Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
01 October Horoscope: ಅಕ್ಟೋಬರ್ 01 ಬುಧವಾರ ಯಾರಿಗೆ ಧನಲಾಭ!
ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 01 (01 October Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಮಿಶ್ರಫಲ. ದಿನದ ಆರಂಭದಲ್ಲಿ ಪ್ರಯಾಣ ಮಾಡುವಿರಿ. ಹಣಕಾಸು ವಿಚಾರದಲ್ಲಿ ಸ್ವಲ್ಪ ಒತ್ತಡಗಳು, ಅಸಹಜ ನಿರ್ಧಾರಗಳ ತೆಗೆದುಕೊಳ್ಳಬೇಕಾಬಹುದು. ಮನೆಯವರೊಂದಿಗೆ ಉತ್ತಮ ಸಂತೋಷದ ಕ್ಷಣಗಳ ಕಳೆಯುವಿರಿ.
ವೃಷಭ ರಾಶಿ
ನಿಮ್ಮಲ್ಲಿ ಇಂದು ಬಹಳ ಅನುಕೂಲಕರ ದಿನವಾಗಿರಲಿದೆ. ಆಪ್ತರೊಬ್ಬರಿಂದ ಹಣ ಪಡೆಯಬಹುದು. ಸ್ನೇಹಿತರೊಬ್ಬರ ಭೇಟಿ ಮಾಡುವಿರಿ. ಅನೇಕರಿಗೆ ದೊಡ್ಡ ವ್ಯವಹಾರ ಲಾಭವಿದೆ. ಮನೆಗಾಗಿ ವಸ್ತುಗಳನ್ನು ಖರೀದಿಸಬೇಕಾಗಬಹುದು. ಅನಗತ್ಯ ವಸ್ತುಗಳಿಗೆ ಖರ್ಚು ಮಾಡಬೇಕಾಗಿ ಬರಬಹುದು.

ಮಿಥುನ ರಾಶಿ
ನಿಮಗಿಂದು ಅಚ್ಚರಿಯ ತರುವ ದಿನ. ನೀವು ಬಯಸದೆ ದೊಡ್ಡ ಮಟ್ಟದ ಲಾಭ ನೋಡಬಹುದು. ವ್ಯಾಪಾರಿಗಳಿಗೆ ಅದೃಷ್ಟ ಕೈ ಹಿಡಿಯುವ ದಿನ. ಅಪರೂಪದ ಸವಾಲುಗಳನ್ನು ಎದುರಿಸುವಿರಿ. ಆದ್ರೆ ನಿಮ್ಮ ಆರೋಗ್ಯದಲ್ಲಿನ ಸಣ್ಣಪುಟ್ಟ ಏರುಪೇರು ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಇಂದು ಮಿಶ್ರ ಫಲದ ದಿನ. ನಿಮ್ಮ ಅನೇಕ ಕೆಲಸಗಳಲ್ಲಿ ಶುಭವಿದೆ. ಆಪ್ತರೊಬ್ಬರಿಂದ ಹಣಕಾಸಿನ ಸಹಾಯ ಪಡೆಯಲಿದ್ದೀರಿ. ವಾಹನ ಖರ್ಚು ಹೆಚ್ಚಾಗಲಿದೆ. ಯಾರನ್ನು ಇಂದು ನಂಬಿ ಸಾಲ ನೀಡಲು ಮುಂದಾಗಬೇಡಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ಮಿಶ್ರಫಲವಿದೆ. ನಿಮ್ಮ ಆದಾಯದಷ್ಟೇ ಖರ್ಚು ಕೂಡ ಇರಲಿದೆ. ಮನೆಗಾಗಿ ವಸ್ತು ಖರೀದಿಗೆ ಮುಂದಾಗಬಹುದು. ಕೆಲಸ ಸಂಬಂಧವಾಗಿ ಸವಾಲುಗಳ ಎದುರಿಸುತ್ತೀರಿ.
