Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವೆಂಬರ್ 13 ದಿನ ಭವಿಷ್ಯ: ದ್ವಾದಶಿಯ ದಿನ 12 ರಾಶಿಗಳ ರಾಶಿಫಲ ಹೇಗಿದ?
ಈ ದಿನ ದ್ವಾದಶಿ, ದೇವೋತ್ಥಾನ ಏಕಾದಶಿಯ ಮಾರನೇಯ ದಿನ ತುಳಸಿ ವಿವಾಹ, ಶ್ರೀ ವಿಷ್ಣುವಿನ ಕೃಪೆಯಿಂದ ನಿಮ್ಮೆಲ್ಲಾಇಷ್ಟಾರ್ಥ ನೆರವೇರಲಿ ಎಂದು ಹೇಳುತ್ತಾ ಈ ದಿನದ ರಾಶಿಫಲ ನೋಡೋಣ:
ಮೇಷ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿರಲಿದೆ. ವೃತ್ತಿ ಬದುಕಿನಲ್ಲಿ ಹೆಚ್ಚು ಒತ್ತಡವಿರಲ್ಲ, ವ್ಯಾಪಾರಿಗಳಿಗೂ ಈ ದಿನ ಧನಾತ್ಮಕವಾಗಿರಲಿದೆ, ಕುಟುಂಬದ ಜೊತೆಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುವುದು. ಮಕ್ಕಳ ಜೊತೆ ಖುಷಿಯಿಂದ ಸಮಯ ಕಳೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದಲೂ ಈ ದಿನ ದಿನ ನಿಮಗೆ ಅನುಕೂಲಕರವಾಗಿರಲಿದೆ.

ವೃಷಭ ರಾಶಿ
ಈ ದಿನ ನಿಮಗೆ ಮಿಶ್ರಫಲ,ಯಾವುದೋ ಅಭದ್ರತೆ ಭಾವನೆ ನಿಮ್ಮನ್ನು ಕಾಡಬಹುದು. ಸಂಬಂಧದಲ್ಲಿ ಸಂಬಂಧ ತುಂಬಾ ಚೆನ್ನಾಗಿರಲಿದೆ, ಕೆಲವೊಂದು ವಿಚಾರಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ, ನೀವು ಪ್ರಮುಖ ಕೆಲಸ ಕಾರ್ಯದತ್ತ ಗಮನಹರಿಸಲು ಸಲಹೆ ನೀಡಲಾಗುವುದು. ಹಣಕಾಸಿನ ವಿಷಯದಲ್ಲಿ ಜಾಗ್ರತೆವಹಿಸಿ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ಮಿಥುನ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿರಲಿದೆ, ವೃತ್ತಿ ಬದುಕು ಚೆನ್ನಾಗಿರಲಿದೆ, ಸಾಮಾಜಿಕವಾಗಿ ಕೂಡ ನಿಮ್ಮ ನಾಯಕತ್ವದ ಗುಣ ಗಮನ ಸೆಳೆಯುತ್ತದೆ. ಏನಾದರು ಸಮಸ್ಯೆಯಾಗಿದ್ದರೆ ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ. ಒಟ್ಟಿನಲ್ಲಿ ಈ ದಿನ ನಿಮಗೆ ಅನುಕೂಲಕರವಾಗಿದೆ.
ಕರ್ಕ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿರಲಿದೆ, ಕೆಲಸದ ಒತ್ತಡ ಅನಿಸಬಹುದು, ಆದರೆ ನಿಮ್ಮ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ, ಅಪೂರ್ಣವಾದ ಕೆಲಸವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತೀರಿ, ಹಣಕಾಸಿನ ವಿಚಾರದಲ್ಲಿಯೂ ಈ ದಿನ ಅನುಕೂಲಕರವಾಗಿದೆ.
ಸಿಂಹ ರಾಶಿ
ಈ ದಿನ ನಿಮಗೆ ತುಂಬಾ ಚೆನ್ನಾಗಿರಲಿದೆ. ನಿಮ್ಮ ಕೆಲಸಕ್ಕೆ ಉತ್ತಮ ಪ್ರತಿಫಲ ದೊರೆಯಲಿದೆ. ಕುಟುಂಬ ಜೀವನ ಕೂಡ ಚೆನ್ನಾಗಿರಲಿದೆ. ವ್ಯಾಪಾರಿಗಳಿಗೆ ಈ ದಿನ ಲಾಭ ಗಳಿಸಲು ಸಾಧ್ಯವಾಗುವುದು.
ಕನ್ಯಾ ರಾಶಿ
ಈ ದಿನ ಭಾವನಾತ್ಮಕವಾಗಿ ಸ್ವಲ್ಪ ದುರ್ಬಲರಾಗಿರುತ್ತೀರಿ, ನೀವು ನಿಮ್ಮ ಹೃದಯದ ಮಾತುಕೇಳಿ, ಕೆಲವೊಂದು ವಸ್ತುಗಳ ಖರೀದಿಗೆ ಹಣ ಖರ್ಚು ಮಾಡುವಿರಿ. ಈ ದಿನ ಕೋಪವನ್ನು ನಿಯಂತ್ರಿಸಲು ಸಲಹೆ ನೀಡಲಾಗುವುದು.
ತುಲಾ ರಾಶಿ
ವೃತ್ತಿ ಬದುಕಿನ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ. ಹಣಕಾಸಿನ ದೃಷ್ಟಿಯಿಂದಲೂ ಈ ದಿನ ನಿಮಗೆ ಅನುಕೂಲಕರವಾಗಿರಲಿದೆ, ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಆರೋಗ್ಯ ಕೂಡ ಚೆನ್ನಾಗಿರಲಿದೆ.
ವೃಶ್ಚಿಕ ರಾಶಿ
ಹಳೆಯ ಗಾಯ ಕೆದಕಲು ಹೋಗದಿರುವುದು ಒಳ್ಳೆಯದು, ಆರ್ಥಿಕ ಬದುಕಿನಲ್ಲಿ ಸುಧಾರಣೆಕಂಡು ಬರಲಿದೆ, ಕೋಪವನ್ನು ನಿಯಂತ್ರಿಸಿ, ನಿಮ್ಮ ಕೆಲಸ ಕಾರ್ಯದತ್ತ ಗಮನಹರಿಸಿ. ವೈವಾಹಿಕ ಬದುಕು ಚೆನ್ನಾಗಿರಲಿದೆ.
ಧನು ರಾಶಿ
ಈ ದಿನ ಯಾವುದೇ ನಿರ್ಧಾರವಾದರೂ ಆಲೋಚಿಸಿ ತೆಗೆದುಕೊಳ್ಳುವುದು ಒಳ್ಳೆಯದು, ಮನೆಯಲ್ಲಿ ಆಸ್ತಿ ಸಂಬಂಧಿಸಿದಂತೆ ವಿವಾದ ನಡೆಯಬಹುದು. ಆರೋಗ್ಯ ಹಾಗೂ ಹಣದ ವಿಷಯದಲ್ಲಿ ಜಾಗ್ರತೆವಹಿಸಿ, ಪ್ರಮುಖವಾದ ಕೆಲಸವಿದ್ದರೆ ನಿರ್ಲಕ್ಷ್ಯ ಮಾಡಬೇಡಿ ಎಂದು ಸಲಹೆ ನೀಡಲಾಗುವುದು.
ಮಕರ ರಾಶಿ
ಈ ದಿನ ಭಾವನಾತ್ಮಕವಾಗಿ ದುರ್ಬಲವಾಗಿರುವುದಿಲ್ಲ, ಪ್ರೀತಿ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯವಿರಬಹುದು, ಏನಾದರೂ ದೊಡ್ಡ ಖರೀದಿ ಮಾಡಲು ಆಲೋಚಿಸುತ್ತಿದ್ದರೆ ಸ್ವಲ್ಪ ಮುಂದೂಡುವುದು ಒಳ್ಳೆಯದು. ಯಾವುದೇ ನಿರ್ಧಾರವಾದರೂ ಈ ದಿನ ನೀವು ವಿಚಾರ ಮಾಡಿ ತೆಗೆದುಕೊಳ್ಳುವಂತೆ ಸಲಹೆ ನೀಡಲಾಗುವುದು.
ಕುಂಭ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿರಲಿದೆ, ಈ ದಿನ ನಿಮ್ಮ ಅಪೂರ್ಣ ಕೆಲಸವು ಪೂರ್ಣಗೊಳ್ಳಲಿದೆ, ಹಣಕಾಸಿನ ದೃಷ್ಟಿಯಿಂದಲೂ ಈ ದಿನ ನಿಮಗೆ ಉತ್ತಮವಾಗಿದೆ,ಕುಟುಂಬದ ಜೊತೆ ಸಂತೋಷದಿಂದ ಸಮಯ ಕಳೆಯಲು ಸಾಧ್ಯವಾಗುವುದು.
ಮೀನ ರಾಶಿ
ಕೆಲವೊಂದು ಸವಾಲುಗಳು ಬರಬಹುದು, ಈ ದಿನ ಆರೋಗ್ಯ ಸಮಸ್ಯೆಯೂ ನಿಮ್ಮನ್ನು ಕಾಡಬಹುದು. ಹಣಕಾಸಿನ ಚಿಂತೆ ಕಾಡಬಹುದು, ಸಂಗಾತಿ ಜೊತೆ ಮಾತನಾಡುವಾಗ ಜಾಗ್ರತೆವಹಿಸಿ, ಕೋಪದಿಂದ ಆಡುವ ಮಾತುಗಳು ಭಿನ್ನಾಭಿಪ್ರಾಯ ಹೆಚ್ಚಿಸಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications