Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವೆಂಬರ್ ಮಾಸದ ಕೊನೆಯ ವಾರ ನಿಮ್ಮ ಆರ್ಥಿಕ ಪರಿಸ್ಥಿತಿ ಹೇಗಿರಲಿದೆ?
ಈ ವಾರದ ರಾಶಿಫಲ ಪ್ರಕಾರ ದ್ವಾದಶ ರಾಶಿಗಳ ಆರ್ಥಿಕ ಜೀವನ ಹೇಗಿರಲಿದೆ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಆರ್ಥಿಕವಾಗಿ ಉತ್ತಮವಾಗಿದೆ, ವ್ಯಾಪಾರಿಗಳು ಲಾಭ ಗಳಿಸಲು ಸಾಧ್ಯವಾಗುವುದು. ಹಣಕ್ಕೆ ಸಂಬಂಧಿಸಿದ ತೊಂದರೆ ಉಂಟಾಗುವುದಿಲ್ಲ, ಹೀಗಾಗಿ ಈ ಕಾರಣಕ್ಕೆ ಪ್ರಮುಖ ಕೆಲಸಕ್ಕೆ ಅಡಚಣೆ ಉಂಟಾಗುವುದಿಲ್ಲ. ಉಳಿತಾಯ ಅಥವಾ ಹೂಡಿಕೆಗೆ ಈ ವಾರ ಉತ್ತಮವಾಗಿದೆ.

ವೃಷಭ ರಾಶಿ
ಈ ವಾರ ಹಣಕಾಸಿನ ದೃಷ್ಟಿಯಿಂದ ನೀವು ಜಾಗ್ರತೆವಹಿಸೇಕು, ಹೂಡಿಕೆ ಮಾಡುವಾಗ ಮೋಸ ಹೋಗದಂತೆ ತುಂಬಾನೇ ಜಾಗ್ರತೆವಹಿಸಬೇಕು, ವ್ಯಾಪಾರಗಳು ಕೂಡ ವ್ಯವಹಾರದಲ್ಲಿ ನಷ್ಟ ಉಂಟಾಗದಂತೆ ಎಚ್ಚರಿಕೆವಹಿಸಬೇಕು, ಈ ವಾರ ಖರ್ಚು ಕೂಡ ಅಧಿಕವಿರಲಿದೆ.
ಮಿಥುನ ರಾಶಿ
ಹಣಕಾಸಿನ ದೃಷ್ಟಿಯಿಂದೀ ವಾರ ಅಷ್ಟು ಅನುಕೂಲಕರವಲ್ಲ, ಹಣದ ಖರ್ಚು ಹೆಚ್ಚು ಬರಲಿದೆ, ವ್ಯಾಪಾರಿಗಳಿಗೂ ಅಷ್ಟೆ ನಿರೀಕ್ಷೆಯಂತೆ ಲಾಭ ಪಡೆಯುವುದು ಕಷ್ಟವಾಗುವುದು. ಈ ವಾರ ಯಾವುದೇ ದೊಡ್ಡ ವ್ಯವಹಾರ ಮಾಡುವಾಗ ಹಣದ ಬಗ್ಗೆ ತುಂಬಾನೇ ಜಾಗ್ರತೆವಹಿಸಬೇಕು.ಆರೋಗ್ಯಕ್ಕಾಗಿ ಕೂಡ ಹೆಚ್ಚಿನ ಹಣ ಖರ್ಚಾಗಬಹುದು.
ಕರ್ಕ ರಾಶಿ
ಹಣಕಾಸಿನ ದೃಷ್ಟಿಯಿಂದ ಈ ವಾರ ನಿಮಗೆ ಅನುಕೂಲಕರವಾಗಿರಲಿದೆ, ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಲಾಭ ಗಳಿಸಲು ಸಾಧ್ಯವಾಗುವುದು, ಉದ್ಯೋಗಿಗಳಲ್ಲಿಯೂ ಹಣಕಾಸಿನ ಪರಿಸ್ಥಿತಿ ಚೆನ್ನಾಗಿರಲಿದೆ, ತಿಂಗಳ ಕೊನೆಯ ವಾರ ಆರ್ಥಿಕ ದೃಷ್ಟಿಯಿಂದ ಉತ್ತಮವಾಗಿದೆ.
ಸಿಂಹ ರಾಶಿ
ವ್ಯಾಪಾರಸ್ಥರಿಗೆ ಈ ವಾರ ಅನುಕೂಲಕರವಾಗಿರಲಿದೆ, ವ್ಯಾ ಪಾರಿಗಳಿಗೆ ಈ ವಾರ ಉತ್ತಮ ಲಾಭ ದೊರೆಯಲಿದೆ. ಹಣಕ್ಕೆ ಸಂಬಂಧಿಸಿದ ಪ್ರಯತ್ನದಲ್ಲಿ ಯಶಸ್ಸು ಪಡೆಯುತ್ತೀರಿ. ಒಟ್ಟಿನಲ್ಲಿ ಈ ವಾರ ಅನುಕೂಲಕರವಾಗಿರಲಿದೆ.
ಕನ್ಯಾ ರಾಶಿ
ಹಣಕಾಸಿನ ದೃಷ್ಟಿಯಿಂದ ಈವಾರ ಉತ್ತಮವಾಗಿದೆ, ಹಣದ ಅವಶ್ಯಕತೆ ಪೂರೈಕೆಯಾಗಲಿದೆ, ನೀವು ಸಾಲ ಕೇಳಿದ್ದರೆ ಅದು ಸಿಗಲಿದೆ, ಹಣದ ಸಮಸ್ಯೆ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಲ್ಲ.
ತುಲಾ ರಾಶಿ
ತುಲಾರಾಶಿಯವರು ಈ ವಾರ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವಾಗ ಅನುಭವಿಗಳ ಸಲಹೆಪ ಪಡೆಯುವುದು ಒಳ್ಳೆಯದು.ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ನಿರೀಕ್ಷೆಯಂತೆ ಲಾಭ ಪಡೆಯುವುದು ಕಷ್ಟವಾಗುವುದು, ನಿಮ್ಮ ಸಮರ್ಥ್ಯ ಮೀರಿ ದೊಡ್ಡ ಖರ್ಚುಮಾಡುವ ತಪ್ಪು ಮಾಡದಿರಿ.
ವೃಶ್ಚಿಕ ರಾಶಿ
ಈ ವಾರ ಹಣಕಾಸಿನ ವಿಚಾರದಲ್ಲಿ ನೀವು ಸ್ವಲ್ಪ ಜಾಗ್ರತೆವಹಿಸಬೇಕು, ಯಾವುದೇ ಹೂಡಿಕೆ ಮಾಡುವ ಮುನ್ನ ಅದರ ಬಗ್ಗೆ ಚೆನ್ನಾಗಿ ಆಲೋಚನೆ ಮಾಡಿ ನಂತರ ಹೂಡಿಕೆ ಮಾಡುವುದು ಒಳ್ಳೆಯದು ಆಸ್ತಿ ಸಂಬಂಧಿಸಿದ ವ್ಯವಹಾರ ಮಾಡುವುದಾದರೆ ತುಂಬಾನೇ ಜಾಗ್ರತೆವಹಿಸುವಂತೆ ಸಲಹೆ ನೀಡಲಾಗುವುದು.
ಧನು ರಾಶಿ
ಧನು ರಾಶಿಯವರಿಗೆ ಈ ವಾರ ಅನುಕೂಲಕರವಾಗಿರಲಿದೆ. ವ್ಯಾಪಾರಿಗಳಿಗೆ ಲಾಭದಾಯಕವಾಗಿರಲಿದೆ, ಆಸ್ತಿ ಸಂಬಂಧಿಸಿದ ವ್ಯವಹಾರ ಮಾಡಲು ಈ ವಾರ ಉತ್ತಮವಾಗಿದೆ. ಯಾವುದೇ ಪ್ರಮುಖ ಹಣದ ವ್ಯವಹಾರ ಮಾಡುವಾಗ ಡಾಕ್ಯೂಮೆಂಟ್ ಕಡೆಗೆ ಗಮನಹರಿಸಿ.
ಮಕರ ರಾಶಿ
ಈ ವಾರ ಆರ್ಥಿಕ ವಿಷಯದಲ್ಲಿ ಮಿಶ್ರಫಲ, ಆದಾಯಕ್ಕಿಂತ ಖರ್ಚು ಹೆಚ್ಚಿರಬಹುದು, ಬಜೆಟ್ ಪ್ಲ್ಯಾನ್ ಮಾಡಿ ಅದರಂತೆ ಖರ್ಚು ಮಾಡಿದರೆ ಒಳ್ಳೆಯದು, ವ್ಯಾಪಾರಿಗಳು ಕೂಡ ತಮ್ಮ ವ್ಯವಹಾರದ ಕಡೆಗೆ ಗಮನಹರಿಸಬೇಕು.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ವಾರ ಉತ್ತಮವಾಗಿದೆ, ಹೆಚ್ಚಿನ ಖರ್ಚು ಇರಲ್ಲ, ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುವುದು, ವ್ಯವಹಾರ ಮಾಡಿದರೆ ಲಾಭ ಗಳಿಸುತ್ತೀರಿ.
ಮೀನ ರಾಶಿ
ಈ ವಾರ ಆರ್ಥಿಕ ದೃಷ್ಟಿಯಿಂದ ಉತ್ತಮವಾಗಿದೆ, ವ್ಯಾಪಾರಿಗಳಿಗೆ ಹಣದ ಲಾಭವಿರಲಿದೆ. ಮೀನ ರಾಶಿಯವರಿಗೆ ಈ ವಾರ ಉಳಿತಾಯ ಮಾಡಲು ಸಾಧ್ಯವಾಗುವುದು. ಯಾವುದೇ ದೊಡ್ಡ ಖರ್ಚು ಇರಲ್ಲ. ಹಣಕಾಸಿನ ದೃಷ್ಟಿಯಿಂದ ಈ ವಾರ ನಿಮಗೆ ಉತ್ತಮವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications