Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಹೊಸ ವರ್ಷವು ಈ 5 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದಿದೆ!
2025ನೇ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ, ಹೊಸ ವರ್ಷ ನಿಮ್ಮೆಲ್ಲರ ಬಾಳಲ್ಲಿ ಹೊಸ ಹರುಷ ತರಲಿ. ನೀವು ಕಂಡ ಕನಸು ನನಸಾಗಲಿ, ಮನೆಯಲ್ಲಿ ಖುಷಿ, ನೆಮ್ಮದಿ ನೆಲೆಸುವಂತಾಗಲಿ.
ಹೊಸ ವರ್ಷದ ಭವಿಷ್ಯ ಪ್ರಕಾರ ಈ ವರ್ಷವು ಕೆಲವೊಂದು ರಾಶಿಗಳಿಗೆ ಅದ್ಭುತವಾಗಿರಲಿದೆ. ಈ ರಾಶಿಗಳಿಗೆ ಗ್ರಹಗಳ ಸ್ಥಾನವು ಅದೃಷ್ಟವನ್ನು ತರಲಿದೆ, ಆ ಅದೃಷ್ಟದ ರಾಶಿಗಳೆಂದರೆ....

ಮೇಷ ರಾಶಿ
ಹೊಸ ವರ್ಷ ಮೇಷ ರಾಶಿಯವರಿಗೆ ಅನುಕೂಲಕರವಾಗಿದೆ. ಮೇಷ ರಾಶಿಯವರಿಗೆ ಶನಿ ಸಾಡೇಸಾತಿ ಶುರು,ಆದರೆ ಶನಿಯು ಮೇಷ ರಾಶಿಯಲ್ಲಿ 12ನೇ ಮನೆಯಲ್ಲಿರುವುದರಿಂದ ಹೆದರಬೇಕಾಗಿಲ್ಲ. ನೀವು ಗುರು ಸಂಚಾರದಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತೀರಿ. ಆರ್ಥಿಕವಾಗಿ ತುಂಬಾನೇ ಒಳ್ಳೆಯದಿದೆ. ಈ ವರ್ಷ ಆರ್ಥಿಕ ಕಾರಣಗಳಿಂದ ಯಾವುದೇ ಕೆಲಸಕ್ಕೆಡೆ ತಡೆಯಾಗಲ್ಲ. ಗೃಹ ನಿರ್ಮಾಣ ಅಥವಾ ಗಾಡಿ ಖರೀದಿ ಈ ಬಗ್ಗೆ ಆಲೋಚನೆ ಮಾಡಿದ್ದರೆ ಆ ಅಸೆ ಕೂಡ ಈ ವರ್ಷ ಈಡೇರಲಿದೆ. ಒಟ್ಟಿಲ್ಲಿ 2025ನೇ ವರ್ಷವು ನಿಮಗೆ ಎಲ್ಲಾ ರೀತಿಯಿಂದಲೂ ಒಳ್ಳೆಯದಿದೆ.
ವೃಷಭ ರಾಶಿ
2025ನೇ ವರ್ಷವು ವೃಷಭ ರಾಶಿಯವರಿಗೂ ತುಂಬಾನೇ ಅನುಕೂಲಕರವಾಗಿರಲಿದೆ. ಆರ್ಥಿಕವಾಗಿ ತುಂಬನೇ ಬೆಳೆಯಲು ಸಾಧ್ಯವಾಗುವುದು. ಈ ವರ್ಷ ಹಣ ಉಳಿತಾಯ ಮಾಡಲು ಸಾಧ್ಯವಾಗುವುದು, ನಿಮ್ಮ ಮನೆಯ ಸೌಕರ್ಯ ಹೆಚ್ಚಾಗಲಿದೆ. ವಾಹ, ಆಸ್ತಿ ಅಂತ ಖರೀದಿಗೆ ಹಣಕಾಸಿನ ತೊಂದರೆಯೂ ಇರಲ್ಲ.
ಕರ್ಕ ರಾಶಿ
ಈ ರಾಶಿಯವರಿಗೆ 2025ರಲ್ಲಿ ಶನಿ ಧೈಯ್ಯ ಮುಕ್ತಾಯವಾಗುವುದರಿಂದ ಎಲ್ಲಾ ರೀತಿಯಲ್ಲಿಯ ನಿಮಗೆ ಅನುಕೂಲಕರವಾಗಿದೆ. ವೃತ್ತಿ ಬದುಕಿಗೆ ಸಂಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದು. ವೃತ್ತಿ ಬದುಕಿನಲ್ಲಿ ಬೆಳವಣಿಗೆ ಕಾಣಲು ಸಾಧ್ಯವಾಗುವುದು. ಹಣಕಾಸಿನ ದೃಷ್ಟಿಯಿಂದ ಹೊಸ ವರ್ಷ ಅನುಕೂಲಕರವಾಗಿದ್ದು ಹೊಸ ವ್ಯವಹಾರ ಪ್ರಾರಂಭಿಸಲು ಬಯಸಿದರೆ ಅದಕ್ಕೂ ಈ ಸಮಯ ಅನುಕೂಲಕರವಾಗಿದೆ.
ತುಲಾ ರಾಶಿ'
ವೃತ್ತಿ ಜೀವನ ತುಂಬಾ ಚೆನ್ನಾಗಿರಲಿದೆ. ಅದರಲ್ಲಿಯೂ ವರ್ಷದ ಆರಂಭಕ್ಕಿಂತ ಮಾರ್ಚ್ ನಂತರದ ಅವಧಿ ನಿಮಗೆ ತುಂಬಾನೇ ಚೆನ್ನಾಗಿರಲಿದೆ. ವೃತ್ತಿ ಜೀವನದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು. ಹೊಸ ವರ್ಷವು ಆರ್ಥಿಕವಾಗಿ ತುಂಬಾನೇ ಚೆನ್ನಾಗಿರಲಿದೆ. ವ್ಯಾಪಾರಿಗಳು ತಮ್ಮ ವ್ಯಾಪಾರದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು. ಮನೆ ಕಟ್ಟುತ್ತಿದ್ದರೆ ಈ ವರ್ಷ ನಿಮಗೆ ಅನುಕೂಲಕರವಾಗಿರಲಿದೆ. ವಹನ ಖರೀದಿ ಮಾಡಲು ಬಯಸುವವರಿಗೆ ಈ ಅವಧಿ ಅನುಕೂಲಕರವಾಗಿದೆ.
ಮಕರ ರಾಶಿ
ಮಕರ ರಾಶಿಯವರು 2025ರಲ್ಲಿ ಶನಿ ಕಾಟದಿಂದ ಮುಕ್ತರಾಗುತ್ತಾರೆ. ಇದುವರೆಗೆ ಅನುಭವಿಸಿದ ಕಷ್ಟಗಳು ದೂರಾಗಲಿದೆ. ಹೊಸ ವರ್ಷ ಮಾರ್ಚ್ ನಂತರ ವೃತ್ತಿ ಬದುಕಿನಲ್ಲಿ ಉತ್ತಮ ಬೆಳವಣಿಗೆಯನ್ನು ಕಾಣಬಹುದು. ವೈವಾಹಿಕ ಜೀವನ,ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ. ಮನೆ ನಿರ್ಮಾಣ ಅಥವಾ ಖರೀದಿ, ಆಸ್ತಿ ಖರೀದಿ ಅಥವಾ ವಾಹನ ಖರೀದಿ ಮಾಡಲು ಈ ವರ್ಷ ನಿಮಗೆ ಆರ್ಥಿಕವಾಗಿ ಉತ್ತಮವಾಗಿರಲಿದೆ.
ಈ ವರ್ಷ ಶನಿಯು ರಾಶಿ ಬದಲಾವಣೆಯಿದೆ, ಎರಡೂವರೆ ವರ್ಷಕ್ಕೊಮ್ಮೆ ಶನಿ ರಾಶಿ ಬದಲಾವಣೆ ಮಾಡುತ್ತದೆ, ಅಲ್ಲದೆ ಬುಧ, ಗುರು, ಮಂಗಳ, ಶುಕ್ರ, ಸೂರ್ಯ ಗ್ರಹಗಳ ಸ್ಥಾನವು ಈ ರಾಶಿಯವರಿಗೆ ಅನುಕೂಲಕರವಾಗಿದೆ, ಈ ಗ್ರಹಗಳ ಪ್ರಭಾವದಿಂದ ಉತ್ತಮಪ್ರಯೋಜನ ಪಡೆಯಲಿದ್ದಾರೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications