02 October Horoscope: ಅಕ್ಟೋಬರ್ 02ರ ವಿಜಯದಶಮಿ ದಿನ ಯಾರಿಗೆ ಶುಭಕಾಲ!

ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 02 (02 October Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ವಿಜಯದಶಮಿಯ ಈ ದಿನವು ನಿಮ್ಮಲ್ಲಿ ಉತ್ತಮ ದಿನವಾಗಲಿದೆ. ಮನೆಯಲ್ಲಿ ಶಾಂತಿ ನೆಲೆಸಲಿದೆ. ಮನೆಯವರ ಆಸೆಯೊಂದನ್ನು ನೀವು ಈಡೇರಿಸಲಿದ್ದೀರಿ. ನಿಮ್ಮ ಹಲವು ಕೆಲಸಗಳಲ್ಲಿ ದೊಡ್ಡ ಮಟ್ಟದ ಶುಭವಿದೆ.

ವೃಷಭ ರಾಶಿ

ವೃಷಭ ರಾಶಿಯವರಿಗೆ ವಿಜಯದಶಮಿಯ ದಿನದಂದು ಶುಭವಿದೆ. ನಿಮ್ಮ ಅನೇಕ ಕೆಲಸಗಳಲ್ಲಿ ನೀವು ಲಾಭ ನೋಡುವಿರಿ. ಇತರರಿಗೆ ನಿಮ್ಮಿಂದಾಗಿ ಹಣಕಾಸಿನ ಸಹಾಯ ಇರಬಹುದು. ಹಲವರಲ್ಲಿ ಈ ದಿನ ದೇವಾಲಯ ಭೇಟಿಯ ಸಾಧ್ಯತೆ. ದಾಂಪತ್ಯದಲ್ಲಿ ಸುಖವಿರಲಿದೆ.

October-02-2025-daily-horoscope

ಮಿಥುನ ರಾಶಿ

ಮಿಥುನ ರಾಶಿಯ ಜನರಲ್ಲಿ ಇಂದು ಮಿಶ್ರಫಲವಿದೆ. ನಿಮ್ಮ ದಿನದ ಆರಂಭವೂ ಬಹಳ ಅನುಕೂಲಕರವಾಗಿರಲಿದೆ. ಹಾಗೆ ವ್ಯವಹಾರಗಳ ಸಂಬಂಧವಾಗಿ ಇಂದು ಹೊಸ ಮಾತುಕತೆಗಳು ನಡೆಯಬಹುದು. ವಿವಾಹಿತರಲ್ಲಿ ಖರ್ಚು ಹೆಚ್ಚಾಗಬಹುದು.

ಕರ್ಕ ರಾಶಿ

ಕರ್ಕ ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ನಿಮ್ಮ ಅನೇಕ ಕೆಲಸಗಳು ಅಡ್ಡಿಗಳಿಲ್ಲದೆ ನಡೆಯಲಿವೆ. ದಿನದ ಆರಂಭದಲ್ಲಿ ಖರ್ಚುಗಳಿವೆ. ವಾಹನ ಸವಾರರು ಸ್ವಲ್ಪ ಎಚ್ಚರಿಕೆ ವಹಿಸುವುದು ಉತ್ತಮ. ಯಾವುದೇ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಬೇಡಿ.

ಸಿಂಹ ರಾಶಿ

ಸಿಂಹ ರಾಶಿಯ ಜನರಿಗೆ ಈ ದಿನ ಬಹಳ ಅನುಕೂಲ ತರಲಿದೆ. ನಿಮ್ಮ ಹಣಕಾಸಿನ ಸ್ಥಿತಿ ನಿಮಗೆ ನೆಮ್ಮದಿ ತರುವ ದಿನವಾಗಲಿದೆ. ನಿಮ್ಮ ಸಾಲದ ಪ್ರಮಾಣ ಇಳಿಕೆಯಾಗಲಿದೆ. ಆಪ್ತರಿಂದ ಸಂತಸದ ಸುದ್ದಿ ಕೇಳಬಹುದು. ಪ್ರಯಾಣಗಳ ಮಾಡುವಿರಿ. ಸಹೋದರರೊಂದಿಗೆ ಸಮಯ ಕಳೆಯುವಿರಿ.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಿಗೆ ಇಂದು ಉತ್ತಮ ದಿನ. ಆರಂಭದಲ್ಲಿ ಒಂದಿಷ್ಟು ಸವಾಲುಗಳಿದ್ದರೂ ನಂತರದಲ್ಲಿ ನೆಮ್ಮದಿ ಇರಲಿದೆ. ಆಪ್ತರೊಬ್ಬರಿಂದ ನಿಮ್ಮ ಮನದಲ್ಲಿ ಸಂತಸ ಮೂಡಲಿದೆ. ಆಪ್ತರಿಗೆ ನೀವು ಹಣಕಾಸಿನ ಸಹಾಯ ಮಾಡಬಹುದು. ಗೃಹಿಣಿಯರಲ್ಲಿ ಶ್ರಮದಾಯಕ ದಿನವಾಗುತ್ತಿದೆ.

ತುಲಾ ರಾಶಿ

ತುಲಾ ರಾಶಿಯ ಗೃಹಿಣಿಯರಿಗೆ ಇಂದು ಬಹಳ ಶುಭವಾಗುವ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಶುಭವಾಗುತ್ತಿದೆ. ಅದ್ರಲ್ಲೂ ನಿಮ್ಮ ವ್ಯಾಪಾರ, ವ್ಯವಹಾರಗಳು ಹಾಗೆ ಪ್ರಯಾಣಗಳಲ್ಲಿ ಶುಭವಿದೆ. ನಿಮ್ಮಲ್ಲಿ ದೀರ್ಘಕಾಲದ ಅನಾರೋಗ್ಯವೊಂದರಿಂದ ನಿರಾಳತೆ ಪಡೆಯಲಿದ್ದೀರಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಜನರಿಗೆ ಇಂದು ಮಿಶ್ರಫಲವಿದೆ. ಈ ದಿನ ನಿಮ್ಮಲ್ಲಿ ಖರ್ಚು ಹೆಚ್ಚಾಗಲಿದೆ. ವ್ಯಾಪಾರಿಗಳಿಗೆ ಲಾಭದ ಅಂಶ ಹೆಚ್ಚಾಗಲಿದೆ. ಪ್ರಯಾಣಗಳಲ್ಲಿ ಸುಖವಿದೆ. ಗೃಹಿಣಿಯರಲ್ಲಿ ಶ್ರಮದಾಯಕ ದಿನ. ಕುಟುಂಬಸ್ಥರ ಜೊತೆ ಪ್ರಯಾಣ ಮಾಡಬಹುದು.

ಧನು ರಾಶಿ

ಧನು ರಾಶಿಯವರಿಗೆ ಈ ವಿಜಯದಶಮಿಯ ದಿನವು ಬಹಳ ಶುಭ ತರಲಿದೆ. ನಿಮ್ಮ ಹಲವು ಕೆಲಸಗಳಿಗೆ ಕುಟುಂಬಸ್ಥರಿಂದ ನೆರವು ಬೆಂಬಲ ಸಿಗಲಿದೆ. ನಿಮ್ಮ ಹಲವು ಕೆಲಸಗಳಿಗೆ ಹಣಕಾಸು ಸಹಾಯ ಪಡೆಯಲಿದ್ದೀರಿ. ಆಹಾರ ಸಂಬಂಧಿ ಖರ್ಚು ಹೆಚ್ಚಾಗಲಿದೆ.

ಮಕರ ರಾಶಿ

ಮಕರ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ದೊಡ್ಡ ಕೆಲಸವೊಂದರಲ್ಲಿ ಶುಭವಾಗಲಿದೆ. ಯಾರೊಂದಿಗೂ ಮನಸ್ತಾಪಗಳಿಗೆ ಆಸ್ಪದ ನೀಡಬೇಡಿ. ಉದರ ಸಂಬಂಧಿ ಸಮಸ್ಯೆಗಳಿಗೆ ನೀವು ತುತ್ತಾಗಬಹುದು. ಪ್ರಯಾಣಗಳಲ್ಲಿ ಎಚ್ಚರಿಕೆ ಇಡಿ.

ಕುಂಭ ರಾಶಿ

ಕುಂಭ ರಾಶಿಯ ಜನರಲ್ಲಿ ಇಂದು ಅನುಕೂಲಕರ ದಿನ. ನೀವು ದೇವಾಲಯ ಭೇಟಿ ಸಾಧ್ಯತೆ ಇದೆ. ನಿಮ್ಮ ಹಲವು ಕೆಲಸಗಳನ್ನು ಯಾರೊಂದಿಗಾದರು ಹಂಚಿಕೊಳ್ಳುವುದು ಉತ್ತಮ. ವಾಹನ ಸವಾರರು ಇಂದು ಎಚ್ಚರಿಕೆಯಿಂದ ಇರುವುದು ಉತ್ತಮ.

ಮೀನ ರಾಶಿ

ಮೀನ ರಾಶಿಯ ಜನರಲ್ಲಿ ಇಂದು ಪ್ರಯಾಣ ಮಾಡುವ ಸಾಧ್ಯತೆ ಇದೆ. ನಿಮ್ಮಲ್ಲಿ ಇಂದು ಯಶಸ್ಸುಗಳ ಪಡೆಯುವ ದಿನ. ವಾಹನ ಸಂಬಂಧಿತ ವಿಚಾರದಲ್ಲಿ ಶುಭವಾಗುತ್ತಿದೆ. ಹಣದ ವಿಚಾರವಾಗಿಯೂ ಶುಭವಿದೆ. ವೈವಾಹಿಕ ಜೀವನದಲ್ಲಿ ಮಧುರತೆ ಇರಲಿದೆ. ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ.

English summary

October-02-2025-daily-horoscope-prediction-for-12-zodiac-signs-in-kannada

Here is Horoscope Today, 02 October Horoscope: Daily Horoscope Prediction For 12 Zodiac signs In Kannada
Story first published: Thursday, October 2, 2025, 5:00 [IST]
X
Desktop Bottom Promotion