ಕನ್ಯಾ ರಾಶಿ
ಯಾರಿಂದಾದರು ಹಣದ ಸಹಾಯ ಪಡೆದಿದ್ದರೆ ಮರಳಿ ನೀಡುವುದು ಉತ್ತಮ. ಅನಾರೋಗ್ಯ ಸಂಬಂಧವಾಗಿ ನೀವು ಆಸ್ಪತ್ರೆಗೆ ಭೇಟಿ ನೀಡಬಹುದು. ವಾಹನ ಸಂಬಂಧಿ ಖರ್ಚು ಇರಬಹುದು. ಗೃಹಿಣಿಯರಲ್ಲಿ ಖರ್ಚು ಹೆಚ್ಚಾಗಬಹುದು. ದೂರ ಪ್ರಯಾಣ ಮಾಡಬಹುದು.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಶುಭ ದಿನ. ನಿಮ್ಮ ವಾಹನ ಖರೀದಿಯ ಆಸೆಗೆ ಇಂದು ಒಂದು ಹೆಜ್ಜೆ ಮುನ್ನುಡಿ ಬರೆಯುವಿರಿ. ಅನೇಕರಲ್ಲಿ ಇಂದು ಪ್ರಯಾಸದ ದಿನ. ವ್ಯಾಪಾರ ಸಂಬಂಧಿತ ವಿಚಾರದಲ್ಲಿ ನಿಮಗೆ ಉತ್ತಮ ದಿನ. ಶ್ರಮದಾಯಕ ಕೆಲಸದಲ್ಲಿ ನೀವು ಭಾಗಿಯಾಗಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಲ್ಲಿ ಇಂದು ಬಹಳ ದಿನದ ಆರ್ಥಿಕ ಸಮಸ್ಯೆಯೊಂದನ್ನು ಪರಿಹರಿಸಲು ನೀವು ಶ್ರಮ ಹಾಕಬಹುದು. ಆಹಾರ ಸಂಬಂಧಿತ ಖರ್ಚು ಹೆಚ್ಚಾಗಬಹುದು. ಯಾರಿಗೂ ಸಾಲ ನೀಡಲು ಮುಂದಾಗಬೇಡಿ. ಹಬ್ಬದ ವಾತಾವರಣದಿಂದ ಮನೆಯಲ್ಲಿ ಸಂತಸ ಇರಲಿದೆ.
ಧನು ರಾಶಿ
ಧನು ರಾಶಿಯವರಿಗೆ ಮಿಶ್ರ ಫಲದ ದಿನ, ನಿಮ್ಮ ಕೆಲಸದ ಸ್ಥಳದಲ್ಲಿ ನಿಮಗೆ ಹೆಚ್ಚು ಸಮಸ್ಯೆಗಳು ಬರಬಹುದು. ಹಣಕಾಸು ಖರ್ಚು ಮಾಡುವ ಮುನ್ನ ಎಚ್ಚರವಿರಲಿ. ಪ್ರಯಾಣಗಳ ಮಾಡಬೇಕಾಗಬಹುದು. ಅನಿರೀಕ್ಷಿತ ಸಹಾಯದಿಂದ ನಿಮಗೆ ಸಂತಸ ಮೂಡಲಿದೆ.
ಮಕರ ರಾಶಿ
ಮಕರ ರಾಶಿಯ ಜನರಿಗೆ ಇಂದು ಸುಖಕರ ಪ್ರಯಾಣವಿದೆ. ನೀವು ಅಂದುಕೊಂಡಿದ್ದ ಯೋಜನೆಗೆ ಇಂದು ಕೆಲಸ ಮಾಡಬೇಕಾಗಿ ಬರಬಹುದು. ಆಸ್ತಿ ಸಂಬಂಧಿತ ವಿಚಾರವಾಗಿ ಉತ್ತಮ ಫಲ ಅನುಭವಿಸಬಹುದು. ಸಂಬಂಧಿಕರ ಮನೆಗೆ ನೀವು ಭೇಟಿ ನೀಡಬಹುದು.
ಕುಂಭ ರಾಶಿ
ಕುಂಭ ರಾಶಿಯ ಗೃಹಿಣಿಯರಿಗೆ ಇಂದು ಸವಾಲಿನ ದಿನವಾಗಬಹುದು. ನಿಮಗಿಂದು ಬಹಳ ಶ್ರಮದಾಯಕ ದಿನವಾಗಿರಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ಅಡ್ಡಿಗಳಿರಬಹುದು, ಆಪ್ತರೊಬ್ಬರ ಭೇಟಿಯಾಗಬಹುದು. ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಗಳ ಮುಗಿಸಲು ಮುಂದಾಗಿ. ಆರೋಗ್ಯದ ಬಗ್ಗೆ ಕಾಳಜಿ ಇಡಿ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಇಂದು ಅನುಕೂಲಕರ ದಿನ. ನೀವಿಂದು ಮನೆಗಾಗಿ ಖರ್ಚು ಮಾಡುವಿರಿ. ಹಲವರು ಪ್ರಯಾಣ ಮಾಡಬೇಕಾಗಿ ಬರಬಹುದು. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ಸಹಾಯಕ್ಕೆ ಮನವಿ ಬರಬಹುದು. ಸರ್ಕಾರಿ ಕೆಸಲದಲ್ಲಿ ಹಿನ್ನಡೆ ಇದೆ. ಮನೆ ನಿರ್ಮಾಣ ಸಂಬಂಧ ಉತ್ತಮ ದಿನವಲ್ಲ. ಆದಾಯ ಮೂಲದಲ್ಲಿ ಅಡೆತಡೆ ನೋಡಬಹುದು.



Click it and Unblock the Notifications