ಯಾರಾರು ನವೆಂಬರ್‌ನಲ್ಲಿ ಜನಿಸಿದ್ದಾರೋ ಅವರಲ್ಲಿ ಕಂಡು ಬರುವ ಸ್ವಭಾವಗಳಿವು

ಪ್ರತಿಯೊಬ್ಬ ವ್ಯಕ್ತಿ ಸ್ವಭಾವದಲ್ಲಿ ಇತರ ವ್ಯಕ್ತಿಗಿಂತ ಭಿನ್ನವಾಗಿರುತ್ತಾರೆ, ಒಡ-ಹುಟ್ಟಿದವರಾಗಿದ್ದರೂ ಎಲ್ಲರ ಸ್ವಭಾವ ಒಂದೇ ಇರುವುದಿಲ್ಲ ಹೌದು ತಾನೇ? ಆದರೆ ಗುಣಗಳಲ್ಲಿ ಕೆಲವರಲ್ಲಿ ಸಾಮ್ಯತೆ ಕಾಣಬಹುದು. ಜ್ಯೋತಿಷ್ಯ ಪ್ರಕಾರ ಅವರ ರಾಶಿ, ಅವರು ಯಾವ ತಿಂಗಳಿನಲ್ಲಿ ಜನಿಸಿದರು ಎಂಬುವುದರಲ್ಲಿ ಸಾಮ್ಯತೆ ಇರಲಿದೆ. ಜ್ಯೋತಿಷ್ಯ ಪ್ರಕಾರ ನವೆಂಬರ್‌ನಲ್ಲಿ ಜನಿಸಿದವರಲ್ಲಿ ಈ ಗುಣ ಲಕ್ಷಣಗಳಿರುತ್ತದೆ:

November born people unique character

ನವೆಂಬರ್‌ನಲ್ಲಿ ಜನಿಸಿದವರಲ್ಲಿ ಕಂಡು ಬರುವ ಗುಣಗಳಿವು

ಇವರು ಸವಾಲುಗಳನ್ನು ಎದುರಿಸುವ ಗುಣ ಇವರಲ್ಲಿರುತ್ತದೆ
ಇವರು ಒಂದು ನಿರ್ಧಾರ ಮಾಡಿದರೆ ತನ್ನ ಗುರಿ ಮುಟ್ಟುವವರೆಗೆ ಅವರು ವಿಶ್ರಾಂತಿ ಪಡೆಯಲ್ಲ. ಇವರು ಸವಾಲುಗಳನ್ನು ಸ್ವೀಕರಿಸಲು ಹಿಂದೇಟು ಹಾಕುವುದಿಲ್ಲ, ಧೈರ್ಯವೇ ಇವರ ಬಂಡವಾಳ. ತಮ್ಮ ಕೆಲಸ ಮುಗಿಸುವವರೆಗೆ ಇವರು ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ.

ತಮ್ಮ ಭಾವನೆಗಳನ್ನು ಯಾರ ಜೊತೆ ಹಂಚಿಕೊಳ್ಳುವುದಿಲ್ಲ
ಇವರು ತಮ್ಮ ಭಾವನೆಗಳನ್ನು ಯಾರ ಜೊತೆ ಹಂಚಿಕೊಳ್ಳುವುದಿಲ್ಲ. ತಮ್ಮ ಖುಷಿ ಹಂಚಿಕೊಳ್ಳುತ್ತಾರೆ, ತಾನು ಅನುಭವಿಸುತ್ತಿರುವ ನೋವಾಗಲಿ, ದುಃಖವಾಗಲಿ, ಸವಾಲುಗಳಾಗಲಿ ಯಾರ ಜೊತೆ ಹಂಚಿಕೊಳ್ಳುವುದಿಲ್ಲ. ಹಾಗಾಗಿ ಇವರು ಬೇಗನೆ ಓಪನ್‌ ಅಪ್ ಆಗಲ್ಲ. ಹೀಗಾಗಿ ಇವರ ಭಾವನೆಗಳು ಸುಲಭವಾಗಿ ಇತರರಿಗೆ ಅರ್ಥವಾಗಲ್ಲ.

ಬುದ್ಧಿವಂತರು
ಇವರು ಏನೇ ಸವಾಲುಗಳು ಬರಲಿ ತಮ್ಮ ಬುದ್ಧಿಶಕ್ತಿಯಿಂದ ಬಗೆಹರಿಸಲು ಪ್ರಯತ್ನ ಮಾಡಬೇಕು. ಇವರ ಈ ಗುಣವೇ ಇವರ ಪ್ಲಸ್ ಹಾಗೂ ಮೈನಸ್‌, ಕೆಲವರಿಗೆ ಇವರ ಗುಣದಿಂದಾಗಿ ಅಹಂಕಾರಿಗಳಂತೆ ಕಾಣಬಹುದು ಅಥವಾ ಅವರನ್ನು ಡಾಮಿನೇಟ್‌ ಮಾಡುತ್ತಿರುವಂತೆ ಕೂಡ ಅನಿಸಬಹುದು. ಇನ್ನು ಇವರ ಬುದ್ಧಿವಂತಿಕೆಯನ್ನು ಮೆಚ್ಚಿಕೊಳ್ಳದೆ ಇರಲು ಕೂಡ ಸಾಧ್ಯವಿಲ್ಲ.

ಸಂಬಂಧದ ವಿಷಯದಲ್ಲಿ ಇವರು ಹೇಗಿರುತ್ತಾರೆ?

ಸಂಬಂಧಕ್ಕೆ ತುಂಬಾನೇ ಪ್ರಾಮುಖ್ಯತೆ ನೀಡುತ್ತಾರೆ, ಅಲ್ಲದೆ ಸಂಬಂಧದಲ್ಲಿ ತುಂಬಾನೇ ನಿಯತ್ತಿನಿಂದ ಇರ್ತಾರೆ, ಆದರೆ ಅವರ ನಂಬಿಕೆಗೆ ಮೋಸ ಆದರೆ ಮಾತ್ರ ಕ್ಷಮೆ ಎಂಬುವುದು ಸಿಗುವುದೇ ಇಲ್ಲ. ಸ್ನೇಹಿತರಾಗಲಿ, ಮನೆಯವರಾಗಲಿ, ಸಂಗಾತಿಯಾಗಲಿ ಒಮ್ಮೆ ಸಂಬಂಧ ಕಡಿದುಕೊಂಡರೆ ಅವರಿಂದ ತುಂಬಾ ದೂರವಿರುತ್ತಾರೆ.

ಬೇರೆಯವರು ಏನು ಹೇಳುತ್ತಾರೆ ಎಂದು ತಲೆ ಕೆಡಿಸಿಕೊಳ್ಳುವುದಿಲ್ಲ?
ಇವರು ಇತರರಿಗಿಂತ ಭಿನ್ನ , ಅವರಿಗೆ ನಾನು ಏನು ಮಾಡುತ್ತಿದ್ದೇನೆ, ಸರಿ-ತಪ್ಪುಗಳ ಬಗ್ಗೆ ಗೊತ್ತಿರುತ್ತದೆ, ಹಾಗಾಗಿ ಇತರರು ಏನು ಹೇಳುತ್ತಾರೆ ಎಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಇವರು ಯಾವಾಗಲೂ ಔಟ್‌ ಆಫ್‌ ಬಾಕ್ಸ್ ಯೋಚನೆ ಮಾಡುತ್ತಾರೆ. ತನ್ನ ಆಪ್ತರಿಗೆ ಕಷ್ಟ ಎಂದಾಗ ಹೆಗಲು ಕೊಡುತ್ತಾರೆ. ತಮ್ಮ ಕಷ್ಟಗಳನ್ನು ಬೇರೆಯವರ ಜೊತೆ ಹೇಳಿಕೊಳ್ಳಲ್ಲ, ಆದರೆ ಬೇರೆಯವರ ನೋವು, ಕಷ್ಟಗಳಿಗೆ ಹೆಗಲು ಕೊಡುತ್ತಾರೆ. ಎಲ್ಲರನ್ನೂ ಒಂದೇ ರೀತಿ ನೋಡುತ್ತಾರೆ, ಅಲ್ಲದೆ ಬೇಕಂತ ಯಾರಿಗೂ ನೋವುಂಟು ಮಾಡಲ್ಲ.

ಹಠಮಾರಿಗಳೂ ಹೌದು
ಅವರಿಗೆ ಸರಿ ಅನಿಸಿದರೆ ಅದು ಯಾರು ಹೇಳಿದರೂ ಬದಲಾಯಿಸಲು ಸಿದ್ಧವಿರಲ್ಲ, ಕೆಲವೊಂದು ವಿಚಾರದಲ್ಲಿ ತುಂಬಾನೇ ಹಠ ಮಾಡುತ್ತಾರೆ, ಈ ಸ್ವಭಾವ ಇತರರಿಗೆ ಕಿರಿಕಿರಿ ಅನಿಸಬಹುದು. ತಮ್ಮ ಈ ಸ್ವಭಾವದಿಂದಾಗಿ ಇವರ ಜೊತೆ ಇರುವವರಿಗೆ ಇವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಅನಿಸಬಹುದು.

ಬೇಗನೆ ಕೋಪ ಪಡಲ್ಲ, ಆದರೆ ಕೋಪಗೊಂಡರೆ ಸಹಿಸಲ್ಲ
ಇವರು ಬೇಗನೆ ಕೋಪಗೊಳ್ಳಲ್ಲ, ಅವರನ್ನು ಕೋಪಗೊಳ್ಳುವಂತೆ ಮಾಡಿದರೆ ಮತ್ತೆ ಅವರನ್ನು ಎದುರಿಸುವುದು ಕಷ್ಟವಾಗುವುದು ಅಷ್ಟೊಂದು ಉಗ್ರ ರೂಪವನ್ನೇ ತಾಳುತ್ತಾರೆ. ಸಾಮಾನ್ಯವಾಗಿ ಇವರು ತುಂಬಾನೇ ಶಾಂತ ಸ್ವಭಾವದವರಂತೆ ಕಾಣಿಸಿಕೊಳ್ಳುತ್ತಾರೆ.

ಈ ಎಲ್ಲಾ ಗುಣಗಳನ್ನು ನವೆಂಬರ್‌ನಲ್ಲಿ ಜನಿಸಿದವರಲ್ಲಿ ಖಂಡಿತ ಗಮನಿಸಿರುತ್ತೀರಿ. ಎಲ್ಲರಂತೆ ಇವರಲ್ಲಿಯೂ ಒಳ್ಳೆಯ-ಕೆಟ್ಟ ಗುಣಗಳಿರುತ್ತದೆ, ಕೆಟ್ಟ ಗುಣಗಳೆಂದರೆ ಹಠಮಾರಿ ಸ್ವಭಾವ, ಇಗಟಾಗಿ ಅನಿಸುವುದು. ಒಳ್ಳೆಯ ಗುಣವೆಂದರೆ ಯಾರಿಗೆ ಏನೇ ಕಷ್ಟಬರಲಿ ಹೆಗಲು ಕೊಟ್ಟು ನಿಲ್ಲುತ್ತಾರೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

November Born People Unique Personalities In Kannada

November born people for these qualities always looks different than others, read on...
Story first published: Wednesday, October 30, 2024, 13:45 [IST]
X
Desktop Bottom Promotion