Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಬ್ರಿಟನ್ ಬಗ್ಗೆ ನಾಸ್ಟ್ರಡಾಮಸ್ ನುಡಿದ ಭವಿಷ್ಯ ನಿಜವಾಗುತ್ತಿದೆಯೇ? ರಾಜ ಚಾರ್ಲ್ಸ್‌ಗೆ ಬಂದಿದೆ ಆಪತ್ತು
2024ರಲ್ಲಿ ಬ್ರಿಟನ್ ರಾಜನಿಂದ ಅಧಿಕಾರ ತಪ್ಪಿ ಹೋಗುವುದು ಎಂದು ನಾಸ್ಟ್ರಡಾಮಸ್ ನುಡಿದ ಭವಿಷ್ಯ ನಿಜವಾಗುವ ಸೂಚನೆ ಕಂಡು ಬರುತ್ತಿದೆ. ಈಗ ಬ್ರಿಟನ್‌ನ ರಾಜ ಚಾರ್ಲ್ಸ್... ಪರಂಪರೆಯಾಗಿ ಬ್ರಿಟನ್‌ನ ರಾಜ ಮನೆತನವೂ ಇಂಗ್ಲೆಂಡ್‌ನಲ್ಲಿ ಅಧಿಕಾರವನ್ನು ಹೊಂದಿದೆ.

ನಾಸ್ಟ್ರಡಾಮಸ್ ಪ್ರಸಿದ್ಧ ಭವಿಷ್ಯ ಜ್ಞಾನಿ, ಅವರು ಭವಿಷ್ಯದ ಕುರಿತು ನುಡಿದ ಬಹುತೇಕ ಬಹುತೇಕ ಭವಿಷ್ಯಗಳು ನಿಜವಾಗಿದೆ, ನಾಸ್ಟ್ರಡಾಮಸ್ 1555ರಲ್ಲಿ ಭವಿಷ್ಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇದೀಗ ಇಂಗ್ಲೆಂಡ್‌ನ ಪರಿಸ್ಥಿತಿ ನೋಡುವಾಗ ನಾಷ್ಟ್ರಡಾಮಸ್ ಹೇಳಿರುವ ಭವಿಷ್ಯ ನಿಜವಾಗಬಹುದೇ ಎಂಬ ಸಂಶಯ ಮೂಡುತ್ತಿದೆ, ಅಲ್ಲದೆ ನುಡಿದ ಭವಿಷ್ಯ ಸತ್ಯವಾಗುವ ಲಕ್ಷಣ ಕಾಣುತ್ತಿದೆ...
ಇಂಗ್ಲೆಂಡ್ ಬಗ್ಗೆ ನಾಸ್ಟ್ರಡಾಮಸ್ ಭವಿಷ್ಯವೇನು?
ನಾಸ್ಟ್ರಾಡಾಮಸ್ ತನ್ನ ಪುಸ್ತಕದ ಒಂದು ಭಾಗದಲ್ಲಿ 'ದ್ವೀಪಗಳ ರಾಜ'ನನ್ನು ಬಲವಂತವಾಗಿ ಹೊರಹಾಕಲಾಗುತ್ತದೆ ಎಂದು ಬರೆದಿದ್ದಾನೆ. ನಾಸ್ಟ್ರಾಡಾಮಸ್ ರಾಜ ಚಾರ್ಲ್ಸ್ III ಅನ್ನು ಉಲ್ಲೇಖಿಸುತ್ತಿದ್ದಾನೆ ಎಂದು ಊಹಿಸಲಾಗಿತ್ತು. ಅಲ್ಲದೆ ಶೀಘ್ರದಲ್ಲೇ ಅನಾಹುತಕಾರಿ ಯುದ್ಧ ಸಂಭವಿಸಿ ಹೊಸ ರಾಜನ ಉದಯವಾಗಲಿದೆ ಎಂದು ಕೂಡ ಹೇಳಿದ್ದಾನೆ. ನಾಸ್ಟ್ರಾಡಾಮಸ್ ರಾಣಿ ಎಲಿಜಬೆತ್ II ರ ನಿಧನವನ್ನೂ ಊಹಿಸಿರಬಹುದು ಎಂದು ಹಿಂದೆ ಹೇಳಿದ್ದರು, "ತನ್ನ ಮತ್ತು ತನ್ನ ಎರಡನೇ ಹೆಂಡತಿಯ ಮೇಲೆ ನಿರಂತರ ದಾಳಿಯಿಂದ" ರಾಜ ಚಾರ್ಲ್ಸ್ III ಪದತ್ಯಾಗ ಮಾಡುತ್ತಾನೆ ಮತ್ತು ವಿಲಿಯಂ ಬದಲಿಗೆ ಹ್ಯಾರಿ ರಾಜನಾಗಿ ಅಧಿಕಾರ ವಹಿಸಿಕೊಳ್ಳುತ್ತಾನೆ. ಏಕೆಂದರೆ ವಿಲಿಯಂಗೆ ರಾಜನಾಗುವ ಯೋಗವಿಲ್ಲ ಎಂದು ಹೇಳಿದ್ದರು.
ಇಂಗ್ಲೆಂಡ್‌ನ ರಾಜನಿಗೆ ಕ್ಯಾನ್ಸರ್
ಚಾರ್ಲ್ಸ್‌ಗೆ ಇತ್ತೀಚೆಗೆ ಪ್ರೊಸ್ಟೇಟ್ ಕ್ಯಾನ್ಸರ್ ಪತ್ತೆಯಾಗಿದೆ, ಅದಕ್ಕೆ ಸಂಬಂಧಿಸಿದಂತೆ ರಾಜನಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ಬಂಕಿಂಗ್ ಹ್ಯಾಮ್ ಅರಮನೆಯ ಮೂಲಗಳು ತಿಳಿಸಿವೆ. ಇದೀಗ ಈ ಸುದ್ದಿ ಹೊರಬರುತ್ತಿದ್ದಂತೆ ಮುಂದಿನ ರಾಜ ಯಾರಾಗಬಹುದು ಎಂಬ ಪ್ರಶ್ನೆ ಮೂಡಿದೆ. ಕಿಂಗ್ಸ್ ಚಾರ್ಲ್ಸ್ ಶಸ್ತ್ರ ಚಿಕಿತ್ಸೆಗೆ ಒಳಪಟ್ಟರೆ ಸಾರ್ವಜನಿಕ ಕಾರ್ಯ ನಿರ್ವಹಿಸಲು ಕಷ್ಟವಾಗುವುದು, ಪ್ರಿನ್ಸ್ ವಿಲಿಯಂ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬಹುದು, ಅಲ್ಲದೆ ರಾಜಕುಮಾರಿ ಕೇಟೆ ಕೂಡ ಕಿಬ್ಬೊಟ್ಟೆಯ ಸರ್ಜರಿಯಿಮದ ಚೇರಿಸಿಕೊಳ್ಳುತ್ತಿದ್ದಾರೆ.
ಹೀಗಾಗಿ ರಾಜಮನೆತನದಲ್ಲಿ ಹಲವಾರು ಬದಲಾವಣೆಗಳು ಕಂಡು ಬರುವ ಸೂಚನೆಯಿದೆ.
ನಾಸ್ಟ್ರಡಾಮಸ್ ನುಡಿದ ಇತರ ಭವಿಷ್ಯಗಳು
ಹೊಸ ಪೋಪ್ ಉದಯ ಭವಿಷ್ಯವಾಣಿಯ ಪ್ರಕಾರ ಪೋಪ್ ಫ್ರಾನ್ಸಿಸ್ ಶೀಘ್ರದಲ್ಲೇ ಬದಲಾಗಲಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ತಮ್ಮ 87ನೇ ಹುಟ್ಟುಹಬ್ಬದ ನಡುವೆ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರ ಆರೋಗ್ಯ ಕುರಿತು ಹಲವು ರೀತಿಯ ಅನುಮಾನಗಳು ಸಹ ಹುಟ್ಟಿಕೊಂಡಿವೆ.
ಹವಾಮಾನ ದುರಂತ
ಹವಾಮಾನ ಬಿಕ್ಕಟ್ಟು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಪ್ರವಾಹ, ಬರ, ಕಾಡ್ಗಿಚ್ಚುಗಳು ಮತ್ತಷ್ಟು ಹೆಚ್ಚಾಗಲಿದೆ ಎಂದು ನಾಸ್ಟ್ರಾಡಾಮಸ್ ಎಚ್ಚರಿಸಿದ್ದಾರೆ. ಇದರ ಜೊತೆ ಜಗತ್ತಿನ ತಾಪಮಾನದಲ್ಲಿ ದಾಖಲೆಯ ಏರಿಕೆ ಕಂಡುಬರಲಿದೆ. ಒಣ ಭೂಮಿ ಹೆಚ್ಚಾಗಲಿದೆ, ಬೆಳೆ ಒಣಗಲಿದೆ ಇದನ್ನು ನೋಡಿದಾಗ ಪ್ರವಾಹಗಳು ಸೃಷ್ಟಿಯಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಚೀನಾದಿಂದ ಯುದ್ಧದ ಭೀತಿ
ಚೀನಾದಿಂದ ಮಹಾ ಯುದ್ಧ ನಾಸ್ಟ್ರಾಡಾಮಸ್ 'ಯುದ್ಧ ಮತ್ತು ನೌಕಾ ಯುದ್ಧ' ಎಂದು ಭವಿಷ್ಯ ನುಡಿದಿದ್ದಾರೆ ಮತ್ತು 'ಕೆಂಪು ಎದುರಾಳಿಯು ಭಯದಿಂದ ಮೌನವಾಗುತ್ತಾನೆ, ಮಹಾಸಾಗರದಲ್ಲಿ ಭೀತಿ ಹುಟ್ಟಿಸುತ್ತಾನೆ ಎಂದಿದ್ದಾರೆ. ಮೇಲ್ನೋಟಕ್ಕೆ ಇದು ಚೀನಾ ಕುರಿತು ಹೇಳಿರುವ ಭವಿಷ್ಯವಾಗಿದೆ. ತೈವಾನ್ ಮಾತ್ರವಲ್ಲದೆ ಭಾರತಕ್ಕೂ ಎಚ್ಚರಿಕೆಯ ಗಂಟೆಯಾಗಿದೆ. ಚೀನಾ ಈಗಾಗಲೆ ಸಮುದ್ರಗಳಲ್ಲಿ ತನ್ನ ಯುದ್ಧಭ್ಯಾಸ ಆರಂಭಿಸಿರುವುದು ಹಾಗೂ ಪಾಕಿಸ್ತಾನದ ಜೊತೆ ಸೇರಿ ಹಲವು ಒಪ್ಪಂದಗಳ ಮಾಡಿಕೊಂಡಿರುವುದು ಇದರ ಜೊತೆ ಆರ್ಥಿಕ ಕಾರಿಡಾರ್‌ನಂತಹ ಕೆಲಸಕ್ಕೆ ಕೈಹಾಕಿರುವುದು ಆತಂಕ ಹೆಚ್ಚಲು ಕಾರಣವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











