Latest Updates
-
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು
ಸಂಖ್ಯಾಶಾಸ್ತ್ರ: ಇನ್ನು 26 ದಿನ ಈ ಜನ್ಮ ಸಂಖ್ಯೆಯವರು ಜಾಗ್ರತೆವಹಿಸಬೇಕು
ಸಂಖ್ಯಾಶಾಸ್ತ್ರದಲ್ಲಿ ನಿಮ್ಮ ಜನ್ಮ ದಿನಾಂಕವನ್ನು ನೋಡಿ ನಿಮ್ಮ ಜನ್ಮ ಸಂಖ್ಯೆ ಯಾವುದು ಎಂದು ತಿಳಿಯಬಹುದು. ಉದಾಹರಣೆಗೆ ನೀವು 10ನೇ ತಾರೀಕಿಗೆ(ಯಾವುದೇ ಮಾಸ) ಜನಿಸಿದ್ದರೆ ನಿಮ್ಮ ಜನ್ಮ ಸಂಖ್ಯೆ 1+0=1, ನೀವು 27ನೇ ತಾರೀಕಿಗೆ ಜನಿಸಿದ್ದರೆ 2+7=9, 29ನೇ ತಾರೀಕಿಗೆ ಜನಿಸಿದ್ದರೆ 2+9=11=1+1=2 ಆಗಿದೆ, ಹೀಗೆ ಲೆಕ್ಕ ಹಾಕಿ ನಿಮ್ಮ ಜನ್ಮ ಸಂಖ್ಯೆ ತಿಳಿಯಬಹುದು.
ಆಗಸ್ಟ್ ಮಾಸದ ಸಂಖ್ಯಾಶಾಸ್ತ್ರ ಪ್ರಕಾರ ಈ ಮಾಸದಲ್ಲಿ ಈ 4 ರಾಶಿಗಳು ಸ್ವಲ್ಪ ಜಾಗ್ರತೆವಹಿಸಬೇಕು:

ಸಂಖ್ಯೆ 1
ನಿಮ್ಮ ಜನ್ಮ ಸಂಖ್ಯೆ 1 ಆದರೆ ನೀವು ಈ ಮಾಸ ಜಾಗ್ರತೆವಹಹಿಸಿ, ಈ ಮಾಸ ಹಣಕಾಸಿನ ವಿಷಯದಲ್ಲಿ ಧನ ಲಾಭವಾಗಲಿದೆ, ವ್ಯಾಪಾರಿಗಳು ಲಾಭವನ್ನು ಗಳಿಸುತ್ತೀರಿ, ಆದರೆ ಹಣವನ್ನು ಹೆಚ್ಚು ಖರ್ಚು ಮಾಡಬೇಡಿ. ಇನ್ನು ಈ ಮಾಸ ಏನಾದರೂ ಹೊಸ ಕಾರ್ಯಕ್ಕೆ ಕೈ ಹಾಕಬೇಕೆಂದಿದ್ದರೆ ನೀವು ಸ್ವಲ್ಪ ಮುಂದೂಡುವುದು ಒಳ್ಳೆಯದು. ಯಾವುದೇ ಹೂಡಿಕೆ ಮಾಡಬೇಡಿ.
ಸಂಖ್ಯೆ 2
ಈ ಮಾಸ ನಿಮಗೆ ಮಿಶ್ರಫಲಿತಾಂಶ. ಈ ಅವಧಿಯಲ್ಲಿ ನೀವು ಹಲವು ಸವಾಲುಗಳನ್ನು ಎದುರಿಸಬಹುದು, ನೀವು ನಿಮ್ಮ ಕೆಲಸ ಕಾರ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು, ಕಷ್ಟವಾದರೂ ಅದನ್ನು ಪೂರ್ಣಗೊಳಿಸಲು ನೀವು ಹೆಚ್ಚಿನ ಶ್ರಮ ಹಾಕಬೇಕು. ಹಣವನ್ನು ಬಜೆಟ್ ಮೀರಿ ಖರ್ಚು ಮಾಡಲು ಹೋಗಬೇಡಿ. ನಿಮ್ಮ ಆಪ್ತರ ಜೊತೆ ಭಿನ್ನಾಭಿಪ್ರಾಯ ಉಂಟಾಗದಂತೆ ನೋಡಿಕೊಳ್ಳಿ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ಅದು ಹೆಚ್ಚಾಗದಂತೆ ಜಾಗ್ರತೆವಹಿಸಿ. ನೀವು ಮುಕ್ತವಾಗಿ ಮಾತನಾಡುವ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ. ಕೋಪ ನಿಯಂತ್ರಿಸಿದರೆ ಒಳ್ಳೆಯದು, ಇಲ್ಲದಿದ್ದರೆ ಸಮಸ್ಯೆ ಹೆಚ್ಚಾಗುವುದು.
ಸಂಖ್ಯೆ 6
ಈ ಆಗಸ್ಟ್ ಮಾಸ ನಿಮಗೆ ಏರಳಿತದಿಂದ ಕೂಡಿರಲಿದೆ.ಈ ಮಾಸದಲ್ಲಿ ಯಾವುದೇ ಕೆಲಸ ಮಾಡಿದರೂ ಉತ್ತಮವಾಗಿ ಆಲೋಚಿಸಿ ಮಾಡಿದರೆ ಒಳ್ಳೆಯದು. ಯಾವುದೇ ವಿಷಯವಾಗಿರಲಿ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದಿರುವುದು ಒಳ್ಳೆಯದು. ಅಗತ್ಯ ಸಂದರ್ಭದಲ್ಲಿ ನಿಮಗೆ ಆಪ್ತರ ಬೆಂಬಲ ಸಿಗುವುದು ಒಳ್ಳೆಯದು. ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಕುಟುಂಬದ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ.
ಸಂಖ್ಯೆ 9
9 ಸಂಖ್ಯೆಯವರು ಈ ಮಾಸ ಜಾಗ್ರತೆವಹಿಸಬೇಕು, ವೈಯಕ್ತಿಕ ಜೀವನದ ಕಡೆಗೆ ಗಮನಹರಿಸಬೇಕು. ಅಂತರ್ಜಾಲದ ವಂಚನೆ ಬಗ್ಗೆ ಜಾಗ್ರತೆವಹಿಸಬೇಕು. ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ವೃತ್ತಿ ಜೀವನದ ಕಡೆಗೆ ಗಮನಹರಿಸಿ, ಕೆಲಸದಲ್ಲಿ ನಿರ್ಲಕ್ಷ್ಯ ಬೇಡ, ಈ ಮಾಸ ಹಣಕಾಸಿನ ವಿಷಯದಲ್ಲಿ ಕೂಡ ನೀವು ಜಾಗ್ರತೆವಹಿಸಬೆಕು, ಕುಟುಂಬ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗದಂತೆ ಜಾಗ್ರತೆವಹಿಸಬೇಕು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications