Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2025ರಲ್ಲಿ ಈ 5 ರಾಶಿಗಳಿಗೆ ವೃತ್ತಿ ಜೀವನದಲ್ಲಿ ಬೆಳೆಯಲು ಹೊಸ ಅವಕಾಶಗಳು ಸಿಗಲಿದೆ
ಹೊಸ ವರ್ಷ ಹೊಸ ನಿರೀಕ್ಷೆಗಳು, ಹೊಸ ಕನಸುಗಳು, ಹೊಸ ಗುರಿ ಹೀಗೆ ಹೊಸ ವರ್ಷದ ಬಗ್ಗೆ ನಮ್ಮಲ್ಲಿ ಹಲವು ಕಲ್ಪನೆಗಳಿರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಭವಿಷ್ಯ ಹೇಳಲಾಗುವುದು, ಹೊಸ ವರ್ಷ ಭವಿಷ್ಯ ಪ್ರಕಾರ ಕೆಲವೊಂದು ರಾಶಿಗಳಿಗೆ ಹೊಸ ವರ್ಷದಲ್ಲಿ ಹೊಸ ಅವಕಾಶಗಳು ಸಿಗಲಿದೆ, ಇದರಿಂದಾಗಿ 2025ರ ವರ್ಷ ನಿಮಗೆ ತುಂಬಾನೇ ಶುಭ ಸೂಚನೆ ನೀಡುತ್ತಿದೆ.
ನಾವು ಬೆಳೆಯಬೇಕೆಂದರೆ ನಮಗೆ ಉತ್ತಮ ಅವಕಾಶಗಳು ದೊರೆಯಬೇಕು, ಹೊಸ ವರ್ಷದಲ್ಲಿ ಈ 5 ರಾಶಿಗಳಿಗೆ ಹೆಚ್ಚಿನ ಅವಕಾಶಗಳು ಸಿಗಲಿದೆ, ಇದರಿಂದಾಗಿ ನಿಮ್ಮ ಬದುಕಿಲ್ಲಿ ಉತ್ತಮ ಪ್ರಗತಿಯನ್ನು ಕಾಣಬಹುದು ಎಂದು ಭವಿಷ್ಯ ಹೇಳುತ್ತದೆ:

ಮೇಷ ರಾಶಿ
ಮೇಷ ರಾಶಿಯವರಿಗೆ 2025ರ ವರ್ಷ ತುಂಬಾನೇ ಚೆನ್ನಾಗಿರಲಿದೆ. ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕು ಎರಡೂ ಚೆನ್ನಾಗಿರಲಿದೆ. ಏಕೆಂದರೆ ಮಂಗಳ ಹಾಗೂ ಗುರು ಗ್ರಹದ ಪ್ರಭಾವ ನಿಮ್ಮ ರಾಶಿಗೆ ಧನಾತ್ಮಕವಾಗಿರುವುದರಿಂದ ವೃತ್ತಿ ಬದುಕಿನಲ್ಲಿ ಹೊಸ ಅವಕಾಶಗಳು ದೊರೆಯಲಿದೆ. ಇನ್ನು ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ವಿಸ್ತರಿಸಬಹುದು, ಉದ್ಯೋಗಿಗಳಿಗೆ ಹೊಸ ಉದ್ಯೋಗ ಅವಕಾಶ ದೊರೆಯಬಹುದು, ವಿದೇಶದಲ್ಲಿ ಓದಲು ಅಥವಾ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ನಿಮಗೆ ತುಂಬಾ ಒಳ್ಳೆಯ ಅವಕಾಶಗಳು ದೊರೆಯಲಿದೆ. ಹಾಗಾಗಿ ಈ ವರ್ಷ ನಿಮ್ಮ ಆತ್ಮವಿಶ್ವಾಸ ತುಂಬಾ ಚೆನ್ನಾಗಿರಲಿದೆ.
ಯಾವುದಾದರು ಹೊಸ ಪ್ರಾಜೆಕ್ಟ್ ಶುರು ಮಾಡಿದರೆ ಅದರಲ್ಲಿ ಯಶಸ್ಸು ಸಿಗಲಿದೆ. ಮನೆ ಕಟ್ಟಬೇಕು ಅಥವಾ ವಾಹನ ಖರೀದಿಸಬೇಕು ಈ ಬಗೆಯ ಆಸೆ ಇದ್ದರೆ ಹೊಸ ವರ್ಷದಲ್ಲಿ ನಿಮ್ಮಾಸೆ ಈಡೇರುವ ಸಾಧ್ಯತೆ ಬಲವಾಗಿದೆ. ಆರ್ಥಿಕ ದೃಷ್ಟಿಯಿಂದ ಈ ಅವಧಿ ನಿಮಗೆ ತುಂಬಾನೇ ಚೆನ್ನಾಗಿರಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಹೊಸ ವರ್ಷದಲ್ಲಿ ಹೊಸ ಅವಕಾಶಗಳು ದೊರೆಯಲಿದೆ, ವೃತ್ತಿ ಬದುಕನಲ್ಲಿ ಹೊಸ ಅವಕಾಶಗಳು ದೊರೆಯಲಿದೆ. ವೃತ್ತಿ ಜೀವನದಲ್ಲಿ ಬದಲಾವಣೆಗೆ ಈ ಅವಧಿ ನಿಮಗೆ ತುಂಬಾ ಉತ್ತಮವಾಗಿರಲಿದೆ, ವೃತ್ತಿ ಜೀವನದಲ್ಲಿ ಹೊಸ ಎತ್ತರಕ್ಕೆ ಬೆಳೆಯಲು ಸಾಧ್ಯವಾಗುವುದು. ನಿಮ್ಮ ವೃತ್ತಿ ಬದುಕಿನಲ್ಲಿ ಹೊಸ ಎತ್ತರಕ್ಕೆ ಬೆಳೆಯಲು ಸಾಧ್ಯವಾಗುವುದು.
ನಿಮ್ಮ ಕ್ರಿಯಾಶೀಲತೆಯಿಂದ ನೀವು ಮತ್ತಷ್ಟು ಯಶಸ್ಸು ಪಡೆಯಲು ಸಾಧ್ಯವಾಗುವುದು. ಆರ್ಥಿಕವಾಗಿ ಈ ಅವಧಿ ನಿಮಗೆ ಉತ್ತಮವಾಗಿರಲಿದೆ, ನಿಮ್ಮ ನಾಯಕತ್ವದ ಗುಣ ನಿಮ್ಮ ಖ್ಯಾತಿ ಹೆಚ್ಚಿಸಲಿದೆ.
ಧನು ರಾಶಿ
ಧನು ರಾಶಿಯವರಿಗೆ 2025ನೇ ವರ್ಷ ಅದ್ಭುತವಾಗಿರಲಿದೆ. ಹೊಸ ವರ್ಷದಲ್ಲಿ ನಿಮ್ಮ ಸಂಪತ್ತು ವೃದ್ಧಿಸಲಿದೆ. ನಿಮ್ಮ ಆಸ್ತಿ ಹೆಚ್ಚಾಗಲಿದೆ. ವ್ಯಾಪಾರಿಗಳಿಗೆ ಬೆಳೆಯಲು ಉತ್ತಮ ಅವಕಾಶ ದೊರೆಯಲಿದೆ, ವ್ಯಾಪಾರದಲ್ಲಿ ಉತ್ತಮ ಹಣ ಗಳಿಸಲು ಸಾಧ್ಯವಾಗುವುದು. ವೃತ್ತಿ ಬದುಕು, ವೈಯಕ್ತಿಕ ಬದುಕು ಎರಡೂ ತುಂಬಾ ಚೆನ್ನಾಗಿರಲಿದೆ.
ಕೆಲಸದ ಕಾರಣಕ್ಕೆ ಮಾಡುವ ಪ್ರಯಾಣವು ನಿಮಗೆ ಲಾಭ ತರಲಿದೆ, ವ್ಯಾಪಾರಿಗಳು ಉತ್ತಮ ಲಾಭ ಗಳಿಸುತ್ತಾರೆ. ನಿಮ್ಮ ಸೌಕರ್ಯಗಳು ಹೆಚ್ಚಾಗಲಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ಅವಧಿ ತುಂಬಾ ಚೆನ್ನಾಗಿರಲಿದೆ, ನಿಮ್ಮ ಸಂಪತ್ತು ಹೆಚ್ಚಾಗಲಿದೆ, ನಿಮ್ಮ ವೃತ್ತಿ ಬದುಕು ತುಂಬಾ ಚೆನ್ನಾಗಿರಲಿದೆ. ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುವುದು. ವ್ಯಾಪಾರಿಗಳಿಗೂ ವ್ಯಾಪಾರದಲ್ಲಿ ವಿಸ್ತರಣೆ ಮಾಡಲು ಈ ಅವಧಿ ತುಂಬಾ ಉತ್ತಮವಾಗಿರಲಿದೆ. ಈ ವರ್ಷ ಹೊಸ ಮನೆ ಖರೀದಿಸಬೇಕು, ಆಸ್ತಿ ಖರೀದಿಸಬೇಕು ಈ ರೀತಿ ಪ್ರಯತ್ನ ಮಾಡಿದರೆ ಖಂಡಿತ ಯಶಸ್ಸು ಪಡೆಯಲು ಸಾಧ್ಯವಾಗುವುದು.
ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ. ಹೂಡಿಕೆಗೂ ಈ ಅವಧಿ ಉತ್ತಮವಾಗಿದೆ, ಷೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡಿದ್ದರೆ ಉತ್ತಮ ಲಾಭ ಪಡೆಯುತ್ತೀರಿ.
ಮೀನ ರಾಶ
ಮೀನ ರಾಶಿಯವರಿಗೂ ಈ ಸಮಯ ತುಂಬಾನೇ ಉತ್ತಮವಾಗಿದೆ, ಆರ್ಥಿಕವಾಗಿ ಬೆಳೆಯಲು ಹೊಸ ವರ್ಷದಲ್ಲಿ ನಿಮಗೆ ಒಳ್ಳೆಯ ಅವಕಾಶ ದೊರೆಯಲಿದೆ. ಬರಹಗಾರರಿಗೆ, ಕಲಾಗಾರರಿಗೆ ಹೊಸ ವರ್ಷದಲ್ಲಿ ಹೊಸ ಅವಕಾಶಗಳು ದೊರೆಯಲಿದೆ, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಬೆಳವಣಿಗೆ ಕಾಣಬಹುದು, ನೀವು ತೆಗೆದುಕೊಳ್ಳುವ ನಿರ್ಧಾರಗಳು ನಿಮಗೆ ಉತ್ತಮ ಫಲ ನೀಡಲಿದೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications