Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಹೊಸ ವರ್ಷ ಭವಿಷ್ಯ 2025: ದ್ವಾದಶ ರಾಶಿಗಳ ಸಂಪೂರ್ಣ ರಾಶಿಫಲ, ಯಾವ ರಾಶಿಗೆ ಹೇಗಿರಲಿದೆ?
ಹೊಸ ವರ್ಷ ಎಂರೆ ಹೊಸ ನಿರೀಕ್ಷೆ, ಹೊಸ ಆಶಯ... ಹೊಸ ವರ್ಷವು ನಿಮ್ಮೆಲ್ಲರ ಕನಸು ನನಸಾಗಲಿ ಎಂದು ಎಂದು ಹೇಳುತ್ತಾ ಜ್ಯೋತಿಷ್ಯ ಪ್ರಕಾರ ಪ್ರತಿಯೊಂದು ರಾಶಿಗೂ ಹೇಗಿರಲಿದೆ? ಹಣಕಾಸು, ವೃತ್ತಿ ಬದುಕು, ಕುಟುಂಬ ಜೀವನ, ಆರೋಗ್ಯ, ವೈವಾಹಿಕ ಬದುಕು, ವಾಹನ ಖರೀದಿ ಭಾಗ್ಯ., ಸಂಪತ್ತು ಭಾಗ್ಯ ಇವೆಲ್ಲದ ಬಗ್ಗೆ ಹೊಸ ವರ್ಷದ ಭವಿಷ್ಯ ಏನು ಹೇಳಿದೆ ಎಂದು ನೋಡೋಣ:

ಮೇಷ ರಾಶಿ
ಹೊಸ ವರ್ಷ ತುಂಬಾ ಚೆನ್ನಾಗಿರಲಿದೆ, ಹೊಸ ವರ್ಷದಲ್ಲಿ ವೃತ್ತಿ ಬದುಕಿನಲ್ಲಿ ಬೆಳವಿಗೆ ಕಾಣುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ವ್ಯಾಪಾರಿಗಳು ಮತ್ತಷ್ಟು ಬೆಳೆಯಲು ಮತ್ತಷ್ಟು ಅವಕಾಶ ದೊರೆಯಲಿದೆ. ವಿದ್ಯಾರ್ಥಿಗಳುಕಠಿಣ ಪರಿಶ್ರಮದಕಡೆಗೆ ಹೆಚ್ಚುನ ಗಮನಹರಿಸಬೇಕು. ಕುಟುಂಬ ಜೀವನ ಚೆನ್ನಾಗಿರಲಿದೆ. ಅವಾಹಿತರಿಗೆ ಮದುವೆ ಪ್ರಸ್ತಾಪ ಬರಬಹುದು. ವಿವಾಹಿತರಾಗಿದ್ದರೆ ಸಂಗಾತಿಯ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು.
ವೃಷಭ ರಾಶಿ
ವೃಷಭ ರಾಶಿಯವರಿಗೆ ಹೊಸ ವರ್ಷವು ವೃತ್ತಿ ಬದುಕಿಗೆ ಅನುಕೂಲಕರವಾಗಿದೆ. ಸ್ವಂತ ವ್ಯವಹಾರ ಮಾಡಬೇಕು ಎಂದು ಬಯಸುವವರೆಗೆ ತುಂಬಾನೇ ಅನುಕೂಲಕರವಾಗಿದೆ. ಹಣಕಾಸಿನ ವಿಷಯದಲ್ಲಿಯೂ ಈ ಅವಧಿ ಅನುಕೂಲಕರವಾಗಿದೆ, ಹೊಸ ವರ್ಷದಲ್ಲಿ ಹಣ ಉಳಿತಾಯ ಮಾಡಲು ಸಾಧ್ಯವಾಗುವುದು. ಅವಾಹಿತರಿಗೆ ಮದುವೆ ಯೋಗವಿದೆ.ವಿವಾಹಿತರು ಕುಟುಂಬ ಜೀವನದ ಕಡೆಗೆ ಗಮನಹರಿಸಬೇಕು.
ಮಿಥುನ ರಾಶಿಯವರ ಹೊಸ ವರ್ಷ ಭವಿಷಯ ನೋಡುವುದಾದರೆ ವೃತ್ತಿ ಬದುಕಿನಲ್ಲಿ ಮಿಶ್ರಫಲ, ಕೆಲಸದ ಬದಲಾವಣೆಗೆ ಈ ಸಮಯ ಅನುಕೂಲಕರವಾಗಿದೆ. ಕೆಲಸದಲ್ಲಿ ಹೆಚ್ಚು ಒತ್ತಡವಿರಲಿದೆ. ಹಣಕಾಸಿನ ವಿಷಯದಲ್ಲಿ ಜಾಗ್ರತೆವಹಿಸಬೇಕು. ವ್ಯಾಪಾರಸ್ಥರಿಗೆ ಹೊಸ ವರ್ಷವು ಸರಾಸರಿಯಾಗಿರಲಿದೆ. ಹಣಕಾಸಿನ ಬಗ್ಗೆ ಹೆಚ್ಚು ಜಾಗ್ರತೆವಹಿಸಬೇಕು. ವಾಹನ ಖರೀದಿ ಮಾಡಬಹುದು, ಆಸ್ತಿ ಖರೀದಿ ಮಾಡುವುದಾದರೆ ದಾಖಲೆ ಸರಿಯಾಗಿಲ್ಲದಿದ್ದರೆ ಖರೀದಿಸಬೇಡಿ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಹೊಸ ವರ್ಷವು ಉತ್ತಮವಾಗಿರಲಿದೆ. ವ್ಯಾಪಾರಿಗಳಿಗೆ ತುಂಬಾನೇ ಧನ ಲಾಭವಾಗಲಿದೆ, ಆರ್ಥಿಕವಾಗಿ ಮತ್ತಷ್ಟು ಬೆಳವಣಿಗೆ ಕಾಣಲು ಸಾಧ್ಯವಾಗುವುದು. ಹಣಕಾಸಿನ ಸ್ಥಿತಿ ಬಲವಾಗಲಿದೆ. ಕುಟುಂಬ ಜೀವನ ಚೆನ್ನಾಗಿರಲಿಎ, ವೈವಾಹಿಕ ಬದುಕಿನಲ್ಲಿ ಏರಳಿತವಿರಬಹುದು, ಆದರೆ ತಾಳ್ಮೆಯಿಂದ ನಿಭಾಯಿಸಿಕೊಂಡು ಹೋಗಬೇಕು. ಗಾಡಿ ಮತ್ತು ವಾಹನ ಖರೀದಿಗೆ ಮೇ ನಂತರದ ದಿನಗಳು ಉತ್ತಮವಾಗಿದೆ.
ಸಿಂಹ ರಾಶಿ
ವೃತ್ತಿ ಜೀವನದ ದೃಷ್ಟಿಯಿಂದ ನೋಡುವುದಾದರೆ ಹೊಸ ವರ್ಷದಲ್ಲಿ ಮಿಶ್ರ. ಮಾರ್ಚ್ ತಿಂಗಳವರೆಗೆ ಕೆಲಸದಲ್ಲಿ ತುಂಬಾನೇ ಸವಾಲುಗಳು ಬರಬಹುದು, ಆದರೆ ಮೇ ನಂತರ ವೃತ್ತಿ ಬದುಕಿನಲ್ಲಿ ಸುಧಾರಣೆ ಕಂಡು ಬರಲಿದೆ. ಹಣಕಾಸಿನ ದಷ್ಟಿಯಿಂದ ಹೊಸ ವರ್ಷವು ಸರಾಸರಿಯಾಗಿರಲಿದೆ. ಆದರೆ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಕುಟುಂಬ, ವೈವಾಹಿಕ ಜೀವನ ಚೆನ್ನಾಗಿರಲಿದೆ. ವಾಹನಕ್ಕೆ ಹೆಚ್ಚು ಬಂಡವಾಳ ಹಾಕಲು ಹೋಗದೆ ಇರುವ ವಾಹನ ಬಳಸುವುದು ಸೂಕ್ತ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಹೊಸ ವರ್ಷದಲ್ಲಿ ಕೆಲಸ ಬದಲಾಯಿಸಲು ಯೋಚಿಸುತ್ತಿದ್ದರೆ ಈ ಅವಧಿ ನಿಮಗೆ ಅನುಕೂಲಕರವಾಗಿದೆ. ಈ ಸಮಯದಲ್ಲಿ ಇಮ್ಮ ಶ್ರಮಕ್ಕೆ ಪ್ರತಿಫಲ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ. ಹಣಕಾಸಿನ ದೃಷ್ಟಿಯಿಂದ ಹೊಸ ವರ್ಷವು ಅನುಕೂಲಕರವಾಗಿದೆ. ಭೂಮಿ, ವಾಹನ ಖರೀದಿಗೆ ಹೊಸ ವರ್ಷವು ಅನುಕೂಲಕರವಾಗಿದೆ.
ತುಲಾ ರಾಶಿ
ವೃತ್ತಿ ಜೀವನ ತುಂಬಾ ಚೆನ್ನಾಗಿರಲಿದೆ, ಕೆಲಸ ಬದಲಾವಣೆ ಬಗ್ಗೆ ಆಲೋಚನೆ ಮಾಡುತ್ತಿದ್ದರೆ ಮಾರ್ಚ್ ನಂತರ ಪ್ರಯತ್ನ ಮಾಡುವುದು ಒಳ್ಳೆಯದು. ಹಣಕಾಸಿನ ವಿಷಯದಲ್ಲಿ ಹೆಚ್ಚು ಜಾಗ್ರತೆವಹಿಸಿ, ಮಿತಿ ಮೀರಿದ ಖರ್ಚು ಸಮಸ್ಯೆಯನ್ನುಂಟು ಮಾಡಬಹುದು. ಸಂಬಂಧದಲ್ಲಿ ವರ್ಷದ ಆರಂಭದಲ್ಲಿ ಕೆಲ ಭಿನ್ನಾಭಿಪ್ರಾಯವಿರಬಹುದು ಆದರೆ ಮೇ ತಿಂಗಳಿನಲ್ಲಿ ಗುರುವಿನ ಸಂಚಾರ ಕುಟುಂಬ ಬದುಕಿನಲ್ಲಿ ಸುಧಾರಣೆ ತರಲಿದೆ.
ವೃಶ್ಚಿಕ ರಾಶಿ
ಶನಿಯು ನಿಮ್ಮ 6ನೇ ಮನೆಯಲ್ಲಿ ಇರಲಿದೆ, ಹೀಗಾಗಿ ಕೆಲಸದಲ್ಲಿ ಕೆಲ ಸಮಸ್ಯೆಗಳು ಬರಬಹುದು. ಕೆಲಸದಲ್ಲಿ ಅತೃಪ್ತಿ ಉಂಟಾಗಲಿದೆ, ಕೆಲಸ ಬದಲಾವಣೆ ಮಾಡುವುದಾದರೆ ಮೇ ತಿಂಗಳ ಒಳಗಡೆ ಮಾಡುವುದು ಒಳ್ಳೆಯದು, ವಿದೇಶದಲ್ಲಿ ಕೆಲಸಕ್ಕೆ ಪ್ರಯತ್ನ ಮಾಡುತ್ತಿರುವವರೆಗೆ ಈ ಅವಧಿ ಅನುಕೂಲಕರವಾಗಿದೆ. ಆರ್ಥಿಕವಾಗಿ ಹೊಸ ವರ್ಷವು ಉತ್ತಮವಾಗಿರಲಿದೆ, ಆದರೆ ನೀವು ಉಳಿತಾಯದ ಕಡೆಗೆ ಗಮಹರಿಸುವುದು ಒಳ್ಳೆಯದು. ವಾಹನ ಖರೀದಿ ಮಾಡುವುದಾದರೆ ಮೇ ಒಳಗಡೆ ಈ ಸಮಯ ಅನುಕೂಲಕರವಾಗಿದೆ.
ಧನು ರಾಶಿ
ಧನು ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಹೊಸ ಅವಕಾಶ ದೊರೆಯಲಿದೆ, ಆರ್ಥಿಕವಾಗಿಯೂ ತುಂಬಾ ಉತ್ತಮವಾಗಿದೆ, ನಿಮ್ಮ ಆರ್ಥಿಕ ಸ್ಥಿತಿ ಮತ್ತಷ್ಟು ಬಲವಾಗಲಿದೆ.ಕುಟುಂಬ ಜೀವನ ಚೆನ್ನಾಗಿರಲಿದೆ. ಅವಾಹಿತರಿಗೆ ಮದುವೆ ಪ್ರಸ್ತಾಪ ಬರಬಹುದು. ಆರೋಗ್ಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ.
ವಾಹನ ಖರೀದಿಗೆ ಮೇ ನಂತರದ ಸಮಯ ಉತ್ತಮವಾಗಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಹೊಸ ವರ್ಷವು ವೃತ್ತಿ ಬದುಕಿನ ದೃಷ್ಟಿಯಿಂದ ಮಿಶ್ರಫಲ. ಉದ್ಯೋಗಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ, ಹಣ ಗಳಿಕೆಯ ದೃಷ್ಟಿಯಿಂದಲೂ ಈ ಅವಧಿ ತುಂಬಾ ಚೆನ್ನಾಗಿರಲಿದೆ. ಹಣದ ಹೂಡಿಕೆ ಬಗ್ಗೆ ಜಾಗ್ರತೆ. ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ, ಆರೋಗ್ಯದ ದೃಷ್ಟಿಯಿಂದ ಈ ದಿನ ನಿಮಗೆ ಅನುಕೂಲಕರವಾಗಿದೆ, ವಾಹನ ಕನಸು ನನಸಾಗಲಿದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಹೊಸ ವರ್ಷವು 2024ಕ್ಕಿಂತ ಉತ್ತಮವಾಗಿರಲಿದೆ, ಉದ್ಯೋಗ ಬದಲಾವಣೆಗೂ ಉತ್ತಮ ಅವಕಾಶಗಳು ದೊರೆಯಲಿದೆ. ಶನಿ ಸಾಡೇಸಾತಿಯಿದ್ದರೂ ಈ ವರ್ಷ ನಿಮಗೆ ದೊಡ್ಡ ಸಮಸ್ಯೆಯಾಗಲ್ಲ. ಮದುವೆ ನಿರ್ಧಾರ ತೆಗೆದುಕೊಳ್ಳಲು ಈ ವರ್ಷ ಅನುಕೂಲಕರವಾಗಿದೆ. ಗೃಹ ನಿರ್ಮಾಣದಲ್ಲಿ ಕೆಲ ಸವಾಲುಗಳು ಬರಬಹುದು. ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು.
ಮೀನ ರಾಶಿ
ಉದ್ಯೋಗದ ದೃಷ್ಟಿಯಿಂದ ನೋಡುವುದಾದರೆ 2025 ನಿಮಗೆ ಶುಭವಾಗಿದೆ, ಮೇ ತಿಂಗಳವರೆಗೆ ಕೆಲ ಅಡೆತಡೆಗಳು ಬಂದರೂ ನಂತರ ಪರಿಸ್ಥಿತಿ ಸುಧಾರಿಸಲಿದೆ. ವ್ಯಾಪಾರಿಗಳಿಗೆ ಈ ವರ್ಷ ತುಂಬಾ ಚೆನ್ನಾಗಿರಲಿದೆ, ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಹಣಕಾಸಿನ ದೃಷ್ಟಿಯಿಂದಲೂ ಉತ್ತಮವಾಗಿದೆ, ಆರೋಗ್ಯದ ಕಡೆಗೆ ಗಮನಹರಿಸಬೇಕು. ಭೂಮಿ ಹೂಡಿಕೆಗೆ ಕೆಲ ಸವಾಲುಗಳು ಬರಬಹುದು, ವಾಹನಕ್ಕೆ ಬಜೆಟ್ ಮೀರಿ ಖರ್ಚು ಮಾಡಬೇಡಿ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











