Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವೆಂಬರ್ ತಿಂಗಳ ಆರ್ಥಿಕ ಭವಿಷ್ಯ: ಈ ಮಾಸ 12 ರಾಶಿಗಳ ಆರ್ಥಿಕ ಪರಿಸ್ಥಿತಿ ಹೇಗಿರಲಿದೆ?
ಜ್ಯೋತಿಷ್ಯ ಪ್ರಕಾರ ನವೆಂಬರ್ ಮಾಸದ ರಾಶಿಫಲದಲ್ಲಿ ದ್ವಾದಶ ರಾಶಿಗಳ ಹಣಕಾಸಿನ ಪರಿಸ್ಥಿತಿ ಹೇಗಿದೆ ನೋಡೋಣ ಬನ್ನಿ:
ಮೇಷ ರಾಶಿ
ಗ್ರಹಗತಿಗಳ ಸ್ಥಾನವು ಮೇಷ ರಾಶಿಯವರಿಗೆ ತುಂಬಾನೇ ಅನುಕೂಲಕರವಾಗಿದೆ. ಹಾಗಾಗಿ ಈ ಮಾಸ ನಿಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನ ತುಂಬಾ ಚೆನ್ನಾಗಿರಲಿದೆ. ವೃತ್ತಿ ಬದುಕಿನಲ್ಲಿ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ನಡೆಯಲಿದೆ. ವ್ಯಾಪಾರಿಗಳು ಈ ಸಮಯದಲ್ಲಿ ಉತ್ತಮ ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ಕುಟುಂಬ ಜೀವನ ಚೆನ್ನಾಗಿರಲಿದೆ, ಮದುವೆಗೆ ಸಂಬಂಧ ನೋಡುತ್ತಿದ್ದರೆ ಈ ಸಮಯದಲ್ಲಿ ಒಳ್ಳೆಯ ಸಂಬಂಧ ಬರಬಹುದು. ಆರೋಗ್ಯದ ಕಡೆ ಮಾತ್ರ ಸ್ವಲ್ಪ ಗಮನಹರಿಸಿ.

ವೃಷಭ ರಾಶಿ
ನವೆಂಬರ್ ಮಾಸ ವೃಷಭ ರಾಶಿಯವರಿಗೆ ತುಂಬಾನೇ ಅನುಕೂಲಕರವಾಗಿದೆ, ನೀವು ಕೆಲಸದಲ್ಲಿ ಉತ್ತಮ ಪ್ರಯೋಜನ ಕಾಣಬಹುದು. ತುಂಬಾ ಸಮಯದಿಂದ ವಿದೇಶದಲ್ಲಿ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದರೆ ಈ ಸಮಯದಲ್ಲಿ ಉತ್ತಮ ಅವಕಾಶ ಪಡೆಯುತ್ತೀರಿ. ಆರ್ಥಿಕವಾಗಿ ಈ ಅವಧಿ ನಿಮಗೆ ತುಂಬಾನೇ ಪ್ರಯೋಜನಕಾರಿಯಾಗಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ನವೆಂಬರ್ ತಿಂಗಳು ಶುಭವಾಗಿದೆ, ಹಣಕಾಸಿನ ಪರಿಸ್ಥಿತಿ ತುಂಬಾ ಚೆನ್ನಾಗಿರಲಿದೆ. ಈ ಮಾಸ ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗಲಿದೆ. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಪ್ರಗತಿ ಕಾಣಬಹುದು.
ಕರ್ಕ ರಾಶಿ
ಈ ಮಾಸ ನೀವು ಹಣದ ವಿಷಯದಲ್ಲಿ ಜಾಗ್ರತೆವಹಿಸಬೇಕು, ವ್ಯಾಪಾರಿಗಳು ಈ ಅವಧಿಯಲ್ಲಿ ಸವಾಲು ಎದುರಿಸಬಹುದು, ಒಂದು 15-20 ದಿನಗಳು ಕಳೆದ ಮೇಲೆ ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು.
ಸಿಂಹ ರಾಶಿ
ಹಣಕಾಸಿನ ದೃಷ್ಟಿಯಿಂದ ನೋಡುವುದಾದರೆ ಈ ಮಾಸ ನಿಮಗೆ ಅಷ್ಟೊಂದು ಅನುಕೂಲಕರವಲ್ಲ, ವ್ಯಾಪಾರಿಗಳು ಯಾವುದೇ ದೊಡ್ಡ ಹೂಡಿಕೆ ಮಾಡಲು ಹೋಗಬೇಡಿ. ಹಣ ನಷ್ಟ ಉಂಟಾಗದಂತೆ ಜಾಗ್ರತೆವಹಿಸಿ, ಖರ್ಚು ಮಿತಿಯಲ್ಲಿ ಮಾಡಿ.
ಕನ್ಯಾ ರಾಶಿ
ಹಣಕಾಸಿನ ದೃಷ್ಟಿಯಿಂದ ನವೆಂಬರ್ ಮಾಸ ನಿಮಗೆ ಅನುಕೂಲಕರವಾಗಿದೆ. ವ್ಯಾಪಾರಿಗಳು ಈ ಅವಧಿಯಲ್ಲಿ ಉತ್ತಮ ಆರ್ಥಿಕ ಲಾಭ ಪಡೆಯುತ್ತೀರಿ. ನೀವು ಮಾಡುವ ಆರ್ಥಿಕ ಪ್ರಯತ್ನಕ್ಕೆ ಉತ್ತಮ ಫಲ ಸಿಗಲಿದೆ.
ತುಲಾ ರಾಶಿ
ಈ ಮಾಸ ನೀವು ಸ್ವಲ್ಪ ಜಾಗ್ರತೆವಹಿಸಬೇಕು, ಆರ್ಥಿಕ ಸಮಸ್ಯೆಗಳು ಎದುರಾಗಬಹುದು, ಖರ್ಚು ಹೆಚ್ಚಿರಲಿದೆ. ಈ ಅವಧಿಯಲ್ಲಿ ನೀವು ಯಾವುದೇ ದೊಡ್ಡ ಹೂಡಿಕೆ ಮಾಡಲು ಹೋಗಬೇಡಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ಅವಧಿ ತುಂಬಾ ಚೆನ್ನಾಗಿರಲಿದೆ, ವ್ಯಾಪಾರಿಗಳು ಉತ್ತಮ ಲಾಭ ಪಡೆಯುತ್ತೀರಿ, ಈ ಅವಧಿಯಲ್ಲಿ ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯುತ್ತೀರಿ. ಹೂಡಿಕೆಗೂ ಈ ಸಮಯ ಚೆನ್ನಾಗಿರಲಿದೆ.
ಧನು ರಾಶಿ
ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ಸಮಯದಲ್ಲಿ ಖರ್ಚು ಹೆಚ್ಚಿರಲಿದೆ, ಹಣವನ್ನು ಹೊಂದಿಸುವುದು ಕಷ್ಟವಾಗಬಹುದು. ಸಾಲ ಮಾಡಿ ದೊಡ್ಡ ಹೂಡಿಕೆ ಮಾಡುವುದು ಮಾಡಬೇಡಿ.
ಮಕರ ರಾಶಿ
ಮಕರ ರಾಶಿಯವರು ಈ ನವೆಂಬರ್ ಮಾಸದಲ್ಲಿ ಹೆಚ್ಚು ಜಾಗ್ರತೆವಹಿಸಬೇಕು, ವ್ಯಾಪಾರಿಗಳು ಹೂಡಿಕೆಗೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು. ಹಣಕಾಸಿನ ಸಮಸ್ಯೆ ಇರಲ್ಲ ಆದರೆ ಹಣದ ಹಣದ ನಷ್ಟ ಉಂಟಾಗದಂತೆ ಜಾಗ್ರತೆವಹಿಸಬೇಕು.
ಕುಂಭ ರಾಶಿ
ಕುಂಭ ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ಈ ಮಾಸ ಅಷ್ಟೊಂದು ಅನುಕೂಲಕರವಲ್ಲ. ನೀವು ಆರ್ಥಿಕ ನಿರ್ಧಾರಗಳನ್ನು ಆಲೋಚಿಸಿ ತೆಗೆದುಕೊಳ್ಳಬೇಕು. ವೃತ್ತಿ ಬದುಕಿನ ಸವಾಲುಗಳು ಕೂಡ ಆರ್ಥಿಕ ಜೀವನದ ಮೇಲೆ ಪರಿಣಾಮ ಬೀರಬಹುದು.
ಮೀನ ರಾಶಿ
ಹಣಕಾಸಿನ ನಿರ್ಧಾರಗಳನ್ನು ತಾಳ್ಮೆಯಿಂದ ತೆಗೆದುಕೊಂಡರೆ ಒಳ್ಳೆಯದು. ವೃತ್ತಿ ಬದುಕಿನಲ್ಲಿ ಸವಾಲುಗಳು ಬರಬಹುದು. ವೃತ್ತಿ ಜೀವನಕ್ಕೆ ಸಂಬಂಧಿಸಿದ ನಿರ್ಧಾರ ಆತುರದಿಂದ ತೆಗೆದುಕೊಳ್ಳಬೇಡಿ, ಆರ್ಥಿಕವಾಗಿ ಪರಿಣಾಮ ಬೀರಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications