Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
03 October Horoscope: ಅಕ್ಟೋಬರ್ 03ರ ಶುಕ್ರವಾರವು ಯಾರಿಗೆ ಶುಭಕಾಲ
ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 03 (03 October Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಈ ದಿನವು ಸಮಸ್ಯೆಗಳ ತರಬಹುದು. ನಿಮ್ಮ ಅನೇಕ ಕೆಲಗಳಲ್ಲಿ ಅಡ್ಡಿಗಳು ಬರಬಹುದು. ನಿಮ್ಮ ಪ್ರಯಾಣಗಳು ನೀವು ಬಯಸಿದಂತಹ ಲಾಭ ತರದೆ ಇರಬಹುದು. ಸ್ವಂತ ಉದ್ಯೋಗ ಮಾಡುವ ಮಂದಿಗೆ ಸಿಬ್ಬಂದಿಯಿಂದ ಸಮಸ್ಯೆಗಳು ಬರಬಹುದು.
ವೃಷಭ ರಾಶಿ
ನಿಮಗಿಂದು ಉತ್ತಮ ದಿನ. ನಿಮ್ಮ ಹಲವು ಕೆಲಸಗಳು ಯಶಸ್ವಿಯಾಗಿ ಮುಗಿಸಲಿದ್ದೀರಿ. ಯಾರೊಂದಿಗಾದರು ಹಣಕಾಸಿನ ವ್ಯವಹಾರ ಮಾಡುವ ಮುನ್ನ ಬಹಳ ಎಚ್ಚರಿಕೆ ವಹಿಸುವುದು ಸೂಕ್ತ. ಆಲಸ್ಯದಿಂದ ಈ ದಿನದ ಕೆಲಸಗಳನ್ನು ಮುಗಿಸದೆ ಹಾಗೆಯೇ ಬಿಡಬೇಡಿ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಮಿಶ್ರಫಲದ ದಿನ. ನಿಮ್ಮ ಸಮಯ ವ್ಯರ್ಥವಾಗುವಂಹ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ಆಪ್ತರಿಂದ ದೊಡ್ಡ ಮಟ್ಟದ ಶುಭಕಾರ್ಯ ಸಂಬಂಧವಾದ ಶುಭ ಸುದ್ದಿ ಬರಬಹುದು. ಆಹಾರ ಸಂಬಂಧಿ ಖರ್ಚು ಬರಬಹುದು. ಅನಗತ್ಯ ಖರ್ಚುಗಳಲ್ಲಿ ಹಣ ಹಾಕಬೇಡಿ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಇಂದು ಅನುಕೂಲಕರ ದಿನ. ನಿಮ್ಮ ಹಣಕಾಸಿನ ಪರಿಸ್ಥಿತಿಯು ಸುಧಾರಿಸಲಿದೆ. ಬಹಳ ದಿನಗಳಿಂದ ಬಗೆಹರಿಯದ ಸಮಸ್ಯೆಯೊಂದು ಪರಿಹಾರವಾಗಲಿದೆ. ಗೃಹಿಣಿಯರು ಹೆಚ್ಚು ಪ್ರಯಾಣ ಮಾಡಬೇಕಾಗಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಇಂದು ಶುಭಫಲಗಳ ತರುವ ದಿನ. ದೂರ ಪ್ರಯಾಣಗಳಲ್ಲಿ ಭಾಗಿಯಾಗಬಹುದು. ಗೃಹಿಣಿಯರು ಖರ್ಚು ಮಾಡುತ್ತೀರಿ. ದಿನದ ಅಂತ್ಯದಲ್ಲಿ ನಿಮಗೆ ಖರ್ಚುಗಳಿವೆ. ಅನೇಕರಿಗೆ ದೊಡ್ಡ ಮಟ್ಟದ ಶುಭ ಸಮಾಚಾರಗಳು ಬರಲಿವೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಇಂದು ಸವಾಲುಗಳು ಎದುರಿಸುವಿರಿ. ಯಾರೊಂದಿಗಾದರು ಹಣಕಾಸಿನ ವ್ಯವಹಾರ ಮಾಡುವ ಮುನ್ನ ಎಚ್ಚರ ವಹಿಸುವುದು ಸೂಕ್ತ. ಹೊಸದಾದ ವಸ್ತುವನ್ನು ಖರೀದಿಸಬಹುದು. ಬಟ್ಟೆ, ದಿನಸಿ ವ್ಯವಹಾರಸ್ಥರು ಲಾಭ ಮಾಡಲಿದ್ದಾರೆ.
ತುಲಾ ರಾಶಿ
ತುಲಾ ರಾಶಿಯ ಜನರು ಇಂದು ಸವಾಲಿನ ದಿನ. ನಿಮ್ಮ ಸಾಲದ ಮರುಪಾವತಿ ವಿಚಾರವಾಗಿ ಒತ್ತಡ ಎದುರರಿಸುತ್ತೀರಿ. ಹಾಗೆ ಕುಟುಂಬಸ್ಥರಿಗೆ ನೀವು ಹಣ ನೀಡುವ ಸನ್ನಿವೇಶಗಳ ಎದುರಿಸುತ್ತೀರಿ. ದಿನದ ಅಂತ್ಯದಲ್ಲಿ ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗುತ್ತಿರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಲ್ಲಿ ಇಂದು ಮಿಶ್ರಫಲದ ದಿನ. ನಿಮ್ಮ ಉಳಿತಾಯದ ಕಡೆ ಗಮನ ಹರಿಸುವಿಕೆಯು ನೆಮ್ಮದಿ ತರಲಿದೆ. ಪ್ರೀತಿಯ ವಿಚಾರವಾಗಿ ನಿಮಗೆ ಉತ್ತಮ ದಿನ. ಶುಭ ಕಾರ್ಯ ಸಂಬಂಧವಾದ ಮಾತುಕತೆಯಲ್ಲಿ ನೀವು ಭಾಗಿಯಾಗಬಹುದು.
ಧನು ರಾಶಿ
ಧನು ರಾಶಿಯ ಜನರಿಗೆ ಇಂದು ಸಮಸ್ಯೆಗಳಿವೆ. ನಿಮ್ಮ ಅನೇಕ ಕೆಲಸಗಳಲ್ಲಿ ಹಣಕಾಸು ಸಮಸ್ಯೆಗಳು ಅಡ್ಡಿಯಾಗಬಹುದು, ಆರೋಗ್ಯ ಸಮಸ್ಯೆಗಳು, ಕೆಲಸ ಸಂಬಂಧಿ ಸಮಸ್ಯೆಗಳು, ಆಪ್ತರ ದೊಡ್ಡ ವಿಚಾರಗಳಲ್ಲಿ ನೀವು ಭಾಗಿಯಾಗಬಹುದು.
ಮಕರ ರಾಶಿ
ಮಕರ ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ವಾಹನ ಸಂಬಂಧಿತ ಖರ್ಚುಗಳು ಕಡಿಮೆಯಾಗಲಿದೆ. ಮನೆಯ ಅನೇಕ ಕೆಲಸಗಳಿಗೆ ನೀವು ಹಣಕಾಸಿನ ನೆರವು ನೀಡಬೇಕಾಗಬಹುದು. ಪ್ರಯಾಣಗಳಲ್ಲಿ ಸುಖವಿದೆ.
ಕುಂಭ ರಾಶಿ
ಕುಂಭ ರಾಶಿಯ ಜನರಲ್ಲಿ ಇಂದು ಬಹಳ ಅನುಕೂಲಕರ ದಿನ. ನಿಮ್ಮ ಹಣಕಾಸು ಸಮಸ್ಯೆಗೆ ಮುಕ್ತಿ ಪಡೆಯಬಹುದು. ಇಷ್ಟು ದಿನದ ಸಮಸ್ಯೆಯೊಂದು ಬಗೆಹರಿಯಲಿದೆ. ಅವಿವಾಹಿತರಲ್ಲಿದ್ದ ಹಣಕಾಸಿನ ವಿಚಾರಚಾಗಿ ಧನಾತ್ಮಕ ಬದಲಾವಣೆ ನೋಡಬಹುದು. ಹೊಸ ವ್ಯವಹಾರಗಳಲ್ಲಿ ಶುಭವಿದೆ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಇಂದು ಬಹಳ ಅನುಕೂಲಕರ. ನಿಮಗಿಂದು ದಿಢೀರ್ ಅದೃಷ್ಟ ತರುವಂತಹ ವಿಚಾರಗಳು ನಡೆಯಲಿವೆ. ನಿಮ್ಮ ಅನುಭವದ ಕಾರಣದಿಂದಾಗಿ ಕೆಲಸವೊಂದನ್ನು ಸುಲಭವಾಗಿ ಮುಗಿಸಲಿದ್ದೀರಿ.



Click it and Unblock the Notifications