ನವೆಂಬರ್ 03 ದಿನ ಭವಿಷ್ಯ: ಈ ದಿನ ನಿಮ್ಮ ದ್ವಾದಶ ರಾಶಿಗಳು ಏನು ಹೇಳಲಿವೆ?

ವೈದಿಕಶಾಸ್ತ್ರದ ಪ್ರಕಾರ ನವೆಂಬರ್ 03ರಂದು ನಿಮ್ಮ ರಾಶಿಯ ಪ್ರಕಾರ ಯಾವ ರೀತಿಯ ಫಲವಿದೆ ಎಂಬುದನ್ನು ನೋಡಿ.

ಮೇಷ ರಾಶಿ

ಹಣದ ವಿಷಯದಲ್ಲಿ, ಈ ದಿನ ನಿಮಗೆ ತುಂಬಾ ದುಬಾರಿಯಾಗಲಿದೆ. ಈ ಅವಧಿಯಲ್ಲಿ ಅನೇಕ ಸಣ್ಣ ವೆಚ್ಚಗಳು ಇರಬಹುದು. ನಿಮ್ಮ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ವೈದ್ಯರ ಭೇಟಿ ಮಾಡುವುದು ಅಗತ್ಯ. ಹೊಸ ಉದ್ಯೋಗ ಹುಡುಕುತ್ತಿದ್ದವರಿಗೆ ಶುಭವಾಗಲಿದೆ. ವ್ಯಾಪಾರ, ವ್ಯವಹಾರದಲ್ಲಿರುವ ಮಂದಿಗೆ ಶುಭವಿದೆ.

November 03 Daily Horoscope Effects On 12 Zodiac Signs In Kannada

ವೃಷಭ ರಾಶಿ

ವ್ಯಾಪಾರಸ್ಥರಿಗೆ ಈ ವಾರ ಯಾವುದೇ ದೊಡ್ಡ ಹೂಡಿಕೆ ಮಾಡದೆ ಇರುವುದು ಉತ್ತಮ. ಹಣಕಾಸಿನ ವಿಷಯಗಳಲ್ಲಿ ಆತುರಪಡಬೇಡಿ, ಇಲ್ಲದಿದ್ದರೆ ಲಾಭದ ಬದಲು ನಷ್ಟವಾಗಬಹುದು. ಕೆಲಸವನ್ನು ಸಮಯಕ್ಕೆ ಪೂ್ಣಗೊಳಿಸಲು ಪ್ರಯತ್ನಿಸಿ. ಆರೋಗ್ಯ ಉತ್ತಮವಾಗಿರಲಿದೆ. ಹಣಕಾಸಿನ ಸಮಸ್ಯೆಗಳಿದ್ದರೂ ಮನದಲ್ಲಿ ಶಾಂತಿ ನೆಲೆಸಲಿದೆ.

ಮಿಥುನ ರಾಶಿ

ಉದ್ಯೋಗಿಗಳಿಗೆ ಕೆಲಸದ ಹೊರೆ ಹೆಚ್ಚಾಗಬಹುದು. ನೀವು ಅನೇಕ ಪ್ರಮುಖ ಜವಾಬ್ದಾರಿಗಳನ್ನು ಹೊಂದಿರುತ್ತೀರಿ. ವ್ಯಾಪಾರಿಗಳಿಗೆ ಮಿಶ್ರ ಲಾಭ. ದೂರದ ಪ್ರಯಾಣ ಮಾಡುವುದು ತಪ್ಪಿಸಿ.

ಕರ್ಕ ರಾಶಿ

ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ನೀವು ಸಮತೋಲನಕ್ಕೆ ಪ್ರಯತ್ನಿಸಿ, ಅನಗತ್ಯ ಮಾತಿನಿಂದ ಸಮಸ್ಯೆಗೆ ಒಳಗಾಗಬಹುದು. ಹೀಗಾಗಿ ಚರ್ಚೆ, ವಿವಾದ, ಗಲಾಟೆಗಳಿಂದ ದೂರವಿರಿ. ಕಣ್ಣಿಗೆ ಸಂಬಂಧಿಸಿದ ಅನಾರೋಗ್ಯ ಕಾಡುವ ಸಂಭವವಿದೆ ಎಚ್ಚರ ವಹಿಸಿ.

ಸಿಂಹ ರಾಶಿ

ವಾಹನ ಕೊಳ್ಳುವ ವಿಚಾರ ಮಾಡಿದ್ದವರಿಗೆ ಈ ದಿನ ಶುಭ ತರಲಿದೆ. ಅವಿವಾಹಿತರು ಶುಭ ಸುದ್ದಿ ಕೇಳುತ್ತಾರೆ. ಎಲ್ಲವು ನೀವು ಅಂದುಕೊಂಡಿರುವಂತೆ ನಡೆಯಲಿದೆ. ಹೀಗಾಗಿ ಹೆಚ್ಚು ಶಾಂತಿಯುತವಾಗಿ ದಿನ ಕಳೆಯುತ್ತೀರಿ. ಧನಲಾಭದ ನಿರೀಕ್ಷೆಯೂ ಇದೆ.

ಕನ್ಯಾ ರಾಶಿ

ಹಣಕಾಸಿನ ದೃಷ್ಟಿಯಿಂದ ಇಂದು ನಿಮಗೆ ಉತ್ತಮ ದಿನವಾಗಿದೆ. ವೆಚ್ಚಗಳು ಕಡಿಮೆಯಾಗುತ್ತವೆ, ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುತ್ತೀರಿ. ದೂರ ಪ್ರಯಾಣ, ಅನಾರೋಗ್ಯ ಕಾಡಬಹುದು. ಅದರಲ್ಲೂ ಮೂಳೆಗಳಿಗೆ ಸಂಬಂಧಿಸಿದಂತೆ ನೀವು ನೋವು ಅನುಭವಿಸಬಹುದು.

ತುಲಾ ರಾಶಿ

ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಬಲವಾದ ಸಾಧ್ಯತೆಯಿದೆ. ನಿಮ್ಮ ಹೆಚ್ಚುತ್ತಿರುವ ಖರ್ಚುಗಳನ್ನು ನಿಯಂತ್ರಿಸಲು ಪ್ರಯತ್ನಿಸಿ. ಹಲವು ದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಕೆಲಸಗಳನ್ನು ಪೂರ್ಣ ಮಾಡಿ. ದೇವಾಲಯ ಭೇಟಿ ಸಾಧ್ಯತೆ ಇದೆ.

ವೃಶ್ಚಿಕ ರಾಶಿ

ವಾಹನ ಮಾಲಿಕರು ಎಚ್ಚರದಿಂದ ಇರಬೇಕಾದ ಅಗತ್ಯವಿದೆ. ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಮತ್ತೆ ಮತ್ತೆ ಯೋಚಿಸಿ. ಹಣಕಾಸು ವ್ಯವಹಾರ ಮಾಡುವಾಗ ಎಚ್ಚರವಿರಲಿ.

ಧನು ರಾಶಿ

ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ನಿಮ್ಮ ನಿರ್ಧಾರಗಳಿಗೆ ಭಿನ್ನ ಅಭಿಪ್ರಾಯಗಳು ಮೂಡುವುದು ಸಹಜ, ಕೆಟ್ಟ ದಿನಗಳು ದೂರ ಆಗುವ ಸಾಧ್ಯತೆ ಇದೆ. ಆರೋಗ್ಯದ ವಿಷಯದಲ್ಲಿ ದಿನವು ಏರಿಳಿತಗಳಿಂದ ತುಂಬಿರುತ್ತದೆ. ಹೀಗಾಗಿ ಹೆಚ್ಚು ಆರೋಗ್ಯದ ಕಡೆ ಗಮನವಿಡಿ.

ಮಕರ ರಾಶಿ

ಆತುರ ಮತ್ತು ಅವಸರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ಆರ್ಥಿಕ ಲಾಭದ ನಿರೀಕ್ಷೆ ಇದೆ. ಆಸ್ತಿ, ಭೂಮಿ, ಮನೆ, ಕುಟುಂಬದಲ್ಲಿ ವಿವಾದಗಳಲ್ಲಿ ಮೇಲುಗೈ ಸಿಗಲಿದೆ.

ಕುಂಭ ರಾಶಿ

ಯಾಪಾರಕ್ಕೆ ಸಂಬಂಧಿಸಿದ ಜನರು ಈ ಸಮಯದಲ್ಲಿ ಹಣದ ವಿಷಯಗಳಲ್ಲಿ ಬಹಳ ಜಾಗರೂಕರಾಗಿರಿ. ಕೆಲಸ ಕಾರ್ಯಗಳು ಅಡೆತಡೆಯಿಲ್ಲದೆ ಪೋರ್ಣಗೊಳ್ಳಲಿದೆ. ಮನೆಯ ವಾತಾವರಣವು ಸಾಕಷ್ಟು ಹರ್ಷಚಿತ್ತದಿಂದ ಕೂಡಿರುತ್ತದೆ. ಯಾವುದೇ ಧಾರ್ಮಿಕ ಅಥವಾ ಶುಭ ಕಾರ್ಯಕ್ರಮವನ್ನು ಮನೆಯಲ್ಲಿ ಆಯೋಜಿಸಬಹುದು.

ಮೀನ ರಾಶಿ

ಸಹಭಾಗಿತ್ವದಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸಲು ನೀವು ನಿರ್ಧರಿಸಬಹುದು. ಹಣದ ವಿಷಯದಲ್ಲಿ, ಈ ದಿನ ನಿಮಗೆ ಒಳ್ಳೆಯದು. ವೈವಾಹಿಕ ಜೀವನ ಚೆನ್ನಾಗಿರಲಿದೆ, ಯಾವುದೇ ಹೂಡಿಕೆ ಮಾಡಿದ್ದರೆ ಅದರ ಲಾಭ ಪಡೆಯುತ್ತೀರಿ. ಉದ್ಯೋಗಿಗಳ ಕೆಲಸ ಕಾರ್ಯ ಪೂರ್ಣಗೊಳ್ಳಲಿದೆ. ಬಹು ಕಾಲದಿಂದ ನೀವಂದುಕೊಂಡಿದ್ದ ಕಾರ್ಯ ಪೂರ್ಣವಾಗಲು ಇಂದು ಆ ಕಾರ್ಯಗಳು ಕೈಹಿಡಿಯಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

Story first published: Sunday, November 3, 2024, 5:30 [IST]
X
Desktop Bottom Promotion