Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಂಖ್ಯಾಶಾಸ್ತ್ರ ಪ್ರಕಾರ ಏಪ್ರಿಲ್ ತಿಂಗಳು ನಿಮಗೆ ಹೇಗಿರಲಿದೆ? ಯಾವ ಸಂಖ್ಯೆಯವರಿಗೆ ಅದೃಷ್ಟಕರ
ಸಂಖ್ಯಾಶಾಸ್ತ್ರ ಪ್ರಕಾರ ಏಪ್ರಿಲ್ ತಿಂಗಳು ನಿಮಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:
ನೀವು ಹುಟ್ಟಿದ ದಿನಾಂಕದ ಪ್ರಕಾರ ಸಂಖ್ಯಾಶಾಸ್ತ್ರ ನಿಮ್ಮ ಸಂಖ್ಯೆ ಯಾವುದು ಎಂದು ಹೇಳುತ್ತದೆ, ಉದಾಹರಣೆ ನೀವು ಯಾವುದೇ ತಿಂಗಳಿನ 24ರಂದು ಜನಿಸಿದ್ದರೆ 2+4=6, ನಿಮ್ಮ ಸಂಖ್ಯೆ 6. ನಿಮ್ಮ ಜನ್ಮ ಸಂಖ್ಯೆಗೆ ಈ ಏಪ್ರಿಲ್ ಹೇಗಿರಲಿದೆ ನೋಡೋಣ:

ಸಂಖ್ಯೆ 1 (ಹುಟ್ಟಿದ ದಿನಾಂಕ 1, 10, 19, 28)
ಒಂದು ಸಂಖ್ಯೆಯವರಿಗೆ ಈ ತಿಂಗಳು ಮಿಶ್ರಫಲ. ಈ ವಾರ ಯಾವುದೇ ರಿಸ್ಕ್ ತೆಗೆದುಕೊಳ್ಳಬೇಡಿ. ಇನ್ನು ಈ ಅವಧಿಯಲ್ಲಿ ಆರ್ಥಿಕ ಹೂಡಿಕೆ ಮಾಡುವಾಗ ತುಂಬಾನೇ ಜಾಗ್ರತೆವಹಿಸಬೇಕು. ಬೇರೆಯವರ ಮಾತು ಕೇಳಿ ಆರ್ಥಿಕ ನಿರ್ಧಾರ ತೆಗೆದುಕೊಳ್ಳಬೇಡಿ. ಕೆಲಸದ ದೃಷ್ಟಿಯಿಂದ ಈ ಅವಧಿ ನಿಮಗೆ ಉತ್ತಮವಾಗಿದೆ.
ಸಂಖ್ಯೆ 2 (ಹುಟ್ಟಿದ ದಿನಾಂಕ 2, 11, 20, 29)
ಈ ಏಪ್ರಿಲ್ ತಿಂಗಳು ನಿಮಗೆ ಸರಾಸರಿಯಾಗಿರಲಿದೆ. ಈ ತಿಂಗಳಿನಲ್ಲಿ ನಿಮಗೆ 9 ಸಂಖ್ಯೆಗೆ ಅನುಕೂಲಕರವಲ್ಲ, ಉಳಿದ ಎಲ್ಲಾ ಸಂಖ್ಯೆ ನಿಮಗೆ ಅನುಕೂಲರವಾಗಿದೆ. ಈ ತಿಂಗಳಿನಲ್ಲಿ ನಿಮ್ಮ ಕೆಲಸಕ್ಕೆ ತುಂಬಾನೇ ಒಳ್ಳೆಯ ಪ್ರಭಾವ ಬೀರಲಿದೆ. ಇನ್ನು ನಿಮ್ಮ ಕಿರಿಯ ಸಹೋದರ ಅಥವಾ ಸಹೋದರಿಯ ಬೆಂಬಲದಿಂದ ನಿಮ್ಮ ಕೆಲಸ ಪೂರ್ಣವಾಗಲಿದೆ.
ಸಂಖ್ಯೆ 3 (ಹುಟ್ಟಿದ ದಿನಾಂಕ 3,12,21, 30)
ಈ ತಿಂಗಳಿನಲ್ಲಿ ತಾಳ್ಮೆ ತುಂಬಾನೇ ಮುಖ್ಯ, ಯಾವುದೇ ವಿಷಯದಲ್ಲಿ ಆಗಿರಲಿ ತುಂಬಾ ತಾಳ್ಮೆಯಿಂದ ಇರಬೇಕು. ಈ ತಿಂಗಳು ಖುಷಿಯಿಂದ ಕಳೆಯುತ್ತೀರಿ, ಆದರೆ ಕೆಲಸದ ಕಡೆಗೂ ಗಮನಹರಿಸಿ. ಇನ್ನು ಉನ್ನತ ವಿದ್ಯಾಭ್ಯಾಸ ಮಾಡುವವರು ಉತ್ತಮ ಪ್ರಯೋಜನ ಪಡೆಯಬಹುದು. ಇನ್ನು ಮಹಿಳೆಯ ಜೊತೆ ಗೌರವದಿಂದ ನಡೆದುಕೊಳ್ಳಿ.
ಸಂಖ್ಯೆ 4 (ಹುಟ್ಟಿದ ದಿನಾಂಕ 4,13, 22, 31)
ಈ ತಿಂಗಳು ನಿಮಗೆ ಮಿಶ್ರಫಲ. ಈ ತಿಂಗಳಿನ ಬಹುತೇಕ ದಿನಗಳು ನಿಮಗೆ ಪ್ರತಿಫಲವಾಗಿರಲಿದೆ. ನೀವು ನಿಮ್ಮ ಗುರಿಯತ್ತ ತುಂಬಾನೇ ಗಮನಹರಿಸಬೇಕು. ನಿಮ್ಮ ಕೆಲಸದಲ್ಲಿ ತೃಪ್ತಿ ಇರಲಿದೆ. ಇನ್ನು ನಿಮ್ಮ ಮೇಲೆ ನೀವು ನಂಬಿಕೆಯಿಟ್ಟು ಮುಂದುವರೆದರೆ ಒಳ್ಳೆಯ ಫಲಿತಾಂಶ ಸಿಗಲಿದೆ.
ಸಂಖ್ಯೆ 5 (ಹುಟ್ಟಿದ ದಿನಾಂಕ 5,14, 23)
5 ಸಂಖ್ಯೆಯವರಿಗೆ ಈ ತಿಂಗಳು ಮಿಶ್ರಫಲ. ನೀವು ಶತ್ರಗಳ ಕಡೆಗೆ ಗಮನಹರಿಸಬೇಕು. ನೀವು ನಿಮ್ಮ ಗುರಿ ಸಾಧಿಸಲು ಕೆಲಸದ ಕಡೆಗೆ ತುಂಬಾನೇ ಗಮನಹರಿಸಬೇಕು. ನೀವು ನಿಮ್ಮ ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸು ಪಡೆಯುತ್ತೀರಿ. ಇನ್ನು ಈ ಅವಧಿಯಲ್ಲಿ ನಿಮ್ಮ ನಿಜವಾದ ಸ್ನೇಹಿತರು ಯಾರು, ಯಾರು ಸ್ನೇಹಿತರಂತೆ ಮುಖವಾಡ ಹಾಕಿದ್ದಾರೆ ಎಂದು ತಿಳಿದು ಬರುವುದು. ಈ ಏಪ್ರಿಲ್ ತಿಂಗಳಿನಲ್ಲಿ ನೀವು ಕುಟುಂಬದ ಕಡೆಗೆ ಹೆಚ್ಚಿನ ಗಮನಹರಿಸಬೇಕು.
ಸಂಖ್ಯೆ 6 (ಹುಟ್ಟಿದ ದಿನಾಂಕ 6, 15, 24)
ಈ ತಿಂಗಳಿನ ಬಹುತೇಕ ದಿನಗಳು ನಿಮಗೆ ಅನುಕೂಲಕರವಾಗಿರುವುದರಿಂದ ಈ ತಿಂಗಳು ನಿಮಗೆ ಸರಾಸರಿಯಾಗಿರಲಿದೆ. ಈ ಅವಧಿಯಲ್ಲಿ ಮಾಸನಿಕ ಒತ್ತಡ ಅಧಿಕವಿರಲಿದೆ. ಕೆಲಸವನ್ನು ಆತುರದಿಂದ ಮಾಡಬೇಡಿ, ಹಾಗೆ ಮಾಡಿದರೆ ನೀವು ಯಸಿದಂತೆ ಫಲ ಸಿಗುವುದು ಕಷ್ಟವಾಗುವುದು. ಆದರೆ ತಾಳ್ಮೆಯಿಂದ ಇರಿ, ಕೆಲಸದ ಕಡೆಗೆ ಗಮನಹರಿಸಿ, ಖಂಡಿತ ನೀವು ಬಯಸಿದ ಫಲ ಸಿಗಲಿದೆ.
ಸಂಖ್ಯೆ 7 ( ಹುಟ್ಟಿದ ದಿನಾಂಕ 7,16, 25)
ಈ ತಿಂಗಳು ನಿಮಗೆ ಅನುಕೂಲಕರವಾಗರಲಿದೆ. ಈ ತಿಂಗಳಿನಲ್ಲಿ ನೀವು ಒಳ್ಳೆಯ ಪ್ರಯೋಜನ ಪಡೆಯಬಹುದು. ಈ ತಿಂಗಳಿನಲ್ಲಿ ಕೆಲ ಸವಾಲುಗಳು ಎದುರಾಗಬಹುದು, ಆದರೆ ಆ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತೀರಿ. ನಿಮ್ಮ ಸಂಬಂಧದಲ್ಲಿ ಉತ್ತಮ ಹೊಂದಾಣಿಕೆಗೆ ನೀವು ಶ್ರಮಿಸಬೇಕು. ಅಹಂ ಕುಟುಂಬದಲ್ಲಿ ಸಮಸ್ಯೆ ತರಬಹುದು. ಇದರ ಬಗ್ಗೆ ಜಾಗ್ರತೆವಹಿಸಿ.
ಸಂಖ್ಯೆ 8 (ಹುಟ್ಟಿದ ದಿನಾಂಕ 8, 17, 26)
ಈ ತಿಂಗಳಿನಲ್ಲಿ ನಮಗೆ ಮಿಶ್ರಫಲ. ಈ ತಿಂಗಳಿನಲ್ಲಿ ನೀವು ಸೋಮಾರಿತನದಿಂದ ದೂರವಿರಬೇಕು. ನೀವು ನಿಮ್ಮ ವೃತ್ತಿ ಜೀವನದಲ್ಲಿ ಅತಿಯಾದ ಶ್ರದ್ಧೆ ಹಾಗೂ ಕಠಿಣ ಶ್ರಮದಿಂದ ದುಡಿಯಬೇಕು. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುತ್ತಿಲ್ಲ ಎಂದು ನಿರಾಸೆ ಪಡಬೇಡಿ, ನಿಮ್ಮ ಕಠಿಣ ಶ್ರಮ ಮುಂದುವರೆಸಿ, ಖಂಡಿತ ಫಲ ಸಿಗಲಿದೆ. ನೀವು ಸಂಬಂಧದ ಕಡೆಗೆ ತುಂಬಾ ಗಮನಹರಿಸಬೇಕು.
ಸಂಖ್ಯೆ 9 (ಹುಟ್ಟಿದ ದಿನಾಂಕ 9, 18, 27)
ಈ ತಿಂಗಳಿನಲ್ಲಿ ನೀವು ಉತ್ತಮ ಫಲ ಪಡೆಯುತ್ತೀರಿ. ನೀವು ಆರ್ಥಿಕ ಸ್ಥಿತಿಯ ಕಡೆಗೆ ಗಮನಹರಿಸಬೇಕು. ಅನಗ್ಯತ ಖರ್ಚು ನಿಯಂತ್ರಿಸಿದರೆ ಒಳ್ಳೆಯದು. ಗುರು ಹಾಗೂ ಮಂಗಳ ದೆಸೆಯಿಂದ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ. ಈ ಅವಧಿಯಲ್ಲಿ ನಿಮಗೆ ತುಂಬಾ ಮಂಗಳಕರವಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications