November 2025 Horoscope: ನವೆಂಬರ್ ಮಾಸಿಕ ರಾಶಿಫಲ: ನಿಮ್ಮ ರಾಶಿಯಲ್ಲಿ ಏನಿದೆ?

ನವೆಂಬರ್ 2025ರ ನಿಮ್ಮ ಮಾಸಿಕ ರಾಶಿಫಲ (November 2025 Horoscope)

ಮೇಷ ರಾಶಿ

ಮೇಷ ರಾಶಿ ಜನರಿಗೆ ಈ ನವಂಬರ್ ತಿಂಗಳು ಬಹಳ ಅನುಕೂಲಗಳ ತರಲಿದೆ. ನಿಮ್ಮ ಜೀವನದಲ್ಲಿ ಅನೇಕ ರೀತಿಯ ಸಕಾರಾತ್ಮಕ ಬದಲಾವಣೆಗಳಿಗೆ ಈ ತಿಂಗಳು ಕಾರಣ‍ವಾಗುತ್ತಿದೆ. ನೀವು ಬಹಳ ದೊಡ್ಡ ಅಥವಾ ದಿಟ್ಟ ನಿರ್ಧಾರಗಳ ತೆಗೆದುಕೊಳ್ಳುವ ತಿಂಗಳು. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗುತ್ತದೆ. ನಿಮ್ಮ ಹಣಕಾಸು ವಿಚಾರಗಳಲ್ಲಿ ನಿಮಗೆ ಶುಭವಿದೆ. ಅದ್ರಲ್ಲೂ ನಿಮ್ಮ ದೊಡ್ಡ ವ್ಯವಹಾರಗಳಲ್ಲಿ ಶುಭವಾಗುತ್ತದೆ. ಆರೋಗ್ಯದಲ್ಲಿನ ಚೇತರಿಕೆಯು ನಿಮಗೆ ಕೆಲಸಗಳಲ್ಲಿ ತೊಡಗಲು ನೆರವಾಗುತ್ತದೆ. ಕೌಟುಂಬಿಕ ಕಲಹ ಕಡಿಮೆಯಾಗಲಿದೆ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಈ ನವೆಂಬರ್ ತಿಂಗಳು ಸಂಬಂಧಗಳಲ್ಲಿ ಮಧುರವಾಗುತ್ತಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಶುಭ ಸುದ್ದಿಗಳ ಪಡೆಯಲು ಇದು ಸೂಕ್ತ ಸಮಯ ಆಗಿರಲಿದೆ. ನಿಮ್ಮ ದಾಂಪತ್ಯ ಸಂಬಂಧಿತ ಸಮಸ್ಯೆಗಳು ನಿವಾರಣಯಾಗಲಿದೆ. ತಿಂಗಳ ಆರಂಭದಲ್ಲಿ ನಿಮ್ಮ ಹಣಕಾಸು ಪರಿಸ್ಥಿತಿ ಉತ್ತಮವಾಗಿ ನಿರ್ವಹಿಸಲಿದ್ದೀರಿ. ನಿಮ್ಮ ಖರ್ಚುಗಳ ಮೇಲೆ ನಿಗಾ ಇಡುವುದು ಉತ್ತಮ. ಯಾರಿಂದಾದರು ಸಾಲ ಪಡೆದಿದ್ದರೆ ಈ ತಿಂಗಳು ಮರಳಿ ನೀಡಬೇಕಾದ ಒತ್ತಡ ಎದುರಾಗಲಿದೆ.

November 2025 Monthly Horoscope November 2025 Monthly Horoscope In Kannada

ಮಿಥುನ ರಾಶಿ

ಮಿಥುನ ರಾಶಿಯವರಿಗೆ ನವೆಂಬರ್‌ನಲ್ಲಿ ಪರಿಸ್ಥಿತಿ ಸ್ವಲ್ಪ ಹದಗೆಡಬಹುದು. ಈ ತಿಂಗಳು ನಿಮ್ಮ ಹಣಕಾಸು ಪರಿಸ್ಥಿತಿ ಮತ್ತೆ ಸಮಸ್ಯೆಗಳಿಗೆ ಕಾರಣವಾಗಬಹುದು. ನಿಮ್ಮ ಆದಾಯಕ್ಕಿಂತಲೂ ಖರ್ಚುಗಳು ಹೆಚ್ಚಾಗುತ್ತವೆ. ಆಪ್ತರಿಂದ ಪಡೆದ ಹಣಕಾಸು ವಿಚಾರದಲ್ಲಿ ಸಮಸ್ಯೆಗಳ ಎದುರಿಸುತ್ತೀರಿ. ಸಂಬಂಧಗಳಲ್ಲಿ ಕಲಗಳು ಉಂಟಾಗಬಹುದು. ತಿಂಗಳ ಅಂತ್ಯದಲ್ಲಿ ಮತ್ತಷ್ಟು ಸಾಲ ಮಾಡಬೇಕಾಗಿ ಬರಬಹುದು. ಬಹಳ ಸಮಯದಿಂದ ಮಾಡಬೇಕು ಎಂದಿದ್ದ ಕೆಲಸ ಮತ್ತೆ ಮುಂದೂಡಬಹುದು.

ಕರ್ಕ ರಾಶಿ

ಕರ್ಕಾಟಕ ರಾಶಿಯವರಿಗೆ ನವೆಂಬರ್‌ ತಿಂಗಳು ಮಿಶ್ರಫಲದಿಂದ ಕೂಡಿರಲಿದೆ. ತಿಂಗಳ ಮೊದಲಾರ್ಧವು ನೀವು ಅಂದುಕೊಂಡಂತೆ ನಡೆಯಲಿದೆ, ಆದ್ರೆ ದ್ವಿತಿಯಾರ್ಧದಲ್ಲಿ ನಿಮ್ಮ ಕೆಲಸ ಸಂಬಂಧ ಒತ್ತಡ ಇರಲಿದೆ. ಆರೋಗ್ಯದಲ್ಲಿ ಏರುಪೇರು ನಿಮ್ಮಲ್ಲಿ ಖರ್ಚು ಹೆಚ್ಚಾಗುವಂತೆ ಮಾಡಬಹುದು, ವಾಹನ ಸಂಬಂಧಿತ ಖರ್ಚು ಇರಲಿದೆ. ಪ್ರಯಾಣಗಳಲ್ಲಿ ನೀವು ಅಂದುಕೊಂಡ ಫಲಿತಾಂಶ ಸಿಗದೆ ಇರಬಹುದು. ಬ್ಯಾಂಕಿಂಗ್ ವಿಚಾರಗಳು, ಆಸ್ತಿ ಸಂಬಂಧಿತ ವಿಚಾರಗಳು ನಿಧಾನವಾಗಲಿದೆ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಈ ನವೆಂಬರ್‌ ನೀವುಂದುಕೊಂಡಂತೆ ನಡೆಯುವುದಿಲ್ಲ. ನಿಮ್ಮ ಸಾಲದ ಪ್ರಮಾಣ ಕಡಿಮೆಯಾಗಬಹುದು, ಆದ್ರೆ ಒತ್ತಡಗಳು ನಿವಾರಣೆಯಾಗುವುದಿಲ್ಲ. ಆಸ್ತಿ, ಹಣಕಾಸು ವಿಚಾರದಲ್ಲಿ ರಾಜಿ ಆಗುವುದು ಉತ್ತಮ. ಗೃಹಿಣಿಯರಲ್ಲಿ ಈ ತಿಂಗಳು ಖರ್ಚುಗಳಿಂದ ತುಂಬಿರಬಹುದು. ಮಕ್ಕಳ ವಿಚಾರದಲ್ಲಿ ದೊಡ್ಡ ಸಮಸ್ಯೆಯೊಂದನ್ನು ಎದುರಿಸಬಹುದು. ಪ್ರೇಮ ಸಂಬಂಧಗಳು ಮತ್ತಷ್ಟು ಬಲವಾಗುತ್ತವೆ. ತಿಂಗಳ ಕೊನೆಯಲ್ಲಿ ಸಂತಸದ ದಿನಗಳನ್ನು ನೋಡಬಹುದು

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ನವೆಂಬರ್‌ ತಿಂಗಳು ಶುಭವಾಗಲಿದೆ. ನವವಿವಾಹಿತರಿಗೆ ಅತ್ಯಂತ ಶುಭದಾಯಕ ತಿಂಗಳು. ನಿಮ್ಮ ಉದ್ಯೋಗ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗಲಿದೆ. ಎಲ್ಲಾದರು ಸಿಲುಕಿದ್ದ ಹಣ ನಿಮ್ಮ ಕೈ ಸೇರುವ ತಿಂಗಳು ಎನ್ನಬಹುದು. ನಿಮ್ಮ ಹೂಡಿಕೆ ಹಾಗೂ ಉಳಿತಾಯದಲ್ಲಿ ದುಪ್ಪಟ್ಟು ಲಾಭ ನೋಡಬಹುದು. ಮನೆಯ ವಿಚಾರದಲ್ಲಿ ಖರ್ಚುಗಳಿದ್ದರು ಅದು ನಿಮಗೆ ನೆಮ್ಮದಿ ತರಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆದಾಗ್ಯೂ ಖರ್ಚು ಮಾಡುವಾಗ ಹೆಚ್ಚುವರಿ ಜಾಗರೂಕರಾಗಿರಲು ಸಲಹೆ ನೀಡಲಾಗುತ್ತದೆ.

ತುಲಾ ರಾಶಿ

ತುಲಾ ರಾಶಿಯವರಿಗೆ ನವೆಂಬರ್ ತಿಂಗಳು ಮಿಶ್ರಫಲದಾಯಕ. ತಿಂಗಳ ಆರಂಭದಲ್ಲಿ ಇದ್ದಂತಹ ಪರಿಸ್ಥಿತಿ ಅಂತ್ಯದಲ್ಲಿ ತದ್ವಿರುದ್ಧವಾಗಬಹುದು. ನಿಮ್ಮ ಬಹುದಿನದ ಬಯಕೆಯೊಂದನ್ನು ಈಡೇರಿಸಿಕೊಂಡರೂ ಅದರಿಂದ ತೃಪ್ತಿ ಇಲ್ಲದೆ ಇರಬಹುದು. ಆರ್ಥಿಕವಾಗಿ ಉತ್ತಮ ದಿನಗಳಿದ್ದರೂ ನಿಮ್ಮಲ್ಲಿನ ಖರ್ಚುಗಳು ಹೊಸ ಒತ್ತಡಕ್ಕೆ ಕಾರಣವಾಗಬಹುದು. ಪ್ರಯಾಣಗಳಿಂದ ನೀವು ದೂರ ಇರುವುದು ಉತ್ತಮ. ಮನೆಯ ಸದಸ್ಯರೊಬ್ಬರ ಅನಾರೋಗ್ಯ ಸಂಬಂಧವಾಗಿ ಒತ್ತಡ ಎದುರು ನೋಡಬಹುದು. ಆಪ್ತರಿಂದ ಹಣ ಪಡೆಯುವ ನಿಮ್ಮ ಬಯಕೆ ಈಡೇರದೆ ಇರಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ನವೆಂಬರ್ ಉತ್ತಮವಾಗಿರುತ್ತದೆ. ಆರೋಗ್ಯ ವಿಷಯಗಳನ್ನು ಹಗುರವಾಗಿ ಪರಿಗಣಿಸಬೇಡಿ. ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಪರಿಹಾರವಾಗುತ್ತವೆ. ನಿಮ್ಮ ಸಮಯೋಚಿತ ಹೂಡಿಕೆ ಹಾಗೂ ಉಳಿತಾಯ ಯೋಜನೆಗಳು ಫಲ ನೀಡಲಿವೆ. ವಿವಾಹಿತರಿಗೆ ಖರ್ಚುಗಳು ಅಧಿಕವಾಗಬಹುದು. ಮನೆಯಲ್ಲಿ ಶುಭ ಕಾರ್ಯ ಸಂಬಂಧಿತ ಚರ್ಚೆಗಳು ನಡೆಯಲಿವೆ. ಜೀವನದ ಸಂತೋಷದ ದಿನಗಳನ್ನು ನೀವು ಕಳೆಯಬಹುದು. ದಾಂಪತ್ಯ ಸುಖ ನಿಮ್ಮ ಪಾಲಿಗಿದೆ.

ಧನು ರಾಶಿ

ಧನು ರಾಶಿಯವರು ನವೆಂಬರ್ ತಿಂಗಳು ಶುಭಕರ ಹಾಗೆ ಅಶುಭಕರವೂ ಹೌದು. ನಿಮ್ಮ ವ್ಯಾಪಾರ ವ್ಯವಹಾರ ಸಂಬಂಧಲ್ಲಿ ಉತ್ತಮವಾಗಿದ್ದರೆ. ಸಂಬಂಧ, ವಾಹನ, ಪ್ರಯಾಣ ವಿಚಾರದಲ್ಲಿ ಅಶುಭ ತರಬಹುದು. ದೊಡ್ಡ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬಹುದು. ಮನೆಗಾಗಿ ದುಬಾರಿ ವಸ್ತು ಖರೀದಿಗೆ ಮುಂದಾಗಬಹುದು. ಹಣಕಾಸು ಖರ್ಚು ಹೆಚ್ಚಾಗಬಹುದು. ನಿಯಮಿತ ಪ್ರಯಾಣಗಳು ಫಲ ನೀಡದೆ ಇರಬಹುದು. ಸ್ವಂತ ಉದ್ಯಮ ಕಟ್ಟಿಕೊಂಡವರಿಗೆ ಕಷ್ಟದ ದಿನಗಳು ಎದುರಾಗಬಹುದು.

ಮಕರ ರಾಶಿ

ಮಕರ ರಾಶಿಯವರಿಗೆ ನವೆಂಬರ್‌ನಲ್ಲಿ ನಿಮ್ಮ ವೃತ್ತಿಜೀವನದಲ್ಲಿ ಬದಲಾವಣೆಗಳನ್ನು ನೋಡುತ್ತೀರಿ. ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಪಡೆಯುತ್ತೀರಿ. ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಅನಗತ್ಯ ವಿಚಾರದಲ್ಲಿ ದೊಡ್ಡ ಖರ್ಚು ಮಾಡಬಹುದು ಎಚ್ಚರ. ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಪ್ರಯತ್ನ ನಿಲ್ಲಿಸಬೇಡಿ. ನ್ಯಾಯಾಲಯ ಸಂಬಂಧಿ ವಿಚಾರದಲ್ಲಿ ತಾತ್ಕಾಲಿಕ ನರಾಳತೆ ಪಡೆಯುತ್ತೀರಿ. ಆಸ್ತಿ ಖರೀದಿಗೆ ಸೂಕ್ತ ಸಮಯ ಆಗಿರಲಿದೆ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಈ ತಿಂಗಳು ಕಠಿಣ ನಿರ್ಧಾರಗಳ ತೆಗೆದುಕೊಳ್ಳಬೇಕಾದ ಸಮಯ ಆಗಿರಲಿದೆ. ನಿಮ್ಮ ಜೀವನದಲ್ಲಿ ನೀವು ಬದಲಾವಣೆ ಬಯಸಲು ತೆಗೆದುಕೊಳ್ಳು ನಿರ್ಧಾರಗಳು ಧನಾತ್ಮಕ ಫಲಿತಾಂಶಗಳ ತರಲಿದೆ. ಆರೋಗ್ಯ ವಿಚಾರದಲ್ಲಿ ನಿಮಗೆ ಶುಭವಿದೆ. ಖರ್ಚುಗಳು ಕಡಿಮೆಯಾಗಲಿದೆ. ದೊಡ್ಡ ಹೂಡಿಕೆಗೆ ನೀವು ಮುಂದಾಗಬಹುದು. ಆಪ್ತರಿಂದ ಹಣ ಪಡೆಯುವ ನಿಮ್ಮ ಪ್ರಯತ್ನದಲ್ಲಿ ಸಫಲತೆ ಇದೆ. ದಾಂಪತ್ಯ ವಿಚಾರದಲ್ಲಿ ಶುಭದಿನಗಳಿವೆ. ಹೋಟೆಲ್ ಉದ್ಯಮಿಗಳಿಗೆ ಉತ್ತಮ ಸಮಯ.

ಮೀನ ರಾಶಿ

ಮೀನ ರಾಶಿಯವರಿಗೆ ಈ ನವೆಂಬರ್ ಹಲವು ರೀತಿಯಲ್ಲಿ ಮಿಶ್ರ ಫಲ. ನಿಮ್ಮ ಅನಾರೋಗ್ಯ ಸಮಸ್ಯೆಗಳಿಂದಾಗಿ ದೈನಂದಿನ ಕೆಲಸಗಳು ತಡವಾಗಬಹುದು. ಗೃಹಿಣಿಯರು ಹಣ ಕಳೆದುಕೊಳ್ಳಬಹುದು. ಹಣಕಾಸು ಸಮಸ್ಯೆಯ ವಿಚಾರವಾಗಿ ಇಡೀ ತಿಂಗಳು ಒತ್ತಡದಲ್ಲಿ ಕಳೆಯಬಹುದು. ಮಧ್ಯಾಂತರದ ನಂತರ ಪ್ರಯಾಣಗಳು ಹೆಚ್ಛಾಗುತ್ತವೆ. ಕುಟುಂಬ ಹಂತದಲ್ಲಿ ಹಣಕಾಸು ಒತ್ತಡ ಹೆಚ್ಛಾಗಲಿದೆ.

(ಹಕ್ಕುತ್ಯಾಗ: ಮೇಲಿನ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

English summary

November 2025 Monthly Horoscope: November 2025 Monthly Horoscope In Kannada

November 2025 Monthly Horoscope in Kannada : Check November monthly horoscope for all 12 zodiac signs in Kannada.
Story first published: Wednesday, October 29, 2025, 7:01 [IST]
X
Desktop Bottom Promotion