ನವೆಂಬರ್ 10 ದಿನದ ಭವಿಷ್ಯ: ಭಾನುವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?

ಜ್ಯೋತಿಷ್ಯಶಾಸ್ತ್ರ ಪ್ರಕಾರ ಈ ದಿನದ ಭವಿಷ್ಯ ನೋಡೋಣ:

ಮೇಷ ರಾಶಿ
ಈ ದಿನ ಕೆಲಸದ ಒತ್ತಡ ಹೆಚ್ಚಿರಲಿದೆ, ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ, ಸಾಲ ಮರಳಿಸಲು ಸಾಧ್ಯವಾಗುವುದು, ಕೆಲಸದ ಒತ್ತಡ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರಬಹುದು, ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಸಂಬಂಧ ತುಂಬಾ ಚೆನ್ನಾಗಿರಲಿದೆ.

November 10 Daily horoscope

ವೃಷಭ ರಾಶಿ
ಈ ದಿನ ಒತ್ತಡದಿಂದ ಕೂಡಿರಲಿದೆ, ವೃತ್ತಿ ಬದುಕು ಚೆನ್ನಾಗಿರಲಿದೆ, ವ್ಯಾಪಾರಿಗಳಿಗೆ ಲಾಭ ಗಳಿಸಲು ಸಾಧ್ಯವಾಗುವುದು, ಕುಟುಂಬ ಜೀವನ ಚೆನ್ನಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಹಣಕ್ಕೆ ಸಂಬಂಧಿಸಿದ ನಿರ್ಧಾರ ಕೂಡ ಆಲೋಚಿಸಿ ತೆಗೆದುಕೊಳ್ಳುತ್ತೀರಿ.

ಮಿಥುನ ರಾಶಿ
ಈ ದಿನ ಸಂಗಾತಿಯೊಂದಿಗೆ ರೊಮ್ಯಾಂಟಿಕ್ ಆಗಿರಲಿದೆ, ಕೆಲಸದಲ್ಲಿ ಯಾವುದೇ ಒತ್ತಡವಿರಲ್ಲ, ಇಡೀ ದಿನ ಉಲ್ಲಾಸದಿಂದ ಇರುತ್ತೀರಿ, ನಿಮ್ಮ ಆರೋಗ್ಯ ಕೂಡ ಚೆನ್ನಾಗಿರಲಿದೆ. ಆರ್ಥಿಕವಾಗಿಯೂ ಈ ದಿನ ಅನುಕೂಲಕರವಾಗಿದೆ.

ಕರ್ಕ ರಾಶಿ
ಈ ದಿನ ಬಜೆಟ್‌ ಪ್ಲ್ಯಾನ್‌ ಮಾಡಿ ಅದರಂತೆ ಖರ್ಚು ಮಾಡಿದರೆ ಒಳ್ಳೆಯದು, ಅತಿಯಾದ ಖರ್ಚು ಆರ್ಥಿಕ ಸಮಸ್ಯೆ ತರಬಹುದು. ವೃತ್ತಿ ಬದುಕಿನಲ್ಲಿಯೂ ಕೆಲಸದ ಚಿಂತೆ ಕಾಡಬಹುದು. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ, ಆರೋಗ್ಯ ಸಮಸ್ಯೆಗಳಿದ್ದರೆ ಸೂಕ್ತ ವೈದ್ಯರನ್ನು ಕಾಣಿ.

ಸಿಂಹ ರಾಶಿ
ಈ ದಿನ ಕೆಲಸದಲ್ಲಿ ತುಂಬಾನೇ ನಿರತರಾಗಿರುತ್ತೀರಿ, ವ್ಯಾಪಾರಿಗಳಿಗೆ ಹೊಸ ಹೂಡಿಕೆಗೆ ಅವಕಾಶ ಬರಬಹುದು, ಆದರೆ ಆಸಕ್ತಿ ಇಲ್ಲದಿದ್ದರೆ ಮಾಡಲು ಹೋಗಬೇಡಿ. ಕುಟುಂಬದ ಜೊತೆಗೆ ಹೆಚ್ಚಿನ ಸಮಯ ಕಳೆಯಿರಿ, ಇದರಿಂದ ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಸುಧಾರಿಸಲಿದೆ. ವೃತ್ತಿ ಸಂಬಂಧಿತ ಸಮಸ್ಯೆಗಳ ಕಡೆಗೆ ಹೆಚ್ಚು ಗಮನ ನೀಡುವುದು ಒಳ್ಳೆಯದು.

ಕನ್ಯಾ ರಾಶಿ
ನೀವು ಕೆಲಸದ ಕಡೆಗೆ ಗಮನಹರಿಸಬೇಕು, ನೀವು ಸರಿಯಾಗಿ ಪ್ಲ್ಯಾನ್‌ ಮಾಡಿದರೆ ಕೆಲಸದ ಒತ್ತಡ ಕಡಿಮೆಯಾಗುವುದು. ನೀವು ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯಬೇಡ.

ತುಲಾ ರಾಶಿ
ಈ ದಿನ ವೃತ್ತಜೀವನದ ದೃಷ್ಟಿಯಿಂದ ಅನುಕೂಲಕರವಾಗಿರಲಿದೆ, ವೈವಾಹಿಕ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ, ಆರ್ಥಿಕವಾಗಿ ಕೂಡ ತುಂಬಾ ಚೆನ್ನಾಗಿರಲಿದೆ. ನೀವು ನಿಮ್ಮ ಕೌಶಲ್ಯದ ಕಡೆಗೆ ಗಮನಹರಿಸಿ.

ವೃಶ್ಚಿಕ ರಾಶಿ
ಈ ದಿನ ಹಣಕಾಸಿನ ದೃಷ್ಟಿಯಿಂದ ನಿಮಗೆ ಅನುಕೂಲಕರವಾಗಿರಲಿದೆ, ಕೆಲಸ ಕಾರ್ಯದಲ್ಲಿ ಯಾವುದೇ ಅಡೆತಡೆ ಇರಲ್ಲ, ಕುಟುಂಬದಲ್ಲಿ ಕೆಲ ಭಿನ್ನಾಭಿಪ್ರಾಯುಂಟಾಗಬಹುದು, ನೀವು ನಿಮ್ಮ ನಡವಳಿಕೆ ಕಡೆಗೆ ಗಮನಹರಿಸಿ. ಸಂಗಾತಿಯ ಭಾವನೆಯನ್ನು ಗೌರವಿಸುವುದು ಒಳ್ಳೆಯದು.

ಧನು ರಾಶಿ
ಧನು ರಾಶಿಯವರಿಗೆ ಅನುಕೂಲಕರವಾಗಿರಲಿದೆ, ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ, ಈ ದಿನ ಕುಟುಂಬದ ಜೊತೆಗೆ ಸಂತೋಷದಿಂದ ಕಳೆಯುವಿರಿ, ಮನೆಯ ಅಲಂಕಾರದ ಕಡೆಗೆ ಹೆಚ್ಚಿನ ಗಮಹರಿಸುತ್ತೀರಿ, ಒಟ್ಟಿನಲ್ಲಿ ಈ ದಿನ ನಿಮಗೆ ಅನುಕೂಲಕರವಾಗಿರಲಿದೆ.

ಮಕರ ರಾಶಿ
ನೀವು ಆರೋಗ್ಯಕ್ಕಾಗಿ ವ್ಯಾಯಾಮದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಹಣವನ್ನು ಬಜೆಟ್‌ ಮೀರಿ ಖರ್ಚು ಮಾಡಲು ಹೋಗಬೇಡಿ, ಈ ದಿನ ಕೆಲ ಹೊಸ ವ್ಯಕ್ತಿಗಳನ್ನು ಭೇಟಿಯಾಗಬಹುದು, ನೀವು ಈ ದಿನ ಪ್ರಯಾಣ ಮಾಡುವುದಾದರೆ ಟ್ರಿಪ್‌ ಪ್ಲ್ಯಾನ್‌ಮಾಡಿ ಪ್ರಯಾಣ ಪ್ರಾರಂಭಿಸಿ.

ಕುಂಭ ರಾಶಿ
ಹಣದ ವಿಷಯದಲ್ಲಿ ಏರಳಿತವಿರಬಹುದು, ಕೆಲಸ ಕಾರ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಕುಟುಂಬ ಜೀವನದ ಕಡೆಗೆ ಗಮನಹರಿಸಿ,ಮೂರನೇಯ ವ್ಯಕ್ತಿಯ ಅಭಿಪ್ರಾಯ ಕೇಳಬೇಡಿ.

ಮೀನ ರಾಶಿ
ಈ ದಿನ ಆರೋಗ್ಯದ ಕಡೆಗೆ ಗಮಹರಿಸಬೇಕು, ಆರೋಗ್ಯ ಸಮಸ್ಯೆ ಇದ್ದವರು ಹೆಚ್ಚು ಜಾಗ್ರತೆವಹಿಸಬೇಕು, ಹಣದ ಹೂಡಿಕೆ ಬಗ್ಗೆ ಜಾಗ್ರತೆವಹಿಸಬೇಕು, ಪ್ರಮುಖ ನಿರ್ಧಾರ ಕುಟುಂಬದ ಜೊತೆ ಚರ್ಚಿಸಿ ತೆಗೆದುಕೊಳ್ಳಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

November 10 Daily Horoscope Prediction For 12 Zodiac Signs In Kannada

Daily horoscope: November 10 daily horoscope prediction for 12 zodiac signs, read on..
X
Desktop Bottom Promotion