ನವೆಂಬರ್ 1 ತಿಂಗಳ ಮೊದಲ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?

ಶುಭ ದಿನ, ನವೆಂಬರ್ 1, ತಿಂಗಳ ಮೊದಲ ದಿನದ ರಾಶಿಫಲ....

ಮೇಷ ರಾಶಿ
ಈ ದಿನ ವ್ಯಾಪಾರಿಗಳಿಗೆ ಧನಾತ್ಮಕವಾಗಿರಲಿದೆ, ನೀವು ಲಾಭ ಗಳಿಸುತ್ತೀರಿ, ವೃತ್ತಿ ಜೀವನದಲ್ಲಿ ಕೆಸ ಕಾರ್ಯಗಳು ಅಡೆತಡೆ ಇಲ್ಲದೆ ಪೂರ್ಣವಾಗುವುದು. ಕುಟುಂಬ ಜೀವನದ ಬಗ್ಗೆ ಹೇಳುವುದಾದರೆ ಯಾರ ಜೊತೆಯೂ ಜಗಳವಾಡಬೇಡಿ, ಚಿಕ್ಕ ಪುಟ್ಟ ಭಿನ್ನಾಭಿಪ್ರಾಯ ಉಂಟಾದರೆ ದೊಡ್ಡದು ಮಾಡದೆ ಬಗೆಹರಿಸಲು ಪ್ರಯತ್ನಿಸುವುದು ಒಳ್ಳೆಯದು.

November 1 Daily Horoscope

ವೃಷಭ ರಾಶಿ
ವೃಷಭ ರಾಶಿಯವರಿಗೆ ಆರ್ಥಿಕವಾಗಿ ಈ ದಿನ ಉತ್ತಮವಾಗಿದೆ, ಈ ದಿನ ಖರ್ಚುಗಳು ಹೆಚ್ಚಿರಬಹುದು. ಖರ್ಚು ನಿಯಂತ್ರಣ ಮಾಡಿದರೆ ಒಳ್ಳೆಯದು. ಯಾವುದಾದರು ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಮನೆಯ ಹಿರಿಯರ ಅಭಿಪ್ರಾಯ ಕೇಳುವುದು ಒಳ್ಳೆಯದು. ಆರೋಗ್ಯ ಸಮಸ್ಯೆವಿದ್ದರೆ ನಿರ್ಲಕ್ಷ್ಯ ಬೇಡ.

ಮಿಥುನ ರಾಶಿ
ಈ ದಿನ ನಿಮಗೆ ಶುಭವಾಗಿದೆ, ಆರ್ಥಿಕವಾಗಿಯೂ ಈ ದಿನ ನಿಮಗೆ ಅನುಕೂಲಕರವಾಗಿದೆ, ವೃತ್ತಿ ಜೀವನದಲ್ಲಿ ಉತ್ತಮ ಅವಕಾಶಗಳು ದೊರೆಯಲಿದೆ. ಪ್ರಯಾಣ ಮಾಡುವಾಗ ನಿಮ್ಮ ಅಮೂಲ್ಯವಾದ ವಸ್ತುಗಳ ಕಡೆಗೆ ಗಮನಹರಿಸಿ. ಕೆಲವೊಂದು ಸಂದರ್ಭದಲ್ಲಿ ತಾಳ್ಮೆಯಿಂದ ವರ್ತಿಸಿ.

ಕರ್ಕ ರಾಶಿ
ಈ ದಿನ ಅನಗ್ಯತ ಚಿಂತೆಗಳು ನಿಮ್ಮನ್ನು ಕಾಡಬಹುದು, ಚಿಕ್ಕ ಪುಟ್ಟ ವಿಷಯಗಳನ್ನು ಮನಸ್ಸಿಗೆ ತೆಗೆದುಕೊಳ್ಳಬೇಡಿ. ಮನಸ್ಸಿಗೆ ಸಮಧಾನವಾಗಲು ಧರ್ಮ ಹಾಗೂ ಧಾರ್ಮಿಕ ವಿಷಯಗಳ ಕಡೆಗೆ ಗಮನಹರಿಸುವುದು ಒಳ್ಳೆಯದು. ಈ ದಿನ ಪ್ರೀತಿ ಪಾತ್ರರರ ಬೆಂಬಲ ಸಿಗಲಿದೆ.

ಸಿಂಹ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿದೆ, ನೀವು ಅಂದುಕೊಂಡಂತೆಯೇ ಎಲ್ಲವೂ ಇರಬೇಕೆಂದು ಬಯಸಬೇಡಿ, ಎಲ್ಲರೂ ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಬೇಡಿ, ನಿಮ್ಮ ಮನಸ್ಸಿಗೆ ತೋಚಿದ್ದನ್ನು ನೀವು ಮಾಡಿ.

ಕನ್ಯಾ ರಾಶಿ
ನೀವು ಕೆಲಸ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಬೇಡಿ, ನಿಮ್ಮ ಕೆಲಸದ ಕಡೆ ಹೆಚ್ಚು ಗಮನಹರಿಸಿ. ಖರ್ಚು ಸ್ವಲ್ಪ ಅಧಿಕವಿರಲಿದೆ, ಆದರೆ ಆರ್ಥಿಕ ಸಮಸ್ಯೆಗಳೇನೂ ಇರಲ್ಲ, ಈ ದಿನ ಯಾವುದೇ ದೊಡ್ಡ ಹೂಡಿಕೆ ಮಾಡಲು ಹೋಗಬೇಡಿ.

ತುಲಾ ರಾಶಿ
ನೀವು ಬರುವ ಅವಕಾಶ ಉತ್ತಮವಾಗಿ ಬಳಸಿಕೊಳ್ಳಿ, ಕೆಲಸದಲ್ಲಿ ಹೆಚ್ಚಿನ ಒತ್ತಡ ತೆಗೆದುಕೊಳ್ಳಬೇಡಿ, ಈ ದಿನ ನಿಮ್ಮ ಆತ್ಮವಿಶ್ವಾಸ ಚೆನ್ನಾಗಿರಲಿದೆ. ಹಿರಿಯರ ಸಲಹೆ ಪಾಲಿಸಿದರೆ ನಿಮಗೆ ಒಳ್ಳೆಯದಾಗಲಿದೆ. ವೈವಾಹಿಕ ಬದುಕು ಉತ್ತಮವಾಗಿರಲಿದೆ.

ವೃಶ್ಚಿಕ ರಾಶಿ
ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿನ ನಡುವೆ ಸಮತೋಲನ ಕಾಪಾಡಿಕೊಂಡು ಹೋಗಲು ಸಾಧ್ಯವಾಗುವುದು, ಹಾಗಾಗಿ ನಿಮ್ಮ ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ, ಸಂಗಾತಿ ಜೊತೆಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುವುದು.

ಧನು ರಾಶಿ
ಈ ದಿನ ನಿಮಗೆ ಶುಭವಾಗಿದೆ, ನಿಮ್ಮ ಪ್ರಯತ್ನಗಳಿಗೆ ಉತ್ತಮ ಪ್ರತಿಫಲ ಸಿಗಲಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಕುಟುಂಬ ಜೀವನದ ದೃಷ್ಟಿಯಿಂದಲೂ ಈ ದಿನ ನಿಮಗೆ ಅನುಕೂಲಕರವಾಗಿದೆ.

ಮಕರ ರಾಶಿ
ಕೆಲಸದಲ್ಲಿ ಗುರುತಿಸಿಕೊಳ್ಳುತ್ತೀರಿ, ನಿಮ್ಮ ಕೆಲಸಕ್ಕೆ ಮೆಚ್ಚುಗೆ ದೊರೆಯಲಿದೆ. ಅವಾಹಿತರಿಗೆ ಮದುವೆ ಪ್ರಸ್ತಾಪ ಬರಬಹುದು. ವಿವಾಹಿತರ ಕುಟುಂಬ ಜೀವನ ಚೆನ್ನಾಗಿರಲಿದೆ. ಆರ್ಥಿಕವಾಗಿ ಈ ದಿನ ನಿಮಗೆ ಉತ್ತಮವಾಗಿದೆ, ವ್ಯಾಪಾರಿಗಳು ಧನ ಲಾಭವಾಗಲಿದೆ.

ಕುಂಭ ರಾಶಿ
ಈ ದಿನ ನಿಮ್ಮ ಆತ್ಮವಿಶ್ವಾಸ ಹೆಚ್ಚಿರಲಿದೆ, ಈ ದಿನ ನಿಮಗಿಷ್ಟವಾಗಿದ್ದು ಮಾಡಲು ಸಾಧ್ಯವಾಗುವುದು, ನಿಮ್ಮ ನಿರ್ಧಾರಗಳು ಉತ್ತಮವಾಗಿರಲಿದೆ. ಯಾವುದೇ ಪ್ರಮುಖ ನಿರ್ಧಾರ ತೆಗೆಯುವ ಮುನ್ನ ಸಂಗಾತಿಯ ಜೊತೆ ಚರ್ಚಿಸಿ.

ಮೀನ ರಾಶಿ
ಯಾವುದೇ ನಿರ್ಧಾರವಾದರೂ ಆತುರದಿಂದ ತೆಗೆದುಕೊಳ್ಳಬೇಡಿ, ನೀವು ನಿಮ್ಮ ಕನಸು ನನಸಾಗಿಸಲು ಪ್ರಯತ್ನ ಹಾಕುವುದು ಒಳ್ಳೆಯದು, ನೀವು ನಿಮಗೋಸ್ಕರ ಹೆಚ್ಚು ಆಲೋಚಿಸುತ್ತೀರಾ, ಇದು ತಪ್ಪಲ್ಲ, ಇದರಿಂದ ನಿಮಗೆ ನಿಮ್ಮ ಗಿರಿಯತ್ತ ೆಚ್ಚು ಗಮನಹರಿಸಲು ಸಾಧ್ಯವಾಗಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

November 1 Daily Horoscope: Prediction Of 12 Zodiac Signs In Kannada

Daily horoscope: November 1 Prediction for 12 zodiac signs in Kannada read on...
Story first published: Friday, November 1, 2024, 5:11 [IST]
X
Desktop Bottom Promotion