Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಸಂಖ್ಯಾಶಾಸ್ತ್ರದ ಪ್ರಕಾರ ಗ್ರಹಣ ಕಾಲ ಯಾರಿಗೆ ಅಶುಭ..? ಚಂದ್ರನಿಗೂ ಸಂಖ್ಯೆಗಳಿಗೂ ಇದೆ ನಂಟು!
Lunar Eclipse 2025: ವರ್ಷದ ಕೊನೆಯ ಚಂದ್ರಗ್ರಹಣವು ನಾಳೆ ಸಂಭವಿಸುತ್ತಿದೆ. ರಾತ್ರಿ 9 ಗಂಟೆ ಸುಮಾರಿಗೆ ಆರಂಭಗೊಂಡು ಮಾರನೆ ದಿನ ಅಂದರೆ ಸೆಪ್ಟೆಂಬರ್ 8ರ ಮುಂಜಾನೆ ಕೊನೆಯಾಗುತ್ತಿದೆ. ಅಪರೂಪದ ಚಂದ್ರಗ್ರಹಣವನ್ನು ಕಣ್ತುಂಬಿಕೊಳ್ಳಲು ವಿಶ್ವದಾದ್ಯಂತ ಕಾತರಿಂದ ಕಾಯುತ್ತಿದ್ದಾರೆ. ಹಾಗೆ ಈ ಸಮಯದಲ್ಲಿ ಗ್ರಹಗತಿಗಳ ಬದಲಾವಣೆಗಳು ಕೂಡ ಹಲವು ರೀತಿ ಬದಲಾವಣೆಗೆ ಕಾರಣವಾಗುತ್ತಿದೆ.
ಆದ್ರೆ ಈ ಸಮಯದಲ್ಲಿ ಗ್ರಹಗಳ ಚಲನೆಯಲ್ಲಿನ ಬದಲಾವಣೆಯು ಹಲವರ ಮೇಲೆ ಪರಿಣಾಮ ಬೀರುವುದು ನೋಡಬಹುದು. ಅದ್ರಲ್ಲೂ ನಾವಿಂದು ಸಂಖ್ಯಾಶಾಸ್ತ್ರದ ಪ್ರಕಾರ ಯಾವೆಲ್ಲಾ ಜನರ ಮೇಲೆ ಯಾವ ರೀತಿಯಾಗಿ ಈ ಗ್ರಹಣ ಪರಿಣಾಮ ಉಂಟು ಮಾಡಲಿದೆ ಅನ್ನೋದನ್ನು ತಿಳಿದುಕೊಳ್ಳೋಣ.

ಅದ್ರಲ್ಲೂ ಈ ಗ್ರಹಣವು 7ನೇ ತಾರೀಖಿನಂದು ಸಂಭವಿಸುತ್ತಿದೆ. 7ರಂದು ಆರಂಭಗೊಂಡು 8ರಂದು ಅಂತ್ಯವಾಗುತ್ತಿದೆ. 7 ಎಂಬ ಸಂಖ್ಯೆ ಕೇತುವೊಂದಿಗೆ ಸಂಬಂಧಿಸಿದ ಸಂಖ್ಯೆ. ಇದು ಆತ್ಮಾವಲೋಕನ, ಆಧ್ಯಾತ್ಮಿಕತೆಯೊಂದಿಗೂ ಸಂಬಂಧ ಹೊಂದಿದೆ. ಹಾಗೆ ಚಂದ್ರನು ಭಾವನೆಗಳು, ಸಂಬಂಧಗಳ ಮೇಲೆ ಪರಿಣಾಮ ಬೀರುವು ಅಂಶ.
ಹೀಗಾಗಿ ಈ ಚಂದ್ರಗ್ರಹಣವು ಸಂಬಂಧ, ವೃತ್ತಿ ಜೀವನ, ಪ್ರೀತಿ, ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರುವುದು ನೋಡಬಹುದು. ಹಾಗಾದ್ರೆ ಸಂಖ್ಯಾಶಾಸ್ತ್ರದ ಪ್ರಕಾರ ಯಾರ ಮೇಲೆ ಯಾವ ರೀತಿಯ ಪ್ರಭಾವ ಉಂಟು ಮಾಡಲಿದೆ ಅನ್ನೋದನ್ನು ತಿಳಿದುಕೊಳ್ಳೋಣ. ನಿಮ್ಮ ದಿನಾಂಕದ ಪ್ರಕಾರ ಸಂಖ್ಯಾಶಾಸ್ತ್ರದ ಸಂಖ್ಯೆ ಯಾವುದು ಎಂದು ತಿಳಿಯಬಹುದು. ಉದಾಹರಣೆಗೆ ನಿಮ್ಮ ಜನ್ಮ 28 ಆದರೆ ನಿಮ್ಮ ಜನ್ಮ ಸಂಖ್ಯೆ 1 (2+8=10,1+0=1) ಆಗಿರಲಿದೆ.
ಸಂಖ್ಯಾಶಾಸ್ತ್ರ ಸಂಖ್ಯೆ 1
ಇಂದು ನೀವು ತಾಳ್ಮೆ ಮತ್ತು ಸಂಯಮವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಸಂಬಂಧಗಳ ಕಾಪಾಡಿಕೊಳ್ಳುವುದು ಮುಖ್ಯವಾಗುತ್ತೆ. ಈ ಸಮಯದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೂ ಮನಸ್ತಾಪ ಉಂಟಾಗಬಹುದು. ಅದನ್ನು ಸರಿಯಾದ ಸೂಕ್ತ ರೀತಿಯಲ್ಲಿ ನಿಭಾಯಿಸಿ. ನಿಮ್ಮ ದಾಂಪತ್ಯ ವಿಚಾರದಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ.
ಸಂಖ್ಯಾಶಾಸ್ತ್ರ ಸಂಖ್ಯೆ 2
ಚಂದ್ರನು ನೇರ ಪರಿಣಾಮ ಬೀರುವುದರಿಂದ ಈ ದಿನ ನಿಮಗೆ ಶುಭವೆಂದು ಸಾಬೀತುಪಡಿಸುತ್ತದೆ. ಭಾವನೆಗಳು ಆಳವಾಗಿರುತ್ತವೆ ಮತ್ತು ಕುಟುಂಬ ಮತ್ತು ಸಂಬಂಧಗಳಲ್ಲಿ ನಿಕಟತೆ ಹೆಚ್ಚಾಗುತ್ತದೆ. ಮನಸ್ಸು ಸೃಜನಶೀಲ ಕೆಲಸದ ಕಡೆಗೆ ಆಕರ್ಷಿತವಾಗುತ್ತದೆ. ನೀವು ಆಧ್ಯಾತ್ಮಿಕ ಶಾಂತಿ ಮತ್ತು ಸ್ವಯಂ ಸಾಕ್ಷಾತ್ಕಾರವನ್ನು ಅನುಭವಿಸುವಿರಿ.
ಸಂಖ್ಯಾಶಾಸ್ತ್ರ ಸಂಖ್ಯೆ 3
ನಿಮ್ಮ ಗಮನವು ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಮೇಲೆ ಕೇಂದ್ರೀಕೃತವಾಗಿರಬಹುದು. ಕೆಲಸದ ಸ್ಥಳದಲ್ಲಿ ನೀವು ಹೊಸ ಯೋಜನೆಗಳನ್ನು ಪರಿಗಣಿಸುವಿರಿ, ಆದರೆ ಹಿರಿಯರಿಂದ ಸಲಹೆ ಪಡೆಯುವುದು ನಿಮಗೆ ಪ್ರಯೋಜನಕಾರಿಯಾಗಿದೆ. ವೃತ್ತಿ ಪರತೆ ಇರಲಿದೆ.
ಸಂಖ್ಯಾಶಾಸ್ತ್ರ ಸಂಖ್ಯೆ 4
ಗ್ರಹಣ ಸಮಯದಲ್ಲಿ ನಿಮ್ಮ ಮನಸ್ಸು ಪ್ರಕ್ಷುಬ್ಧವಾಗಬಹುದು. ಹೀಗಾಗಿ ನಿಮ್ಮ ಕೆಲಸಗಳು ಕೂಡ ಅಪೂರ್ಣವಾಗಬಹುದು. ಯಾವುದಾದರು ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಚ್ಚರ ಅಗತ್ಯ. ಕುಟುಂಬಸ್ಥರಿಂದ ನಿಮ್ಮ ಮೇಲೆ ಹೊಸ ರೀತಿ ಒತ್ತಡ ಬರಬಹುದು.
ಸಂಖ್ಯಾಶಾಸ್ತ್ರ ಸಂಖ್ಯೆ 5
ನಿಮ್ಮ ಮಾತು ಮತ್ತು ಸಂವಹನದಿಂದ ಸಮಸ್ಯೆಗಳು ಬರಬಹುದು. ಹೊಸ ಆಲೋಚನೆಗಳು ಹಾಗೆ ಉದ್ಯೋಗ ಸಂಬಂಧವಾಗಿ ನಿಮಗೆ ಅಡ್ಡಿ ಇರಬಹುದು. ಸ್ನೇಹಿತರೊಂದಿಗೆ ಮನಸ್ತಾಪಗಳು ಮೂಡಬಹುದು. ಕೆಲಸ ಸಂಬಂಧವಾಗಿ ಮಾಡುವ ಪ್ರಯಾಣಗಳು ಅಶುಭದಿಂದ ಕೂಡಿರಲಿದೆ.
ಸಂಖ್ಯಾಶಾಸ್ತ್ರ ಸಂಖ್ಯೆ 6
ಪ್ರೀತಿ, ಸಂಬಂಧಗಳು ಮತ್ತು ಸೌಂದರ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಕಲೆ, ಸಂಗೀತ ಮತ್ತು ಸೃಜನಶೀಲ ಕೆಲಸಗಳಲ್ಲಿ ವಿಶೇಷ ಪ್ರಗತಿ ಇರುತ್ತದೆ. ಆರ್ಥಿಕ ಲಾಭದ ಲಕ್ಷಣಗಳಿವೆ. ದಾಂಪತ್ಯ ಜೀವನದಲ್ಲಿ ಮಧುರತೆ ನೋಡುವಿರಿ. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವಿರಿ.
ಸಂಖ್ಯಾಶಾಸ್ತ್ರ ಸಂಖ್ಯೆ 7
ನಿಮ್ಮ ಅನೇಕ ಸಮಸ್ಯೆಗಳಿಗೆ ಕಾರಣ ಪತ್ತೆ ಮಾಡಬಹುದು. ಅದ್ರಲ್ಲೂ ಸಂಬಂಧಗಳಲ್ಲಿ ನೀವು ಹೊಸ ರೀತಿಯ ಅನುಭವ ಪಡೆಯಲಿದ್ದೀರಿ. ಸಂಬಂಧದೊಳಗೆ ಹಣಕಾಸು ವ್ಯವಹಾರ ಮಾಡಬೇಡಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications