Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಹುಷಾರ್.. ಈ ದಿನ ಮದುವೆ ಆಗಬೇಡಿ! ಜೀವನವೇ ಹಾಳಾಗುತ್ತೆ.. ಡಿವೋರ್ಸ್ ನರಕವೇ!
ಮದುವೆ.. ಪ್ರತಿಯೊಬ್ಬರ ಜೀವನದಲ್ಲಿ ನಿಲ್ಲದ ಹರ್ಷ ಮತ್ತು ಬದ್ಧತೆಯ ಸಂಕೇತ. ಭಾರತೀಯ ಸಂಸ್ಕೃತಿಯಲ್ಲಿ ವಿವಾಹಕ್ಕೆ (marriage) ಅಗ್ರಸ್ಥಾನವಿದೆ. ಇದು ಕೇವಲ ಎರಡು ವ್ಯಕ್ತಿಗಳ ದೈಹಿಕ ಮತ್ತು ಆಧ್ಯಾತ್ಮಿಕ ಮಿಲನವಲ್ಲ. ಬದಲಿಗೆ ,ಜನ್ಮ ಜನ್ಮಾಂತರಗಳ ಸಂಬಂಧವನ್ನು ಬೆಸೆಯುವ ಪವಿತ್ರ ಬಂಧವಾಗಿದೆ. ದಾಂಪತ್ಯ ಜೀವನ ಎಂಬ ರಥ ಸುಗಮವಾಗಿ ಸಾಗಲು ಪತಿ ಪತ್ನಿಯರ ನಡುವೆ ನಂಬಿಕೆ, ಪ್ರೀತಿ ಮತ್ತು ಪರಸ್ಪರ ಸಹಕಾರ ಅತ್ಯಗತ್ಯ. ಸಂಖ್ಯಾಶಾಸ್ತ್ರದ (Numerology) ಪ್ರಕಾರ, ಯಾವ ದಿನ ಮದುವೆಯಾಗುತ್ತೀರಿ (wedding) ಎಂಬುದು ನಿಮ್ಮ ವೈವಾಹಿಕ ಜೀವನದ ದಿಕ್ಕನ್ನೇ ಬದಲಾಯಿಸಬಹುದು.
ಮದುವೆ ದಿನಾಂಕವು ದಂಪತಿಗಳ ಭವಿಷ್ಯ ಮತ್ತು ಅವರ ಸಂಬಂಧದ ಏಳುಬೀಳುಗಳ ಮೇಲೆ ಪ್ರಭಾವ ಬೀರಬಹುದು. ಈ ದಿನಾಂಕವು ವಧು ವರರ 'ಮೂಲಾ೦ಕ'ವನ್ನು ನಿರ್ಧರಿಸುತ್ತದೆ. ಇದು ಅವರ ಭವಿಷ್ಯದ ವೈವಾಹಿಕ ಜೀವನದ ಸ್ವರೂಪವನ್ನು ತಿಳಿಸುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ವಿವಾಹ ಜೀವನದಲ್ಲಿ ಸಂಖ್ಯೆಗಳಿಗೆ ಹೆಚ್ಚಿನ ಮಹತ್ವವಿದೆ. ಕೆಲವೊಂದು ನಿರ್ದಿಷ್ಟ ದಿನಾಂಕಗಳಲ್ಲಿ ನಡೆಯುವ ಮದುವೆಗಳು ದಾಂಪತ್ಯದಲ್ಲಿ ಸವಾಲುಗಳನ್ನು ತರಬಹುದು ಎಂದು ಹೇಳಲಾಗುತ್ತದೆ. ಮದುವೆಯ ದಿನಾಂಕ ಮತ್ತು ಸಮಯ ವ್ಯಕ್ತಿಯ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ.

ಮೂಲಾ೦ಕ 1 ಮತ್ತು 2ರ ವೈವಾಹಿಕ ಜೀವನ
ಮದುವೆಗೆ ಈ ದಿನಾಂಕಗಳು ಅಪಶಕುನ. ಸಂಖ್ಯಾಶಾಸ್ತ್ರದ ಪ್ರಕಾರ, 2, 11, 20, ಮತ್ತು 29ನೇ ತಾರೀಖುಗಳಲ್ಲಿ ವಿವಾಹವಾದವರ ವೈವಾಹಿಕ ಜೀವನದಲ್ಲಿ ಮೂಲಾ೦ಕ 1 ಮತ್ತು 2 ರ ಪ್ರಭಾವವಿರುತ್ತದೆ. ಇಂತಹ ದಂಪತಿಗಳು ತಮ್ಮ ದಾಂಪತ್ಯದಲ್ಲಿ ಆಗಾಗ್ಗೆ ಏರಿಳಿತಗಳನ್ನು ಎದುರಿಸುವ ಸಾಧ್ಯತೆ ಇದೆ. ಆದರೂ, ಪರಸ್ಪರ ಹೊಂದಾಣಿಕೆಯಿಂದ ಇದನ್ನು ನಿಭಾಯಿಸಬಹುದು.
ಮೂಲಾ೦ಕ 3ರ ದಾಂಪತ್ಯ ಜೀವನ
ನಂಬಿಕೆಯೇ ಕೆಡಿಸುವ ದಿನಾಂಕಗಳು. 3, 12, 21, ಮತ್ತು 30ನೇ ತಾರೀಖುಗಳಲ್ಲಿ ಮದುವೆಯಾಗುವವರ ವೈವಾಹಿಕ ಜೀವನದಲ್ಲಿ ಮೂಲಾ೦ಕ 3 ರ ಪ್ರಭಾವ ಇರುತ್ತದೆ. ಈ ದಂಪತಿಗಳು ಅತ್ಯಂತ ಸಂತೋಷದ ದಾಂಪತ್ಯವನ್ನು ನಡೆಸುತ್ತಾರೆ. ಅವರಿಗೆ ತಮ್ಮ ಸಂಗಾತಿಯಿಂದ ಅಪಾರ ಪ್ರೀತಿ ಮತ್ತು ಬೆಂಬಲ ಸಿಗುತ್ತದೆ ಎಂದು ಸಂಖ್ಯಾಶಾಸ್ತ್ರ ತಿಳಿಸುತ್ತದೆ.
ಮೂಲಾ೦ಕ 4 ಮತ್ತು 5ರ ವೈವಾಹಿಕ ಜೀವನ
ಮದುವೆಗೆ ಈ ತಪ್ಪು ದಿನಾಂಕ ಆರಿಸಿದ್ರೆ ಜೀವನವೇ ಹಾಳಾಗುತ್ತೆ. 4, 13, 22, ಮತ್ತು 31ನೇ ತಾರೀಖುಗಳಲ್ಲಿ ವಿವಾಹವಾದವರಲ್ಲಿ ಮೂಲಾ೦ಕ 4 ಮತ್ತು 5 ರ ಪ್ರಭಾವ ಕಂಡುಬರುತ್ತದೆ. ಮೂಲಾ೦ಕ 4 ಹೊಂದಿರುವವರ ದಾಂಪತ್ಯ ಬಹುತೇಕ ಸಂತೋಷಮಯವಾಗಿರುತ್ತದೆ. ಆದರೆ, ಮೂಲಾ೦ಕ 5 ಇರುವವರ ವೈವಾಹಿಕ ಜೀವನದಲ್ಲಿ ಆಗಾಗ್ಗೆ ಸಂಘರ್ಷಗಳು ಮತ್ತು ಸವಾಲುಗಳು ಸೃಷ್ಟಿಯಾಗಬಹುದು.
ಮೂಲಾ೦ಕ 6 ಮತ್ತು 7ರ ದಾಂಪತ್ಯ ಜೀವನ
6, 15, ಮತ್ತು 24ನೇ ತಾರೀಖುಗಳಲ್ಲಿ ಮದುವೆಯಾಗುವವರಲ್ಲಿ ಮೂಲಾ೦ಕ 6 ರ ಪ್ರಭಾವವಿದ್ದು, ಅವರ ದಾಂಪತ್ಯವು ಉತ್ತಮ ಮತ್ತು ಸ್ಥಿರವಾಗಿರುತ್ತದೆ. ಮತ್ತೊಂದೆಡೆ, 7, 16, ಮತ್ತು 25ನೇ ತಾರೀಖುಗಳಲ್ಲಿ ವಿವಾಹವಾದವರಲ್ಲಿ ಮೂಲಾ೦ಕ 7 ರ ಪ್ರಭಾವ ಇರುತ್ತದೆ. ಇವರು ತಮ್ಮ ಸಂಗಾತಿಯಿಂದ ದೊಡ್ಡ ಪ್ರಮಾಣದ ಪ್ರೀತಿ ಮತ್ತು ಅನ್ಯೋನ್ಯತೆಯನ್ನು ಪಡೆಯುತ್ತಾರೆ.
ಮೂಲಾ೦ಕ 8 ಮತ್ತು 9ರ ವೈವಾಹಿಕ ಜೀವನ
ಎಷ್ಟೇ ಪ್ರೀತಿಯಿದ್ದರೂ ಸಂಸಾರ ಹಾಳಾಗುತ್ತೆ. ಸಂಖ್ಯಾಶಾಸ್ತ್ರದ ಪ್ರಕಾರ, 8, 17, ಮತ್ತು 26ನೇ ತಾರೀಖುಗಳಲ್ಲಿ ಮದುವೆಯಾದವರಲ್ಲಿ ಮೂಲಾ೦ಕ 8 ರ ಪ್ರಭಾವ ಇರುತ್ತದೆ. ಇಂತಹವರ ವೈವಾಹಿಕ ಜೀವನ ಹೆಚ್ಚಾಗಿ ಯಶಸ್ವಿ ಮತ್ತು ಸ್ಥಿರವಾಗಿರುತ್ತದೆ. ಹಾಗೆಯೇ, 9, 18, ಮತ್ತು 27ನೇ ತಾರೀಖುಗಳಲ್ಲಿ ವಿವಾಹವಾದವರಲ್ಲಿ ಮೂಲಾ೦ಕ 9 ರ ಪ್ರಭಾವ ಕಂಡುಬರುತ್ತದೆ. ಇವರ ದಾಂಪತ್ಯದಲ್ಲಿ ಒಂದಷ್ಟು ಏರಿಳಿತಗಳು ಕಂಡುಬಂದರೂ, ಒಟ್ಟಾರೆ ಜೀವನ ಉತ್ತಮವಾಗಿರುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications













