.
ವೃಶ್ಚಿಕ ರಾಶಿ
ನಿಮಗಿಂದು ಪ್ರಯಾಣ ಮಾಡುವ ದಿನ, ನಿಮ್ಮ ಕೆಲಸ ಅಥವಾ ಬೇರೆಯವರ ಕೆಲಸದ ಕಾರಣದಿಂದಾಗಿ ನೀವು ಪ್ರಯಾಣ ಮಾಡಬಹುದು. ಆರ್ಥಿಕ ಲಾಭದ ಲಕ್ಷಣಗಳಿವೆ. ಕೌಟುಂಬಿಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ವಾಹನ ಸಂಬಂಧಿ ಖರ್ಚು ಇದೆ.
ಧನು ರಾಶಿ
ಧನು ರಾಶಿಯ ಮಂದಿ ಯಾವುದೇ ಕೆಲಸದಲ್ಲಿ ಆತುರಪಡಬೇಡಿ, ಇದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸಂಭಾಷಣೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ದೈನಂದಿನ ಕೆಲಸದಲ್ಲಿ ಆಪ್ತರೊಬ್ಬರ ಸಹಕಾರ ಇರಲಿದೆ.
ಮಕರ ರಾಶಿ
ಮಕರ ರಾಶಿಯ ಜನರಿಗೆ ಇಂದು ಉತ್ತಮ ದಿನ. ನೀವು ಕೆಲಸದಲ್ಲಿ ಕೆಲವು ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯಬಹುದು. ಕುಟುಂಬದ ಸದಸ್ಯರಿಂದ ನೀವು ಒಳ್ಳೆಯ ಸುದ್ದಿ ಪಡೆಯಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾದ ಒತ್ತಡ ಬರಬಹುದು.
ಕುಂಭ ರಾಶಿ
ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಿರಿ. ಕುಟುಂಬದ ಸದಸ್ಯರಿಂದ ನೀವು ಹಣವನ್ನು ಪಡೆಯಬಹುದು. ಪ್ರಯಾಣಗಳ ಮಾಡುವಿರಿ. ಪಿತ್ರಾರ್ಜಿತ ಆಸ್ತಿ ಕುರಿತಾದ ವಿಚಾರದಲ್ಲಿ ಶುಭವಿದೆ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಈ ದಿನ ಶುಭವಾಗುತ್ತಿದೆ. ನಿಮ್ಮ ಹಲವು ವ್ಯವಹಾರಗಳು ನೀವು ಅಂದುಕೊಂಡಂತೆ ಮುಗಿಸಬಹುದು. ಹಣಕಾಸು ವಿಚಾರವಾಗಿ ಬುದ್ದಿವಂತಿಕೆಯಿಂದ ಇರುವುದು ಉತ್ತಮ. ಅಪರಿಚಿತರೊಂದಿಗೆ ಕಲಹ ಮೂಡಬಹುದು ಎಚ್ಚರ ವಹಿಸಿ.



Click it and Unblock the Notifications











