Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
06 October Horoscope: ಸವಾಲು ಹೆಚ್ಚಾಗುವ ದಿನ..ಹಣ ಕೈ ತಪ್ಪಬಹುದು!
ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 06 (06 October Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಶ್ರಮದಾಯಕ ದಿನ. ನಿಮ್ಮ ಹಲವು ಕೆಲಸಗಳಲ್ಲಿ ದಿನದ ಆರಂಭವು ಒತ್ತಡ ತರಲಿದೆ. ಆದ್ರೆ ಹಲವರಿಗೆ ಕೆಲಸದ ಕಾರಣದಿಂದ ಪ್ರಯಾಣ ಮಾಡುವಿರಿ. ನಿಮ್ಮ ಹಣಕಾಸು ವಿಚಾರದಲ್ಲಿ ಒತ್ತಡ ಏರ್ಪಡಲಿದೆ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಇಂದು ಸವಾಲುಗಳಿವೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕ ಎದುರಾಗಬಹುದು. ಪ್ರಯಾಣಗಳಲ್ಲಿನ ಸವಾಲುಗಳು ದೊಡ್ಡ ಮಟ್ಟದ ಸಮಸ್ಯೆಗಳ ಎದುರಿಸುವಂತೆ ಮಾಡಬಹುದು. ಖರ್ಚು ಹೆಚ್ಚಾಗುವ ದಿನವೂ ಹೌದು.

ಮಿಥುನ ರಾಶಿ
ಮಿಥುನ ರಾಶಿಯ ಜನರಲ್ಲಿ ಇಂದು ಪ್ರಯಾಣ ಮಾಡುವ ದಿನ. ಕೆಲಸದ ಕಾರಣಕ್ಕೆ ಅಥವಾ ವೈಯಕ್ತಿಕ ಕಾರಣದಿಂದ ಪ್ರಯಾಣ ಮಾಡುವಿರಿ. ಉದರ ಸಂಬಂಧಿ ಸಮಸ್ಯೆ ಕಾಡಬಹುದು. ಗೃಹಿಣಿಯರಲ್ಲಿ ಖರ್ಚು ಹೆಚ್ಚಾಗುವ ದಿನ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಬಹಳ ಸಮಯದಿಂದ ಬಯಸಿದಂತಹ ವಸ್ತುವೊಂದನ್ನು ಖರೀದಿಸಬಹುದು. ಹಾಗೆ ವಾಹನ ಸಂಬಂಧಿ ಖರ್ಚುಗಳು ಕಡಿಮೆಯಾಗಲಿದೆ. ಹೊಸ ಆದಾಯ ಮೂಲವನ್ನು ನೀವು ಹುಡುಕಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಅನುಕೂಲಕರ ದಿನ, ನಿಮ್ಮ ಹಣಕಾಸು ಒತ್ತಡ ಕಡಿಮೆ ಮಾಡುವ ಕೆಲಸ ಮಾಡುವಿರಿ. ಆಪ್ತರ ಭೇಟಿಯಾಗುವುದು ನೆಮ್ಮದಿ ತರಲಿದೆ. ಯಾರೊಂದಿಗೂ ಅನಗತ್ಯ ಚರ್ಚೆಯಲ್ಲಿ ತೊಡಗದೆ ಇರುವುದು ಉತ್ತಮ. ಕೆಲಸದ ಸ್ಥಳದಲ್ಲಿನ ಒತ್ತಡ ಹೆಚ್ಚಾಗಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಲ್ಲಿ ಇಂದು ಸವಾಲಿನ ದಿನ. ನಿಮ್ಮ ಹಲವು ಕೆಲಸಗಳಲ್ಲಿ ದೊಡ್ಡ ಲಾಭವಿದೆ. ಆದ್ರೆ ನಿಮ್ಮ ಹಣಕಾಸು ಸ್ಥಿತಿ ಸುಧಾರಣೆಗೆ ಇನ್ನು ಸಮಯ ಬೇಕಾಗಲಿದೆ. ವ್ಯಾಪಾರಿಗಳಿಗೆ ದಿನದ ಆರಂಭ ಉತ್ತಮವಾಗಿರಲಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ಸವಾಲುಗಳ ಎದುರಿಸುವ ದಿನ. ವ್ಯಾಪಾರಿಗಳು ನಷ್ಟ ಅನುಭವಿಸಬಹುದು. ಯಾರಿಂದಾದರು ಹಣ ಪಡೆಯುವ ಉದ್ದೇಶವಿದ್ದರೆ ಅದರಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗದೆ ಇರಬಹುದು. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಮಿಶ್ರಫಲ. ಗೃಹಿಣಿಯರ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ನೋಡಬಹುದು. ದಾಂಪತ್ಯ ಸಂಬಂಧಗಳಲ್ಲಿ ಮನಸ್ತಾಪಗಳು ಎದುರಾಗಬಹುದು. ಮನೆಯ ವಿಚಾರವಾಗಿ ಹಣ ಖರ್ಚು ಮಾಡಬೇಕಾಗಿ ಬರಬಹುದು. ರಾತ್ರಿಯ ಸಮಯದಲ್ಲಿನ ಪ್ರಯಾಣ ಮುಂದೂಡುವುದು ಉತ್ತಮ.
ಧನು ರಾಶಿ
ಧನು ರಾಶಿಯವರಲ್ಲಿ ದೊಡ್ಡ ಮಟ್ಟದ ವ್ಯವಹಾರಗಳು ನಡೆಯುವ ದಿನ. ಸ್ವಂತ ಉದ್ಯೋಗ ಮಾಡುವವರಲ್ಲಿ ಎಚ್ಚರಿಕೆ ಅಗತ್ಯ. ದೊಡ್ಡ ಒಪ್ಪಂದಗಳು, ಹಣಕಾಸು ವ್ಯವಹಾರ ಮಾಡುವಾಗ ಎಚ್ಚರಿಕೆ ಇಡಬೇಕಾಗುತ್ತದೆ. ಹೊಸ ವಸ್ತು ಖರೀದಿಯಲ್ಲಿ ಬುದ್ದಿವಂತಿಕೆ ಪ್ರದರ್ಶಿಸಿ.
ಮಕರ ರಾಶಿ
ಮಕರ ರಾಶಿಯ ಜನರಿಗೆ ಮಿಶ್ರಫಲದ ದಿನ. ಇಡೀ ದಿನ ನೀವು ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗುತ್ತೀರಿ. ಎಲ್ಲರೊಂದಿಗೆ ತಾಳ್ಮೆಯಿಂದ ವರ್ತಿಸುವುದು ಅಗತ್ಯ. ಮನೆ ನವೀಕರಣ ಸಂಬಂಧವಾಗಿ ಕೆಲ ವಸ್ತುಗಳ ಖರೀದಿ ಮಾಡುವಿರಿ.
ಕುಂಭ ರಾಶಿ
ಕುಂಭ ರಾಶಿಯ ಜನರಲ್ಲಿ ಇಂದು ಸವಾಲುಗಳು ಎದುರಾಗುವ ದಿನ. ಪ್ರೀತಿ ಹಾಗೂ ದಾಂಪತ್ಯ ವಿಚಾರವಾಗಿ ಗಲಾಟೆ, ಕಿರಿಕಿರಿ ನೋಡಬಹುದು. ಯಾರಿಂದಾದರು ಹಣ ಪಡೆಯುವುದು ಬಾಕಿ ಉಳಿದಿದ್ದರೆ ಪ್ರಯತ್ನಗಳ ಬಿಡಬೇಡಿ. ದೂರ ಪ್ರಯಾಣ ಮಾಡಬಹುದು.
ಮೀನ ರಾಶಿ
ಮೀನ ರಾಶಿಯ ಜನರಲ್ಲಿ ಇಂದು ಉತ್ತಮ ಫಲಿತಾಂಶ ತರುವ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಯಶಸ್ಸು ಪಡೆಯಬಹುದು. ಯಾರಿಂದಾದರು ಹಣ ಪಡೆಯುವ ನಿಮ್ಮ ಉದ್ದೇಶ ಈಡೇರಬಹುದು. ಕೆಲಸದ ಕಾರಣಕ್ಕೆ ಪ್ರಯಾಣ ಮಾಡಬಹುದು. ಆಪ್ತರೊಬ್ಬರನ್ನು ಭೇಟಿಯಾಗಬಹುದು.



Click it and Unblock the Notifications











