Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವೆಂಬರ್ 26 ದಿನದ ರಾಶಿಫಲ: ಈ ದಿನ 12 ರಾಶಿಗಳಿಗೆ ಹೇಗಿರಲಿದೆ
ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಈ ದಿನ ನಿಮಗೆ ಹೇಗಿರಲಿದೆ ಎಂದು ನೋಡೋಣ
ಮೇಷ ರಾಶಿ
ಈ ದಿನ ವೃತ್ತಿ ಜೀವನದ ದೃಷ್ಟಿಯಿಂದ ತುಂಬಾ ಅನುಕೂಲಕರವಾಗಿರಲಿದೆ, ವೃತ್ತಿ ಜೀವನದಲ್ಲಿ ಹೊಸದನ್ನು ಕಲಿಯುವ ಅವಕಾಶ ದೊರೆಯಲಿದೆ. ಹಣಕಾಸಿ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ. ಈ ದಿನ ಹೂಡಿಕೆ ಬಗ್ಗೆ ಆಲೋಚಿಸಲು ಉತ್ತಮವಾಗಿದೆ. ಕುಟುಂದ ಜೊಎಗೆ ಸಂತೋಷವಾಗಿ ಕಳೆಯಬಹುದು.

ವೃಷಭ ರಾಶಿ
ಈ ದಿನ ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ, ಈ ದಿನ ನಿಮ್ಮ ಕೆಲಸದಿಂದ ನೀವು ಗುರುತಿಸಿಕೊಳ್ಳುತ್ತೀರಿ, ಈ ದಿನ ವೃತ್ತಿ ಬದುಕಿನಲ್ಲಿ ಒತ್ತಡ ಹೆಚ್ಚಿರಲಿದೆ, ಹಾಗಾಗಿ ಕುಟುಂಬದ ಕಡೆಗೆ ಗಮನಹರಿಸಲು ಕಷ್ಟವಾಗುವುದು.
ಮಿಥುನ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿರಲಿದೆ, ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ನಡೆಯಲಿದೆ. ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಾದರೂ ಅದರ ಬಗ್ಗೆ ಸ್ಪಷ್ಟತೆ ಇರುವುದರಿಂದ ನಿಮ್ಮ ನಿರ್ಧಾರಗಳಿಂದ ಪ್ರಯೋಜನ ಪಡೆಯಲು ಸಧ್ಯವಾಗುವುದು. ಕುಟುಂಬ ಜೀವನದ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ.
ಕರ್ಕ ರಾಶಿ
ಈ ದಿನ ನೀವು ಕೋಪವನ್ನು ನಿಯಂತ್ರಿಸುವಂತೆ ಸಲಹೆ ನೀಡಲಾಗುವುದು, ಏನೇ ಮಾತನಾಡುವುದಾದರೂ ಆಲೋಚಿಸಿ ಮಾತನಾಡಿ. ಹಣಕಾಸಿನ ದೃಷ್ಟಿಯಿಂದ ನೋಡುವುದಾದರೆ ಬರಬೇಕಾಗಿರುವ ಹಣ ನಿಮ್ಮ ಕೈ ಸೇರಲಿದೆ. ಪ್ರಯಾಣ ಮಾಡುವುದಾದರೆ ಬೆಲೆಬಾಳುವ ವಸ್ತುಗಳು ಕಳೆದು ಹೋಗದಂತೆ ಜಾಗ್ರತೆವಹಿಸಿ.
ಸಿಂಹ ರಾಶಿ
ಈ ದಿನ ನಿಮಗೆ ಉತ್ತಮವಾಗಿರಲಿದೆ, ವೃತ್ತಿ ಬದುಕಿನಲ್ಲಿ ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ. ಆಸ್ತಿ ಸಂಬಂಧಿಸಿದ ಹೂಡಿಕೆಗೆ ಈ ದಿನ ಉತ್ತಮವಾಗಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಸಂಬಂಧ ತುಂಬಾ ಚೆನ್ನಾಗಿರಲಿದೆ, ಮನೆಯ ವಾತಾವರಣ ಚೆನ್ನಾಗಿರಲಿದೆ.
ಕನ್ಯಾ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿರಲಿದೆ. ಆದರೆ ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ವ್ಯಾಪಾರಸ್ಥರಿಗೆ ಈ ದಿನ ಅನುಕೂಲಕರವಾಗಿರಲಿದೆ, ಹಣಕಾಸಿನ ಪರಿಸ್ಥಿತಿ ತುಂಬಾ ಚೆನ್ನಾಗರಲಿದೆ, ವೈವಾಹಿಕ ಹಾಗೂ ಕುಟುಂಬ ಜೀವನ ಚೆನ್ನಾಗಿರಲಿದೆ.
ತುಲಾ ರಾಶಿ
ಈ ದಿನ ನಿಮಗೆ ಉತ್ತಮವಾಗಿರಲಿದೆ, ಆರ್ಥಿಕ ಜೀವನ ಕೂಡ ತುಂಬಾ ಚೆನ್ನಾಗಿರಲಿದೆ. ಆದರೆ ಬಜೆಟ್ ಮೀರಿ ಖರ್ಚು ಮಾಡದಿರಿ, ವೈವಾಹಿಕ ಜೀವನದಲ್ಲಿ ಹೊಂದಣಿಕೆ ಇರಲಿದೆ, ಆರೋಗ್ಯದ ದೃಷ್ಟಿಯಿಂದಲೂ ಈ ದಿನ ಉತ್ತಮವಾಗಿದೆ.
ವೃಶ್ಚಿಕ ರಾಶಿ
ನೀವಿಂದು ಕೆಲಸ ಕಾರ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು, ಒಂದು ಚಕ್ಕ ತಪ್ಪು ನಷ್ಟವನ್ನು ಉಂಟು ಮಾಡುವುದು, ಹೂಡಿಕೆ ಬಗ್ಗೆ ಕೂಡ ಜಾಗ್ರತೆವಹಿಸಬೇಕು, ನೀವು ಅನಗ್ಯತ ಚಿಂತೆ ಬಿಟ್ಟು ಕೆಲಸ ಕಾರ್ಯದತ್ತ ಗಮನಹರಿಸಿ. ಕುಟುಂಬದಲ್ಲಿನ ಸಮಸ್ಯೆ ತಾಳ್ಮೆಯಂದ ಬಗೆಹರಿಸಲು ಪ್ರಯತ್ನಿಸಿ.
ಧನು ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿರಲಿದೆ. ನಿಮ್ಮೆಲ್ಲಾ ಕೆಲಸ ಕಾರ್ಯಗಳು ನಿಮ್ಮ ಯೋಜನೆಯಂತೆಯೇ ಪೂರ್ಣವಾಗಲಿದೆ, ಆರ್ಥಿಕ ಸ್ಥಿತಿ ಕೂಡ ಉತ್ತಮವಾಗಿರಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ, ಈ ದಿನ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ.
ಮಕರ ರಾಶಿ
ಈ ದಿನ ಹಣಕಾಸಿನ ವಿಚಾರಗಳ ಕಡೆಗೆ ಗಮನಹರಿಸುತ್ತೀರಿ, ಅನಗ್ಯತ ಖರ್ಚುಗಳನ್ನು ನಿಯಂತ್ರಿಸಿ. ವೃತ್ತಿ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ.
ಕುಂಭ ರಾಶಿ
ಈ ದಿನ ನೀವು ಜಾಗ್ರತೆವಹಿಸಬೇಕು, ಖರ್ಚುಗಳನ್ನು ನಿಯಂತ್ರಣ ಮಾಡದಿದ್ದರೆ ಕಷ್ಟವಾಗಬಹುದು, ಹೆಚ್ಚಿನ ಓಡಾಟ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು, ಪ್ರೇಮಿಗಳಿಗೆ ಈ ದಿನ ಉತ್ತಮವಾಗಿದೆ.
ಮೀನ ರಾಶಿ
ನೀವು ಆರೋಗ್ಯದ ಕಡೆಗೆ ಗಮನಹರಿಸಿ. ನೀವು ಕೋಪವನ್ನು ನಿಯಂತ್ರಿಸಿ, ಹಣಕಾಸಿನ ವಿಚಾರದಲ್ಲಿ ನಿಯಂತ್ರಣ ಒಳ್ಳೆಯದು. ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯ ಬರಬಹುದು, ತಾಳ್ಮೆಯಿಂದ ಬಗೆಹರಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications