Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವೆಂಬರ್‌ನಲ್ಲಿ 4 ಯೋಗ: ಈ ರಾಶಿಗಳಿಗೆ ಜಾಕ್‌ಪಾಟ್! ಬಯಸಿದ ಯಶಸ್ಸು ಸನ್ನಿಹಿತ!
ಜ್ಯೋತಿಷ್ಯದ ಪ್ರಕಾರ ಗ್ರಹಗಳ ರಾಶಿಗಳಲ್ಲಿನ ಬದಲಾವಣೆಗಳು ಮತ್ತು ಅವುಗಳ ಸಂಯೋಜನೆಗಳು ಹಲವು ರೀತಿಯ ಶುಭ ಹಾಗೂ ಅಶುಭ ಕಾರ್ಯಗಳಿಗೆ ಕಾರಣವಾಗೋದು ನೋಡಬಹುದು. ಜೀವನದ ಹಲವು ಅಂಶಗಳ ಮೇಲೆ ಇವು ಪರಿಣಾಮ ಬೀರುವುದು ನೋಡಬಹುದು. ಪ್ರತಿಯೊಂದು ಗ್ರಹಗಳು ಆಯಾ ರಾಶಿಗೆ ನಿರ್ಧಿಷ್ಟ ಸಮಯದಲ್ಲಿ ಚಲಿಸುವುದು ದೊಡ್ಡ ಬದಲಾವಣೆಗಳ ನೋಡಬಹುದು.
ನವೆಂಬರ್‌ನಲ್ಲಿ ಹಲವು ಗ್ರಹಗಳ ಬದಲಾವಣೆಯು ಹಲವು ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಹಾಗೆ ಹತ್ತಾರು ಸಂಯೋಗಗಳು, ಯೋಗಗಳು ರೂಪುಗೊಳ್ಳುವುದು ನೋಡಬಹುದು. ನವೆಂಬರ್ ತಿಂಗಳಲ್ಲಿ ಗ್ರಹಗಳ ಬದಲಾವಣೆಗಳಿಂದಾಗಿ 4 ರೀತಿಯ ರಾಜಯೋಗಗಳು ರೂಪುಗೊಳ್ಳುತ್ತವೆ. ಅದು ಕೂಡ ಒಂದೇ ಸಮಯದಲ್ಲಿ ರೂಪುಗೊಳ್ಳುತ್ತದೆ.

ಈ ನವೆಂಬರ್‌ನಲ್ಲಿ ಮಂಗಳವು ತನ್ನದೇ ಆದ ರಾಶಿಯಾದ ವೃಶ್ಚಿಕ, ಗುರುವಿನಿಂದ ಹಂಸ ರಾಜಯೋಗ, ಶುಕ್ರನಿಂದ ಮಾಲವ್ಯ ರಾಜಯೋಗ ಮತ್ತು ಮಂಗಳ ಸೂರ್ಯ ಆದಿತ್ಯ ಮಂಗಳನಿಂದ ರುಚಕ್ ರಾಜಯೋಗವನ್ನು ರೂಪಿಸುತ್ತದೆ. ಈ 4 ರಾಜಯೋಗಗಳು ಒಂದೇ ಸಮಯದಲ್ಲಿ ರೂಪುಗೊಳ್ಳುವುದು ಅಪರೂಪ. ಈ ಘಟನೆ ನವೆಂಬರ್ ತಿಂಗಳಲ್ಲಿ ಸಂಭವಿಸುತ್ತದೆ.
ಈ 4 ಯೋಗಗಳು ಹಲವು ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ವಿಶೇಷವಾಗಿ ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟ ತರಲಿದೆ. ಆದಾಯ ಮತ್ತು ವೃತ್ತಿಜೀವನದಲ್ಲಿ ಉತ್ತಮ ಹೆಚ್ಚಳವಾಗುತ್ತದೆ. ಉತ್ತಮ ಆರ್ಥಿಕ ಲಾಭಗಳನ್ನು ಪಡೆಯುವ ಸಾಧ್ಯತೆಗಳೂ ಇವೆ. ಈಗ ನವೆಂಬರ್‌ನಲ್ಲಿ ರೂಪುಗೊಂಡ 4 ರಾಜಯೋಗಗಳಿಂದಾಗಿ ಯಾವ ರಾಶಿ ಜನರಲ್ಲಿ ಅದೃಷ್ಟ ತರಲಿದೆ. ಯಾರಿಗೆ ಶುಭಕರ ಸಮಯ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ವೃಷಭ ರಾಶಿ
ವೃಷಭ ರಾಶಿಯವರಿಗೆ ನವೆಂಬರ್ ತಿಂಗಳು ಅದ್ಭುತವಾಗಿರುತ್ತದೆ. ಏಕೆಂದರೆ ಮಾಲವ್ಯ ರಾಜಯೋಗವು 6 ನೇ ಮನೆಯಲ್ಲಿ ರೂಪುಗೊಳ್ಳುತ್ತದೆ ಮತ್ತು ರುಚಕ್ ರಾಜಯೋಗವು 7 ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದರಿಂದಾಗಿ ಈ ರಾಶಿ ಜನರಿಗೆ ಈ ತಿಂಗಳು ವಿಶಿಷ್ಟ ಶಕ್ತಿಯನ್ನು ಹೊಂದಿರುತ್ತವೆ. ಜೀವನವು ತುಂಬಾ ಸಂತೋಷ ಮತ್ತು ಸಮೃದ್ಧವಾಗಿರುತ್ತದೆ. ಕೆಲವು ಜನರಿಗೆ ಹೊಸ ಮನೆ ಮತ್ತು ವಾಹನವನ್ನು ಖರೀದಿಸಲು ಅವಕಾಶಗಳು ಸಿಗುತ್ತವೆ. ವೈಯಕ್ತಿಕ ಜೀವನವು ಆಹ್ಲಾದಕರವಾಗಿರುತ್ತದೆ. ಉದ್ಯಮಿಗಳಿಗೆ ಉತ್ತಮ ಲಾಭ ಸಿಗುತ್ತದೆ. ನಿಮ್ಮ ಆರ್ಥಿಕ ಕೆಲಸಗಳಲ್ಲಿ ಶುಭವಾಗುವುದು ನೋಡಬಹುದು. ಹೊಸ ಕೆಲಸಗಳು ಕೈ ಹಿಡಿಯಲಿದೆ.
ತುಲಾ ರಾಶಿ
ನವೆಂಬರ್ ತಿಂಗಳಲ್ಲಿ ರೂಪುಗೊಂಡ 4 ರಾಜಯೋಗಗಳು ತುಲಾ ರಾಶಿಯವರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತವೆ. ನಿಮ್ಮ ಹೂಡಿಕೆಗಳು ದೊಡ್ಡ ಲಾಭ ತರಲಿವೆ. ಉಳಿತಾಯದ ಕಡೆ ನೀವು ಗಮನವಿಡುತ್ತೀರಿ. ಹೀಗಾಗಿ ನಿಮ್ಮ ಆರ್ಥಿಕ ಸದೃಢತೆ ಹೆಚ್ಚಾಗಲಿದೆ. ನೀವು ಹೊಸದಾಗಿ ವಾಹನ, ಮನೆ, ಆಸ್ತಿ, ಖರೀದಿಯಂತಹ ವಿಚಾರದಲ್ಲಿ ತೊಡಗಿದ್ದರೆ ಅಥವಾ ಆಲೋಚನೆಯಿದ್ದರೆ ಶುಭವಾಗಲಿದೆ. ವಿದ್ಯಾರ್ಥಿಗಳು ಬಯಸಿದ ದಿನವನ್ನಾಗಿ ನೋಡುತ್ತಾರೆ. ಆದಾಯದಲ್ಲಿ ಹೆಚ್ಚಳ ನೋಡಬಹುದು. ಸಾಲ ಪಡೆಯುವ ನಿಮ್ಮ ಆಲೋಚನೆಗಳಿಗೆ ಮುನ್ನುಡಿ ಬರೆಯುವ ಸಮಯವಿದು.
ಮಕರ ರಾಶಿ
ಮಕರ ನವೆಂಬರ್‌ನಲ್ಲಿ ರೂಪುಗೊಳ್ಳುವ 4 ರಾಜಯೋಗಗಳಿಂದಾಗಿ ಅನುಕೂಲಕರವಾಗಿರಲಿದೆ. ವ್ಯಾಪಾರ ಪ್ರಗತಿ, ಹೊಸ ವ್ಯವಹಾರಗಳ ಆರಂಭಿಸುವ ಬಯಕೆಗಳಿಗೆ ಹತ್ತಿರವಾಗುತ್ತೀರಿ. ಪ್ರೇಮ ಜೀವನವು ತುಂಬಾ ಸಿಹಿಯಾಗಿರುತ್ತದೆ. ನಿಮ್ಮ ಸಂಗಾತಿಯಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ಕೆಲಸದ ವಾತಾವರಣವು ಉತ್ತಮವಾಗಿರುತ್ತದೆ. ಕೆಲಸ ಮಾಡುವವರಿಗೆ ಬಡ್ತಿಯ ಸಾಧ್ಯತೆಗಳಿವೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಪ್ರಯಾಣಗಳಲ್ಲಿ ಹೆಚ್ಚಾಗಿ ತೊಡಗುತ್ತೀರಿ. ದೊಡ್ಡ ಮಟ್ಟದ ವ್ಯವಹಾರ ಒಪ್ಪಂದಗಳಿಂದ ನಿಮಗೆ ಲಾಭವಾಗುತ್ತದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications