Latest Updates
-
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು!
ದ್ವಾದಶ ರಾಶಿಗಳಿಗೆಈ ವಾರದ(ನವೆಂಬರ್ 17-23) ಆರ್ಥಿಕ ಭವಿಷ್ಯ ಹೇಗಿದೆ?
ಈ ವಾರದ ರಾಶಿಫಲ ಪ್ರಕಾರ ನಿಮ್ಮ ಆರ್ಥಿಕ ಭವಿಷ್ಯ ಹೇಗಿದೆ ನೋಡೋಣ:
ಮೇಷ ರಾಶಿ
ಈ ವಾರ ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ನಿಮಗೆ ಅನುಕೂಲಕರವಾಗಿದೆ. ವ್ಯಾಪಾರಿಗಳಿಗೆ ಲಾಭ ಪಡೆಯಲು ಸಾಧ್ಯವಾಗುವುದು. ಹಣದ ಕಾರರಣದಿಂದ ಬಾಕಿಯುಳಿದಿದ್ದ ಕೆಲಸವನ್ನು ಪ್ರಾರಂಭಿಸಿಲು ಸಾಧ್ಯವಾಗುವುದು. ಆಸ್ತಿ ಸಂಬಂಧಿಸಿದ ವ್ಯವಹಾರ ಮಾಡಿದರೆ ಲಾಭ ಗಳಿಸುತ್ತೀರಿ. ಹೂಡಿಕೆ ದೃಷ್ಟಿಯಿಂದಲೂ ಉತ್ತಮಾಗಿದೆ.

ವೃಷಭ ರಾಶಿ
ವ್ಯಾಪಾರಸ್ಥರಿಗೆ ಈ ವಾರ ಲಾಭದಾಯಕವಾಗಿದೆ, ನಿಮ್ಮ ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುತ್ತೀರಿ, ಉದ್ಯೋಗಿಗಳ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ಶಾಪಿಂಗ್ ಮಾಡುವಿರಿ, ಆದಾಯ ಚೆನ್ನಾಗಿ ಇರುವುದರಿಂದ ಆರ್ಥಿಕ ಸಮಸ್ಯೆ ಇರಲ್ಲ.
ಮಿಥುನ ರಾಶಿ
ವೃತ್ತಿ ಬದುಕಿನ ದೃಷ್ಟಿಯಿಂದ ನಿಮಗೆ ಅನುಕೂಲಕರವಾಗರಲಿದೆ, ವ್ಯಾಪಾರಿಗಳು ಉತ್ತಮ ಲಾಭ ಪಡೆಯಲು ಸಾಧ್ಯವಾಗುವುದು. ಹಣಕಾಸಿನ ಸ್ಥಿತಿ ಸುಧಾರಿಸುವುದರಿಂದ ಹಣದ ಮುಗ್ಗಟ್ಟಿನಿಂದಾಗಿ ನಿಲ್ಲಿಸಿದ್ದ ಕೆಲಸವನ್ನು ಪ್ರಾರಂಭಿಸಲು ಸಾಧ್ಯವಾಗುವುದು.
ಕರ್ಕ ರಾಶಿ
ಕರ್ಕ ರಾಶಿಯವರಿಗೂ ಹಣಕಾಸಿನ ದೃಷ್ಟಿಯಿಂದ ಉತ್ತಮವಾಗಿದೆ. ವ್ಯಾಪಾರಸ್ಥರು ಉತ್ತಮ ಲಾಭಗಳಿಸುತ್ತೀರಿ. ಹೊಸ ಹೂಡಿಕೆಗೂ ಈ ಸಮಯ ಅನುಕೂಲಕರವಾಗಿದೆ.
ಸಿಂಹ ರಾಶಿ
ಸಿಂಹ ರಾಶಿಯವರು ಈ ವಾರ ಹಣದ ವಿಷಯದಲ್ಲಿ ಹೆಚ್ಚು ಜಾಗ್ರತೆವಹಿಸಬೇಕು, ಆರೋಗ್ಯ ಸಮಸ್ಯೆಗೆ ಹಣ ಖರ್ಚಾಗಬಹುದು, ನೀವು ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು. ಬಜೆಟ್ ಪ್ಲ್ಯಾನ್ ಮಾಡಿದರೆ ಖರ್ಚಿಗೆ ಕಡಿವಾಣ ಹಾಕಬಹುದು.
ಕನ್ಯಾ ರಾಶಿ
ಹಣಕಾಸಿನ ವಿಷಯದಲ್ಲಿ ಕನ್ಯಾ ರಾಶಿಯವರಿಗೂ ಈ ವಾರ ಅಷ್ಟೊಂದು ಅನುಕೂಲಕವರಲ್ಲ, ಖರ್ಚು ಹೆಚ್ಚಿರಲಿದೆ, ಆದರೂ ಅನಗ್ಯತ ಖರ್ಚಿಗೆ ಕಡಿವಾಣ ಹಾಕಿದರೆ ಒಳ್ಳೆಯದು, ಇಲ್ಲದಿದ್ದರೆ ತುಂಬಾನೇ ಕಷ್ಟವಾಗುವುದು.
ತುಲಾ ರಾಶಿ
ತುಲಾ ರಾಶಿಯವರು ಕೂಡ ಹಣದ ವಿಷಯದಲ್ಲಿ ಹೆಚ್ಚು ಜಾಗ್ರತೆವಹಿಸಬೇಕು, ಬಜೆಟ್ ಮೀರ ಖರ್ಚು ಮಾಡುವ ತಪ್ಪು ಮಾಡಬೇಡಿ, ಈ ಸಮಯದಲ್ಲಿ ಯಾವುದೇ ಹಣಕಾಸಿನ ರಿಸ್ಕ್ ತೆಗೆದುಕೊಳ್ಳಬೇಡಿ.
ವೃಶ್ಚಿಕ ರಾಶಿ
ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಕೆಲಸ ಹುಡುಕುತ್ತಿದ್ದರೆ ಕೆಲಸ ಸಿಗಬಹುದು, ಈ ವಾರ ಯಾವುದೇ ದೊಡ್ಡ ಖರ್ಚು ಇರಲ್ಲ. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಪ್ರಗತಿಯನ್ನು ಕಾಣಬಹುದು.
ಧನು ರಾಶಿ
ಈ ವಾರ ಹಣಕಾಸಿನ ದೃಷ್ಟಿಯಿಂದ ನಿಮಗೆ ಉತ್ತಮವಾಗಿದೆ. ಆಸ್ತಿ ಖರೀದಿ ಅಥವಾ ಮಾರಾಟಕ್ಕೆ ಈ ಸಮಯ ಅನುಕೂಲಕರವಾಗಿದೆ. ಬಜೆಟ್ ಪ್ಲ್ಯಾನ್ ಮಾಡಿ ಖರ್ಚು ಮಾಡಿದರೆ ಯಾವುದೇ ದೊಡ್ಡ ಸಮಸ್ಯೆ ಇರಲ್ಲ.
ಮಕರ ರಾಶಿ
ಮಕರ ರಾಶಿಯವರಿಗೆ ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ, ವ್ಯಾಪಾರಿಗಳಿಗೆ ಲಾಭ ದೊರೆಯಲಿದೆ, ಹೊಸ ಹೂಡಿಕೆ ಬಗ್ಗೆ ಆಲೋಚನೆ ಮಾಡುತ್ತಿದ್ದರೆ ಹೂಡಿಕೆಗೆ ಈ ಸಮಯ ಅನುಕೂಲಕರವಾಗಿದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ಈ ವಾರ ಅನುಕೂಲಕರವಾಗಿದೆ, ಆದರೆ ಹೂಡಿಕೆಗೆ ಈ ಸಮಯ ಅಷ್ಟೊಂದು ಅನುಕೂಲಕರವಲ್ಲ. ವ್ಯಾಪಾರಿಗಳಿಗೆ ಈ ಅವಧಿ ಸರಾಸರಿಯಾಗಿರಲಿದೆ, ಹೆಚ್ಚಿನ ಶ್ರಮ ಹಾಕಿದರೆ ಹೆಚ್ಚಿನ ಲಾಭ ಪಡೆಯಬಹುದು.
ಮೀನ ರಾಶಿ
ಈ ವಾರ ಮೀನ ರಾಶಿಯವರಿಗೆ ಆರ್ಥಿಕವಾಗಿ ತುಂಬಾ ಉತ್ತಮವಾಗಿದೆ. ವ್ಯಾಪಾರಿಗಳು ಲಾಭ ಗಳಿಸುತ್ತೀರಿ, ಆಸ್ತಿಯಲ್ಲಿ ಹೂಡಿಕೆ ಮಾಡಲು ಈ ಅವಧಿ ಅನುಕೂಲಕರವಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications