Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
04 October Horoscope: ಅಕ್ಟೋಬರ್ 04ರ ಶನಿವಾರ ಯಾರ ಬದುಕಲ್ಲಿದೆ ಅಚ್ಚರಿ!
ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 04 (04 October Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಉತ್ತಮ ಫಲಿತಾಂಶದ ದಿನ. ನಿಮ್ಮ ದೊಡ್ಡ ವಿಚಾರಗಳಲ್ಲಿ ಇಂದು ಶುಭವಿದೆ. ನಿಮ್ಮಿಂದಾಗಿ ಬೇರೆಯವರಿಗೆ ಆರ್ಥಿಕ ಸಹಾಯ ಮಾಡಬಹುದು. ನಿಮ್ಮ ಸಾಲದ ಪ್ರಮಾಣ ಕಡಿಮೆಯಾಗಲಿದೆ.
ವೃಷಭ ರಾಶಿ
ವೃಷಭ ರಾಶಿಯ ಜನರಲ್ಲಿ ಇಂದು ದೊಡ್ಡ ಮಟ್ಟದ ಸವಾಲುಗಳು ಎದುರಾಗಬಹುದು. ಆರೋಗ್ಯದ ವಿಚಾರದಲ್ಲಿನ ನಿರ್ಲಕ್ಷ್ಯವು ನಿಮಗೆ ದೊಡ್ಡ ಸವಾಲು ತರಬಹುದು. ಪ್ರಯಾಣದಲ್ಲಿ ಸುಖವಿದೆ. ಆರ್ಥಿಕ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ಮನೆಯಲ್ಲಿ ಹಣಕಾಸಿನ ವಿಚಾರದಲ್ಲಿ ಚರ್ಚೆಗಳು ನಡೆಯಲಿವೆ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಮಿಶ್ರ ಫಲ. ನಿಮ್ಮ ಪ್ರಯಾಣಗಳು ನೀವು ಅಂದುಕೊಂಡ ಫಲಿತಾಂಶ ನೀಡುವುದಿಲ್ಲ. ವಾಹನ ಸವಾರರು ಎಚ್ಚರಿಕೆ ವಹಿಸಬೇಕಾಗುತ್ತದೆ. ಪ್ರಯಾಣಗಳಲ್ಲಿ ಖರ್ಚುಗಳಿವೆ. ಯಾರಿಗೂ ನೋವುಂಟಾಗುವಂತೆ ಮಾತನಾಡಬೇಡಿ. ಆರೋಗ್ಯ ಹದಗೆಡಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಜನರಲ್ಲಿ ಇಂದು ಸಮಸ್ಯೆಗಳ ದಿನ. ಯಾರಿಗಾದರು ಹಣ ನೀಡಿದ್ದರೆ ಇಂದು ಮರಳಿ ಪಡೆಯಬಹುದು. ನಿಮ್ಮ ಹೂಡಿಕೆ ಅಥವಾ ಉಳಿತಾಯ ಹೆಚ್ಚು ಮಾಡಿಕೊಳ್ಳುವಿರಿ. ದೊಡ್ಡ ವಿಚಾರಗಳಲ್ಲಿ ಹಿರಿಯರ ಸಲಹೆ ಪಡೆಯುವುದು ಉತ್ತಮ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಇಂದು ಪ್ರಯಾಣದಲ್ಲಿ ತೊಡಗುವ ದಿನ. ಹಾಗೆ ದಿನದ ಅಂತ್ಯದಲ್ಲಿ ಖರ್ಚು ಹೆಚ್ಚಾಗಲಿದೆ. ಗೃಹಿಣಿಯರ ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು. ಖರ್ಚುಗಳ ಕಡೆಗೆ ಗಮನವಿಡಿ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಲ್ಲಿ ಇಂದು ಶುಭ ಸುದ್ದಿ ಕೇಳಿಬರಲಿದೆ. ವಿವಾಹಿತರಲ್ಲಿ ದೊಡ್ಡ ಲಾಭವಿದೆ. ವ್ಯಾಪಾರಿಗಳು ಪ್ರಯಾಣ ಮಾಡಬೇಕಾಗಬಹುದು. ಸ್ವಂತ ಉದ್ಯೋಗ ಮಾಡುವವರಿಗೆ ಹಣಕಾಸು ವಿಚಾರದಲ್ಲಿ ಅಡೆತಡೆ ಇದೆ. ನಿಮ್ಮ ವೈಯಕ್ತಿಕ ವಿಚಾರವಾಗಿ ಒತ್ತಡದ ದಿನ ಎನ್ನಬಹುದು.
ತುಲಾ ರಾಶಿ
ತುಲಾ ರಾಶಿಯ ಜನರಲ್ಲಿ ಇಂದು ಸಮಸ್ಯೆಗಳಿವೆ. ನಿಮ್ಮ ವ್ಯವಹಾರದ ವಿಚಾರದಲ್ಲಿ ದೊಡ್ಡ ನಷ್ಟ ಎದುರಿಸಬಹುದು. ವೈವಾಹಿಕ ಜೀವನದಲ್ಲಿಯೂ ನಿಮಗೆ ಉತ್ತಮ ದಿನವಲ್ಲ. ಕುಟುಂಬಸ್ಥಿರಿಂದ ಹಣಕಾಸು ವಿಚಾರದಲ್ಲಿ ಒತ್ತಡ ಇರಲಿದೆ. ಯಾರ ಬಳಿಯೂ ಅನಗತ್ಯ ಚರ್ಚೆಯಲ್ಲಿ ತೊಡಗಬೇಡಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಿಗೆ ಉತ್ತಮ ದಿನ. ನಿಮ್ಮ ಬಹಳ ದಿನದ ಆಸೆಯೊಂದನ್ನು ಈಡೇರಿಸಿಕೊಳ್ಳಲಿದ್ದೀರಿ. ನಿಮ್ಮ ಹಲವು ಕೆಲಸಗಳಲ್ಲಿ ಹಣಕಾಸು ಒತ್ತಡ ಇದೆ. ದೇವಾಲಯ ಭೇಟಿ ಸಾಧ್ಯತೆ ಇದೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ.
ಧನು ರಾಶಿ
ಧನು ರಾಶಿಯ ಜನರಲ್ಲಿ ಅನುಕೂಲಕರ ದಿನ. ಗೃಹಿಣಿಯರಿಗೆ ಈ ದಿನ ಸವಾಲುಗಳಿವೆ, ನಿಮ್ಮ ಹಣಕಾಸು ವಿಚಾರದಲ್ಲಿ ಎಚ್ಚರದಿಂದಿರಿ. ಪ್ರಯಾಣಗಳ ಮಾಡುವಿರಿ. ಆಪ್ತರೊಬ್ಬರು ನಿಮ್ಮ ಕೆಲಸದಲ್ಲಿ ಸಹಾಯ ಮಾಡಲಿದ್ದಾರೆ. ದಾಂಪತ್ಯ ವಿಚಾರದಲ್ಲಿ ಸಣ್ಣ ಮುನಿಸು ಇರಬಹುದು.
ಮಕರ ರಾಶಿ
ಮಕರ ರಾಶಿಯ ಜನರಿಗೆ ಇಂದು ಸವಾಲುಗಳಿವೆ. ನಿಮ್ಮ ದೊಡ್ಡ ಕೆಲಸಗಳಲ್ಲಿ ಹಿನ್ನಡೆ ಅನುಭವಿಸುವಿರಿ. ನೀವು ಸ್ವಂತ ಉದ್ಯೋಗ ಮಾಡುತ್ತಿದ್ದರೆ ಇಂದು ಸವಾಲುಗಳಿವೆ. ವಾಹನ ವಿಚಾರದಲ್ಲಿ ಎಚ್ಚರಿಕೆ ಇಡಿ.
ಕುಂಭ ರಾಶಿ
ಕುಂಭ ರಾಶಿಯವರಲ್ಲಿ ಇಂದು ಪ್ರಯಾಣ ಮಾಡುವ ದಿನ. ಯಾರೊಂದಿಗಾದರು ಪ್ರಯಾಣ ಮಾಡುವಾಗ ಖರ್ಚುಗಳ ಮೇಲೆ ನಿಗಾ ಇಡಿ. ಗೃಹಿಣಿಯರು ಇಂದು ಖರ್ಚು ಮಾಡುತ್ತೀರಿ.
ಮೀನ ರಾಶಿ
ಮೀನ ರಾಶಿಯವರಿಗೆ ಶುಭ ದಿನ. ನಿಮ್ಮ ಪ್ರಯಾಣಗಳಲ್ಲಿ ಸುಖವಿದೆ. ಹಣಕಾಸು ವಿಚಾರದಲ್ಲಿ ಒತ್ತಡದ ದಿನ. ನಿಮ್ಮಿಂದ ಖರ್ಚು ಹೆಚ್ಚಾಗಬಹುದು. ತಂದೆ ತಾಯಿಯ ಆರೋಗ್ಯದಲ್ಲೂ ಏರುಪೇರು ಸಂಭವಿಸಬಹುದು.



Click it and Unblock the Notifications











